Matthew · chapter 17 · verse 22
Matthew 17:22 in Kannada
ಅವರು ಗಲಿಲಾಯಲ್ಲಿ ಇನ್ನೂ ವಾಸವಾಗಿದ್ದಾಗ ಯೇಸು ಅವರಿಗೆ--ಮನುಷ್ಯಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು.
Avaru galilaayalli innoo vaasavaagiddaaga yesu avarige--manushyakumaaranu manushyara kaigalige oppisalpaduvanu.
Matthew 17:22 in English
- King James Version (KJV)
- And while they abode in Galilee, Jesus said unto them, The Son of man shall be betrayed into the hands of men:
- World English Bible (WEB)
- While they were staying in Galilee, Jesus said to them, “The Son of Man is about to be delivered up into the hands of men,
- American Standard Version (ASV)
- And while they abode in Galilee, Jesus said unto them, The Son of man shall be delivered up into the hands of men;
- Bible in Basic English (BBE)
- And while they were going about in Galilee, Jesus said to them, The Son of man will be given up into the hands of men;
- Darby Translation (DBY)
- And while they abode in Galilee, Jesus said to them, The Son of man is about to be delivered up into [the] hands of men,
- Webster's Bible (WBS)
- And while they abode in Galilee, Jesus said to them, The Son of man will be betrayed into the hands of men:
- Young's Literal Translation (YLT)
- And while they are living in Galilee, Jesus said to them, 'The Son of Man is about to be delivered up to the hands of men,
Read in context
- 20ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.
- 21ಪ್ರಾರ್ಥನೆ ಉಪವಾಸಗಳಿಂದಲ್ಲದೆ ಈ ತರವಾದದ್ದು ಹೊರಟು ಹೋಗುವದಿಲ್ಲ ಅಂದನು.
- 22ಅವರು ಗಲಿಲಾಯಲ್ಲಿ ಇನ್ನೂ ವಾಸವಾಗಿದ್ದಾಗ ಯೇಸು ಅವರಿಗೆ--ಮನುಷ್ಯಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು.
- 23ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು.
- 24ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.
Cross references
- Matthew 16:21 ಮತ್ತಾಯನು 16:21ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು.
- Luke 18:31–34 ಲೂಕನು 18:31–34ಇದಲ್ಲದೆ ಆತನು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ--ಇಗೋ, ನಾವು ಯೆರೂಸ ಲೇಮಿಗೆ ಹೋಗುತ್ತೇವೆ; ಮನುಷ್ಯಕುಮಾರನ ವಿಷಯ ದಲ್ಲಿ ಪ್ರವಾದಿಗಳಿಂದ ಬರೆಯಲ್ಪಟ್ಟವುಗಳೆಲ್ಲವೂ ನೆರವೇರಬೇಕು. ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು. ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು. ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.
- Mark 8:31 ಮಾರ್ಕನು 8:31ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.
- Matthew 17:23 ಮತ್ತಾಯನು 17:23ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು.
- Luke 9:44–45 ಲೂಕನು 9:44–45ಈ ಮಾತುಗಳು ನಿಮ್ಮ ಕಿವಿಗಳ ಆಳಕ್ಕೆ ಇಳಿಯಲಿ; ಯಾಕಂದರೆ ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು ಎಂದು ಹೇಳಿದನು. ಆದರೆ ಅವರು ಈ ಮಾತನು ತಿಳಿದುಕೊಳ್ಳಲಿಲ್ಲ, ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು. ಮತ್ತು ಆ ಮಾತನ್ನು ಕುರಿತು ಆತನನ್ನು ಕೇಳುವದಕ್ಕೆ ಅವರು ಭಯಪಟ್ಟರು.
- Mark 9:30–32 ಮಾರ್ಕನು 9:30–32ಅವರು ಅಲ್ಲಿಂದ ಹೊರಟು ಗಲಿಲಾಯವನ್ನು ಹಾದುಹೋಗುತ್ತಿದ್ದರು. ಇದು ಯಾರಿಗೂ ತಿಳಿಯಬಾರದೆಂದು ಆತನಿಗೆ ಮನಸ್ಸಿತ್ತು. ಯಾಕಂದರೆ ಆತನು ತನ್ನ ಶಿಷ್ಯರಿಗೆ ಬೋಧಿಸುತ್ತಾ-- ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಆತನು ಕೊಲ್ಲಲ್ಪಟ್ಟ ತರುವಾಯ ಮೂರನೆಯ ದಿನದಲ್ಲಿ ಏಳುವನು ಅಂದನು. ಆದರೆ ಅವರು ಆ ಮಾತನ್ನು ಗ್ರಹಿಸ ಲಿಲ್ಲ, ಮತ್ತು ಆತನನ್ನು ಕೇಳುವದಕ್ಕೂ ಭಯಪಟ್ಟರು.
- Luke 9:22 ಲೂಕನು 9:22ಮನುಷ್ಯಕುಮಾ ರನು ಬಹಳ ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಪ್ರಧಾನಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕರಿ ಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವದು ಅಗತ್ಯವಾಗಿದೆ ಎಂದು ಆಜ್ಞಾಪಿಸಿ ದನು.
- Luke 24:46 ಲೂಕನು 24:46ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ
- Luke 24:6–7 ಲೂಕನು 24:6–7ಆತನು ಇಲ್ಲಿಲ್ಲ, ಎದ್ದಿದ್ದಾನೆ; ಆತನು ಇನ್ನೂ ಗಲಿಲಾಯ ದಲ್ಲಿದ್ದಾಗಲೇ-- ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹೇಗೆ ಒಪ್ಪಿಸಲ್ಪಟ್ಟವನಾಗಿ ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಏಳುವನು ಎಂದು ನಿಮಗೆ ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಿರಿ ಅಂದರು.
- Matthew 20:17–18 ಮತ್ತಾಯನು 20:17–18ತರುವಾಯ ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ವಿಂಗಡವಾಗಿ ಕರೆದು ಅವರಿಗೆ-- ಇಗೋ, ನಾವು ಯೆರೂಸಲೇಮಿಗೆ ಹೋಗುತ್ತೇವೆ. ಅಲ್ಲಿ ಮನುಷ್ಯ ಕುಮಾರನು ಪ್ರಧಾನ ಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣ ದಂಡನೆಯನ್ನು ವಿಧಿಸುವರು.
- Mark 10:33–34 ಮಾರ್ಕನು 10:33–34ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು. ಮತ್ತು ಅವರು ಆತನನ್ನು ಹಾಸ್ಯ ಮಾಡಿ ಕೊರಡೆಯಿಂದ ಹೊಡೆದು ಆತನ ಮೇಲೆ ಉಗುಳಿ ಆತನನ್ನು ಕೊಲ್ಲುವರು; ಮತ್ತು ಮೂರನೇ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
- Luke 24:26 ಲೂಕನು 24:26ಕ್ರಿಸ್ತನು ಇವೆಲ್ಲಾ ಶ್ರಮೆಗಳನ್ನು ಅನುಭವಿಸಿ ತನ ಮಹಿಮೆಯಲ್ಲಿ ಪ್ರವೇಶಿಸುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ