Matthew · chapter 6 · verse 8
Matthew 6:8 in Kannada
ಆದದರಿಂದ ನೀವು ಅವರಂತೆ ಇರಬೇಡಿರಿ; ನಿಮ್ಮ ತಂದೆಯನ್ನು ಕೇಳುವದಕ್ಕಿಂತ ಮುಂಚೆಯೇ ನಿಮಗೆ ಅಗತ್ಯವಾಗಿ ರುವವುಗಳು ಯಾವವು ಎಂಬದು ಆತನಿಗೆ ತಿಳಿದದೆ.
Aadadarinda neevu avarante irabediri; nimma tandeyannu keluvadakkinta muncheye nimage agatyavaagi ruvavugalu yaavavu embadu aatanige tilidade.
Matthew 6:8 in English
- King James Version (KJV)
- Be not ye therefore like unto them: for your Father knoweth what things ye have need of, before ye ask him.
- World English Bible (WEB)
- Therefore don’t be like them, for your Father knows what things you need before you ask him.
- American Standard Version (ASV)
- Be not therefore like unto them: for your Father knoweth what things ye have need of, before ye ask him.
- Bible in Basic English (BBE)
- So be not like them; because your Father has knowledge of your needs even before you make your requests to him.
- Darby Translation (DBY)
- Be not ye therefore like them, for your Father knows of what things ye have need before ye beg [anything] of him.
- Webster's Bible (WBS)
- Therefore be ye not like them: for your Father knoweth what things ye need before ye ask him.
- Young's Literal Translation (YLT)
- be ye not therefore like to them, for your Father doth know those things that ye have need of before your asking him;
Read in context
- 6ಆದರೆ ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು.
- 7ಆದರೆ ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ ಯಾಕಂದರೆ ತಾವು ಬಹಳವಾಗಿ ಮಾತನಾಡು ವದರಿಂದ ತಮ್ಮ ಪ್ರಾರ್ಥನೆಯು ಕೇಳಲ್ಪಡುವದೆಂದು ಅವರು ಯೋಚಿಸುತ್ತಾರೆ.
- 8ಆದದರಿಂದ ನೀವು ಅವರಂತೆ ಇರಬೇಡಿರಿ; ನಿಮ್ಮ ತಂದೆಯನ್ನು ಕೇಳುವದಕ್ಕಿಂತ ಮುಂಚೆಯೇ ನಿಮಗೆ ಅಗತ್ಯವಾಗಿ ರುವವುಗಳು ಯಾವವು ಎಂಬದು ಆತನಿಗೆ ತಿಳಿದದೆ.
- 9ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ.
- 10ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ.
Cross references
- Matthew 6:32 ಮತ್ತಾಯನು 6:32(ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ.
- Luke 12:30 ಲೂಕನು 12:30ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು.
- Philippians 4:6 ಫಿಲಿಪ್ಪಿಯವರಿಗೆ 4:6ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.
- John 16:23–27 ಯೋಹಾನನು 16:23–27ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು. ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು. ಇವುಗಳನ್ನು ನಾನು ಸಾಮ್ಯಗಳಿಂದ ನಿಮಗೆ ಹೇಳಿದ್ದೇನೆ; ಆದರೆ ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವ ಸಮಯ ಬರುತ್ತದೆ. ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಬೇಡಿಕೊಳ್ಳುವಿರಿ; ನಿಮಗೋಸ್ಕರ ತಂದೆ ಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳು ವದಿಲ್ಲ. ನೀವು ನನ್ನನ್ನು ಪ್ರೀತಿಸಿ ನಾನು ದೇವರ ಬಳಿಯಿಂದ ಹೊರಟುಬಂದೆನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.
- Psalm 38:9 ಕೀರ್ತನೆಗಳು 38:9ಕರ್ತನೇ, ನನ್ನ ಆಶೆಯೆಲ್ಲಾ ನಿನ್ನ ಮುಂದೆ ಇದೆ; ನನ್ನ ನಿಟ್ಟುಸಿರು ನಿನಗೆ ಮರೆಯಾದದ್ದಲ್ಲ.
- Psalm 69:17–19 ಕೀರ್ತನೆಗಳು 69:17–19ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು. ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು. ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ.