Luke · chapter 9 · verse 23
Luke 9:23 in Kannada
ಆತನು ಅವರೆಲ್ಲರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ;
Aatanu avarellarige--yaavanaadaroo nanna hinde baruvadaadare avanu tannannu niraakarisi tanna shilubeyannu pratidina hottukondu nannannu himbaalisali;
Luke 9:23 in English
- King James Version (KJV)
- And he said to [them] all, If any [man] will come after me, let him deny himself, and take up his cross daily, and follow me.
- World English Bible (WEB)
- He said to all, “If anyone desires to come after me, let him deny himself, take up his cross, and follow me.
- American Standard Version (ASV)
- And he said unto all, If any man would come after me, let him deny himself, and take up his cross daily, and follow me.
- Bible in Basic English (BBE)
- And he said to them all, If any man has a desire to come after me, let him give up all, and take up his cross every day, and come after me.
- Darby Translation (DBY)
- And he said to [them] all, If any one will come after me, let him deny himself and take up his cross daily and follow me;
- Webster's Bible (WBS)
- And he said to [them] all, If any [man] will come after me, let him deny himself, and take up his cross daily, and follow me.
- Young's Literal Translation (YLT)
- And he said unto all, 'If any one doth will to come after me, let him disown himself, and take up his cross daily, and follow me;
Read in context
- 21ಆ ಸಂಗತಿಯನ್ನು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿ--
- 22ಮನುಷ್ಯಕುಮಾ ರನು ಬಹಳ ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಪ್ರಧಾನಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕರಿ ಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವದು ಅಗತ್ಯವಾಗಿದೆ ಎಂದು ಆಜ್ಞಾಪಿಸಿ ದನು.
- 23ಆತನು ಅವರೆಲ್ಲರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ;
- 24ಯಾವನಾದರೂ ತನ್ನ ಪ್ರಾಣವನ್ನು ಉಳಿಸಿಕೊಳ್ಳುವದಾದರೆ ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ಯಾವನಾದರೂ ತನ್ನ ಪ್ರಾಣವನ್ನು ಕಳಕೊಂಡರೆ ಅದನ್ನು ಉಳಿಸಿಕೊಳ್ಳುವನು.
- 25ಇದಲ್ಲದೆ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು ತನ್ನನ್ನು ತಾನೇ ಹಾಳು ಮಾಡಿ ಕೊಂಡರೆ ಇಲ್ಲವೆ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
Cross references
- Matthew 10:38–39 ಮತ್ತಾಯನು 10:38–39ತನ್ನ ಶಿಲುಬೆ ಯನ್ನು ತೆಗೆದುಕೊಳ್ಳದೆ ನನ್ನನ್ನು ಹಿಂಬಾಲಿಸುವವನು ನನಗೆ ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಂಡು ಕೊಳ್ಳುವವನು ಅದನ್ನು ಕಳಕೊಳ್ಳುವನು; ನನ್ನ ನಿಮಿತ್ತ ವಾಗಿ ತನ್ನ ಪ್ರಾಣವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು.
- Luke 14:26–27 ಲೂಕನು 14:26–27ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
- Romans 8:13 ರೋಮಾಪುರದವರಿಗೆ 8:13ನೀವು ಶರೀರಭಾವವನ್ನು ಅನುಸರಿಸಿದರೆ ಸಾಯುವಿರಿ; ಆದರೆ ನೀವು ಆತ್ಮನಿಂದ ದೇಹದ ಕ್ರಿಯೆಗಳನ್ನು ಸಾಯಿಸುವದಾದರೆ ಜೀವಿಸುವಿರಿ.
- John 12:25–26 ಯೋಹಾನನು 12:25–26ತನ್ನ ಪ್ರಾಣ ವನ್ನು ಪ್ರೀತಿಸುವವನು ಅದನ್ನು ಕಳಕೊಳ್ಳುವನು; ಈ ಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. ಯಾವನಾದರೂ ನನ್ನನ್ನು ಸೇವಿಸುವವನಾದರೆ ಅವನು ನನ್ನನ್ನು ಹಿಂಬಾಲಿಸಲಿ; ನಾನು ಇರುವಲ್ಲಿಯೇ ನನ್ನ ಸೇವಕನೂ ಇರುವನು; ಯಾವನಾದರೂ ನನ್ನನ್ನು ಸೇವಿಸುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.
- Mark 8:34–38 ಮಾರ್ಕನು 8:34–38ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು. ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- Colossians 3:5 ಕೊಲೊಸ್ಸೆಯವರಿಗೆ 3:5ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.
- Titus 2:12 ತೀತನಿಗೆ 2:12ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.
- 2 Timothy 3:12 2 ತಿಮೊಥೆಯನಿಗೆ 3:12ಹೌದು, ಕ್ರಿಸ್ತ ಯೇಸುವಿನಲ್ಲಿ ಭಕ್ತಿ ಯುಳ್ಳವರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವ ರೆಲ್ಲರೂ ಹಿಂಸೆಗೊಳಗಾಗುವರು.
- Matthew 16:22–25 ಮತ್ತಾಯನು 16:22–25ತರುವಾಯ ಪೇತ್ರನು ಆತನ ಕೈಹಿಡಿದು--ಕರ್ತನೇ, ಅದು ನಿನ್ನಿಂದ ದೂರವಿರಲಿ; ಇಂಥದ್ದು ನಿನಗೆ ಆಗಬಾರದು ಎಂದು ಹೇಳಿ ಆತನನ್ನು ಗದರಿಸಲಾರಂಭಿಸಿದನು. ಆದರೆ ಆತನು ತಿರುಗಿಕೊಂಡು ಪೇತ್ರನಿಗೆ--ಸೈತಾನನೇ, ನನ್ನ ಹಿಂದೆ ಹೋಗು; ನೀನು ನನಗೆ ಅಭ್ಯಂತರವಾಗಿದ್ದೀ; ನೀನು ದೇವರವುಗಳನ್ನಲ್ಲ,ಮನುಷ್ಯರ ಆಲೋಚನೆಗಳನ್ನೇ ಮಾಡುತ್ತೀ ಅಂದನು. ತರುವಾಯ ಯೇಸು ತನ್ನ ಶಿಷ್ಯರಿಗೆ--ಯಾವ ನಾದರೂ ನನ್ನ ಹಿಂದೆ ಬರುವದಕ್ಕೆ ಅಪೇಕ್ಷಿಸಿದರೆ ಅವನು ತನ್ನನ್ನು ತಾನೇ ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳ ಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣ ವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು.
- 1 Corinthians 15:30–31 1 ಕೊರಿಂಥದವರಿಗೆ 15:30–31ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿ ದ್ದೇವೆ? ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ನನಗಿರುವ ಸಂತೋಷದ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.