Luke · chapter 4 · verse 27
Luke 4:27 in Kannada
ಪ್ರವಾದಿಯಾದ ಎಲೀಷನ ಕಾಲ ದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿ ದ್ದಾಗ್ಯೂ ಸಿರಿಯದವನಾದ ನಾಮಾನನ ಹೊರತು ಅವರಲ್ಲಿ ಒಬ್ಬನಾದರೂ ಶುದ್ಧನಾಗಲಿಲ್ಲ ಅಂದನು.
Pravaadiyaada eleeshana kaala dalli aneka kushtharogigalu israayelinalli ddaagyoo siriyadavanaada naamaanana horatu avaralli obbanaadaroo shuddhanaagalilla andanu.
Luke 4:27 in English
- King James Version (KJV)
- And many lepers were in Israel in the time of Eliseus the prophet; and none of them was cleansed, saving Naaman the Syrian.
- World English Bible (WEB)
- There were many lepers in Israel in the time of Elisha the prophet, yet not one of them was cleansed, except Naaman, the Syrian.”
- American Standard Version (ASV)
- And there were many lepers in Israel in the time of Elisha the prophet; and none of them was cleansed, but only Naaman the Syrian.
- Bible in Basic English (BBE)
- And there were a number of lepers in Israel in the time of Elisha the prophet, and not one of them was made clean, but only Naaman the Syrian.
- Darby Translation (DBY)
- And there were many lepers in Israel in the time of Elisha the prophet, and none of them was cleansed but Naaman the Syrian.
- Webster's Bible (WBS)
- And many lepers were in Israel in the time of Elisha the prophet; and none of them was cleansed, saving Naaman the Syrian.
- Young's Literal Translation (YLT)
- and many lepers were in the time of Elisha the prophet, in Israel, and none of them was cleansed, but — Naaman the Syrian.'
Read in context
- 25ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಲೀಯನ ದಿವಸಗಳಲ್ಲಿ ಮೂರು ವರುಷ ಆರು ತಿಂಗಳು ಆಕಾಶವು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರೂ
- 26ಅವರಲ್ಲಿ ಯಾರ ಬಳಿಗೂ (ದೇವರು) ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೇ ಕಳುಹಿಸಿದನು.
- 27ಪ್ರವಾದಿಯಾದ ಎಲೀಷನ ಕಾಲ ದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿ ದ್ದಾಗ್ಯೂ ಸಿರಿಯದವನಾದ ನಾಮಾನನ ಹೊರತು ಅವರಲ್ಲಿ ಒಬ್ಬನಾದರೂ ಶುದ್ಧನಾಗಲಿಲ್ಲ ಅಂದನು.
- 28ಆಗ ಸಭಾಮಂದಿರದಲ್ಲಿದ್ದವರೆಲ್ಲರೂ ಇವುಗಳನ್ನು ಕೇಳಿ ಕೋಪದಿಂದ ತುಂಬಿದವರಾದರು.
- 29ಅವರು ಮೇಲಕ್ಕೆದ್ದು ಆತನನ್ನು ಪಟ್ಟಣದ ಹೊರಗೆ ದೂಡಿ ಕೊಂಡು ಹೋಗಿ ತಲೆ ಕೆಳಗೆ ಮಾಡಿ ದೊಬ್ಬಬೇಕೆಂದು ತಮ್ಮ ಪಟ್ಟಣವು ಕಟ್ಟಲ್ಪಟ್ಟಿದ್ದ ಬೆಟ್ಟದ ಕಡಿದಾದ ಸ್ಥಳಕ್ಕೆ ಆತನನ್ನು ನಡಿಸಿಕೊಂಡು ಹೋದರು.
Cross references
- 2 Kings 5:1–27 2 ಅರಸುಗಳು 5:1–27ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು. ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು. ಅವಳು ತನ್ನ ಯಜಮಾನಿಗೆ--ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ ಅವನು ಇವನ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು ಅಂದಳು. ಆಗ ಒಬ್ಬನು ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು. ಆದದರಿಂದ ಅರಾಮ್ಯರ ಅರಸನು--ನೀನು ಹೋಗಿ ಬಾ; ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು ಅಂದನು. ಹಾಗೆಯೇ ಅವನು ಹತ್ತು ತಲಾಂತು ಬೆಳ್ಳಿಯನ್ನೂ ಆರು ಸಾವಿರ ಬಂಗಾರದ ನಾಣ್ಯಗಳನ್ನೂ ಹತ್ತು ದುಸ್ತು ಬಟ್ಟೆ ಗಳನ್ನೂ ತೆಗೆದುಕೊಂಡು ಹೋದನು. ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದು ಕೊಂಡು ಬಂದನು. ಅದರಲ್ಲಿ--ಈ ಪತ್ರ ನಿನಗೆ ಸೇರುವಾಗ ಇಗೋ, ನೀನು ನನ್ನ ಸೇವಕನಾದ ನಾಮಾ ನನಿಗಿರುವ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ ಎಂಬದು. ಇಸ್ರಾಯೇಲ್ಯರ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು--ಕೊಲ್ಲು ವದಕ್ಕೂ ಬದುಕಿಸುವದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ತಪ್ಪಿಸಿ ವಾಸಿಮಾಡುವದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧ ವಾಗಿ ಜಗಳಕ್ಕೆ ಕಾರಣ ಹುಡುಕುವದನ್ನು ನೀವು ನೋಡಿ ತಿಳುಕೊಳ್ಳಿರಿ ಅಂದನು. ಇಸ್ರಾಯೇಲ್ಯರ ಅರಸನು ತನ್ನ ವಸ್ತ್ರಗಳನ್ನು ಹರಿದು ಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ--ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡ ದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ಅವನು ತಿಳುಕೊಳ್ಳುವ ಹಾಗೆ ಅವನು ನನ್ನ ಬಳಿಗೆ ಬರಲಿ ಎಂದು ಅರಸನಿಗೆ ಹೇಳಿ ಕಳುಹಿಸಿದನು. ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗ ಡಲೂ ರಥದ ಸಂಗಡಲೂ ಬಂದು ಎಲೀಷನ ಮನೆಯ ಬಾಗಲ ಬಳಿಯಲ್ಲಿ ನಿಂತನು. ಆಗ ಎಲೀಷನುನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪ ಡುವದು; ನೀನು ಶುದ್ಧನಾಗುವಿ ಎಂದು ಹೇಳಿ ಅವನ ಬಳಿಗೆ ಸೇವಕನನ್ನು ಕಳುಹಿಸಿದನು. ಆಗ ನಾಮಾ ನನು ರೌದ್ರಗೊಂಡು ಹೊರಟು ಹೋಗಿ--ಇಗೋ, ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು ತನ್ನ ದೇವರಾದ ಕರ್ತನ ಹೆಸರನ್ನು ಕರೆದು ಆ ಸ್ಥಳದ ಮೇಲೆ ತನ್ನ ಕೈಯಾಡಿಸಿ ಕುಷ್ಠರೋಗವನ್ನು ವಾಸಿ ಮಾಡುವನೆಂದು ನಾನು ಯೋಚಿಸಿಕೊಂಡೆನು. ನಾನು ಹೊಳೆಗಳಲ್ಲಿ ಸ್ನಾನ ಮಾಡಿ ಶುದ್ಧನಾಗುವ ಹಾಗೆ ದಮಸ್ಕದ ನದಿಗಳಾದ ಅಬಾನಾ ಪರ್ಪರ್ ಇಸ್ರಾಯೇಲಿನ ಎಲ್ಲಾ ನೀರಿಗಿಂತ ಉತ್ತಮವಲ್ಲವೋ ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು. ಆದರೆ ಅವನ ಸೇವಕರು ನಾಮಾನನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನನ್ನ ತಂದೆಯೇ, ಪ್ರವಾದಿಯು ದೊಡ್ಡ ಕಾರ್ಯವನ್ನು ನಿನಗೆ ಹೇಳಿದ್ದರೆ ನೀನು ಮಾಡುತ್ತಿದ್ದಿಯಲ್ಲವೋ? ಅವನು ನಿನಗೆ ಸ್ನಾನಮಾಡಿ ಶುದ್ಧನಾಗೆಂದು ಹೇಳಿದರೆ ಅಡ್ಡಿ ಏನು ಅಂದರು. ಆಗ ಅವನು ಇಳಿದುಹೋಗಿ ದೇವರ ಮನುಷ್ಯನ ವಾಕ್ಯದ ಪ್ರಕಾರ ಯೊರ್ದನಿನಲ್ಲಿ ಏಳುಸಾರಿ ಮುಣುಗಿದನು; ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು; ಅವನು ಶುದ್ಧನಾದನು. ಆಗ ಅವನೂ ಅವನ ಎಲ್ಲಾ ಪರಿವಾರದವರೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ನಿಂತು--ಇಗೋ, ಇಸ್ರಾಯೇ ಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು; ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತಕ್ಕೋ ಅಂದನು. ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು. ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು. ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು. ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು. ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು. ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು. ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು. ಆಗ ನಾಮಾನನು--ನೀನು ದಯಮಾಡಿ ಎರಡು ತಲಾಂತು ಗಳನ್ನು ತಕ್ಕೋ ಎಂದು ಹೇಳಿ ಅವನನ್ನು ಬಲವಂತ ಮಾಡಿದನು. ಹಾಗೆಯೇ ಎರಡು ತಲಾಂತು ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಕಟ್ಟಿಸಿ ಅದರ ಸಂಗಡ ಎರಡು ದುಸ್ತು ಬಟ್ಟೆಗಳನ್ನು ಕೊಟ್ಟು ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು; ಅವರು ಇವನ ಮುಂದೆ ಹೊತ್ತುಕೊಂಡು ಹೋದರು. ಅವನು ದುರ್ಗಕ್ಕೆ ಬಂದು ಅವುಗಳನ್ನು ಅವರ ಕೈಯಿಂದ ತಕ್ಕೊಂಡು ಮನೆಯಲ್ಲಿಟ್ಟು ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೋದರು. ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು. ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು. ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- John 17:12 ಯೋಹಾನನು 17:12ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ.
- Matthew 12:4 ಮತ್ತಾಯನು 12:4ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?
- 1 Kings 19:19–21 1 ಅರಸುಗಳು 19:19–21ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಆಗ ಅವನು ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಓಡಿಹೋಗಿ ಅವನಿಗೆ --ಅಪ್ಪಣೆಯಾದರೆ ನಾನು ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ನಿನ್ನನ್ನು ಹಿಂಬಾಲಿಸುವೆನು ಅಂದನು. ಅವನು ಇವನಿಗೆ--ಹಿಂದಕ್ಕೆ ಹೋಗು; ನಾನು ನಿನಗೆ ಏನು ಮಾಡಿದೆನು ಅಂದನು.ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು. ಆಗ ಇವನು ಅವನನ್ನು ಬಿಟ್ಟು ತಿರುಗಿಕೊಂಡು ಒಂದು ಜೋಡು ಎತ್ತುಗಳನ್ನು ತಕ್ಕೊಂಡು ಅವುಗಳನ್ನು ಕೊಂದು ಆ ಜೋಡು ಎತ್ತು ಕುಂಟೆಗಳಿಂದ ಅವುಗಳ ಮಾಂಸ ವನ್ನು ಬೇಯಿಸಿ ಜನರಿಗೆ ಕೊಟ್ಟನು. ಅವರು ತಿಂದ ತರುವಾಯ ಅವನು ಎದ್ದು ಎಲೀಯನ ಹಿಂದೆ ಹೋಗಿ ಅವನಿಗೆ ಸೇವೆಮಾಡಿದನು.
- Job 36:23 ಯೋಬನು 36:23ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.