Mark · chapter 13 · verse 17
Mark 13:17 in Kannada
ಆದರೆ ಆ ದಿವಸಗಳಲ್ಲಿ ಗರ್ಭಿಣಿ ಯರಿಗೂ ಮೊಲೆಕುಡಿಸುವವರಿಗೂ ಅಯ್ಯೋ!
Aadare aa divasagalalli garbhini yarigoo molekudisuvavarigoo ayyo!
Mark 13:17 in English
- King James Version (KJV)
- But woe to them that are with child, and to them that give suck in those days!
- World English Bible (WEB)
- But woe to those who are with child and to those who nurse babies in those days!
- American Standard Version (ASV)
- But woe unto them that are with child and to them that give suck in those days!
- Bible in Basic English (BBE)
- And it will be hard for women who are with child and for her who has a baby at the breast in those days.
- Darby Translation (DBY)
- But woe to those that are with child and to those that give suck in those days!
- Webster's Bible (WBS)
- But woe to them that are with child, and to them that nurse infants in those days.
- Young's Literal Translation (YLT)
- 'And woe to those with child, and to those giving suck, in those days;
Read in context
- 15ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ.
- 16ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ.
- 17ಆದರೆ ಆ ದಿವಸಗಳಲ್ಲಿ ಗರ್ಭಿಣಿ ಯರಿಗೂ ಮೊಲೆಕುಡಿಸುವವರಿಗೂ ಅಯ್ಯೋ!
- 18ನಿಮ್ಮ ಪಲಾಯನವು ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
- 19ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
Cross references
- Lamentations 4:10 ಪ್ರಲಾಪಗಳು 4:10ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.
- Luke 23:29 ಲೂಕನು 23:29ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ.
- Lamentations 4:3–4 ಪ್ರಲಾಪಗಳು 4:3–4ಸಮುದ್ರದ ವಿಕಾರವಾದ ಪ್ರಾಣಿಗಳಾ ದರೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಮೊಲೆ ಕೊಡುತ್ತವೆ; ಆದರೆ ನನ್ನ ಜನರ ಮಗಳು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿ ದ್ದಾಳೆ. ಮೊಲೆಕೂಸಿನ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ, ಎಳೆಕೂಸುಗಳು ರೊಟ್ಟಿ ಕೇಳುತ್ತವೆ; ಆದರೆ ಅವರಿಗೆ ಯಾರೂ ಕೊಡುವದಿಲ್ಲ.
- Matthew 24:19–21 ಮತ್ತಾಯನು 24:19–21ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆಕುಡಿಸುವ ಕೂಸುಗಳಿದ್ದ ವರಿಗೂ ಅಯ್ಯೋ! ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲೀ ಸಬ್ಬತ್ತಿನ ದಿನದಲ್ಲಾಗಲೀ ಆಗದಂತೆ ಪ್ರಾರ್ಥಿಸಿರಿ. ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ, ಆಮೇಲೆ ಎಂದಿಗೂ ಆಗುವದಿಲ್ಲ.
- Hosea 9:14 ಹೋಶೇಯ 9:14ಓ ಕರ್ತನೇ, ಅವರಿಗೆ ಕೊಡು; ಅವರಿಗೆ ನೀನು ಏನು ಕೊಡುತ್ತೀ? ಗರ್ಭಸ್ರಾವವನ್ನು ಮಾಡು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡು.
- Deuteronomy 28:56–57 ಧರ್ಮೋಪದೇಶಕಾಂಡ 28:56–57ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು.
- Hosea 13:16 ಹೋಶೇಯ 13:16ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.
- Luke 21:23 ಲೂಕನು 21:23ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು.
- Lamentations 2:19–20 ಪ್ರಲಾಪಗಳು 2:19–20ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ. ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?