Nehemiah · chapter 4 · verse 8
Nehemiah 4:8 in Kannada
ಅವರೆಲ್ಲಾ ಬಹುಕೋಪಗೊಂಡು ಯೆರೂಸಲೇಮಿಗೆ ವಿರೋಧವಾಗಿ ಯುದ್ಧಮಾಡುವದಕ್ಕೂ ಅಭ್ಯಂತರಿಸು ವದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು.
Avarellaa bahukopagondu yeroosalemige virodhavaagi yuddhamaaduvadakkoo abhyantarisu vadakkoo baralu ekavaagi olasanchu maadidaru.
Nehemiah 4:8 in English
- King James Version (KJV)
- And conspired all of them together to come [and] to fight against Jerusalem, and to hinder it.
- World English Bible (WEB)
- and they all conspired together to come and fight against Jerusalem, and to cause confusion among us.
- American Standard Version (ASV)
- and they conspired all of them together to come and fight against Jerusalem, and to cause confusion therein.
- Bible in Basic English (BBE)
- And they made designs, all of them together, to come and make an attack on Jerusalem, causing trouble there.
- Darby Translation (DBY)
- and conspired all of them together to come to fight against Jerusalem, and to hinder it.
- Webster's Bible (WBS)
- And conspired all of them together to come [and] to fight against Jerusalem, and to hinder it.
- Young's Literal Translation (YLT)
- and they conspire, all of them together, to come in to fight against Jerusalem, and to do to it injury.
Read in context
- 6ಹೀಗೆಯೇ ನಾವು ಗೋಡೆಯನ್ನು ಕಟ್ಟಿದೆವು; ಗೋಡೆಯಲ್ಲಾ ಅರ್ಧ ಎತ್ತರದ ವರೆಗೂ ಒಂದಾಗಿ ಕೂಡಿತು. ಜನರು ಕೆಲಸ ಮಾಡುವದಕ್ಕೆ ಮನಸ್ಸುಳ್ಳ ವರಾಗಿದ್ದರು.
- 7ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ
- 8ಅವರೆಲ್ಲಾ ಬಹುಕೋಪಗೊಂಡು ಯೆರೂಸಲೇಮಿಗೆ ವಿರೋಧವಾಗಿ ಯುದ್ಧಮಾಡುವದಕ್ಕೂ ಅಭ್ಯಂತರಿಸು ವದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು.
- 9ಆದರೆ ನಾವು ನಮ್ಮ ದೇವರಿಗೆ ಪ್ರಾರ್ಥನೆ ಮಾಡಿ ಅವರ ನಿಮಿತ್ತ ಅವರಿಗೆ ಎದುರಾಗಿ ರಾತ್ರಿ ಹಗಲು ಕಾವಲನ್ನು ಇಟ್ಟೆವು.
- 10ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು.
Cross references
- Psalm 83:3–11 ಕೀರ್ತನೆಗಳು 83:3–11ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ. ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ. ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ. ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ; ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ. ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು. ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು. ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್ ಜೇಬ್ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು.
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Acts 23:12–13 ಅಪೊಸ್ತಲರ ಕೃತ್ಯಗಳು 23:12–13ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು. ಈ ಒಳಸಂಚನ್ನು ಮಾಡಿ ದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು.
- Psalm 2:1–3 ಕೀರ್ತನೆಗಳು 2:1–3ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ.
- Isaiah 8:9–10 ಯೆಶಾಯ 8:9–10ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ. ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವದು; ಮಾತು ಹೇಳಿರಿ, ಅದು ನಿಲ್ಲದು; ದೇವರು ನಮ್ಮ ಸಂಗಡ ಇದ್ದಾನೆ.