Matthew · chapter 26 · verse 47
Matthew 26:47 in Kannada
ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.
Aatanu innoo maatanaaduttiruvaaga igo, pradhaanayaajakara mattu janara hiriyara kadeyinda katti donnegalodane banda dodda jana samoohadondige hanneradu mandiyalli obbanaada yoodanoo bandanu.
Matthew 26:47 in English
- King James Version (KJV)
- And while he yet spake, lo, Judas, one of the twelve, came, and with him a great multitude with swords and staves, from the chief priests and elders of the people.
- World English Bible (WEB)
- While he was still speaking, behold, Judas, one of the twelve, came, and with him a great multitude with swords and clubs, from the chief priests and elders of the people.
- American Standard Version (ASV)
- And while he yet spake, lo, Judas, one of the twelve, came, and with him a great multitude with swords and staves, from the chief priests and elders of the people.
- Bible in Basic English (BBE)
- And while he was still talking, Judas, one of the twelve, came, and with him a band armed with swords and sticks, from the chief priests and those in authority over the people.
- Darby Translation (DBY)
- And while he was yet speaking, behold, Judas, one of the twelve, came, and with him a great crowd with swords and sticks from the chief priests and elders of the people.
- Webster's Bible (WBS)
- And while he was yet speaking, lo, Judas, one of the twelve, came, and with him a great multitude with swords and staffs, from the chief priests and elders of the people.
- Young's Literal Translation (YLT)
- And while he is yet speaking, lo, Judas, one of the twelve did come, and with him a great multitude, with swords and sticks, from the chief priests and elders of the people.
Read in context
- 45ತರುವಾಯ ಆತನು ತನ್ನ ಶಿಷ್ಯರ ಬಳಿಗೆ ಬಂದು ಅವರಿಗೆ--ಈಗ ನಿದ್ದೆ ಮಾಡಿ ವಿಶ್ರಾಂತಿತಕ್ಕೊಳ್ಳಿರಿ; ಇಗೋ, ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹಿಡಿದು ಕೊಡಲ್ಪಡುವ ಸಮಯವು ಸವಿಾಪಿಸಿದೆ;
- 46ಏಳಿರಿ, ನಾವು ಹೋಗೋಣ; ಇಗೋ, ನನ್ನನ್ನು ಹಿಡುಕೊಡು ವವನು ಸವಿಾಪವಾಗಿದ್ದಾನೆ ಅಂದನು.
- 47ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.
- 48ಆತನನ್ನು ಹಿಡು ಕೊಡುವದಕ್ಕಿದ್ದವನು ಅವರಿಗೆ--ನಾನು ಯಾವಾತನಿಗೆ ಮುದ್ದಿಡುತ್ತೇನೋ ಅವನೇ ಆತನು. ಆತನನ್ನು ಗಟ್ಟಿ ಯಾಗಿ ಹಿಡಿಯಿರಿ ಎಂದು ಗುರುತನ್ನು ಹೇಳಿದ್ದನು.
- 49ಕೂಡಲೆ ಅವನು ಯೇಸುವಿನ ಬಳಿಗೆ ಬಂದು ಬೋಧಕನೇ, ವಂದನೆ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
Cross references
- Matthew 26:55 ಮತ್ತಾಯನು 26:55ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
- Acts 1:16 ಅಪೊಸ್ತಲರ ಕೃತ್ಯಗಳು 1:16ಜನರೇ, ಸಹೋದ ರರೇ, ಯೇಸುವನ್ನು ಹಿಡಿದವರಿಗೆ ದಾರಿ ತೋರಿಸಿದ ಯೂದನ ವಿಷಯವಾಗಿ ಮೊದಲು ದಾವೀದನ ಬಾಯಿಂದ ಪವಿತ್ರಾತ್ಮನು ಹೇಳಿದ್ದ ಬರಹವು ನೆರ ವೇರುವದು ಅವಶ್ಯವಾಗಿತ್ತು.
- John 18:1–11 ಯೋಹಾನನು 18:1–11ಯೇಸು ಈ ಮಾತುಗಳನ್ನು ಆಡಿದ ಮೇಲೆ ತನ್ನ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಅಲ್ಲಿ ಒಂದು ತೋಟ ವಿತ್ತು, ಆತನೂ ಆತನ ಶಿಷ್ಯರೂ ಅದರೊಳಗೆ ಪ್ರವೇಶಿ ಸಿದರು. ಆತನನ್ನು ಹಿಡುಕೊಟ್ಟ ಯೂದನಿಗೂ ಆ ಸ್ಥಳವು ಗೊತ್ತಿತ್ತು; ಯಾಕಂದರೆ ಅನೇಕ ಸಾರಿ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಕೂಡಿಬರುತ್ತಿದ್ದನು. ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು. ಯೇಸು ತನ್ನ ಮೇಲೆ ಬರುವವುಗಳನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು ಪ್ರತ್ಯುತ್ತರ ವಾಗಿ ಆತನಿಗೆ--ನಜರೇತಿನ ಯೇಸು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆತನು ಅಂದನು. ಮತ್ತು ಆತನನ್ನು ಹಿಡುಕೊಡುವ ಯೂದನು ಸಹ ಅವರೊಂದಿಗೆ ನಿಂತಿದ್ದನು. ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು. ಆಗ ಆತನು ತಿರಿಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು--ನಜರೇತಿನ ಯೇಸುವನ್ನು ಅಂದರು. ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು. ಹೀಗೆ--ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ನೆರವೇರುವಂತೆ ಇದಾಯಿತು. ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು; ಆ ಆಳಿನ ಹೆಸರು ಮಲ್ಕನು. ಆಗ ಯೇಸು ಪೇತ್ರನಿಗೆ--ನಿನ್ನ ಕತ್ತಿಯನ್ನು ಒರೆಗೆಹಾಕು. ನನ್ನ ತಂದೆಯೂ ನನಗೆ ಕೊಟ್ಟ ಪಾತ್ರೆಯನ್ನು ನಾನು ಕುಡಿಯಬಾರದೋ ಎಂದು ಹೇಳಿದನು.
- Luke 22:47–53 ಲೂಕನು 22:47–53ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಸಮೂಹವು ಮತ್ತು ಹನ್ನೆರಡು ಮಂದಿಯಲ್ಲಿ ಯೂದ ನೆಂದು ಕರೆಯಲ್ಪಟ್ಟ ಒಬ್ಬನು ಅವರ ಮುಂದೆ ಹೋಗುತ್ತಾ ಯೇಸುವಿಗೆ ಮುದ್ದಿಡುವದಕ್ಕಾಗಿ ಆತನನ್ನು ಸವಿಾಪಿಸಿದನು. ಆದರೆ ಯೇಸು ಅವನಿಗೆ-- ಯೂದನೇ, ಮುದ್ದಿನಿಂದ ಮನುಷ್ಯಕುಮಾರನನ್ನು ಹಿಡುಕೊಡುತ್ತೀಯೋ ಅಂದನು. ಆತನ ಸುತ್ತಲಿರು ವವರು ಮುಂದೆ ಸಂಭವಿಸುವದಕ್ಕಿರುವದನ್ನು ನೋಡಿ ಆತನಿಗೆ--ಕರ್ತನೇ, ನಾವು ಕತ್ತಿಯಿಂದ ಹೊಡೆಯೋ ಣವೋ? ಎಂದು ಕೇಳಿದರು. ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲ ಕಿವಿಯನ್ನು ಕತ್ತರಿಸಿದನು. ಆದರೆ ಯೇಸು--ಇಷ್ಟಕ್ಕೆ ಬಿಡಿರಿ ಅಂದನು. ಆತನು ಅವನ ಕಿವಿಯನ್ನು ಮುಟ್ಟಿ ಅವನನ್ನು ಸ್ವಸ್ಥಪಡಿಸಿದನು. ಆಗ ಯೇಸು ತನ್ನ ಬಳಿಗೆ ಬಂದಿದ್ದ ಪ್ರಧಾನಯಾಜಕರಿಗೂ ದೇವಾಲ ಯದ ಅಧಿಪತಿಗಳಿಗೂ ಹಿರಿಯರಿಗೂ--ಕಳ್ಳನಿಗೆ ವಿರೋಧವಾಗಿ ಬಂದ ಹಾಗೆ ಕತ್ತಿಗಳಿಂದಲೂ ದೊಣ್ಣೆ ಗಳಿಂದಲೂ ನೀವು ಹೊರಟು ಬಂದಿರೋ? ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ ನೀವು ನನಗೆ ವಿರೋಧವಾಗಿ ಕೈ ಚಾಚಲಿಲ್ಲ; ಆದರೆ ಇದು ನಿಮ್ಮ ಗಳಿಗೆಯೂ ಅಂಧಕಾರದ ಶಕ್ತಿಯೂ ಆಗಿದೆ ಅಂದನು.
- Mark 14:43–50 ಮಾರ್ಕನು 14:43–50ಆತನು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆ ರಡು ಮಂದಿಯಲ್ಲಿ ಒಬ್ಬನಾದ ಯೂದನು ಬಂದನು; ಪ್ರಧಾನ ಯಾಜಕರ ಶಾಸ್ತ್ರಿಗಳ ಮತ್ತು ಹಿರಿಯರ ಕಡೆ ಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಅವನ ಕೂಡ ಬಂದರು. ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ--ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಆತನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು. ಅವನು ಬಂದ ಕೂಡಲೆ ನೇರವಾಗಿ ಆತನ ಕಡೆಗೆ ಹೋಗಿ-- ಗುರುವೇ, ಗುರುವೇ ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಆಗ ಅವರು ಆತನ ಮೇಲೆ ಕೈ ಹಾಕಿ ಆತನನ್ನು ಹಿಡಿದರು. ಆದರೆ ಹತ್ತಿರ ನಿಂತಿದ್ದ ವರಲ್ಲಿ ಒಬ್ಬನು ಕತ್ತಿಯನ್ನು ಹಿರಿದು ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿ ದನು. ಯೇಸು ಅವರಿಗೆ-- ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತಕ್ಕೊಂಡು ಕಳ್ಳನಿಗೆ ವಿರೋಧವಾಗಿ ಬರುವಂತೆ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ಪ್ರತಿ ದಿನವೂ ದೇವಾಲಯದಲ್ಲಿ ಬೋಧಿ ಸುತ್ತಾ ನಿಮ್ಮ ಸಂಗಡ ಇದ್ದೆನು; ಆಗ ನೀವು ನನ್ನನು ಹಿಡಿಯಲಿಲ್ಲ; ಆದರೆ ಬರಹಗಳು ನೆರವೇರಲೇಬೇಕು ಅಂದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
- Matthew 26:14 ಮತ್ತಾಯನು 26:14ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತ್ ಎಂಬವನು ಪ್ರಧಾನ ಯಾಜಕರ ಬಳಿಗೆ ಹೋಗಿ--
Original words (Greek)
- And · G2532καί kaí
- while · G2980λαλέω laléō
- he · G846αὐτός autós
- yet · G2089ἔτι éti
- spake · G2980λαλέω laléō
- lo · G2400ἰδού idoú
- Judas · G2455Ἰούδας Ioúdas
- one · G1520εἷς heîs
- twelve · G1427δώδεκα dṓdeka
- came · G2064ἔρχομαι érchomai
- and · G2532καί kaí
- with · G3326μετά metá
- him · G846αὐτός autós
- a · G3793ὄχλος óchlos
- great · G4183πολύς polýs
- multitude · G3793ὄχλος óchlos
- with · G3326μετά metá
- swords · G3162μάχαιρα máchaira
- and · G2532καί kaí
- staves · G3586ξύλον xýlon
- from · G575ἀπό apó
- priests · G749ἀρχιερεύς archiereús
- and · G2532καί kaí
- elders · G4245πρεσβύτερος presbýteros
- people · G2992λαός laós