Matthew · chapter 18 · verse 7
Matthew 18:7 in Kannada
ತೊಡಕುಗಳ ನಿಮಿತ್ತವಾಗಿ ಲೋಕಕ್ಕೆ ಅಯ್ಯೋ! ಯಾಕಂದರೆ ತೊಡಕುಗಳು ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ತೊಡಕು ಬರುವದೋ ಅವನಿಗೆ ಅಯ್ಯೋ!
Todakugala nimittavaagi lokakke ayyo! Yaakandare todakugalu bande baruvavu; aadare yaava manushyaninda todaku baruvado avanige ayyo!
Matthew 18:7 in English
- King James Version (KJV)
- Woe unto the world because of offences! for it must needs be that offences come; but woe to that man by whom the offence cometh!
- World English Bible (WEB)
- “Woe to the world because of occasions of stumbling! For it must be that the occasions come, but woe to that person through whom the occasion comes!
- American Standard Version (ASV)
- Woe unto the world because of occasions of stumbling! for it must needs be that the occasions come; but woe to that man through whom the occasion cometh!
- Bible in Basic English (BBE)
- A curse is on the earth because of trouble! for it is necessary for trouble to come; but unhappy is that man through whom the trouble comes.
- Darby Translation (DBY)
- Woe to the world because of offences! For it must needs be that offences come; yet woe to that man by whom the offence comes!
- Webster's Bible (WBS)
- Woe to the world because of offenses! for it must needs be that offenses come; but woe to that man by whom the offense cometh!
- Young's Literal Translation (YLT)
- 'Woe to the world from the stumbling-blocks! for there is a necessity for the stumbling-blocks to come, but woe to that man through whom the stumbling-block doth come!
Read in context
- 5ಮತ್ತು ಯಾವನಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿ ಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ.
- 6ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
- 7ತೊಡಕುಗಳ ನಿಮಿತ್ತವಾಗಿ ಲೋಕಕ್ಕೆ ಅಯ್ಯೋ! ಯಾಕಂದರೆ ತೊಡಕುಗಳು ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ತೊಡಕು ಬರುವದೋ ಅವನಿಗೆ ಅಯ್ಯೋ!
- 8ಆದದರಿಂದ ನಿನ್ನ ಕೈಯಾಗಲೀ ಕಾಲಾಗಲೀ ನಿನ್ನನ್ನು ಅಭ್ಯಂತರಪಡಿಸಿದರೆ ಅವುಗಳನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕೈಯುಳ್ಳವನಾಗಿ ಇಲ್ಲವೆ ಎರಡು ಕಾಲುಳ್ಳವನಾಗಿ ನಿತ್ಯವಾದ ಬೆಂಕಿಗೆ ಹಾಕಲ್ಪಡುವದಕ್ಕಿಂತ ಕುಂಟ ನಾಗಿ ಇಲ್ಲವೆ ಊನನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
- 9ನಿನ್ನ ಕಣ್ಣು ನಿನ್ನನ್ನು ಅಭ್ಯಂತರ ಪಡಿಸಿದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ನೀನು ಎರಡು ಕಣ್ಣುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ಜೀವದಲ್ಲಿ ಪ್ರವೇಶಿಸುವದು ನಿನಗೆ ಒಳ್ಳೇದು.
Cross references
- Luke 17:1 ಲೂಕನು 17:1ತರುವಾಯ ಆತನು ಶಿಷ್ಯರಿಗೆ-- ಆಟಂಕಗಳು ಬಾರದಿರುವದು ಅಸಾಧ್ಯ; ಆದರೆ ಯಾವನಿಂದ ಅವು ಬರುವವೋ ಅವನಿಗೆ ಅಯ್ಯೋ!
- 1 Corinthians 11:19 1 ಕೊರಿಂಥದವರಿಗೆ 11:19ನಿಮ್ಮಲ್ಲಿಯೂ ಇಂಥಿಂಥ ವರು ಯೋಗ್ಯರೆಂದು ಕಾಣಬರುವಂತೆ ಭಿನ್ನಾಭಿಪ್ರಾಯ ಗಳು ಇರುವದು ಅವಶ್ಯವೇ.
- Matthew 26:24 ಮತ್ತಾಯನು 26:24ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
- 1 Timothy 4:1–3 1 ತಿಮೊಥೆಯನಿಗೆ 4:1–3ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ.
- Jude 1:4 ಯೂದನು 1:4ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ
- 2 Timothy 3:1–5 2 ತಿಮೊಥೆಯನಿಗೆ 3:1–5ಆದರೆ ಕಡೇ ದಿವಸಗಳಲ್ಲಿ ಅಪಾಯಕರ ವಾದ ಕಾಲಗಳು ಬರುವವೆಂಬದನ್ನು ಸಹ ತಿಳಿದುಕೋ. ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು.
- Jude 1:11–13 ಯೂದನು 1:11–13ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವದಕ್ಕಾಗಿ ಬಿಳಾಮನ ದೋಷವನ್ನು ಮಾಡುವದಕ್ಕೆ ದುರಾಶೆ ಯಿಂದ ಓಡುವವರೂ ಕೋರಹನಂತೆ ಎದುರು ಮಾತನಾಡಿ ನಾಶವಾಗುವವರೂ ಆಗಿರುವ ಅವರಿಗೆ ಅಯ್ಯೋ! ಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತವರೂ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತುಬಿದ್ದ ಮರಗಳೂ ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚು ತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರ ಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ ಇಟ್ಟಿರುವದು.
- Revelation 2:14–15 ಪ್ರಕಟನೆ 2:14–15ಆದರೂ ನಿನಗೆ ವಿರೋಧವಾದ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ ಪದಾರ್ಥಗಳನ್ನು ತಿನ್ನುವ ದಕ್ಕೂ ಜಾರತ್ವ ಮಾಡುವದಕ್ಕೂ ಇಸ್ರಾಯೇಲಿನ ಮಕ್ಕಳ ಮುಂದೆ ಮುಗ್ಗರಿಸುವ ಬಂಡೆಯನ್ನು ಹಾಕ ಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ಬೋಧನೆಯನ್ನು ಅದರಂತೆ ನಾನು ಹಗೆ ಮಾಡುವ ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿನ್ನಲ್ಲಿದ್ದಾರೆ.
- 2 Thessalonians 2:3–12 2 ಥೆಸಲೊನೀಕದವರಿಗೆ 2:3–12ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ; ಅವನು ದೇವರೆಂದು ಕರೆಯ ಲ್ಪಟ್ಟಾತನನ್ನು ಇಲ್ಲವೆ ಆರಾಧನೆ ಹೊಂದುವಾತನನ್ನು ವಿರೋಧಿಸಿ ಎಲ್ಲವುಗಳ ಮೇಲೆ ತನ್ನನ್ನು ತಾನೇ ಘನತೆಗೇರಿಸಿಕೊಂಡು ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ. ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ? ಇದಲ್ಲದೆ ಅವನು ತನ್ನ ಸಮಯದಲ್ಲಿ ಪ್ರತ್ಯಕ್ಷನಾಗು ವದಕ್ಕೆ ಏನು ಅಡ್ಡಿ ಮಾಡುತ್ತದೊ ಅದು ನಿಮಗೆ ತಿಳಿದೇ ಇದೆ. ದುಷ್ಟತ್ವದ ಮರ್ಮವು ಈಗಾಗಲೇ ಕಾರ್ಯ ಮಾಡುತ್ತದೆ; ಅವನು ತೆಗೆಯಲ್ಪಡುವವರೆಗೆ ಈಗ ಅಡ್ಡಿ ಮಾಡುವಾತನು ಮಾತ್ರಅಡ್ಡಿ ಮಾಡುವನು; ಆಗ ಆ ದುಷ್ಟನು ಪ್ರತ್ಯಕ್ಷನಾಗುವನು; ಕರ್ತನು ತನ್ನ ಬಾಯಿಯ ಉಸುರಿನಿಂದ ಅವನನ್ನು ದಹಿಸಿ ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ನಾಶಮಾಡುವನು. ಆ ಕೆಡುಕನ ಬರುವಿಕೆಯು ಸೈತಾನನ ಕಾರ್ಯಕ್ಕನು ಸಾರವಾಗಿರುವದು; ಅದು ಎಲ್ಲಾ ಶಕ್ತಿಯಿಂದಲೂ ಸೂಚಕ ಕಾರ್ಯಗಳಿಂದಲೂ ಸುಳ್ಳಾದ ಅದ್ಭುತ ಕಾರ್ಯಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- 2 Peter 2:15–17 2 ಪೇತ್ರನು 2:15–17ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು. ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು.
- 2 Timothy 4:3–4 2 ತಿಮೊಥೆಯನಿಗೆ 4:3–4ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು.
- Titus 2:8 ತೀತನಿಗೆ 2:8ಇದರಿಂದ ವಿರೋಧಪಕ್ಷ ದವನು ನಿಮ್ಮ ವಿಷಯದಲ್ಲಿ ಕೆಟ್ಟದ್ದು ಹೇಳುವದಕ್ಕೆ ಯಾವದೂ ಇಲ್ಲದೆ ನಾಚಿಕೆಪಡುವನು.