Matthew · chapter 15 · verse 1
Matthew 15:1 in Kannada
ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು--
Taruvaaya yeroosaleminavaraada shaastrigaloo pharisaayaroo yesuvina balige bandu--
Matthew 15:1 in English
- King James Version (KJV)
- Then came to Jesus scribes and Pharisees, which were of Jerusalem, saying,
- World English Bible (WEB)
- Then Pharisees and scribes came to Jesus from Jerusalem, saying,
- American Standard Version (ASV)
- Then there come to Jesus from Jerusalem Pharisees and scribes, saying,
- Bible in Basic English (BBE)
- Then there came to Jesus from Jerusalem Pharisees and scribes, saying,
- Darby Translation (DBY)
- Then the scribes and Pharisees from Jerusalem come up to Jesus, saying,
- Webster's Bible (WBS)
- Then came to Jesus scribes and Pharisees, who were of Jerusalem, saying,
- Young's Literal Translation (YLT)
- Then come unto Jesus do they from Jerusalem — scribes and Pharisees — saying,
Read in context
- 1ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು--
- 2ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು.
- 3ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಯಾಕೆ ಮಾರುತ್ತೀರಿ?
Cross references
- Matthew 5:20 ಮತ್ತಾಯನು 5:20ನಾನು ನಿಮಗೆ ಹೇಳುವದೇನಂದರೆ-- ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ನಿಮ್ಮ ನೀತಿಯು ಹೆಚ್ಚಿನದಾಗಿರದ ಹೊರತು ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವದಕ್ಕಾಗುವದೇ ಇಲ್ಲ.
- Luke 5:30 ಲೂಕನು 5:30ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
- Luke 5:21 ಲೂಕನು 5:21ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು.
- Mark 3:22 ಮಾರ್ಕನು 3:22ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
- Acts 23:9 ಅಪೊಸ್ತಲರ ಕೃತ್ಯಗಳು 23:9ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು.
- Matthew 23:2 ಮತ್ತಾಯನು 23:2ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ;
- Mark 7:1–23 ಮಾರ್ಕನು 7:1–23ತರುವಾಯ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೆರೂಸಲೇಮಿನಿಂದ ಆತನ ಬಳಿಗೆ ಕೂಡಿಬಂದರು. ಆಗ ಆತನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವದನ್ನು ಅವರು ನೋಡಿ ತಪ್ಪು ಕಂಡು ಹಿಡಿದರು. ಯಾಕಂದರೆ ಫರಿಸಾಯರು ಮತ್ತು ಯೆಹೂದ್ಯರೆಲ್ಲರು ಹಿರಿಯರ ಸಂಪ್ರದಾಯವನ್ನು ಅನುಸರಿಸುವವರಾಗಿ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳದ ಹೊರತು ಊಟಮಾಡುವದಿಲ್ಲ. ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುವದಿಲ್ಲ; ಮತ್ತು ಅವರು ಬಟ್ಟಲುಗಳನ್ನು ಪಾತ್ರೆಗಳನ್ನು ಹಿತ್ತಾಳೆಯ ಪಾತ್ರೆಗಳನ್ನು ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಮಾಡಿಕೊಂಡಿ ದ್ದರು. ತರುವಾಯ ಫರಿಸಾಯರೂ ಶಾಸ್ತ್ರಿಗಳೂ ಆತನಿಗೆ--ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯದ ಪ್ರಕಾರ ಕೈತೊಳಕೊಳ್ಳದೆ ಯಾಕೆ ರೊಟ್ಟಿ ತಿನ್ನುತ್ತಾರೆ ಎಂದು ಕೇಳಿದರು. ಆತನು ಪ್ರತ್ಯುತ್ತರವಾಗಿ ಅವರಿಗೆ --ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸು ತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರ ವಾಗಿದೆ; ಮನುಷ್ಯರ ಕಟ್ಟಳೆಗಳನ್ನು ಬೋಧನೆ ಗಳನ್ನಾಗಿ ಮಾಡಿ ಕಲಿಸುವದರಿಂದ ಅವರು ನನ್ನನ್ನು ಆರಾಧಿಸುವದು ವ್ಯರ್ಥವಾಗಿದೆ ಎಂದು ಬರೆಯಲ್ಪಟ್ಟ ಪ್ರಕಾರ ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ. ನೀವು ದೈವಾಜ್ಞೆ ಯನ್ನು ಬದಿಗೆ ಇಡುವದಕ್ಕಾಗಿ ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ತೊಳೆಯುವ ಮನುಷ್ಯರ ಅನೇಕ ಸಂಪ್ರದಾಯಗಳನ್ನು ಹಿಡಿದು ಅನುಸರಿಸುತ್ತೀರಿ ಅಂದನು. ಆತನು ಅವರಿಗೆ--ನೀವು ನಿಮ್ಮ ಸಂಪ್ರ ದಾಯವನ್ನು ಕೈಕೊಳ್ಳುವಂತೆ ದೈವಾಜ್ಞೆಯನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುತ್ತೀರಿ. ಯಾಕಂದರೆ ಮೋಶೆಯು--ನಿನ್ನ ತಂದೆಯನ್ನು ನಿನ್ನ ತಾಯಿಯನ್ನು ಸನ್ಮಾನಿಸಬೇಕೆಂತಲೂ ಮತ್ತು--ತಂದೆಯನ್ನಾಗಲೀ ತಾಯಿಯನ್ನಾಗಲೀ ಶಪಿಸುವವನು ಸಾಯಲೇ ಬೇಕೆಂತಲೂ ಹೇಳಿದ್ದಾನೆ. ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ; ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು. ಆಮೇಲೆ ಆತನು ಜನರನ್ನೆಲ್ಲಾ ತನ್ನ ಬಳಿಗೆ ಕರೆದು ಅವರಿಗೆ--ನಿಮ್ಮಲ್ಲಿ ಪ್ರತಿಯೊಬ್ಬನು ನಾನು ಹೇಳುವದನ್ನು ಕೇಳಿ ಗ್ರಹಿಸಿರಿ; ಹೊರಗಿನಿಂದ ಮನುಷ್ಯನೊಳಗೆ ಸೇರಿ ಅವನನ್ನು ಹೊಲೆಮಾಡು ವಂಥದ್ದು ಯಾವದೂ ಇಲ್ಲ. ಆದರೆ ಅವನೊಳಗಿಂದ ಹೊರಗೆ ಬರುವಂಥವುಗಳೇ ಮನುಷ್ಯನನ್ನು ಹೊಲೆ ಮಾಡುವವುಗಳಾಗಿವೆ. ಯಾವನಿಗಾದರೂ ಕೇಳು ವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು. ಆತನು ಜನರನ್ನು ಬಿಟ್ಟು ಮನೆಯೊಳಗೆ ಬಂದ ಮೇಲೆ ಆತನ ಶಿಷ್ಯರು ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು. ಆಗ ಆತನು ಅವರಿಗೆ-- ನೀವು ಸಹ ಗ್ರಹಿಕೆ ಇಲ್ಲದವರಾಗಿದ್ದೀರಾ? ಹೊರಗಿ ನಿಂದ ಮನುಷ್ಯನೊಳಗೆ ಸೇರುವಂಥದ್ದು ಯಾವದೂ ಅವನನ್ನು ಹೊಲೆಮಾಡಲಾರದು ಎಂದು ನೀವು ತಿಳಿದುಕೊಳ್ಳುವದಿಲ್ಲವೋ? ಯಾಕಂದರೆ ಅದು ಅವನ ಹೃದಯದೊಳಗೆ ಸೇರದೆ ಹೊಟ್ಟೆಯೊಳಗೆ ಸೇರಿ ಎಲ್ಲಾ ಆಹಾರ ಪದಾರ್ಥಗಳನ್ನು ಶುದ್ಧಮಾಡುತ್ತಾ ಬಹಿರ್ಭೂಮಿಗೆ ಹೋಗುತ್ತದೆ ಅಂದನು. ಮತ್ತು ಆತನು--ಮನುಷ್ಯನೊಳಗಿಂದ ಹೊರಡುವಂಥದ್ದೇ ಮನುಷ್ಯನನ್ನು ಹೊಲೆಮಾಡುತ್ತದೆ. ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.
- Luke 5:17 ಲೂಕನು 5:17ಇದಾದ ಮೇಲೆ ಒಂದಾನೊಂದು ದಿನ ಆತನು ಬೋಧಿಸುತ್ತಿದ್ದಾಗ ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನ್ಯಾಯಪ್ರಮಾಣದ ಪಂಡಿತರೂ ಅಲ್ಲಿ ಕೂತುಕೊಂಡಿದ್ದರು. ಕರ್ತನ ಶಕ್ತಿಯು ಅವರನ್ನು ಸ್ವಸ್ಥ ಮಾಡುವದಕ್ಕೆ ಸಿದ್ಧವಿತ್ತು.
- Matthew 23:15–28 ಮತ್ತಾಯನು 23:15–28ಕಪಟಿಗಳಾದ ಫರಿಸಾಯರೇ, ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಒಬ್ಬನನ್ನು ಮತಾಂತರ ಮಾಡು ವದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ; ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕದ ಮಗನನ್ನಾಗಿ ಮಾಡುತ್ತೀರಿ. ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ.