Matthew · chapter 11 · verse 19
Matthew 11:19 in Kannada
ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
Manushyakumaaranu tinnuvavanaagiyoo kudiyuvavanaagiyoo bandanu. Adakke avaru--igo, ee manushyanu hotte baakanoo madyapaana maaduvavanoo sunkadavara paapigala snehitanoo endu annuttaare. Aadare jnyaanavu neetiyulladdendu tanna makkalinda nirnayi sala
Matthew 11:19 in English
- King James Version (KJV)
- The Son of man came eating and drinking, and they say, Behold a man gluttonous, and a winebibber, a friend of publicans and sinners. But wisdom is justified of her children.
- World English Bible (WEB)
- The Son of Man came eating and drinking, and they say, ‘Behold, a gluttonous man and a drunkard, a friend of tax collectors and sinners!’ But wisdom is justified by her children.”
- American Standard Version (ASV)
- The Son of man came eating and drinking, and they say, Behold, a gluttonous man and a winebibber, a friend of publicans and sinners! And wisdom is justified by her works.
- Bible in Basic English (BBE)
- The Son of man has come feasting, and they say, See, a lover of food and wine, a friend of tax-farmers and sinners! And wisdom is judged to be right by her works.
- Darby Translation (DBY)
- The Son of man has come eating and drinking, and they say, Behold, a man [that is] eating and wine-drinking, a friend of tax-gatherers, and of sinners: — and wisdom has been justified by her children.
- Webster's Bible (WBS)
- The Son of man came eating and drinking, and they say, Behold, a man gluttonous, and a wine-bibber, a friend of publicans and sinners. But wisdom is justified by her children.
- Young's Literal Translation (YLT)
- the Son of Man came eating and drinking, and they say, Lo, a man, a glutton, and a wine-drinker, a friend of tax-gatherers and sinners, and wisdom was justified of her children.'
Read in context
- 17ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
- 18ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
- 19ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
- 20ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ --
- 21ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
Cross references
- Luke 7:34–36 ಲೂಕನು 7:34–36ಮನುಷ್ಯಕುಮಾರನು ತಿನ್ನು ವವನಾಗಿಯೂ ಕುಡಿಯುವವನಾಗಿಯೂ ಬಂದನು; ಆದರೆ ನೀವು--ಇಗೋ, ಹೊಟ್ಟೇಬಾಕನು, ಕುಡು ಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು ಅನ್ನುತ್ತೀರಿ. ಆದರೆ ಜ್ಞಾನವು ತನ್ನ ಎಲ್ಲಾ ಮಕ್ಕಳಿಂದ ನೀತಿ ನಿರ್ಣಯಪಡೆಯುವದು ಅಂದನು. ಆಗ ಫರಿಸಾಯರಲ್ಲಿ ಒಬ್ಬನು ತನ್ನೊಂದಿಗೆ ಊಟ ಮಾಡ ಬೇಕೆಂದು ಅಪೇಕ್ಷಿಸಿದನು;ಆಗ ಆತನು ಆ ಫರಿಸಾ ಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕೂತು ಕೊಂಡನು.
- Matthew 9:10–11 ಮತ್ತಾಯನು 9:10–11ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಇಗೋ, ಬಹುಮಂದಿ ಸುಂಕ ದವರೂ ಪಾಪಿಗಳೂ ಬಂದು ಆತನೊಂದಿಗೂ ಆತನ ಶಿಷ್ಯರೊಂದಿಗೂ ಕೂತುಕೊಂಡರು. ಫರಿಸಾ ಯರು ಅದನ್ನು ನೋಡಿ ಆತನ ಶಿಷ್ಯರಿಗೆ--ನಿಮ್ಮ ಬೋಧಕನು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ ಎಂದು ಕೇಳಿದರು.
- Luke 15:1–2 ಲೂಕನು 15:1–2ಇದಾದ ಮೇಲೆ ಎಲ್ಲಾ ಸುಂಕದವರೂ ಪಾಪಿಗಳೂ ಉಪದೇಶವನ್ನು ಕೇಳುವದ ಕ್ಕಾಗಿ ಆತನ ಸವಿಾಪಕ್ಕೆ ಬಂದರು. ಫರಿಸಾಯರು ಮತ್ತು ಶಾಸ್ತ್ರಿಗಳು--ಇವನು ಪಾಪಿಗಳನ್ನು ಅಂಗೀಕರಿಸಿ ಅವರೊಂದಿಗೆ ಊಟ ಮಾಡುತ್ತಾನೆ ಎಂದು ಹೇಳುತ್ತಾ ಗುಣುಗುಟ್ಟಿದರು.
- Luke 19:7 ಲೂಕನು 19:7ಇದನ್ನು ಅವರು ನೋಡಿ ದಾಗ--ಇವನು ಪಾಪಿಯಾದವನೊಂದಿಗೆ ಅತಿಥಿ ಯಾಗಿರಲು ಹೋಗಿದ್ದಾನೆ ಎಂದು ಹೇಳಿ ಅವರೆಲ್ಲರೂ ಗುಣುಗುಟ್ಟಿದರು.
- Luke 5:29–30 ಲೂಕನು 5:29–30ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಆತನಿಗೆ ದೊಡ್ಡ ಔತಣವನ್ನು ಮಾಡಿಸಲು ಸುಂಕದವರು ಮತ್ತು ಬೇರೆ ಬಹಳ ಜನರು ಅವರೊಂದಿಗೆ ಕೂತುಕೊಂಡರು. ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
- Luke 14:1 ಲೂಕನು 14:1ಇದಾದ ಮೇಲೆ ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಾ ಇದ್ದರು.
- 1 Corinthians 1:24–29 1 ಕೊರಿಂಥದವರಿಗೆ 1:24–29ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ. ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ. ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ. ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- Luke 7:29 ಲೂಕನು 7:29ಅವನಿಂದ ಉಪ ದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಯೋಹಾನನ ಬಾಪ್ತಿಸ್ಮ ಮಾಡಿಸಿಕೊಂಡವರಾಗಿ ದೇವರು ನೀತಿವಂತನೆಂದು ಒಪ್ಪಿಕೊಂಡರು.
- Psalm 92:5–6 ಕೀರ್ತನೆಗಳು 92:5–6ಕರ್ತನೇ, ನಿನ್ನ ಕೆಲಸಗಳು ಎಷ್ಟೋ ದೊಡ್ಡವು! ನಿನ್ನ ಯೋಚನೆಗಳು ಬಹಳ ಆಳವಾಗಿವೆ. ಇದನ್ನು ಪಶುಪ್ರಾಯದವನಾದ ಮೂರ್ಖನು ಅರಿಯನು. ಇಲ್ಲವೆ ಹುಚ್ಚನು ತಿಳಿಯನು.
- Proverbs 17:24 ಜ್ಞಾನೋಕ್ತಿಗಳು 17:24ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
- John 12:2–8 ಯೋಹಾನನು 12:2–8ಅಲ್ಲಿ ಅವರು ಆತನಿಗಾಗಿ ಔತಣವನ್ನು ಸಿದ್ಧ ಮಾಡಿದರು; ಮಾರ್ಥಳು ಉಪಚಾರ ಮಾಡಿದಳು. ಆತನೊಂದಿಗೆ ಊಟಕ್ಕೆ ಕೂತವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆಯ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು; ಆ ತೈಲದ ಪರಿ ಮಳವು ಮನೆಯಲ್ಲಿ ತುಂಬಿಕೊಂಡಿತ್ತು. ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು ಹಿಡಿದು ಕೊಡುವದಕ್ಕಿದ್ದ ಸೀಮೋನನ ಮಗನಾದ ಯೂದ ಇಸ್ಕರಿಯೋತನು-- ಈ ತೈಲವನ್ನು ಯಾಕೆ ಮುನ್ನೂರು ನಾಣ್ಯಗಳಿಗೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು. ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ, ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು. ಆಗ ಯೇಸು--ಈಕೆಯನ್ನು ಬಿಟ್ಟುಬಿಡಿರಿ; ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಾಳೆ. ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.
- John 2:2 ಯೋಹಾನನು 2:2ಇದಲ್ಲದೆ ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದಿ ದ್ದರು.