Luke · chapter 4 · verse 43
Luke 4:43 in Kannada
ಆದರೆ ಆತನು ಅವರಿಗೆ--ಬೇರೆ ಪಟ್ಟಣಗಳಿಗೂ ದೇವರ ರಾಜ್ಯವನ್ನು ನಾನು ಸಾರಲೇಬೇಕು; ಇದಕ್ಕಾಗಿಯೇ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.
Aadare aatanu avarige--bere pattanagaligoo devara raajyavannu naanu saaralebeku; idakkaagiye naanu kaluhisalpattiddene andanu.aatanu galilaayada sabhaamandiragalalli saaridanu.
Luke 4:43 in English
- King James Version (KJV)
- And he said unto them, I must preach the kingdom of God to other cities also: for therefore am I sent.
- World English Bible (WEB)
- But he said to them, “I must preach the good news of God’s Kingdom to the other cities also. For this reason I have been sent.”
- American Standard Version (ASV)
- But he said unto them, I must preach the good tidings of the kingdom of God to the other cities also: for therefore was I sent.
- Bible in Basic English (BBE)
- But he said to them, I have to give the good news of the kingdom of God in other towns, because that is why I was sent.
- Darby Translation (DBY)
- But he said to them, I must needs announce the glad tidings of the kingdom of God to the other cities also, for for this I have been sent forth.
- Webster's Bible (WBS)
- And he said to them, I must preach the kingdom of God to other cities also, for therefore am I sent.
- Young's Literal Translation (YLT)
- and he said unto them — 'Also to the other cities it behoveth me to proclaim good news of the reign of God, because for this I have been sent;'
Read in context
- 41ಅನೇಕರೊಳಗಿಂದ ದೆವ್ವಗಳು ಸಹ ಹೊರಗೆ ಬಂದು ಕೂಗುತ್ತಾ--ನೀನು ದೇವಕುಮಾರನಾದ ಕ್ರಿಸ್ತನೇ ಎಂದು ಹೇಳಿದವು. ಆತನು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದನು. ಯಾಕಂದರೆ ಆತನು ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.
- 42ಬೆಳಗಾದ ಮೇಲೆ ಆತನು ಅರಣ್ಯ ಸ್ಥಳಕ್ಕೆ ಹೊರಟು ಹೋದನು; ಜನರು ಆತನನ್ನು ಹುಡುಕಿಕೊಂಡು ಆತನ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗ ಬಾರದೆಂದು ಆತನನ್ನು ತಡೆದರು.
- 43ಆದರೆ ಆತನು ಅವರಿಗೆ--ಬೇರೆ ಪಟ್ಟಣಗಳಿಗೂ ದೇವರ ರಾಜ್ಯವನ್ನು ನಾನು ಸಾರಲೇಬೇಕು; ಇದಕ್ಕಾಗಿಯೇ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.
- 44ಆತನು ಗಲಿಲಾಯದ ಸಭಾಮಂದಿರಗಳಲ್ಲಿ ಸಾರಿದನು.
Cross references
- Mark 1:38–39 ಮಾರ್ಕನು 1:38–39ಆತನು ಅವರಿಗೆ--ನಾವು ಮುಂದಿನ ಊರುಗಳಿಗೆ ಹೋಗೋಣ; ಯಾಕಂದರೆ ನಾನು ಅಲ್ಲಿಯೂ ಸಾರಬೇಕಾಗಿದೆ; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು. ಮತ್ತು ಆತನು ಗಲಿಲಾಯದಲ್ಲೆಲ್ಲಾ ಅವರ ಸಭಾಮಂದಿರಗಳಲ್ಲಿ ಸಾರಿ ದೆವ್ವಗಳನ್ನು ಬಿಡಿಸಿದನು.
- 2 Timothy 4:2 2 ತಿಮೊಥೆಯನಿಗೆ 4:2ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು.
- John 6:38–40 ಯೋಹಾನನು 6:38–40ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
- John 20:21 ಯೋಹಾನನು 20:21ಯೇಸು ತಿರಿಗಿ ಅವರಿಗೆ--ನಿಮಗೆ ಸಮಾಧಾನ ವಾಗಲಿ; ನನ್ನ ತಂದೆಯು ನನ್ನನ್ನು ಕಳುಹಿಸಿದ ಮೇರೆಗೆ ನಾನೂ ನಿಮ್ಮನ್ನು ಕಳುಹಿಸುತ್ತೇನೆ ಅಂದನು.
- Mark 1:14–15 ಮಾರ್ಕನು 1:14–15ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ-- ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ ಅಂದನು.
- Acts 10:38 ಅಪೊಸ್ತಲರ ಕೃತ್ಯಗಳು 10:38ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು.
- John 9:4 ಯೋಹಾನನು 9:4ನನ್ನನ್ನು ಕಳುಹಿಸಿದಾತನ ಕೆಲಸ ಗಳನ್ನು ಹಗಲಿರುವಾಗ ನಾನು ಮಾಡತಕ್ಕದ್ದು; ರಾತ್ರಿ ಬರುತ್ತದೆ, ಆಗ ಯಾವ ಮನುಷ್ಯನೂ ಕೆಲಸಮಾಡ ಲಾರನು.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Isaiah 42:1–4 ಯೆಶಾಯ 42:1–4ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು. ಅವನು ಕೂಗು ವದಿಲ್ಲ, ಶಬ್ದವನ್ನು ಎತ್ತುವದಿಲ್ಲ ಇಲ್ಲವೆ ಬೀದಿಗಳಲ್ಲಿ ತನ್ನ ಸ್ವರವನ್ನು ಕೇಳಗೊಡಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದುಹಾಕದೆ, ಕಳೆಗುಂದಿದ ದೀಪ ವನ್ನು ನಂದಿಸದೆ, ಸತ್ಯದಿಂದ ನ್ಯಾಯವನ್ನು ಹೊರ ತರುತ್ತಾನೆ. ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
- Isaiah 48:16 ಯೆಶಾಯ 48:16ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ.