Mark 1:44 in Kannada
ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ
Avanige heliddenandare--yaava manushyanigoo enoo helabeda nodu; aadare neenu hogi yaajakanige ninnannu torisikondu avarige saakshiyaagiruvante ninna shuddhigaagi mosheyu aajnyaapisidavugalannu arpisu andanu.aadare avanu horatu hogi adannu bahalavaagi prakatisi ellaa kadegoo aa vishayavannu habbisuvadakke praarambhisiddarinda yesu innu bahirangavaagi pattanadolakke praveshisalaarade aatanu horage adaviya sthalagalalli iddanu; aaga pratiyondu kadeyi ndaloo janaru aatana balige ba
Mark 1:44 in English
- King James Version (KJV)
- And saith unto him, See thou say nothing to any man: but go thy way, shew thyself to the priest, and offer for thy cleansing those things which Moses commanded, for a testimony unto them.
- World English Bible (WEB)
- and said to him, “See that you say nothing to anybody, but go show yourself to the priest and offer for your cleansing the things which Moses commanded, for a testimony to them.”
- American Standard Version (ASV)
- and saith unto him, See thou say nothing to any man: but go show thyself to the priest, and offer for thy cleansing the things which Moses commanded, for a testimony unto them.
- Bible in Basic English (BBE)
- See that you say nothing to any man: but go and let the priest see you, and make yourself clean by an offering of the things ordered by Moses, for a witness to them.
- Darby Translation (DBY)
- and says to him, See thou say nothing to any one, but go, shew thyself to the priest, and offer for thy cleansing what Moses ordained, for a testimony to them.
- Webster's Bible (WBS)
- And saith to him, See thou say nothing to any man; but go, show thyself to the priest, and offer for thy cleansing those things which Moses commanded, for a testimony to them.
- Young's Literal Translation (YLT)
- and saith to him, 'See thou mayest say nothing to any one, but go away, thyself shew to the priest, and bring near for thy cleansing the things Moses directed, for a testimony to them.'
Read in context
- 42ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.
- 43ಆತನು ಅವನಿಗೆ ನೇರವಾಗಿ ಆಜ್ಞಾಪಿಸಿ ಕೂಡಲೆ ಕಳುಹಿಸಿದನು;
- 44ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ
- 45ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ
Cross references
- Leviticus 14:1–32 ಯಾಜಕಕಾಂಡ 14:1–32ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಕುಷ್ಠ ರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ: ಅವನು ಯಾಜಕನ ಬಳಿಗೆ ತರಲ್ಪಡಬೇಕು. ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು; ಇಗೋ, ಕುಷ್ಠ ವ್ಯಾಧಿಯು ಕುಷ್ಠರೋಗಿಯನ್ನು ಬಿಟ್ಟು ಅವನು ಸ್ವಸ್ಥನಾದನೆಂದು ಯಾಜಕನು ನೋಡಿದರೆ ಆಗ ಶುದ್ಧಮಾಡಿಸಿ ಕೊಳ್ಳುವವನಿಗೊಸ್ಕರ ಜೀವವುಳ್ಳ ಶುದ್ಧವಾದ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ವುಳ್ಳ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳು ವಂತೆ ಯಾಜಕನು ಆಜ್ಞಾಪಿಸಬೇಕು. ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆ ಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು. ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಂಡು ಹರಿಯುವ ನೀರಿನ ಬಳಿಯಲ್ಲಿ ಕೊಲ್ಲಲ್ಪಟ್ಟ ಆ ಪಕ್ಷಿಯ ರಕ್ತದಲ್ಲಿ ಅದ್ದಿ ಕುಷ್ಠದಿಂದ ಶುದ್ಧಪಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ ಅವನನ್ನು ಶುದ್ಧನೆಂದು ನುಡಿದು ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟು ಬಿಡ ಬೇಕು. ಶುದ್ಧವಾಗುವದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ ಎಲ್ಲಾ ಕೂದಲನ್ನು ಕ್ಷೌರ ಮಾಡಿಕೊಂಡು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು; ತರುವಾಯ ಅವನು ಪಾಳೆಯ ದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳ ವರೆಗೆ ಕಾಯಬೇಕು. ಆದರೆ ಏಳೆನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ ಗಡ್ಡವನ್ನೂ ಕಣ್ಣು ಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಕ್ಷೌರಮಾಡಿಸಿಕೊಳ್ಳಬೇಕು; ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು. ಎಂಟನೆಯ ದಿವಸದಲ್ಲಿ ಅವನು ದೋಷವಿಲ್ಲದ ಎರಡು ಕುರಿಮರಿ ಗಳನ್ನು ಒಂದು ವರುಷದ ದೋಷವಿಲ್ಲದ ಹೆಣ್ಣು ಕುರಿಯನ್ನು ಆಹಾರ ಸಮರ್ಪಣೆಗಾಗಿ ಹತ್ತರಲ್ಲಿ ಮೂರರಷ್ಟು ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧ ಪಡಿಸಿಕೊಳ್ಳುವವನನ್ನೂ ಆ ವಸ್ತುಗಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಕರ್ತನ ಮುಂದೆ ನಿಲ್ಲಿಸಬೇಕು. ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು. ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪಬಲಿಯನ್ನೂ ದಹನಬಲಿಯನ್ನೂ ವಧಿಸುವ ಸ್ಥಳದಲ್ಲಿ ವಧಿಸಬೇಕು; ಯಾಕಂದರೆ ಪಾಪಬಲಿಯಂತೆಯೇ ಅಪರಾಧ ಬಲಿಯೂ ಯಾಜಕನದಾಗಿದೆ, ಅದು ಅತಿ ಪರಿಶುದ್ಧವಾದದ್ದು. ಯಾಜಕನು ಅಪರಾಧ ಬಲಿ ಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಅದನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು. ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ ಬೆರಳಿನಿಂದ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸ ಬೇಕು. ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಪಡಿಸಿಕೊಳ್ಳವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿಗೆ ಬಲಗಾಲಿನ ಹೆಬ್ಬೆರಳಿಗೆ ಹಚ್ಚ ಬೇಕು. ಯಾಜಕನ ಕೈಯಲ್ಲಿ ಮಿಕ್ಕಿದ್ದ ಆ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯ ಬೇಕು. ಯಾಜಕನು ಅವನಿಗಾಗಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು. ಇದಲ್ಲದೆ ಯಾಜಕನು ಪಾಪದ ಬಲಿಯನ್ನು ಸಮರ್ಪಿಸಿ ಶುದ್ಧಪಡಿಸಿಕೊಳ್ಳುವ ವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು; ತರುವಾಯ ಅವನು ದಹನಬಲಿಯನ್ನು ವಧಿಸಬೇಕು. ಯಾಜಕನು ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋ ಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು. ಅವನು ಬಡವನಾಗಿದ್ದರೆ ಅಷ್ಟೊಂದು ತರುವದಕ್ಕೆ ಆಗದಿದ್ದರೆ ತನ್ನ ಪ್ರಾಯಶ್ಚಿತ್ತ ಅಪರಾಧದ ಬಲಿಗಾಗಿ ಆಡಿಸುವದಕ್ಕೆ ಒಂದು ಕುರಿ ಮರಿಯನ್ನೂ ಎಣ್ಣೆಬೆರೆಸಿದ ಹತ್ತರಲ್ಲೊಂದು ಭಾಗ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ಅವನಿಂದಾಗುವಷ್ಟು ಎರಡು ಬೆಳವಗಳನ್ನು ಎರಡು ಪಾರಿವಾಳದ ಮರಿಗಳನ್ನು ತಕ್ಕೊಳ್ಳಬೇಕು; ಅವುಗಳಲ್ಲಿ ಒಂದು ಪಾಪಬಲಿಗಾಗಿಯೂ ಇನ್ನೊಂದು ದಹನ ಬಲಿಗಾಗಿಯೂ ಇರುವದು. ಅವನು ತನ್ನ ಅಶುದ್ಧತೆ ಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ಸಭೆಯ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಕರ್ತನ ಎದುರಿನಲ್ಲಿ ತರಬೇಕು. ಯಾಜಕನು ಅಪರಾಧದ ಬಲಿಯ ಆ ಕುರಿಮರಿಯನ್ನೂ ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಅವುಗಳನ್ನು ಆಡಿಸಬೇಕು. ಅವನು ಅಪರಾಧದ ಬಲಿಗಾಗಿ ಕುರಿಮರಿಯನ್ನು ವಧಿಸಬೇಕು. ಅಪರಾಧದ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮೇಲೆಯೂ ಅವನ ಬಲಗೈಯ ಹೆಬ್ಬೆರಳಿಗೆ ಹಚ್ಚಬೇಕು. ಮತ್ತು ಯಾಜಕನು ತನ್ನ ಎಡ ಅಂಗೈಯಲ್ಲಿ ಎಣ್ಣೆಯನ್ನು ಹೊಯಿದುಕೊಂಡು ತನ್ನ ಬಲಗೈ ಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸಬೇಕು. ಮತ್ತು ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರ ಳಿಗೂ ಅಪರಾಧಬಲಿಯ ರಕ್ತವನ್ನು ಹಚ್ಚಿದ ಸ್ಥಳದ ಮೇಲೆಯೂ ಹಚ್ಚಬೇಕು. ಯಾಜಕನ ಕೈಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು ಕರ್ತನ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತಮಾಡಬೇಕು. ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದು ಬೆಳವವನ್ನಾಗಲಿ ಪಾರಿವಾಳದ ಮರಿಯ ನ್ನಾಗಲಿ ಸಮರ್ಪಿಸಬೇಕು. ಅದರಂತೆಯೇ ಅವನು ತನ್ನಿಂದಾಗುವಷ್ಟು ಮೇರೆಗೆ ಒಂದನ್ನು ಪಾಪಬಲಿಗಾಗಿ ಇನ್ನೊಂದನ್ನು ದಹನಬಲಿಗಾಗಿ ಆಹಾರ ಸಮರ್ಪಣೆ ಯೊಂದಿಗೆ ಸಮರ್ಪಿಸಬೇಕು; ಶುದ್ಧಪಡಿಸಿಕೊಳ್ಳುವವ ನಿಗೋಸ್ಕರ ಯಾಜಕನು ಕರ್ತನ ಎದುರಿನಲ್ಲಿ ಪ್ರಾಯ ಶ್ಚಿತ್ತವನ್ನುಮಾಡಬೇಕು. ಕುಷ್ಠರೋಗವುಳ್ಳವನಿಗಾಗಿ ಶುದ್ಧತೆಮಾಡಿಸಿಕೊಳ್ಳುವದರಲ್ಲಿ ಕೈಯಿಂದ ಆಗದಿರುವ ವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
- Luke 17:14 ಲೂಕನು 17:14ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.
- Matthew 8:4 ಮತ್ತಾಯನು 8:4ಯೇಸು ಅವನಿಗೆ--ನೀನು ಯಾರಿಗೂ ಹೇಳಬೇಡ ನೋಡು; ಹೊರಟುಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು ಎಂದು ಹೇಳಿದನು.
- 1 Corinthians 10:11 1 ಕೊರಿಂಥದವರಿಗೆ 10:11ಅವರಿಗೆ ಸಂಭವಿಸಿದ ಈ ಎಲ್ಲಾ ಸಂಗತಿಗಳು ನಿದರ್ಶನಗಳಾಗಿವೆ; ಲೋಕದ ಅಂತ್ಯಕ್ಕೆ ಬಂದಿರುವ ವರಾದ ನಮಗೆ ಅವು ಬುದ್ಧಿವಾದಗಳಾಗಿ ಬರೆದವೆ.
- Romans 15:4 ರೋಮಾಪುರದವರಿಗೆ 15:4ನಾವು ತಾಳ್ಮೆಯ ಮತ್ತು ಬರಹಗಳ ಆದರಣೆಯ ಮೂಲಕ ನಿರೀಕ್ಷೆ ಹೊಂದುವಂತೆ ಪೂರ್ವಕಾಲದಲ್ಲಿ ಬರೆಯಲ್ಪಟ್ಟವುಗಳೆಲ್ಲಾ ನಮಗೆ ಉಪದೇಶಿಸುವ ದಕ್ಕಾಗಿಯೇ ಬರೆಯಲ್ಪಟ್ಟವು.
- Luke 5:14 ಲೂಕನು 5:14ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
- Matthew 23:2–3 ಮತ್ತಾಯನು 23:2–3ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ; ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ.