Matthew · chapter 3 · verse 14
Matthew 3:14 in Kannada
ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು.
Aadare yohaananu aatanannu tadedu--naanu ninninda baaptisma maadisi kolluvadu agatyaviralaagi neenu nanna balige baruvadenu endu helidanu.
Matthew 3:14 in English
- King James Version (KJV)
- But John forbad him, saying, I have need to be baptized of thee, and comest thou to me?
- World English Bible (WEB)
- But John would have hindered him, saying, “I need to be baptized by you, and you come to me?”
- American Standard Version (ASV)
- But John would have hindered him, saying, I have need to be baptized of thee, and comest thou to me?
- Bible in Basic English (BBE)
- But John would have kept him back, saying, It is I who have need of baptism from you, and do you come to me?
- Darby Translation (DBY)
- but John urgently forbad him, saying, I have need to be baptised of thee; and comest thou to me?
- Webster's Bible (WBS)
- But John forbad him, saying, I have need to be baptized by thee, and comest thou to me?
- Young's Literal Translation (YLT)
- but John was forbidding him, saying, 'I have need by thee to be baptized — and thou dost come unto me!'
Read in context
- 12ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.
- 13ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು.
- 14ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು.
- 15ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು. ಆಗ ಅವನು ಒಪ್ಪಿಕೊಂಡನು.
- 16ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ, ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ, ಈತನು ಪ್ರಿಯ ನಾಗಿರುವ ನನ್ನ ಮಗನು; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು.
Cross references
- John 3:3–7 ಯೋಹಾನನು 3:3–7ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು. ನಿಕೊದೇಮನು ಆತನಿಗೆ--ಒಬ್ಬನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವದಾದೀತೇ ಎಂದು ಕೇಳಿದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು. ಶರೀರದಿಂದ ಹುಟ್ಟಿದ್ದು ಶರೀ ರವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ. ನೀವು ತಿರಿಗಿ ಹುಟ್ಟತಕ್ಕದ್ದು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.
- John 13:6–8 ಯೋಹಾನನು 13:6–8ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ--ಕರ್ತನೇ, ನೀನು ನನ್ನ ಕಾಲುಗಳನ್ನು ತೊಳೆಯುತ್ತೀಯೋ ಎಂದು ಕೇಳಿ ದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಮಾಡುವದು ಏನೆಂದು ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಅಂದನು. ಪೇತ್ರನು ಆತನಿಗೆ--ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಅಂದನು; ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನ್ನನ್ನು ತೊಳೆಯ ದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು.
- Acts 1:5–8 ಅಪೊಸ್ತಲರ ಕೃತ್ಯಗಳು 1:5–8ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು. ಅವರು ಕೂಡಿಬಂದಾಗ ಆತ ನಿಗೆ--ಕರ್ತನೇ, ಈ ಸಮಯದಲ್ಲಿಯೇ ನೀನು ಇಸ್ರಾ ಯೇಲ್ಯರಿಗೆ ರಾಜ್ಯವನ್ನು ಪುನಃ ಸ್ಥಾಪಿಸುವಿಯೋ ಎಂದು ಕೇಳಿದರು. ಆತನು ಅವರಿಗೆ--ತಂದೆಯು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಸಮಯ ಗಳನ್ನೂ ಕಾಲಗಳನ್ನೂ ತಿಳಿದುಕೊಳ್ಳುವದು ನಿಮಗೆ ಸಂಬಂಧಪಟ್ಟದ್ದಲ್ಲ. ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು.
- John 1:16 ಯೋಹಾನನು 1:16ಆತನ ಸಂಪೂರ್ಣತೆಯೊಳಗಿಂದ ನಾವೆಲ್ಲರೂ ಕೃಪೆಗಾಗಿ ಕೃಪೆಯನ್ನು ಹೊಂದಿದೆವು.
- Romans 3:25 ರೋಮಾಪುರದವರಿಗೆ 3:25ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ
- Luke 1:43 ಲೂಕನು 1:43ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವದು ನನಗೆಲ್ಲಿಂದಾಯಿತು?
- Galatians 3:27–29 ಗಲಾತ್ಯದವರಿಗೆ 3:27–29ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿ ಕೊಂಡಿರಿ. ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ. ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Galatians 3:22 ಗಲಾತ್ಯದವರಿಗೆ 3:22ಹಾಗಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡು ವದರಿಂದ ಉಂಟಾಗುವ ಆ ವಾಗ್ದಾನವು ನಂಬುವ ವರಿಗೇ ಕೊಡಲ್ಪಡುವಂತೆ ಎಲ್ಲರೂ ಪಾಪಕ್ಕೊಳ ಗಾಗಿದ್ದಾರೆಂದು ಬರಹವು ತೀರ್ಮಾನಿಸಿತು.
- Ephesians 2:3–5 ಎಫೆಸದವರಿಗೆ 2:3–5ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು. ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;)
- Galatians 4:6 ಗಲಾತ್ಯದವರಿಗೆ 4:6ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.
- Romans 3:23 ರೋಮಾಪುರದವರಿಗೆ 3:23ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ.
- Revelation 7:9–17 ಪ್ರಕಟನೆ 7:9–17ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು. ಸಿಂಹಾಸನದ, ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದ ದೂತರೆಲ್ಲರೂ ಸಿಂಹಾಸನದ ಮುಂದೆ ಬೋರಲ ಬಿದ್ದು ದೇವರನ್ನು ಆರಾಧಿಸುತ್ತಾ.-- ಆಮೆನ್. ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಸಾಮ ರ್ಥ್ಯವೂ ಯುಗಯುಗಾಂತರಗಳಲ್ಲಿ ಇರಲಿ ಎಂದು ಹೇಳಿದರು. ಆಮೆನ್. ಆಗ ಹಿರಿಯರಲ್ಲಿ ಒಬ್ಬನು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಇವರು ಎಲ್ಲಿಂದ ಬಂದವರು ಎಂದು ನನ್ನನ್ನು ಕೇಳಿದನು. ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ. ಈ ಕಾರಣದಿಂದ ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುವವರಾ ಗಿದ್ದಾರೆ; ಸಿಂಹಾಸನದ ಮೇಲೆ ಕೂತಿರುವಾತನು ಅವರ ಮಧ್ಯದಲ್ಲಿ ವಾಸಿಸುವನು. ಇನ್ನು ಮೇಲೆ ಅವರಿಗೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಆಗುವದೇ ಇಲ್ಲ; ಇದಲ್ಲದೆ ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ.ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು. ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
Original words (Greek)
- But · G1161δέ dé
- John · G2491Ἰωάννης Iōánnēs
- forbad · G1254διακωλύω diakōlýō
- him · G846αὐτός autós
- saying · G3004λέγω légō
- I · G1473ἐγώ egṓ
- have · G2192ἔχω échō
- need · G5532χρεία chreía
- baptized · G907βαπτίζω baptízō
- of · G5259ὑπό hypó
- thee · G4675σοῦ soû
- and · G2532καί kaí
- comest · G2064ἔρχομαι érchomai
- thou · G4771σύ sý
- to · G4314πρός prós
- me · G3165μέ mé