Luke · chapter 7 · verse 32
Luke 7:32 in Kannada
ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ.
Avaru sante yalli kootukondu obbarannobbaru kare yuttaa--naavu nimagaagi kolaloodidevu, neevu kuniyalilla; naavu nimagaagi shokisidevu, neevu alalilla endu heluva makkalige holike yaagiddaare.
Luke 7:32 in English
- King James Version (KJV)
- They are like unto children sitting in the marketplace, and calling one to another, and saying, We have piped unto you, and ye have not danced; we have mourned to you, and ye have not wept.
- World English Bible (WEB)
- They are like children who sit in the marketplace and call to one another, saying, ‘We piped to you, and you didn’t dance. We mourned, and you didn’t weep.’
- American Standard Version (ASV)
- They are like unto children that sit in the marketplace, and call one to another; who say, We piped unto you, and ye did not dance; we wailed, and ye did not weep.
- Bible in Basic English (BBE)
- They are like children who are seated in the market-place, crying out to one another, and saying, We made music for you, but you did not take part in the dance; we gave cries of sorrow, but you were not sad.
- Darby Translation (DBY)
- They are like children sitting in the market-place, and calling one to another and saying, We have piped to you, and ye have not danced; we have mourned to you, and ye have not wept.
- Webster's Bible (WBS)
- They are like children sitting in the market-place, and calling one to another, and saying, We have piped to you, and ye have not danced; we have mourned to you, and ye have not wept.
- Young's Literal Translation (YLT)
- they are like to children, to those sitting in a market-place, and calling one to another, and saying, We piped to you, and ye did not dance, we mourned to you, and ye did not weep!
Read in context
- 30ಆದರೆ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಅವನಿಂದ ಬಾಪ್ತಿಸ್ಮಮಾಡಿಸಿಕೊಳ್ಳದೆ ಹೋದದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
- 31ಕರ್ತನು--ಈ ಸಂತತಿಯವರನ್ನು ನಾನು ಯಾವದಕ್ಕೆ ಹೋಲಿಸಲಿ? ಮತ್ತು ಅವರು ಯಾವದಕ್ಕೆ ಹೋಲಿಕೆಯಾಗಿದ್ದಾರೆ?
- 32ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ.
- 33ಬಾಪ್ತಿಸ್ಮ ಮಾಡಿಸುವ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ಇಲ್ಲವೆ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು; ಅದಕ್ಕೆ ನೀವು--ಅವನಲ್ಲಿ ದೆವ್ವವಿದೆ ಅನ್ನುತ್ತೀರಿ.
- 34ಮನುಷ್ಯಕುಮಾರನು ತಿನ್ನು ವವನಾಗಿಯೂ ಕುಡಿಯುವವನಾಗಿಯೂ ಬಂದನು; ಆದರೆ ನೀವು--ಇಗೋ, ಹೊಟ್ಟೇಬಾಕನು, ಕುಡು ಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು ಅನ್ನುತ್ತೀರಿ.
Cross references
- Matthew 11:16–19 ಮತ್ತಾಯನು 11:16–19ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ-- ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ. ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ. ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
- Jeremiah 5:3–5 ಯೆರೆಮೀಯ 5:3–5ಓ ಕರ್ತನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇವೆಯ ಲ್ಲವೋ? ಅವರನ್ನು ಹೊಡೆದಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ಸಂಹರಿಸಿದಿ, ಆದರೆ ಶಿಕ್ಷೆ ಹೊಂದಲೊಲ್ಲದೆ ಇದ್ದರು; ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ; ಅವರು ಹಿಂತಿರುಗುವದಕ್ಕೆ ನಿರಾಕರಿಸಿದ್ದಾರೆ. ಆದದರಿಂದ ನಾನು--ನಿಶ್ಚಯವಾಗಿ ಇವರು ಬಡವರು, ಬುದ್ಧಿ ಹೀನರು; ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ಅರಿಯರು. ನಾನು ದೊಡ್ಡವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡು ವೆನು; ಅವರು ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ತಿಳಿದಿದ್ದಾರೆ; ಆದರೆ ಇವರು ಕೂಡ ನೊಗವನ್ನು ಮುರಿದು ಬಂಧನಗಳನ್ನು ಹರಿದು ಬಿಟ್ಟಿದ್ದಾರೆ.
- Proverbs 17:16 ಜ್ಞಾನೋಕ್ತಿಗಳು 17:16ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?
- Isaiah 28:9–13 ಯೆಶಾಯ 28:9–13ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಯಾರಿಗೆ ಬೋಧನೆಯನ್ನು ತಿಳುಕೊಳ್ಳುವ ಹಾಗೆ ಮಾಡುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ? ಎದೆ ಬಿಟ್ಟ ಮಕ್ಕಳಿಗೋ? ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ. ಇಲ್ಲಿ ಸ್ವಲ್ಪ. ತೊದಲು ಮಾತಿನವರು ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರ ಸಂಗಡ ಮಾತನಾಡುತ್ತಾನೆ. ಆತನು ಮೊದಲು--ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ. ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪ ಶಮನ ಇದೇ ಎಂದು ಹೇಳಿದಾಗ್ಯೂ ಅವರು ಕೇಳ ಲಿಲ್ಲ. ಆದರೆ ಅವರು ಹೋಗಿ ಹಿಂದಕ್ಕೆ ಎಡವಿ ಮುರಿದುಕೊಳ್ಳುವ ಹಾಗೆಯೂ ಬೋನಿನಲ್ಲಿ ಹಿಡಿ ಯಲ್ಪಟ್ಟು ಸಿಕ್ಕಿಬೀಳುವ ಹಾಗೆಯೂ ಕರ್ತನ ವಾಕ್ಯವು ಅವರಿಗೆ ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.
- Zechariah 8:5 ಜೆಕರ್ಯ 8:5ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು.
- Isaiah 29:11–12 ಯೆಶಾಯ 29:11–12ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿ ದ ವಾಕ್ಯಗಳ ಪುಸ್ತಕದ ಹಾಗಾಯಿತು; ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು ಇದನ್ನು ಓದು ಎಂದು ಬೇಡಿದರೆ ಅವನು--ಮುದ್ರೆ ಹಾಕಿದೆಯಲ್ಲಾ, ಆಗುವದಿಲ್ಲ ಅನ್ನು ವನು; ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು--ನನಗೆ ವಿದ್ಯೆಯಿಲ್ಲ ಅನ್ನುವನು.