Mark · chapter 12 · verse 38
Mark 12:38 in Kannada
ತರುವಾಯ ಆತನು ಬೋಧನೆಯಲ್ಲಿ ಅವರಿಗೆ --ಉದ್ದವಾದ ಅಂಗಿಯನ್ನು ತೊಟ್ಟುಕೊಂಡು ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ
Taruvaaya aatanu bodhaneyalli avarige --uddavaada angiyannu tottukondu santeya sthalagalalli vandanegalannoo
Mark 12:38 in English
- King James Version (KJV)
- And he said unto them in his doctrine, Beware of the scribes, which love to go in long clothing, and [love] salutations in the marketplaces,
- World English Bible (WEB)
- In his teaching he said to them, “Beware of the scribes, who like to walk in long robes, and to get greetings in the marketplaces,
- American Standard Version (ASV)
- And in his teaching he said, Beware of the scribes, who desire to walk in long robes, and [to have] salutations in the marketplaces,
- Bible in Basic English (BBE)
- And in his teaching he said, Be on your watch against the scribes, whose pleasure it is to go about in long robes and be respected in the market-places,
- Darby Translation (DBY)
- And he said to them in his doctrine, Beware of the scribes, who like to walk about in long robes, and salutations in the marketplaces,
- Webster's Bible (WBS)
- And he said to them in his doctrine, Beware of the scribes, who love to go in long clothing, and [love] salutations in the market-places,
- Young's Literal Translation (YLT)
- and he was saying to them in his teaching, 'Beware of the scribes, who will in long robes to walk, and love salutations in the market-places,
Read in context
- 36ಯಾಕಂದರೆ ದಾವೀದನು ತಾನೇ ಪರಿಶುದ್ಧಾತ್ಮನಿಂದ -- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಕರ್ತನಿಗೆ ಹೇಳಿದನಲ್ಲಾ ಎಂದು ನುಡಿದಿದ್ದಾನೆ.
- 37ಆದದರಿಂದ ದಾವೀದನು ತಾನೇ ಆತನನ್ನು ಕರ್ತ ನೆಂದು ಕರೆಯುವಾಗ ಆತನು ಅವನ ಮಗನಾಗುವದು ಹೇಗೆ ಎಂದು ಹೇಳಿದನು. ಸಾಮಾನ್ಯ ಜನರು ಸಂತೋ ಷದಿಂದ ಆತನ ಮಾತುಗಳನ್ನು ಕೇಳಿದರು.
- 38ತರುವಾಯ ಆತನು ಬೋಧನೆಯಲ್ಲಿ ಅವರಿಗೆ --ಉದ್ದವಾದ ಅಂಗಿಯನ್ನು ತೊಟ್ಟುಕೊಂಡು ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ
- 39ಸಭಾಮಂದಿರಗಳಲ್ಲಿ ಮುಖ್ಯಪೀಠಗಳನ್ನೂ ಔತಣಗಳಲ್ಲಿ ಅತ್ಯುನ್ನತವಾದ ಸ್ಥಳಗಳನ್ನೂ ಪ್ರೀತಿಸುವವರಾದ ಶಾಸ್ತ್ರಿಗಳ ವಿಷಯವಾಗಿ ಎಚ್ಚರವಾಗಿರ್ರಿ;
- 40ಇವರು ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
Cross references
- Luke 20:45–47 ಲೂಕನು 20:45–47ಅಮೇಲೆ ಜನರೆಲ್ಲರೂ ಕೇಳುತ್ತಿದ್ದಾಗ ಆತನು ತನ್ನ ಶಿಷ್ಯರಿಗೆ-- ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದಕ್ಕೆ ಬಯಸುವವರೂ ಸಂತೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಸ್ಥಾನ ಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಪ್ರೀತಿಸುವ ವರಾದ ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ;ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು. ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
- Matthew 23:1–7 ಮತ್ತಾಯನು 23:1–7ತರುವಾಯ ಯೇಸು ಜನಸಮೂಹಕ್ಕೂ ಶಿಷ್ಯರಿಗೂ ಹೇಳಿದ್ದೇನಂದರೆ -- ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ; ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ. ಹೊರುವದಕ್ಕೆ ಅವರು ಭಾರವಾದ ಮತ್ತು ಕ್ರೂರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೊರಿಸುತ್ತಾರೆ. ತಾವಾ ದರೋ ತಮ್ಮ ಬೆರಳುಗಳಲ್ಲಿ ಒಂದರಿಂದ ಲಾದರೂ ಅವುಗಳನ್ನು ಸರಿಸುವದಿಲ್ಲ. ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಸಭಾಮಂದಿರ ಗಳಲ್ಲಿ ಮುಖ್ಯಸ್ಥಳಗಳನ್ನೂ ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ ಮತ್ತು ಜನರಿಂದ--ಬೋಧಕರೇ, ಬೋಧಕರೇ ಎಂದು ಕರೆಯಲ್ಪಡುವದನ್ನೂ ಅವರು ಪ್ರೀತಿಸುತ್ತಾರೆ.
- Luke 11:43 ಲೂಕನು 11:43ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸಭಾಮಂದಿರ ಗಳಲ್ಲಿ ಅತ್ಯುನ್ನತ ಸ್ಥಾನಗಳನ್ನೂ ಸಂತೆಗಳಲ್ಲಿ ವಂದನೆಗಳನ್ನೂ ಪ್ರೀತಿಸುತ್ತೀರಿ.
- Matthew 6:5 ಮತ್ತಾಯನು 6:5ನೀನು ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಇರಬೇಡ; ಯಾಕಂದರೆ ಜನರು ನೋಡುವಂತೆ ಸಭಾಮಂದಿರಗಳಲ್ಲಿಯೂ ಬೀದಿಗಳ ಮೂಲೆಗಳ ಲ್ಲಿಯೂ ನಿಂತು ಪ್ರಾರ್ಥನೆಮಾಡುವದನ್ನು ಅವರು ಪ್ರೀತಿಸುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವ ದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿ ದ್ದಾರೆ.
- Luke 14:7–11 ಲೂಕನು 14:7–11(ಊಟಕ್ಕೆ) ಕರೆಯಲ್ಪಟ್ಟವರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಆತನು ಗುರು ತಿಸಿ ಸಾಮ್ಯದಿಂದ ಅವರಿಗೆ ಹೇಳಿದ್ದೇನಂದರೆ-- ಯಾವನಾದರೂ ನಿನ್ನನ್ನು ಮದುವೆಗೆ ಕರೆದರೆ ಉನ್ನತ ಸ್ಥಳದಲ್ಲಿ ಕೂತುಕೊಳ್ಳಬೇಡ; ಯಾಕಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಕರೆದಿರ ಬಹುದು; ಆಗ ನಿನ್ನನ್ನು ಮತ್ತು ಅವನನ್ನು ಕರೆದವನು ಬಂದು ನಿನಗೆ--ಈ ಮನುಷ್ಯನಿಗೆ ಸ್ಥಳಕೊಡು ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಳದಲ್ಲಿ ಕೂತುಕೊಳ್ಳಬೇಕಾಗಿರುವದು. ಆದರೆ ನೀನು ಕರೆಯಲ್ಪಟ್ಟಾಗ ಹೋಗಿ ಕಡೇ ಸ್ಥಳದಲ್ಲಿ ಕೂತುಕೋ; ಆಗ ನಿನ್ನನ್ನು ಕರೆದಾತನು ಬಂದು ನಿನಗೆ--ಸ್ನೇಹಿತನೇ, ಮೇಲಕ್ಕೆ ಹೋಗು ಎಂದು ಹೇಳುವಾಗ ನಿನ್ನ ಜೊತೆ ಯಲ್ಲಿ ಊಟಕ್ಕೆ ಕೂತವರ ಮುಂದೆ ನಿನಗೆ ಗೌರವ ವಿರುವದು. ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
- Mark 4:2 ಮಾರ್ಕನು 4:2ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
- Matthew 10:17 ಮತ್ತಾಯನು 10:17ಆದರೆ ಜನರ ವಿಷಯದಲ್ಲಿ ಎಚ್ಚ ರಿಕೆಯಾಗಿರ್ರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ತಮ್ಮ ಸಭಾ ಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯು ವರು.