Matthew · chapter 24 · verse 35
Matthew 24:35 in Kannada
ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
Aakaashavoo bhoomiyoo aliduhoguvavu; aadare nanna maatugalu aliduhoguvade illa.
Matthew 24:35 in English
- King James Version (KJV)
- Heaven and earth shall pass away, but my words shall not pass away.
- World English Bible (WEB)
- Heaven and earth will pass away, but my words will not pass away.
- American Standard Version (ASV)
- Heaven and earth shall pass away, but my words shall not pass away.
- Bible in Basic English (BBE)
- Heaven and earth will come to an end, but my words will not come to an end.
- Darby Translation (DBY)
- The heaven and the earth shall pass away, but my words shall in no wise pass away.
- Webster's Bible (WBS)
- Heaven and earth shall pass away, but my words shall not pass away.
- Young's Literal Translation (YLT)
- The heaven and the earth shall pass away, but my words shall not pass away.
Read in context
- 33ಅದರಂತೆಯೇ ನೀವು ಇವುಗಳನ್ನೆಲ್ಲಾ ನೋಡುವಾಗ ಅದು ಸವಿಾಪ ದಲ್ಲಿ ಬಾಗಲುಗಳಲ್ಲಿಯೇ ಇದೆಯೆಂದು ತಿಳು ಕೊಳ್ಳಿರಿ.
- 34ಇವೆಲ್ಲವುಗಳು ನೇರವೇರುವ ವರೆಗೆ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 35ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
- 36ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.
- 37ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
Cross references
- Isaiah 40:8 ಯೆಶಾಯ 40:8ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತು.
- 1 Peter 1:25 1 ಪೇತ್ರನು 1:25ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
- Numbers 23:19 ಅರಣ್ಯಕಾಂಡ 23:19ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
- Isaiah 55:11 ಯೆಶಾಯ 55:11ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು.
- Matthew 5:18 ಮತ್ತಾಯನು 5:18ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Proverbs 30:5 ಜ್ಞಾನೋಕ್ತಿಗಳು 30:5ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ.
- Isaiah 51:6 ಯೆಶಾಯ 51:6ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಯಾಕಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವವು, ಭೂಮಿಯು ಹಳೆಯ ಬಟ್ಟೆಯಂತಾಗುವದು. ಅದರಲ್ಲಿ ವಾಸಿಸುವ ವರು ಅದೇ ರೀತಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವದು ಮತ್ತು ನನ್ನ ನೀತಿಯು ಎಂದಿಗೂ ರದ್ದಾಗದು.
- Isaiah 54:10 ಯೆಶಾಯ 54:10ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
- Psalm 89:34 ಕೀರ್ತನೆಗಳು 89:34ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
- Titus 1:2 ತೀತನಿಗೆ 1:2ಸುಳ್ಳಾಡದ ದೇವರು ಲೋಕದಾರಂಭಕ್ಕೆ ಮೊದಲೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು
- Psalm 102:26 ಕೀರ್ತನೆಗಳು 102:26ಅವು ನಾಶವಾಗುವವು; ಆದರೆ ನೀನು ಸ್ಥಿರ ವಾಗಿರುತ್ತೀ; ಹೌದು, ಅವುಗಳೆಲ್ಲಾ ವಸ್ತ್ರದ ಹಾಗೆ ಜೀರ್ಣವಾಗುವವು; ಉಡುಪಿನ ಹಾಗೆ ಅವುಗ ಳನ್ನು ಬದಲಾಯಿಸುವಿ; ಆಗ ಅವು ಬದಲಾಗುವವು.
- 2 Peter 3:7–12 2 ಪೇತ್ರನು 3:7–12ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು. ಆದರೆ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ತಿಳಿಯದವರಾಗಿರಬೇಡಿರಿ. ಕರ್ತನು ತನ್ನ ವಾಗ್ದಾನದ ವಿಷಯವಾಗಿ ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ ಆತನು ತಡಮಾಡುವಾತನಲ್ಲ. ಆದರೆ ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಮ್ಮ ಕಡೆಗೆ ದೀರ್ಘಶಾಂತಿ ಯುಳ್ಳವ ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು. ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು. ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?