Luke · chapter 3 · verse 20
Luke 3:20 in Kannada
ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು.
Avanu yohaa nanannu sereyalli haaki taanu maadidda ellaa dushkrutyagala mele idannu koodisidanu.
Luke 3:20 in English
- King James Version (KJV)
- Added yet this above all, that he shut up John in prison.
- World English Bible (WEB)
- added this also to them all, that he shut up John in prison.
- American Standard Version (ASV)
- added this also to them all, that he shut up John in prison.
- Bible in Basic English (BBE)
- Did this most evil thing of all, and had John shut up in prison.
- Darby Translation (DBY)
- added this also to all [the rest], that he shut up John in prison.
- Webster's Bible (WBS)
- Added yet this above all, that he shut up John in prison.
- Young's Literal Translation (YLT)
- added also this to all, that he shut up John in the prison.
Read in context
- 18ಅವನು ಇನ್ನೂ ಅನೇಕ ವಿಷಯಗಳಿಂದ ಎಚ್ಚರಿಸಿ ಜನರಿಗೆ ಸಾರಿದನು.
- 19ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ
- 20ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು.
- 21ಜನರೆಲ್ಲಾ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ ಆದದ್ದೇನಂದರೆ ಯೇಸು ಸಹ ಬಾಪ್ತಿಸ್ಮ ಮಾಡಿಸಿಕೊಂಡು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಲ್ಪಟ್ಟಿತು.
- 22ಆಗ ಪರಿಶುದ್ಧಾತ್ಮನು ಪಾರಿವಾಳದ ದೇಹಾಕಾರದಲ್ಲಿ ಇಳಿ ದನು; --ನೀನು ಪ್ರಿಯನಾಗಿರುವ ನನ್ನ ಮಗನು; ನಿನ್ನಲ್ಲಿ ನಾನು ಆನಂದಿಸುತ್ತೇನೆ ಎಂಬ ಧ್ವನಿಯು ಪರ ಲೋಕದೊಳಗಿಂದ ಬಂತು.
Cross references
- Jeremiah 2:30 ಯೆರೆಮೀಯ 2:30ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
- 2 Chronicles 36:16 2 ಪೂರ್ವಕಾಲವೃತ್ತಾಂತ 36:16ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- Matthew 23:31–33 ಮತ್ತಾಯನು 23:31–33ಆದದರಿಂದ ನೀವು ಆ ಪ್ರವಾದಿ ಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. ಹಾಗಾದರೆ ನಿಮ ಪಿತೃಗಳ ಅಳತೆಯನ್ನು ನೀವೇ ತುಂಬಿಸಿರಿ. ಹಾವು ಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆ ಯಿಂದ ಹೇಗೆ ತಪ್ಪಿಸಿಕೊಂಡೀರಿ?
- Revelation 16:6 ಪ್ರಕಟನೆ 16:6ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು.
- 1 Thessalonians 2:15–16 1 ಥೆಸಲೊನೀಕದವರಿಗೆ 2:15–16ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- 2 Kings 24:4 2 ಅರಸುಗಳು 24:4ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು.
- Nehemiah 9:26 ನೆಹೆಮೀಯ 9:26ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು.
- 2 Chronicles 24:17–22 2 ಪೂರ್ವಕಾಲವೃತ್ತಾಂತ 24:17–22ಆದರೆ ಯೆಹೋಯಾದನು ಸತ್ತತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡ ಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು. ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು. ಆದಾಗ್ಯೂ ಕರ್ತನು ತನ್ನ ಕಡೆಗೆ ಅವರನ್ನು ತಿರುಗಿಸುವದಕ್ಕೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು; ಇವರು ಅವರಿಗೆ ಸಾಕ್ಷಿಯಾಗಿ ಹೇಳಿದರು; ಆದರೆ ಅವರು ಕಿವಿಗೊಡದೆ ಹೋದರು. ಆಗ ದೇವರ ಆತ್ಮನು ಯಾಜಕನಾಗಿ ರುವ ಯೆಹೋಯಾದನ ಮಗನಾದ ಜೆಕರ್ಯನ ಮೇಲೆ ಬಂದನು. ಅವನು ಜನರೊಳಗೆ ಎತ್ತರವಾದ ಸ್ಥಳದಲ್ಲಿ ನಿಂತು ಅವರಿಗೆ--ನೀವು ವೃದ್ಧಿಹೊಂದ ಕೂಡದ ಹಾಗೆ ಕರ್ತನ ಆಜ್ಞೆಗಳನ್ನು ವಿಾರುವದೇನು? ನೀವು ಕರ್ತನನ್ನು ಬಿಟ್ಟದ್ದರಿಂದ ಆತನು ನಿಮ್ಮನ್ನು ಬಿಟ್ಟಿದ್ದಾನೆಂದು ಕರ್ತನು ಹೇಳುತ್ತಾನೆ ಅಂದನು. ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು. ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.
- Matthew 21:35–41 ಮತ್ತಾಯನು 21:35–41ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು. ಅವನು ತಿರಿಗಿ ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು; ಅವರು ಅದೇ ರೀತಿಯಲ್ಲಿ ಅವರಿಗೂ ಮಾಡಿದರು. ಆದರೆ ಅವನು-- ನನ್ನ ಮಗನನ್ನಾದರೂ ಅವರು ಸನ್ಮಾನಿ ಸಾರು ಎಂದು ಅಂದುಕೊಂಡು ಕಟ್ಟಕಡೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಒಕ್ಕಲಿಗರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನಾಗಿದ್ದಾನೆ, ಬನ್ನಿರಿ; ನಾವು ಇವನನ್ನು ಕೊಂದು ಇವನ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊ ಳ್ಳೋಣ ಎಂದು ಅಂದು ಕೊಂಡರು. ಅವರು ಅವನನ್ನು ಹಿಡಿದು ದ್ರಾಕ್ಷೇ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದು ಹಾಕಿದರು. ಹೀಗಿರುವ ದರಿಂದ ದ್ರಾಕ್ಷೇ ತೋಟದ ಯಜಮಾನನು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡಾನು ಅಂದನು. ಅವರು ಆತನಿಗೆ--ಅವನು ಆ ದುಷ್ಟ ಮನುಷ್ಯರನು ಕ್ರೂರವಾಗಿ ಸಂಹರಿಸುವನು; ಮತ್ತು ತಕ್ಕಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಒಕ್ಕಲಿಗರಿಗೆ ತನ್ನ ದ್ರಾಕ್ಷೇತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು.
- John 3:24 ಯೋಹಾನನು 3:24ಯಾಕಂದರೆ ಯೋಹಾನನು ಅದುವರೆಗೆ ಸೆರೆಯಲ್ಲಿ ಹಾಕಲ್ಪಟ್ಟಿರಲಿಲ್ಲ.
- Matthew 22:6–7 ಮತ್ತಾಯನು 22:6–7ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನ ಪಡಿಸಿ ಅವರನ್ನು ಕೊಂದುಹಾಕಿದರು. ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
- Luke 13:31–34 ಲೂಕನು 13:31–34ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು. ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ. ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು. ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.