Matthew · chapter 7 · verse 22
Matthew 7:22 in Kannada
ಆ ದಿನದಲ್ಲಿ--ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು.
Aa dinadalli--kartane, kartane ninna hesarinalli naavu pravaadisalillave? Mattu ninna hesarinalli devvagalannu bidisalillave? Idallade ninna hesarinalli bahala mahatkaaryagalannu maadalillave endu bahala janaru nanage heluvaru.
Matthew 7:22 in English
- King James Version (KJV)
- Many will say to me in that day, Lord, Lord, have we not prophesied in thy name? and in thy name have cast out devils? and in thy name done many wonderful works?
- World English Bible (WEB)
- Many will tell me in that day, ‘Lord, Lord, didn’t we prophesy in your name, in your name cast out demons, and in your name do many mighty works?’
- American Standard Version (ASV)
- Many will say to me in that day, Lord, Lord, did we not prophesy by thy name, and by thy name cast out demons, and by thy name do many mighty works?
- Bible in Basic English (BBE)
- A great number will say to me on that day, Lord, Lord, were we not prophets in your name, and did we not by your name send out evil spirits, and by your name do works of power?
- Darby Translation (DBY)
- Many shall say to me in that day, Lord, Lord, have we not prophesied through thy name, and through thy name cast out demons, and through thy name done many works of power?
- Webster's Bible (WBS)
- Many will say to me in that day, Lord, Lord, have we not prophesied in thy name? and in thy name have cast out demons? and in thy name done many wonderful works?
- Young's Literal Translation (YLT)
- Many will say to me in that day, Lord, lord, have we not in thy name prophesied? and in thy name cast out demons? and in thy name done many mighty things?
Read in context
- 20ಆದದರಿಂದ ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ.
- 21ಕರ್ತನೇ, ಕರ್ತನೇ ಎಂದು ನನಗೆ ಹೇಳುವ ಪ್ರತಿಯೊಬ್ಬನು ಪರಲೋಕರಾಜ್ಯದಲ್ಲಿ ಪ್ರವೇಶಿಸು ವದಿಲ್ಲ; ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ಅದರಲ್ಲಿ ಪ್ರವೇಶಿ ಸುವನು.
- 22ಆ ದಿನದಲ್ಲಿ--ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು.
- 23ಆಗ ನಾನು ಅವರಿಗೆ--ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.
- 24ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.
Cross references
- Luke 13:25–27 ಲೂಕನು 13:25–27ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು. ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ. ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
- 1 Corinthians 13:1–2 1 ಕೊರಿಂಥದವರಿಗೆ 13:1–2ನಾನು ಮನುಷ್ಯರ ಮತ್ತು ದೂತರ ಭಾಷೆಗಳನ್ನು ಆಡುವವನಾದರೂ ಪ್ರೀತಿ ಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿ ಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾದನ ವರವಿದ್ದರೂ ಎಲ್ಲಾ ರಹಸ್ಯಗಳನ್ನು ಮತ್ತು ಸಕಲ ಜ್ಞಾನವನ್ನು ತಿಳಿದುಕೊಂಡವನಾಗಿದ್ದರೂ ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿ ದ್ದೇನೆ.
- Malachi 3:17–18 ಮಲಾಕಿಯ 3:17–18ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ. ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Hebrews 6:4–6 ಇಬ್ರಿಯರಿಗೆ 6:4–6ಒಂದು ಸಾರಿ ಬೆಳಕನ್ನು ಹೊಂದಿ ಪರಲೋಕ ದಿಂದಾದ ದಾನದ ರುಚಿಯನ್ನು ನೋಡಿ ಪವಿತ್ರಾತ್ಮನಲ್ಲಿ ಪಾಲುಗಾರರಾಗಿ ಶ್ರೇಷ್ಠವಾದ ದೇವರ ವಾಕ್ಯವನ್ನೂ ಬರುವ ಲೋಕದ ಮಹತ್ವವನ್ನೂ ರುಚಿನೋಡಿ ದವರು ಬಿದ್ದು ಹೋಗುವದಾದರೆ ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗ ವಾಗಿ ಅವಮಾನಪಡಿಸುವವರೂ ಆಗಿದ್ದಾರೆ.
- Acts 19:13–15 ಅಪೊಸ್ತಲರ ಕೃತ್ಯಗಳು 19:13–15ಆಗ ದೆವ್ವ ಬಿಡಿಸುವವರಾಗಿ ದೇಶಸಂಚಾರ ಮಾಡುತ್ತಿದ್ದ ಯೆಹೂದ್ಯರಲ್ಲಿ ಕೆಲವರು ದುರಾತ್ಮ ಹಿಡಿದವ ರಿಗೆ--ಪೌಲನು ಸಾರುವ ಯೇಸುವಿನ ಆಣೆ ಎಂದು ನಾವು ನಿಮಗೆ ಹೇಳುತ್ತೇವೆ ಎಂದು ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗ ಮಾಡುವದಕ್ಕೆ ತೊಡಗಿದರು. ಯಾಜಕರಲ್ಲಿ ಮುಖ್ಯನಾದ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಕುಮಾರರು ಹಾಗೆ ಮಾಡಿದರು. ಆದರೆ ದುರಾತ್ಮವು ಪ್ರತ್ಯುತ್ತರವಾಗಿ--ನಾನು ಯೇಸುವನ್ನು ಬಲ್ಲೆನು, ಪೌಲನನ್ನೂ ಬಲ್ಲೆನು; ನೀವಾದರೆ ಯಾರು ಎಂದು ಕೇಳಿತು.
- 2 Timothy 4:8 2 ತಿಮೊಥೆಯನಿಗೆ 4:8ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
- 2 Timothy 1:12 2 ತಿಮೊಥೆಯನಿಗೆ 1:12ಇದರ ನಿಮಿತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ಯಾಕಂ ದರೆ ನಾನು ನಂಬಿರುವಾತನನ್ನು ಬಲ್ಲೆನು, ನಾನು ಆತನಿಗೆ ಒಪ್ಪಿಸಿದ್ದನ್ನು ಆತನು ಆ ದಿನಕ್ಕಾಗಿ ಕಾಪಾಡು ವದಕ್ಕೆ ಶಕ್ತನಾಗಿದ್ದಾನೆಂದೂ ದೃಢವಾಗಿ ನಂಬಿದ್ದೇನೆ.
- Matthew 25:11 ಮತ್ತಾಯನು 25:11ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು.
- John 11:51 ಯೋಹಾನನು 11:51ಈ ಮಾತನ್ನು ತನ್ನಷ್ಟಕ್ಕೆ ತಾನೇ ಮಾತನಾಡಲಿಲ್ಲ; ಆದರೆ ಅವನು ಆ ವರುಷದಲ್ಲಿ ಮಹಾಯಾಜಕನಾಗಿದ್ದು ಯೇಸು ಆ ಜನಾಂಗಕ್ಕೋಸ್ಕರ ಮಾತ್ರವಲ್ಲದೆ
- Numbers 24:4 ಅರಣ್ಯಕಾಂಡ 24:4ದೇವರ ಮಾತು ಗಳನ್ನು ಕೇಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು--
- Matthew 24:36 ಮತ್ತಾಯನು 24:36ಆದರೆ ಆ ದಿನವಾಗಲೀ ಗಳಿಗೆಯಾಗಲೀ ನನ್ನ ತಂದೆಗೆ ಮಾತ್ರವೇ ಹೊರತು ಮತ್ತಾರಿಗೂ ಪರಲೋಕದ ದೂತರಿಗೂ ತಿಳಿಯದು.
- Luke 10:12 ಲೂಕನು 10:12ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.