Nehemiah · chapter 13 · verse 29
Nehemiah 13:29 in Kannada
ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕ ಸೇವೆಯ ಒಡಂಬ ಡಿಕೆಯನ್ನೂ ಲೇವಿಯರ ಒಡಂಬಡಿಕೆಯನ್ನೂ ಅಶುದ್ಧ ಮಾಡಿದ್ದರಿಂದ ಅವರನ್ನು ನೆನಸು.
Nanna devare, avaru yaajakatvavannoo yaajaka seveya odamba dikeyannoo leviyara odambadikeyannoo ashuddha maadiddarinda avarannu nenasu.
Nehemiah 13:29 in English
- King James Version (KJV)
- Remember them, O my God, because they have defiled the priesthood, and the covenant of the priesthood, and of the Levites.
- World English Bible (WEB)
- Remember them, my God, because they have defiled the priesthood and the covenant of the priesthood and of the Levites.
- American Standard Version (ASV)
- Remember them, O my God, because they have defiled the priesthood, and the covenant of the priesthood, and of the Levites.
- Bible in Basic English (BBE)
- Keep them in mind, O my God, because they have put shame on the priests' name and on the agreement of the priests and the Levites.
- Darby Translation (DBY)
- Remember them, my God, for they are polluters of the priesthood, and of the covenant of the priesthood and of the Levites!
- Webster's Bible (WBS)
- Remember them, O my God, because they have defiled the priesthood, and the covenant of the priesthood and of the Levites.
- Young's Literal Translation (YLT)
- Be mindful of them, O my God, for the redeemed of the priesthood, and the covenant of the priesthood, and of the Levites.
Read in context
- 27ನೀವು ಅನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳುವದರಿಂದ ನಮ್ಮ ದೇವರಿಗೆ ಅಪರಾಧ ಮಾಡಿ ಈ ಸಮಸ್ತವಾದ ದೊಡ್ಡ ಕೇಡು ಮಾಡುವ ಹಾಗೆ ನಾವು ನಿಮ್ಮ ಮಾತು ಕೇಳ ಬಹುದೋ ಅಂದೆನು.
- 28ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು.
- 29ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕ ಸೇವೆಯ ಒಡಂಬ ಡಿಕೆಯನ್ನೂ ಲೇವಿಯರ ಒಡಂಬಡಿಕೆಯನ್ನೂ ಅಶುದ್ಧ ಮಾಡಿದ್ದರಿಂದ ಅವರನ್ನು ನೆನಸು.
- 30ಹೀಗೆಯೇ ನಾನು ಅವರನ್ನು ಅನ್ಯಜನರಿಂದ ಬಿಡಿಸಿ ಶುಚಿಮಾಡಿ ಅವರ ವರ ಕೆಲಸದ ಪ್ರಕಾರ ಯಾಜಕರಿಗೂ ಲೇವಿಯರಿಗೂವರ್ಗಗಳನ್ನೂ ಅರ್ಪಣೆಯ ಕಟ್ಟಿಗೆಗಳಿಗೋಸ್ಕರವೂ ಪ್ರಥಮ ಫಲಗಳಿಗೋಸ್ಕರವೂ ದೃಢವಾದ ಕಾಲ ಗಳನ್ನೂ ನೇಮಿಸಿದೆನು. ನನ್ನ ದೇವರೇ, ಒಳ್ಳೇದಕ್ಕಾಗಿ ನನ್ನನ್ನು ಜ್ಞಾಪಕಮಾಡು.
- 31ವರ್ಗಗಳನ್ನೂ ಅರ್ಪಣೆಯ ಕಟ್ಟಿಗೆಗಳಿಗೋಸ್ಕರವೂ ಪ್ರಥಮ ಫಲಗಳಿಗೋಸ್ಕರವೂ ದೃಢವಾದ ಕಾಲ ಗಳನ್ನೂ ನೇಮಿಸಿದೆನು. ನನ್ನ ದೇವರೇ, ಒಳ್ಳೇದಕ್ಕಾಗಿ ನನ್ನನ್ನು ಜ್ಞಾಪಕಮಾಡು.
Cross references
- Nehemiah 6:14 ನೆಹೆಮೀಯ 6:14ನನ್ನ ದೇವರೇ, ನೀನು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ ಸನ್ಬಲ್ಲಟ ನನ್ನೂ ನನ್ನನ್ನು ಭಯಪಡಿಸುವವರಾಗಿದ್ದ ಪ್ರವಾದಿನಿ ಯಾದ ನೋವದ್ಯಳನ್ನೂ ಮಿಕ್ಕಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೋ.
- Numbers 25:12–13 ಅರಣ್ಯಕಾಂಡ 25:12–13ಆದ ಕಾರಣ--ಇಗೋ, ನಾನು ಅವನೊಂದಿಗೆ ನನ್ನ ಸಮಾಧಾನದ ಒಡಂಬಡಿಕೆಯನ್ನು ಮಾಡುತ್ತೇನೆ ಎಂದು ಹೇಳು. ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.
- Numbers 16:9–10 ಅರಣ್ಯಕಾಂಡ 16:9–10ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ?
- Leviticus 21:1–7 ಯಾಜಕಕಾಂಡ 21:1–7ತರುವಾಯ ಕರ್ತನು ಮೋಶೆಗೆ ಹೇಳಿದ್ದೇನಂದರೆ--ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಸತ್ತವರ ನಿಮಿತ್ತವಾಗಿ ಅವನ ಜನರಲ್ಲಿ ಯಾವನೂ ಹೊಲೆಯಾಗಬಾರದು. ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿ, ತಂದೆ, ಮಗ, ಮಗಳು, ಸಹೋದರನಿಗಾಗಿ ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಅವನು ಹೊಲೆಯಾಗಬಹುದು. ಆದರೆ ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿ ರುವದರಿಂದ ತನ್ನನ್ನು ತಾನು ಹೊಲೆಮಾಡಿ ಕೊಳ್ಳಬಾರದು ಅಪವಿತ್ರಮಾಡಿಕೊಳ್ಳಲೂಬಾರದು. ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು. ಅವರು ತಮ್ಮ ಕರ್ತನಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತಮ್ಮ ದೇವರ ರೊಟ್ಟಿಯನ್ನು ಅರ್ಪಿಸುವದರಿಂದ ಅವರು ತಮ್ಮ ದೇವರ ಹೆಸರನ್ನು ಅಪವಿತ್ರಪಡಿಸದೆ ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು; ಆದಕಾರಣ ಅವರು ಪರಿಶುದ್ಧ ರಾಗಿರುವರು. ಅವರು ವ್ಯಭಿಚಾರಿಯನ್ನು ಇಲ್ಲವೆ ಅಪವಿತ್ರಳನ್ನು ಹೆಂಡತಿಯಾಗಿ ತೆಗೆದುಕೊಳ್ಳಬಾರದು; ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯನ್ನು ತೆಗೆದು ಕೊಳ್ಳಬಾರದು; ಅವನು ತನ್ನ ದೇವರಿಗೆ ಪರಿಶುದ್ಧ ನಾಗಿದ್ದಾನೆ.
- Malachi 2:4–8 ಮಲಾಕಿಯ 2:4–8ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ. ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು. ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು. ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ. ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
- Psalm 59:5–13 ಕೀರ್ತನೆಗಳು 59:5–13ಸೈನ್ಯಗಳ ದೇವ ರಾದ ಓ ಕರ್ತನೇ, ಇಸ್ರಾಯೇಲಿನ ದೇವರೇ, ನೀನು ಎಲ್ಲಾ ಜನಾಂಗಗಳನ್ನು ದರ್ಶಿಸುವದಕ್ಕೆ ಎಚ್ಚರವಾಗು; ದುಷ್ಟರಾದ ಅಪರಾಧಿಗಳಲ್ಲಿ ಯಾರಿಗಾದರೂ ಕರುಣೆ ತೋರಿಸಬೇಡ. ಸೆಲಾ. ಅವರು ಸಂಜೆಗೆ ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತುವರು. ಇಗೋ, ತಮ್ಮ ಬಾಯಿಯಿಂದ ಕಕ್ಕುತ್ತಾರೆ; ಅವರ ತುಟಿಗಳಲ್ಲಿ ಕತ್ತಿಗಳು ಅವೆ; ಅವರು--ಕೇಳುವವನಾರು ಎಂದು ಅನ್ನುತ್ತಾರೆ. ಆದರೆ ಓ ಕರ್ತನೇ, ನೀನು ಅವರನ್ನು ನೋಡಿ ನಗುವಿ, ನೀನು ಅನ್ಯಜನಾಂಗ ಗಳನ್ನೆಲ್ಲಾ ಗೇಲಿಮಾಡುವಿ. ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ. ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು. ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು. ಅವರ ಬಾಯಿಂದ ಬರುವ ಪಾಪಕ್ಕೂ ಅವರ ತುಟಿಗಳ ಮಾತಿಗೂ ಅವರು ನುಡಿಯುವ ಶಾಪಕ್ಕೋಸ್ಕರವೂ ಸುಳ್ಳುಗಳಿಗೋಸ್ಕರವೂ ಅವರ ಅಹಂಕಾರದಲ್ಲಿ ಸಿಕ್ಕಿಬೀಳಲಿ. ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
- 2 Timothy 4:14 2 ತಿಮೊಥೆಯನಿಗೆ 4:14ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು.
- Malachi 2:10–12 ಮಲಾಕಿಯ 2:10–12ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ? ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ. ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು.
- 1 Samuel 2:30 1 ಸಮುವೇಲನು 2:30ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.