Matthew · chapter 6 · verse 26
Matthew 6:26 in Kannada
ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
Aakaashada pakshigalannu nodiri; avu bittuvadilla, koyyuvadoo illa, illave kanajadalli koodisittukolluvadoo illa; aadaroo paralokada nimma tandeyu avugalannu poshisuttaane. Avugaliginta neevu eshto shreshtharaadavarallave?
Matthew 6:26 in English
- King James Version (KJV)
- Behold the fowls of the air: for they sow not, neither do they reap, nor gather into barns; yet your heavenly Father feedeth them. Are ye not much better than they?
- World English Bible (WEB)
- See the birds of the sky, that they don’t sow, neither do they reap, nor gather into barns. Your heavenly Father feeds them. Aren’t you of much more value than they?
- American Standard Version (ASV)
- Behold the birds of the heaven, that they sow not, neither do they reap, nor gather into barns; and your heavenly Father feedeth them. Are not ye of much more value than they?
- Bible in Basic English (BBE)
- See the birds of heaven; they do not put seeds in the earth, they do not get in grain, or put it in store-houses; and your Father in heaven gives them food. Are you not of much more value than they?
- Darby Translation (DBY)
- Look at the birds of the heaven, that they sow not, nor reap, nor gather into granaries, and your heavenly Father nourishes them. Are ye not much more excellent than they?
- Webster's Bible (WBS)
- Behold the fowls of the air: for they sow not, neither do they reap, nor gather into barns; yet your heavenly Father feedeth them. Are ye not much better than they?
- Young's Literal Translation (YLT)
- look to the fowls of the heaven, for they do not sow, nor reap, nor gather into storehouses, and your heavenly Father doth nourish them; are not ye much better than they?
Read in context
- 24ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.
- 25ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ
- 26ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
- 27ನಿಮ್ಮಲ್ಲಿ ಯಾವ ನಾದರೂ ಚಿಂತೆಮಾಡಿ ತನ್ನ ನೀಳವನ್ನು ಒಂದು ಮೊಳ ಉದ್ದ ಬೆಳೆಸಿಕೊಳ್ಳಲು ಸಾಧ್ಯವಾದೀತೇ?
- 28ಮತ್ತು ಉಡುಪಿಗಾಗಿ ನೀವು ಯಾಕೆ ಚಿಂತೆ ಮಾಡುತ್ತೀರಿ? ಹೊಲದಲ್ಲಿ ತಾವರೆಗಳು ಹೇಗೆ ಬೆಳೆಯುತ್ತವೆ ಎಂಬದನ್ನು ಗಮನಿಸಿರಿ; ಅವು ಕಷ್ಟಪಡು ವದಿಲ್ಲ ಮತ್ತು ನೂಲುವದೂ ಇಲ್ಲ.
Cross references
- Matthew 10:29–31 ಮತ್ತಾಯನು 10:29–31ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುತ್ತವಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವದಿಲ್ಲ. ಆದರೆ ನಿಮ್ಮ ತಲೆಯ ಕೂದಲುಗಳೆಲ್ಲಾ ಲೆಕ್ಕಿಸಲ್ಪಟ್ಟಿವೆ. ನೀವು ಬಹಳ ಗುಬ್ಬಿಗಳಿಗಿಂತ ಬಹು ಬೆಲೆಯುಳ್ಳವರಾಗಿದ್ದೀರಿ. ಆದದರಿಂದ ಭಯಪಡಬೇಡಿರಿ.
- Psalm 147:9 ಕೀರ್ತನೆಗಳು 147:9ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.
- Luke 12:24–32 ಲೂಕನು 12:24–32ಕಾಗೆಗಳನ್ನು ಗಮನಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ; ಅವುಗಳಿಗೆ ಉಗ್ರಾಣವಾಗಲೀ ಕಣಜವಾಗಲೀ ಇಲ್ಲ; ಆದಾಗ್ಯೂ ದೇವರು ಅವುಗಳಿಗೆ ಆಹಾರ ಕೊಡುತ್ತಾನೆ; ನೀವು ಪಕ್ಷಿಗಳಿಗಿಂತ ಎಷ್ಟೋ ಹೆಚ್ಚಿನವರಾಗಿದ್ದೀರಲ್ಲಾ. ನಿಮ್ಮಲ್ಲಿ ಯಾವನು ಚಿಂತೆ ಮಾಡಿ ತನ್ನ ನೀಳಕ್ಕೆ ಒಂದು ಮೊಳವನ್ನು ಕೂಡಿಸಿ ಯಾನು? ಹಾಗಾದರೆ ಅತ್ಯಲ್ಪವಾಗಿರುವದನ್ನು ನೀವು ಮಾಡಲಾರದವರಾಗಿದ್ದರೆ ಉಳಿದವುಗಳಿಗೋಸ್ಕರ ನೀವು ಚಿಂತೆಮಾಡುವದೇನು? ಹೂವುಗಳು ಹೇಗೆ ಬೆಳೆಯುತ್ತವೆ ಯೋಚಿಸಿರಿ; ಅವು ಕಷ್ಟಪಡು ವದಿಲ್ಲ, ನೂಲುವದಿಲ್ಲ; ಆದಾಗ್ಯೂ ಸೊಲೊಮೋ ನನು ತನ್ನ ಎಲ್ಲಾ ವೈಭವದಲ್ಲಿ ಸಹ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ಓ ಅಲ್ಪ ವಿಶ್ವಾಸಿಗಳೇ, ಹಾಗಾದರೆ ಈಹೊತ್ತು ಹೊಲದಲ್ಲಿದ್ದು ನಾಳೆ ಒಲೆಯಲ್ಲಿ ಹಾಕಲ್ಪಡುವ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವನಲ್ಲವೇ? ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ. ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು. ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ. ಆಗ ಇವೆಲ್ಲವುಗಳು ನಿಮಗೆ ಕೂಡಿಸಲ್ಪಡುವವು. ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
- Job 38:41 ಯೋಬನು 38:41ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು?
- Psalm 145:15–16 ಕೀರ್ತನೆಗಳು 145:15–16ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ. ನಿನ್ನ ಕೈ ತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ತೃಪ್ತಿಪಡಿ ಸುತ್ತೀ.
- Psalm 104:27–28 ಕೀರ್ತನೆಗಳು 104:27–28ನೀನು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವಹಾಗೆ ಅವುಗಳೆಲ್ಲಾ ನಿನ್ನನ್ನು ಕಾದುಕೊಳ್ಳುತ್ತವೆ. ನೀನು ಅವುಗಳಿಗೆ ಕೊಡಲು ಅವು ಕೂಡಿಸುತ್ತವೆ; ನೀನು ನಿನ್ನ ಕೈ ತೆರೆಯಲು ಒಳ್ಳೇ ದರಿಂದ ತೃಪ್ತಿಯಾಗುತ್ತವೆ.
- Luke 12:6–7 ಲೂಕನು 12:6–7ಎರಡು ಕಾಸುಗಳಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವಲ್ಲಾ? ಅವುಗಳಲ್ಲಿ ಒಂದಾದರೂ ದೇವರ ಮುಂದೆ ಮರೆತುಹೋಗುವದಿಲ್ಲ. ನಿಮ್ಮ ತಲೆಯ ಕೂದಲುಗಳು ಸಹ ಲೆಕ್ಕಿಸಲ್ಪಟ್ಟಿವೆ. ಆದದರಿಂದ ಭಯಪಡಬೇಡಿರಿ; ನೀವು ಬಹಳ ಗುಬ್ಬಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.
- Matthew 6:32 ಮತ್ತಾಯನು 6:32(ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ.
- Genesis 1:29–31 ಆದಿಕಾಂಡ 1:29–31ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು. ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು. ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
- Matthew 7:9 ಮತ್ತಾಯನು 7:9ಇಲ್ಲವೆ ತನ್ನ ಮಗನು ರೊಟ್ಟಿಯನ್ನು ಕೇಳಿದರೆ ನಿಮ್ಮಲ್ಲಿ ಯಾವ ನಾದರೂ ಅವನಿಗೆ ಕಲ್ಲನ್ನು ಕೊಡುವನೇ?
- Job 35:11 ಯೋಬನು 35:11ಆತನು ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಕಲಿಸಿ, ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುತ್ತಾನೆ.
- Psalm 104:11–12 ಕೀರ್ತನೆಗಳು 104:11–12ಕಾಡಿನ ಮೃಗಗಳಿಗೆಲ್ಲಾ ಅವು ನೀರು ಕುಡಿಸುತ್ತವೆ; ಕಾಡು ಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ. ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.