Luke · chapter 9 · verse 50
Luke 9:50 in Kannada
ಅದಕ್ಕೆ ಯೇಸು--ಅವನಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ನಮಗೆ ವಿರೋಧ ವಾಗಿರದವನು ನಮ್ಮ ಪಕ್ಷದವನೇ ಎಂದು ಹೇಳಿದನು.
Adakke yesu--avanige addi maadabediri; yaakandare namage virodha vaagiradavanu namma pakshadavane endu helidanu.
Luke 9:50 in English
- King James Version (KJV)
- And Jesus said unto him, Forbid [him] not: for he that is not against us is for us.
- World English Bible (WEB)
- Jesus said to him, “Don’t forbid him, for he who is not against us is for us.”
- American Standard Version (ASV)
- But Jesus said unto him, Forbid [him] not: for he that is not against you is for you.
- Bible in Basic English (BBE)
- But Jesus said to him, Let him do it, for he who is not against you is for you.
- Darby Translation (DBY)
- And Jesus said to him, Forbid [him] not, for he that is not against you is for you.
- Webster's Bible (WBS)
- And Jesus said to him, Forbid [him] not: for he that is not against us, is for us.
- Young's Literal Translation (YLT)
- and Jesus said unto him, 'Forbid not, for he who is not against us, is for us.'
Read in context
- 48ಅವರಿಗೆ ಯಾವನಾದರೂ ಈ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಯಾವನಾದರೂ ನನ್ನನ್ನು ಅಂಗೀಕರಿಸಿಕೊಂಡರೆ ನನ್ನನ್ನು ಕಳುಹಿಸಿ ಕೊಟ್ಟಾತನನ್ನೇ ಅಂಗೀಕರಿಸಿಕೊಳ್ಳುತ್ತಾನೆ. ಯಾಕಂ ದರೆ ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡ
- 49ಆಗ ಯೋಹಾನನು--ಬೋಧಕನೇ, ಒಬ್ಬನು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವದನ್ನು ನಾವು ನೋಡಿ ಅವನಿಗೆ ಅಡ್ಡಿಮಾಡಿದೆವು; ಯಾಕಂದರೆ ಅವನು ನಮ್ಮೊಂದಿಗೆ (ನಿನ್ನನ್ನು) ಹಿಂಬಾಲಿ ಸುವದಿಲ್ಲ ಅಂದನು.
- 50ಅದಕ್ಕೆ ಯೇಸು--ಅವನಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ನಮಗೆ ವಿರೋಧ ವಾಗಿರದವನು ನಮ್ಮ ಪಕ್ಷದವನೇ ಎಂದು ಹೇಳಿದನು.
- 51ಇದಾದಮೇಲೆ ಯೇಸು ತಾನು ಮೇಲಕ್ಕೆ ಅಂಗೀ ಕರಿಸಲ್ಪಡುವ ಸಮಯವು ಬಂದಾಗ ಯೆರೂಸಲೇಮಿಗೆ ಹೋಗುವದಕ್ಕಾಗಿ ಆತನು ತನ್ನ ಮುಖವನ್ನು ದೃಢಮಾಡಿಕೊಂಡು
- 52ತನಗೆ ಮುಂದಾಗಿ ದೂತರನ್ನು ಕಳುಹಿಸಿದನು. ಅವರು ಹೋಗಿ ಆತನಿಗಾಗಿ ಸಿದ್ಧ ಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.
Cross references
- Luke 11:23 ಲೂಕನು 11:23ನನ್ನ ಜೊತೆಯಲ್ಲಿ ಇಲ್ಲದಿರುವವನು ನನಗೆ ವಿರೋಧವಾಗಿ ದ್ದಾನೆ; ನನ್ನೊಂದಿಗೆ ಕೂಡಿಸದೆ ಇರುವವನು ಚದರಿ ಸುತ್ತಾನೆ.
- Matthew 12:30 ಮತ್ತಾಯನು 12:30ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು.
- Philippians 1:15–18 ಫಿಲಿಪ್ಪಿಯವರಿಗೆ 1:15–18ಕೆಲವರು ಹೊಟ್ಟೇಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೇಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ. ಆ ಬೇರೆ ತರದವರಾದರೋ ನನ್ನ ಬೇಡಿಗಳಿಗೆ ಸಂಕಟವನ್ನು ಕೂಡಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧಪಡಿಸದೆ ಕಕ್ಷೀಭಾವದಿಂದ ಪ್ರಸಿದ್ದಿಪಡಿಸುತ್ತಾರೆ. ಇವರಾದರೋ ನಾನು ಸುವಾರ್ತೆಯ ಪರವಾಗಿ ನೇಮಿಸಲ್ಪಟ್ಟಿದ್ದೇನೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ. ಹೇಗಾದರೇನು? ಯಾವ ರೀತಿಯಿಂದಾದರೂ ಅಂದರೆ ಕಪಟದಿಂದಾ ಗಲಿ ಇಲ್ಲವೆ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿ ಸುವದುಂಟು; ಇದಕ್ಕೆ ನಾನು ಸಂತೋಷಿಸುತ್ತೇನೆ ಹೌದು, ಮುಂದೆಯೂ ಸಂತೋಷಿಸುವೆನು.
- 1 Corinthians 12:3 1 ಕೊರಿಂಥದವರಿಗೆ 12:3ಹೀಗಿರುವದರಿಂದ ನಾನು ನಿಮಗೆ ತಿಳಿಸುವದೇನಂದರೆ, ದೇವರಾತ್ಮನಿಂದ ಮಾತನಾಡುವ ಯಾವ ಮನುಷ್ಯನಾದರೂ ಯೇಸು ವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ; ಪವಿತ್ರಾತ್ಮ ನಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.
- Luke 16:13 ಲೂಕನು 16:13ಯಾವ ಸೇವಕನೂ ಇಬ್ಬರು ಯಜಮಾನರನ್ನು ಸೇವಿಸಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಮತ್ತೊಬ್ಬನನ್ನು ಪ್ರೀತಿ ಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು; ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ ಅಂದನು.
- Proverbs 3:5–6 ಜ್ಞಾನೋಕ್ತಿಗಳು 3:5–6ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.
- Mark 9:41 ಮಾರ್ಕನು 9:41ಇದಲ್ಲದೆ ನೀವು ಕ್ರಿಸ್ತನಿಗೆ ಸೇರಿದವ ರಾದದರಿಂದ ಯಾವನಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿ ಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Matthew 17:26 ಮತ್ತಾಯನು 17:26ಪೇತ್ರನು ಆತನಿಗೆ-- ಅನ್ಯರಿಂದ ಎಂದು ಹೇಳಲಾಗಿ ಆತನು ಅವನಿಗೆ--ಹಾಗಾದರೆ ಮಕ್ಕಳು ಸ್ವತಂತ್ರರೇ.ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ
- Matthew 17:24 ಮತ್ತಾಯನು 17:24ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.
- Matthew 13:28–30 ಮತ್ತಾಯನು 13:28–30ಅವನು ಅವರಿಗೆ--ಒಬ್ಬ ವೈರಿ ಯು ಇದನ್ನು ಮಾಡಿದ್ದಾನೆ ಅಂದನು. ಆದರೆ ಸೇವಕರು ಅವನಿಗೆ--ಹಾಗಾದರೆ ನಾವು ಹೋಗಿ ಅವುಗಳನ್ನು ಕೂಡಿಸುವಂತೆ ನೀನು ಇಷ್ಟಪಡುತ್ತೀಯೋ ಎಂದು ಕೇಳಿದರು. ಆದರೆ ಅವನು--ಬೇಡ, ನೀವು ಹಣಜಿಯನ್ನು ಕೂಡಿಸುವಾಗ ಅವುಗಳೊಂದಿಗೆ ಗೋದಿಯನ್ನೂ ಕಿತ್ತೀರಿ. ಸುಗ್ಗೀಕಾಲದ ವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ--ಮೊದಲು ಹಣಜಿಯನ್ನು ಕೂಡಿಸಿ ಅದನ್ನು ಸುಡುವದಕ್ಕೆ ಹೊರೆ ಕಟ್ಟಿರಿ; ಆದರೆ ಗೋದಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು ಅಂದನು.
- Joshua 9:14 ಯೆಹೋಶುವ 9:14ಆಗ ಇವರು ಕರ್ತನಿಂದ ಆಲೋಚನೆ ಯನ್ನು ಕೇಳದೆ ಅವರ ಆಹಾರದಲ್ಲಿ ತೆಗೆದುಕೊಂಡರು.