Luke · chapter 4 · verse 23
Luke 4:23 in Kannada
ಆತನು ಅವರಿಗೆ--ವೈದ್ಯನೇ, ನಿನ್ನನ್ನು ನೀನೇ ವಾಸಿ ಮಾಡಿಕೋ ಎಂಬ ಈ ನಾನ್ನುಡಿಯನ್ನು ನೀವು ನನಗೆ ನಿಶ್ಚಯವಾಗಿ ಹೇಳಿ ಕಪೆರ್ನೌಮಿನಲ್ಲಿ ಯಾವದು ನಡೆಯಿತೆಂದು ನಾವು ಕೇಳಿದೆವೋ ಅದನ್ನು ಇಲ್ಲಿ ನಿನ್ನ ದೇಶದಲ್ಲಿಯೂ ಮಾಡು ಎಂದು ಹೇಳುವಿರಿ ಅಂದನು.
Aatanu avarige--vaidyane, ninnannu neene vaasi maadiko emba ee naannudiyannu neevu nanage nishchayavaagi heli kapernauminalli yaavadu nadeyitendu naavu kelidevo adannu illi ninna deshadalliyoo maadu endu heluviri andanu.
Luke 4:23 in English
- King James Version (KJV)
- And he said unto them, Ye will surely say unto me this proverb, Physician, heal thyself: whatsoever we have heard done in Capernaum, do also here in thy country.
- World English Bible (WEB)
- He said to them, “Doubtless you will tell me this proverb, ‘Physician, heal yourself! Whatever we have heard done at Capernaum, do also here in your hometown.’”
- American Standard Version (ASV)
- And he said unto them, Doubtless ye will say unto me this parable, Physician, heal thyself: whatsoever we have heard done at Capernaum, do also here in thine own country.
- Bible in Basic English (BBE)
- And he said to them, Without doubt you will say to me, Let the medical man make himself well: the things which to our knowledge were done at Capernaum, do them here in your country.
- Darby Translation (DBY)
- And he said to them, Ye will surely say to me this parable, Physician, heal thyself; whatsoever we have heard has taken place in Capernaum do here also in thine own country.
- Webster's Bible (WBS)
- And he said to them, Ye will surely say to me this proverb, Physician, heal thyself: whatever we have heard done in Capernaum, do also here in thy country.
- Young's Literal Translation (YLT)
- And he said unto them, 'Certainly ye will say to me this simile, Physician, heal thyself; as great things as we heard done in Capernaum, do also here in thy country;'
Read in context
- 21ಆತನು ಅವರಿಗೆ--ನೀವು ಕಿವಿಯಿಂದ ಕೇಳಿದ ಈ ಬರಹವು ಈ ದಿವಸ ನೆರವೇರಿತು ಎಂದು ಹೇಳಲಾರಂಭಿಸಿದನು.
- 22ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
- 23ಆತನು ಅವರಿಗೆ--ವೈದ್ಯನೇ, ನಿನ್ನನ್ನು ನೀನೇ ವಾಸಿ ಮಾಡಿಕೋ ಎಂಬ ಈ ನಾನ್ನುಡಿಯನ್ನು ನೀವು ನನಗೆ ನಿಶ್ಚಯವಾಗಿ ಹೇಳಿ ಕಪೆರ್ನೌಮಿನಲ್ಲಿ ಯಾವದು ನಡೆಯಿತೆಂದು ನಾವು ಕೇಳಿದೆವೋ ಅದನ್ನು ಇಲ್ಲಿ ನಿನ್ನ ದೇಶದಲ್ಲಿಯೂ ಮಾಡು ಎಂದು ಹೇಳುವಿರಿ ಅಂದನು.
- 24ಆತನು--ನಿಮಗೆ ನಿಜವಾಗಿ ಹೇಳುವದೇನಂದರೆ--ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವದಿಲ್ಲ.
- 25ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಲೀಯನ ದಿವಸಗಳಲ್ಲಿ ಮೂರು ವರುಷ ಆರು ತಿಂಗಳು ಆಕಾಶವು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರೂ
Cross references
- Matthew 11:23–24 ಮತ್ತಾಯನು 11:23–24ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು. ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
- John 4:46–53 ಯೋಹಾನನು 4:46–53ಹೀಗೆ ಯೇಸು ತಾನು ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಗಲಿಲಾಯದ ಕಾನಾನಿಗೆ ತಿರಿಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಪ್ರಧಾನನ ಮಗನು ಅಸ್ವಸ್ಥನಾಗಿದ್ದನು. ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು. ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು. ಆಗ ಆ ಪ್ರಧಾನನು ಆತನಿಗೆ--ಅಯ್ಯಾ, ನನ್ನ ಮಗನು ಸಾಯುವದಕ್ಕೆ ಮೊದಲು ಬರಬೇಕು ಅಂದನು. ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು. ಹೀಗೆ ಅವನು ಹೋಗುತ್ತಿರುವಾಗ ಅವನ ಸೇವಕರು ಅವ ನನ್ನು ಸಂಧಿಸಿ--ನಿನ್ನ ಮಗನು ಬದುಕಿದನು ಎಂದು ಅವನಿಗೆ ಹೇಳಿದರು. ಆಗ ಅವನು--ಯಾವ ಗಳಿಗೆಯಲ್ಲಿ ಅವನಿಗೆ ಗುಣವಾಗತೊಡಗಿತು ಎಂದು ಅವರನ್ನು ವಿಚಾರಿಸಿದಾಗ ಅವರು ನಿನ್ನೆ ಏಳನೇ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟಿತು ಎಂದು ಅವನಿಗೆ ಹೇಳಿದರು. ಹೀಗೆ--ನಿನ್ನ ಮಗನು ಬದುಕುತ್ತಾನೆ ಎಂದು ಯೇಸು ತನಗೆ ಹೇಳಿದ ಗಳಿಗೆಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು ತಾನೂ ತನ್ನ ಮನೆಯವರೆಲ್ಲರೂ ನಂಬಿದರು.ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ.
- Mark 2:1–12 ಮಾರ್ಕನು 2:1–12ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು. ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು; ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು. ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು. ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು. ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು-- ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು. ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಯಾವದು ಸುಲಭ? ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)-- ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು. ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
- Romans 2:21–22 ರೋಮಾಪುರದವರಿಗೆ 2:21–22ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ? ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ?
- John 2:3–4 ಯೋಹಾನನು 2:3–4ಆಗ ಅವರಿಗೆ ದ್ರಾಕ್ಷಾರಸವು ಸಾಲದೆ ಹೋದ ದ್ದರಿಂದ ಯೇಸುವಿನ ತಾಯಿಯು ಆತನಿಗೆ--ಅವರಿಗೆ ದ್ರಾಕ್ಷಾರಸವು ಇಲ್ಲ ಅಂದಳು. ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು.
- Matthew 4:13 ಮತ್ತಾಯನು 4:13ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್, ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
- Mark 6:1 ಮಾರ್ಕನು 6:1ಆತನು ಅಲ್ಲಿಂದ ಹೊರಟು ತನ್ನ ಸ್ವಂತ ಸ್ಥಳಕ್ಕೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.