Matthew · chapter 7 · verse 29
Matthew 7:29 in Kannada
ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
Yaakandare aatanu shaastrigalante bodhisade aadhikaaraviddavanante avarige bodhisidanu.
Matthew 7:29 in English
- King James Version (KJV)
- For he taught them as [one] having authority, and not as the scribes.
- World English Bible (WEB)
- for he taught them with authority, and not like the scribes.
- American Standard Version (ASV)
- for he taught them as [one] having authority, and not as their scribes.
- Bible in Basic English (BBE)
- for he was teaching as one having authority, and not as their scribes.
- Darby Translation (DBY)
- for he taught them as having authority, and not as their scribes.
- Webster's Bible (WBS)
- For he taught them as [one] having authority, and not as the scribes.
- Young's Literal Translation (YLT)
- for he was teaching them as having authority, and not as the scribes.
Read in context
- 27ಹೇಗಂದರೆ ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆಗ ಅದು ಬಿತ್ತು; ಮತ್ತು ಅದರ ಬೀಳುವಿಕೆಯು ದೊಡ್ಡದಾಗಿತ್ತು.
- 28ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
- 29ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
Cross references
- Hebrews 4:12–13 ಇಬ್ರಿಯರಿಗೆ 4:12–13ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
- Luke 20:8 ಲೂಕನು 20:8ಆಗ ಯೇಸು ಅವರಿಗೆ--ಇವುಗಳನ್ನು ನಾನು ಯಾವ ಅಧಿಕಾರದಿಂದ ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಅಂದನು.
- Isaiah 50:4 ಯೆಶಾಯ 50:4ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.
- Luke 20:46–47 ಲೂಕನು 20:46–47ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದಕ್ಕೆ ಬಯಸುವವರೂ ಸಂತೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಸ್ಥಾನ ಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಪ್ರೀತಿಸುವ ವರಾದ ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ;ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು. ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
- Deuteronomy 18:18–19 ಧರ್ಮೋಪದೇಶಕಾಂಡ 18:18–19ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು. ಅವನು ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
- Acts 3:22–23 ಅಪೊಸ್ತಲರ ಕೃತ್ಯಗಳು 3:22–23ಯಾಕಂದರೆ ಪಿತೃಗಳಿಗೆ ಮೋಶೆಯು ನಿಜವಾಗಿಯೂ ಹೇಳಿದ್ದೇನಂದರೆ--ನನ್ನ ಹಾಗೆ ಒಬ್ಬ ಪ್ರವಾದಿಯನ್ನು ನಿಮ್ಮ ಸಹೋದರರಲ್ಲಿ ನಿಮ್ಮ ದೇವರಾದ ಕರ್ತನು ನಿಮಗಾಗಿ ಎಬ್ಬಿಸುವನು; ಆತನು ನಿಮಗೆ ಹೇಳುವ ಎಲ್ಲಾ ವಿಷಯಗಳಿಗೆ ನೀವು ಕಿವಿಗೊಡತಕ್ಕದ್ದು; ಆ ಪ್ರವಾದಿಗೆ ಕಿವಿಗೊಡದಿರುವ ಪ್ರತಿಯೊಬ್ಬನೂ ಜನ ರೊಳಗಿಂದ ನಾಶವಾಗುವನು ಎಂಬದು.
- Matthew 5:44 ಮತ್ತಾಯನು 5:44ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ.
- Matthew 5:32 ಮತ್ತಾಯನು 5:32ಆದರೆ ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣ ದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಯು ವ್ಯಭಿಚಾರ ಮಾಡುವಂತೆ ಕಾರಣನಾಗುವನು; ಮತ್ತು ಬಿಡಲ್ಪಟ್ಟವಳನ್ನು ಯಾವನಾದರೂ ಮದುವೆ ಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.
- Matthew 5:28 ಮತ್ತಾಯನು 5:28ಆದರೆ ನಾನು ನಿಮಗೆ ಹೇಳುವದೇನಂದರೆ--ಒಬ್ಬ ಸ್ತ್ರೀಯನ್ನು ಮೋಹಿಸುವದಕ್ಕೆ ನೋಡುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದ್ದಾನೆ.
- Matthew 23:2–6 ಮತ್ತಾಯನು 23:2–6ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ; ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ. ಹೊರುವದಕ್ಕೆ ಅವರು ಭಾರವಾದ ಮತ್ತು ಕ್ರೂರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೊರಿಸುತ್ತಾರೆ. ತಾವಾ ದರೋ ತಮ್ಮ ಬೆರಳುಗಳಲ್ಲಿ ಒಂದರಿಂದ ಲಾದರೂ ಅವುಗಳನ್ನು ಸರಿಸುವದಿಲ್ಲ. ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಸಭಾಮಂದಿರ ಗಳಲ್ಲಿ ಮುಖ್ಯಸ್ಥಳಗಳನ್ನೂ
- Micah 3:8 ಮೀಕ 3:8ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ.
- Matthew 21:23–27 ಮತ್ತಾಯನು 21:23–27ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ವಿಷಯ ನಿಮ್ಮನ್ನು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇ ನೆಂದು ನಿಮಗೆ ಹೇಳುವೆನು ಎಂದು ಹೇಳಿ--ಯೋಹಾನನ ಬಾಪ್ತಿಸ್ಮವು ಎಲ್ಲಿಂದ ಬಂತು? ಪರ ಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ ಎಂದು ಕೇಳಿದಾಗ ಅವರು ತಮ್ಮತಮ್ಮೊಳಗೆ ತರ್ಕಿ ಸುತ್ತಾ--ಪರಲೋಕದಿಂದ ಎಂದು ಹೇಳಿದರೆ ಆತನು ನಮಗೆ--ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ಹೇಳಾನು. ಮನುಷ್ಯರಿಂದ ಎಂದು ನಾವು ಹೇಳಿ ದರೆ ಜನರಿಗೆ ಭಯಪಡುತ್ತೇವೆ; ಯಾಕಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸು ತ್ತಾರೆ ಎಂದು ಅಂದುಕೊಂಡರು. ತರುವಾಯ ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳ ಲಾರೆವು ಅಂದರು. ಅದಕ್ಕೆ ಆತನು ಅವರಿಗೆ-- ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವದಿಲ್ಲ.