Matthew · chapter 22 · verse 18
Matthew 22:18 in Kannada
ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ?
Yesu avara kettatanavannu tilidu kondavanaagi--kapatigale, neevu nannannu yaake shodhisutteeri?
Matthew 22:18 in English
- King James Version (KJV)
- But Jesus perceived their wickedness, and said, Why tempt ye me, [ye] hypocrites?
- World English Bible (WEB)
- But Jesus perceived their wickedness, and said, “Why do you test me, you hypocrites?
- American Standard Version (ASV)
- But Jesus perceived their wickedness, and said, Why make ye trial of me, ye hypocrites?
- Bible in Basic English (BBE)
- But Jesus saw their trick and said, Oh false ones, why are you attempting to put me in the wrong?
- Darby Translation (DBY)
- But Jesus, knowing their wickedness, said, Why tempt ye me, hypocrites?
- Webster's Bible (WBS)
- But Jesus perceived their wickedness, and said, Why tempt ye me, [ye] hypocrites?
- Young's Literal Translation (YLT)
- And Jesus having known their wickedness, said, 'Why me do ye tempt, hypocrites?
Read in context
- 16ಮತ್ತು ತಮ್ಮ ಶಿಷ್ಯರನ್ನು ಹೆರೋದಿಯರೊಂದಿಗೆ ಆತನ ಬಳಿಗೆ ಕಳುಹಿಸಿ--ಬೋಧಕನೇ, ನೀನು ಸತ್ಯವಂತನು ಮತ್ತು ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವಾತನು; ಇದಲ್ಲದೆ ನೀನು ಯಾರನ್ನೂ ಲಕ್ಷ್ಯಮಾಡುವಾತನಲ್ಲ; ಯಾಕಂದರೆ ನೀನು ಮುಖದಾಕ್ಷಿಣ್ಯ ಮಾಡುವದಿಲ್ಲ ಎಂದು
- 17ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು.
- 18ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ?
- 19ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ ಅಂದನು. ಆಗ ಅವರು ಒಂದು ಪಾವಲಿ ಯನ್ನು ತಂದುಕೊಟ್ಟರು.
- 20ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು.
Cross references
- Luke 5:22 ಲೂಕನು 5:22ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು?
- John 8:6 ಯೋಹಾನನು 8:6ಅವರು ಆತನನ್ನು ಶೋಧಿಸುವವರಾಗಿ ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೀಗೆ ಹೇಳಿ ದರು. ಆದರೆ ಯೇಸು ಅವರ ಮಾತುಗಳನ್ನು ಕೇಳದವ ನಂತೆ ಬೊಗ್ಗಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆದನು.
- John 2:25 ಯೋಹಾನನು 2:25ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.
- Revelation 2:23 ಪ್ರಕಟನೆ 2:23ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆ ಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.
- Acts 5:9 ಅಪೊಸ್ತಲರ ಕೃತ್ಯಗಳು 5:9ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು.
- Mark 2:8 ಮಾರ್ಕನು 2:8ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ
- Matthew 19:3 ಮತ್ತಾಯನು 19:3ಆಗ ಫರಿಸಾಯರು ಸಹ ಆತನನ್ನು ಶೋಧಿಸುವದ ಕ್ಕಾಗಿ ಆತನ ಬಳಿಗೆ ಬಂದು -- ಒಬ್ಬ ಮನುಷ್ಯನು ಯಾವ ಕಾರಣದಿಂದಲಾದರೂ ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ಅವನಿಗೆ ನ್ಯಾಯವೋ ಎಂದು ಕೇಳಿದರು.
- Matthew 16:1–4 ಮತ್ತಾಯನು 16:1–4ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಆತನನ್ನು ಶೋಧಿಸುವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಅಪೇಕ್ಷಿಸಿದರು. ಆತನು ಪ್ರತ್ಯು ತ್ತರವಾಗಿ ಅವರಿಗೆ--ಸಾಯಂಕಾಲವಾದಾಗ ಆಕಾಶವು ಕೆಂಪಾಗಿದ್ದರೆ ಒಳ್ಳೆಯ ಹವಾಮಾನ ಇರುವದೆಂದೂ ಬೆಳಿಗ್ಗೆ ಆಕಾಶವು ಮೋಡಕವಿದು ಕೆಂಪಾಗಿದ್ದರೆ--ಈ ಹೊತ್ತು ಕೆಟ್ಟ ಹವಾಮಾನ ಇದೆಯೆಂದೂ ನೀವು ಅನ್ನುತ್ತೀರಿ. ಓ ಕಪಟಿಗಳೇ, ಆಕಾಶದಲ್ಲಾಗುವ ಸೂಚನೆ ಗಳನ್ನು ನೀವು ಗ್ರಹಿಸಬಲ್ಲಿರಿ; ಆದರೆ ಸಮಯಗಳ ಸೂಚನೆಗಳನ್ನು ನೀವು ಗ್ರಹಿಸಲಾರಿರಾ? ವ್ಯಭಿಚಾರಿ ಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ; ಆದರೆ ಪ್ರವಾದಿಯಾದ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡುವದಿಲ್ಲ ಎಂದು ಹೇಳಿದನು. ತರುವಾಯ ಆತನು ಅವರನ್ನು ಬಿಟ್ಟು ಹೊರಟುಹೋದನು.
- Mark 12:5 ಮಾರ್ಕನು 12:5ಅವನು ಮತ್ತೆ ಇನ್ನೊಬ್ಬನನ್ನು ಕಳುಹಿಸಿದಾಗ ಅವನನ್ನೂ ಕೊಂದರು. ಇನ್ನೂ ಆನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವ ರನ್ನು ಹೊಡೆದರು; ಕೆಲವರನ್ನು ಕೊಂದು ಹಾಕಿದರು.
- Luke 9:47 ಲೂಕನು 9:47ಆದರೆ ಯೇಸು ಅವರ ಹೃದಯದ ಆಲೋಚನೆಯನ್ನು ತಿಳಿದವನಾಗಿ ಒಂದು ಮಗುವನ್ನು ತಕ್ಕೊಂಡು ತನ್ನ ಬಳಿಯಲ್ಲಿ ನಿಲ್ಲಿಸಿ
- Luke 20:23 ಲೂಕನು 20:23ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
- Luke 10:25 ಲೂಕನು 10:25ಆಗ ಇಗೋ, ಒಬ್ಬಾನೊಬ್ಬ ನ್ಯಾಯಶಾಸ್ತ್ರಿಯು ಎದ್ದು ನಿಂತು ಆತನನ್ನು ಶೋಧಿಸುವದಕ್ಕಾಗಿ-- ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.