Micah · chapter 5 · verse 3
Micah 5:3 in Kannada
ಆದದರಿಂದ ಹೆರುವವಳು ಹೆರುವ ಕಾಲದ ವರೆಗೂ ಅವನು ಅವರನ್ನು ಒಪ್ಪಿಸಿಬಿಡುವನು; ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲಿನ ಮಕ್ಕಳ ಬಳಿಗೆ ಹಿಂದಿರುಗುವರು.
Aadadarinda heruvavalu heruva kaalada varegoo avanu avarannu oppisibiduvanu; aaga avana sahodararalli ulidavaru israayelina makkala balige hindiruguvaru.
Micah 5:3 in English
- King James Version (KJV)
- Therefore will he give them up, until the time [that] she which travaileth hath brought forth: then the remnant of his brethren shall return unto the children of Israel.
- World English Bible (WEB)
- Therefore he will abandon them until the time that she who is in labor gives birth. Then the rest of his brothers will return to the children of Israel.
- American Standard Version (ASV)
- Therefore will he give them up, until the time that she who travaileth hath brought forth: then the residue of his brethren shall return unto the children of Israel.
- Bible in Basic English (BBE)
- For this cause he will give them up till the time when she who is with child has given birth: then the rest of his brothers will come back to the children of Israel.
- Darby Translation (DBY)
- Therefore will he give them up, until the time when she which travaileth shall have brought forth: and the residue of his brethren shall return unto the children of Israel.
- Webster's Bible (WBS)
- Therefore will he give them up, until the time [that] she who travaileth hath brought forth: then the remnant of his brethren shall return to the children of Israel.
- Young's Literal Translation (YLT)
- Therefore he doth give them out till the time She who bringeth forth hath brought forth, And the remnant of his brethren return to the sons of Israel.
Read in context
- 1ಈಗ ಓ ಸೈನ್ಯಗಳ ಕುಮಾರ್ತೆಯೇ, ಗುಂಪುಗಳಾಗಿ ಕೂಡಿಕೊಳ್ಳಿರಿ; ಅವನು ನಮಗೆ ಮುತ್ತಿಗೆ ಹಾಕಿದ್ದಾನೆ. ಇಸ್ರಾಯೇಲಿನ ನ್ಯಾಯಾಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
- 2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.
- 3ಆದದರಿಂದ ಹೆರುವವಳು ಹೆರುವ ಕಾಲದ ವರೆಗೂ ಅವನು ಅವರನ್ನು ಒಪ್ಪಿಸಿಬಿಡುವನು; ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲಿನ ಮಕ್ಕಳ ಬಳಿಗೆ ಹಿಂದಿರುಗುವರು.
- 4ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.
- 5ಇದಲ್ಲದೆ ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದಾಗ ಈತನೇ ಸಮಾಧಾನವಾಗಿರುವನು; ನಮ್ಮ ಅರಮನೆಗಳಲ್ಲಿ ಅವನು ತುಳಿಯುವಾಗ ನಾವು ಆತನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಮುಖ್ಯ ಮನುಷ್ಯರನ್ನೂ ಎಬ್ಬಿಸುವೆವು.
Cross references
- Revelation 12:1–2 ಪ್ರಕಟನೆ 12:1–2ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು; ಅಲ್ಲಿ ಸೂರ್ಯನನ್ನು ಧರಿಸಿ ಕೊಂಡಿದ್ದ ಒಬ್ಬ ಸ್ತ್ರೀಯಿದ್ದಳು; ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಹೆರುವದಕ್ಕೆ ಸಂಕಟಪಡುತ್ತಾ ಕೂಗುತ್ತಿದ್ದಳು.
- Matthew 1:21 ಮತ್ತಾಯನು 1:21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.
- Romans 9:27–28 ರೋಮಾಪುರದವರಿಗೆ 9:27–28ಯೆಶಾಯನು ಸಹ ಇಸ್ರಾಯೇಲ್ಯರ ವಿಷಯವಾಗಿ--ಇಸ್ರಾಯೇಲ್ಯರ ಮಕ್ಕಳ ಸಂಖ್ಯೆಯು ಸಮುದ್ರದ ಮರಳಿನೋಪಾದಿಯಲ್ಲಿದ್ದರೂ ಒಂದು ಅಂಶ ಮಾತ್ರ ರಕ್ಷಣೆ ಹೊಂದುವದು ಎಂದು ಕೂಗಿ ಹೇಳುತ್ತಾನೆ. ಆತನು ನೀತಿಯಲ್ಲಿ ಕಾರ್ಯವನ್ನು ಕ್ಲುಪ್ತಮಾಡಿ ಪೂರ್ತಿಗೊಳಿಸುತ್ತಾನೆ; ಕಾರಣವೇ ನಂದರೆ, ಕರ್ತನು ಭೂಮಿಯ ಮೇಲೆ ಒಂದು ಕ್ಲುಪ್ತ ವಾದ ಕಾರ್ಯವನ್ನು ಮಾಡುವನು.
- Micah 4:7 ಮೀಕ 4:7ಕುಂಟಾದದ್ದನ್ನು ಉಳಿದದ್ದ ನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾ ಗಿಯೂ ಮಾಡುವೆನು; ಕರ್ತನು ಇಂದಿನಿಂದ ಸದಾ ಕಾಲವೂ ಚೀಯೋನ್ ಪರ್ವತದಲ್ಲಿ ಅವರ ಮೇಲೆ ಆಳುವನು,
- Isaiah 10:20–21 ಯೆಶಾಯ 10:20–21ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು. ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾ ಕ್ರಮಿಯಾದ ದೇವರ ಕಡೆಗೆ ಹಿಂತಿರುಗುವರು.
- Micah 4:9–10 ಮೀಕ 4:9–10ಈಗ ಯಾಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶ ವಾದನೋ? ಹೆರುವವಳಂತೆ ನಿನಗೆ ವೇದನೆ ಬಂತು. ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು.
- Hosea 11:8 ಹೋಶೇಯ 11:8ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.
- Hosea 2:9 ಹೋಶೇಯ 2:9ಆದ್ದರಿಂದ ನಾನು ತಿರುಗಿ ಕೊಂಡು ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ ನನ್ನ ದ್ರಾಕ್ಷಾರಸವನ್ನು ಅದರ ಸಮಯದಲ್ಲಿಯೂ ತೆಗೆದಹಾಗೆ ಅವಳ ಬೆತ್ತಲೆತನವನ್ನು ಮುಚ್ಚುವದ ಕ್ಕಿದ್ದ ನನ್ನ ಉಣ್ಣೆಯನ್ನೂ ನನ್ನ ನಾರು ಬಟ್ಟೆಯನ್ನೂ ತೆಗೆದುಕೊಳ್ಳುವೆನು.
- Romans 11:4–6 ರೋಮಾಪುರದವರಿಗೆ 11:4–6ಆದರೆ ದೇವರು ಅವನಿಗೆ ಕೊಟ್ಟ ಉತ್ತರವೇನಂದರೆ--ಬಾಳನ ವಿಗ್ರಹಕ್ಕೆ ಮೊಣಕಾಲೂರದ ಏಳುಸಾವಿರ ಜನರನ್ನು ನಾನು ನನಗೋಸ್ಕರ ಉಳಿಸಿಕೊಂಡಿದ್ದೇನೆ ಎಂಬದು. ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ. ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ.
- Micah 7:13 ಮೀಕ 7:13ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು.
- Hosea 2:14 ಹೋಶೇಯ 2:14ಆದದರಿಂದ ಇಗೋ, ನಾನು ಅವಳನ್ನು ಮೋಹಿಸಿ ಅವಳನ್ನು ಅರಣ್ಯದೊಳಗೆ ಕರೆದುಕೊಂಡು ಬಂದು ಅವಳ ಸಂಗಡ ಹಿತಕರವಾಗಿ ಮಾತನಾಡು ವೆನು.
- Hebrews 1:11–12 ಇಬ್ರಿಯರಿಗೆ 1:11–12ಅವು ನಾಶವಾಗುವವು; ಆದರೆ ನೀನು ಇರುವಾತನಾಗಿದ್ದೀ; ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು; ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ; ಅವು ಮಾರ್ಪಡುವವು; ನೀನಾದರೋ ಏಕ ರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದು ಹೋಗುವದಿಲ್ಲ ಎಂತಲೂ ಹೇಳುತ್ತಾನೆ.