Luke · chapter 9 · verse 58
Luke 9:58 in Kannada
ಯೇಸು ಅವನಿಗೆ--ನರಿಗಳಿಗೆ ಗುದ್ದುಗಳಿವೆ ಮತ್ತು ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತನ್ನ ತಲೆ ಇಡುವಷ್ಟೂ ಸ್ಥಳವಿಲ್ಲ ಅಂದನು.
Yesu avanige--narigalige guddugalive mattu aakaashada pakshigalige goodugalive; aadare manushyakumaaranige tanna tale iduvashtoo sthalavilla andanu.
Luke 9:58 in English
- King James Version (KJV)
- And Jesus said unto him, Foxes have holes, and birds of the air [have] nests; but the Son of man hath not where to lay [his] head.
- World English Bible (WEB)
- Jesus said to him, “The foxes have holes and the birds of the sky have nests, but the Son of Man has no place to lay his head.”
- American Standard Version (ASV)
- And Jesus said unto him, The foxes have holes, and the birds of the heaven [have] nests; but the Son of man hath not where to lay his head.
- Bible in Basic English (BBE)
- And Jesus said to him, Foxes have holes and the birds of the air have resting-places, but the Son of man has nowhere to put his head.
- Darby Translation (DBY)
- And Jesus said to him, The foxes have holes and the birds of the heaven roosting-places, but the Son of man has not where he may lay his head.
- Webster's Bible (WBS)
- And Jesus said to him, Foxes have holes, and birds of the air [have] nests; but the Son of man hath not where to lay [his] head.
- Young's Literal Translation (YLT)
- and Jesus said to him, 'The foxes have holes, and the fowls of the heaven places of rest, but the Son of Man hath not where he may recline the head.'
Read in context
- 56ಯಾಕಂದರೆ ಮನುಷ್ಯಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವದಕ್ಕಾಗಿ ಬಂದನು ಎಂದು ಹೇಳಿದನು. ಅವರು ಮತ್ತೊಂದು ಹಳ್ಳಿಗೆ ಹೋದರು.
- 57ಇದಾದ ಮೇಲೆ ಅವರು ದಾರಿಯಲ್ಲಿ ಹೋಗು ತ್ತಿರುವಾಗ ಒಬ್ಬಾನೊಬ್ಬ ಮನುಷ್ಯನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುವೆನು ಅಂದನು.
- 58ಯೇಸು ಅವನಿಗೆ--ನರಿಗಳಿಗೆ ಗುದ್ದುಗಳಿವೆ ಮತ್ತು ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತನ್ನ ತಲೆ ಇಡುವಷ್ಟೂ ಸ್ಥಳವಿಲ್ಲ ಅಂದನು.
- 59ಇದಲ್ಲದೆ ಆತನು ಮತ್ತೊಬ್ಬನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆದರೆ ಅವನು--ಕರ್ತನೇ, ನಾನು ಹೋಗಿ ಮೊದಲು ನನ್ನ ತಂದೆಯನ್ನು ಹೂಣಿಡುವಂತೆ ಅಪ್ಪಣೆಕೊಡು ಅಂದನು.
- 60ಆದರೆ ಯೇಸು ಅವ ನಿಗೆ--ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ; ಆದರೆ ನೀನು ಹೋಗಿ ದೇವರ ರಾಜ್ಯವನ್ನು ಸಾರು ಅಂದನು.
Cross references
- Matthew 8:20 ಮತ್ತಾಯನು 8:20ಅದಕ್ಕೆ ಯೇಸು ಅವನಿಗೆ--ನರಿಗಳಿಗೆ ಗುದ್ದುಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡು ಗಳಿವೆ; ಆದರೆ ಮನುಷ್ಯಕುಮಾರನಿಗೆ ತನ್ನ ತಲೆಯಿಡು ವದಕ್ಕೂ ಸ್ಥಳವಿಲ್ಲ ಎಂದು ಹೇಳಿದನು.
- Luke 14:26–33 ಲೂಕನು 14:26–33ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ನಿಮ್ಮಲ್ಲಿ ಯಾವನಾದರೂ ಗೋಪುರವನ್ನು ಕಟ್ಟುವದಕ್ಕೆ ಉದ್ದೇಶವುಳ್ಳವನಾದರೆ ಅವನು ಮೊದಲು ಕೂತುಕೊಂಡು ಅದನ್ನು ಪೂರೈಸು ವದಕ್ಕೆ ಬೇಕಾದ ಖರ್ಚು ತನ್ನಲ್ಲಿ ಉಂಟೋ ಎಂದು ಲೆಕ್ಕ ಮಾಡುವದಿಲ್ಲವೋ? ಒಂದು ವೇಳೆ ಹಾಗೆ ಲೆಕ್ಕ ಮಾಡದೆ ಅವನು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಅದನ್ನು ಪೂರೈಸದಿದ್ದರೆ ನೋಡುವವರೆಲ್ಲರೂ ಅವನಿಗೆ ಹಾಸ್ಯ ಮಾಡುವದಕ್ಕೆ ಆರಂಭಿಸಿ-- ಈ ಮನುಷ್ಯನು ಕಟ್ಟುವದಕ್ಕೆ ಆರಂಭಿಸಿ ಪೂರ್ತಿಮಾಡ ಲಾರದೆ ಹೋದನು ಎಂದು ಅನ್ನುವರು. ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ? ಇಲ್ಲವೆ ಅವನು ಇನ್ನು ದೂರದಲ್ಲಿರುವಾಗಲೇ ತನ್ನ ರಾಯಭಾರಿಗಳನ್ನು ಕಳುಹಿಸಿ ಸಮಾಧಾನದ ಶರತ್ತುಗಳಿಗಾಗಿ ಕೋರುವ ದಿಲ್ಲವೋ? ಅದರಂತೆಯೇ ನಿಮ್ಮಲ್ಲಿ ಯಾವನಾ ದರೂ ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
- 2 Corinthians 8:9 2 ಕೊರಿಂಥದವರಿಗೆ 8:9ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
- Luke 18:22–23 ಲೂಕನು 18:22–23ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು. ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
- Psalm 84:3 ಕೀರ್ತನೆಗಳು 84:3ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ.
- John 6:60–66 ಯೋಹಾನನು 6:60–66ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು. ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ. ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು. ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು. ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ.
- James 2:5 ಯಾಕೋಬನು 2:5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?