Nehemiah · chapter 7 · verse 1
Nehemiah 7:1 in Kannada
ನಾನು ಗೋಡೆಯನ್ನು ಕಟ್ಟಿಸಿ ಬಾಗಲುಗಳನ್ನು ನಿಲ್ಲಿಸಿದ ತರುವಾಯ ಬಾಗಲು ಕಾಯುವವರೂ ಹಾಡುಗಾರರೂ ಲೇವಿಯರೂ ನೇಮಿಸಲ್ಪಟ್ಟರು.
Naanu godeyannu kattisi baagalugalannu nillisida taruvaaya baagalu kaayuvavaroo haadugaararoo leviyaroo nemisalpattaru.
Nehemiah 7:1 in English
- King James Version (KJV)
- Now it came to pass, when the wall was built, and I had set up the doors, and the porters and the singers and the Levites were appointed,
- World English Bible (WEB)
- Now when the wall was built and I had set up the doors, and the gatekeepers and the singers and the Levites were appointed,
- American Standard Version (ASV)
- Now it came to pass, when the wall was built, and I had set up the doors, and the porters and the singers and the Levites were appointed,
- Bible in Basic English (BBE)
- Now when the building of the wall was complete and I had put up the doors, and the door-keepers and the music-makers and the Levites had been given their places,
- Darby Translation (DBY)
- And it came to pass when the wall was built, and I had set up the doors, that the doorkeepers and the singers and the Levites were appointed.
- Webster's Bible (WBS)
- Now it came to pass, when the wall was built, and I had set up the doors, and the porters and the singers and the Levites were appointed,
- Young's Literal Translation (YLT)
- And it cometh to pass, when the wall hath been built, that I set up the doors, and the gatekeepers are appointed, and the singers, and the Levites,
Read in context
- 1ನಾನು ಗೋಡೆಯನ್ನು ಕಟ್ಟಿಸಿ ಬಾಗಲುಗಳನ್ನು ನಿಲ್ಲಿಸಿದ ತರುವಾಯ ಬಾಗಲು ಕಾಯುವವರೂ ಹಾಡುಗಾರರೂ ಲೇವಿಯರೂ ನೇಮಿಸಲ್ಪಟ್ಟರು.
- 2ಆಗ ನಾನು ನನ್ನ ಸಹೋದರನಾದ ಹನಾನಿಗೂ ಅರಮನೆಯ ಅಧಿಪತಿಯಾದ ಹನನ್ಯ ನಿಗೂ ಯೆರೂಸಲೇಮಿನ ಕಾವಲನ್ನು ಒಪ್ಪಿಸಿದೆನು. ಇವನು ಸತ್ಯವುಳ್ಳವನಾಗಿಯೂ ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
- 3ಆಗ ನಾನು ಅವರಿಗೆ--ಬಿಸಿಲು ಏರುವ ಪರ್ಯಂತರಕ್ಕೂ ಯೆರೂಸಲೇಮಿನ ಬಾಗಲುಗಳನ್ನು ತೆರೆಯಬಾರದು; ಇದಲ್ಲದೆ ನೀವು ಸವಿಾಪದಲ್ಲಿ ನಿಂತಿರುವಾಗ, ಕದಗ ಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ; ಯೆರೂಸಲೇಮಿನ ನಿವಾಸಿಗಳಿಂದ ಪ್ರತಿ ಮನುಷ್ಯನು ತನ್ನ ಕಾವಲಿನ ಲ್ಲಿಯೂ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾ ಗಿಯೂ ಕಾವಲಾಗಿರಲು ನೇಮಿಸಿರೆಂದು ಹೇಳಿದೆನು.
Cross references
- Nehemiah 6:1 ನೆಹೆಮೀಯ 6:1ನಾನು ಕದಗಳನ್ನು ಬಾಗಲುದ್ವಾರಗಳಲ್ಲಿ ನಿಲ್ಲಿಸುವದಕ್ಕಿಂತ ಮುಂಚೆ ಗೋಡೆಯನ್ನು ಕಟ್ಟಿಸಿದೆನೆಂದೂ ಅದರಲ್ಲಿ ಒಂದು ಸಂದೂ ಬಿಡಲ್ಪಡ ಲಿಲ್ಲವೆಂದೂ ಸನ್ಬಲ್ಲಟನೂ ಟೋಬೀಯನೂ ಅರಬ್ಯ ನಾದ ಗೆಷೆಮನೂ ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ
- Nehemiah 6:15 ನೆಹೆಮೀಯ 6:15ಹೀಗೆಯೇ ಗೋಡೆಯು ಐವತ್ತೆರಡು ದಿವಸ ಗಳಲ್ಲಿ ಎಲುಲ್ ತಿಂಗಳ ಇಪ್ಪತ್ತೈದನೇ ದಿವಸದಲ್ಲಿ ತೀರಿತು.
- 2 Chronicles 31:2 2 ಪೂರ್ವಕಾಲವೃತ್ತಾಂತ 31:2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
- Nehemiah 11:3 ನೆಹೆಮೀಯ 11:3ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ನೆತಿನಿಯರೂ ಸೊಲೊ ಮೋನನ ಸೇವಕರ ಮಕ್ಕಳೂ ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು;ಆದರೆ ವಾಸವಾಗಿದ್ದ ಸೀಮೆಯ ಮುಖ್ಯಸ್ಥರು ಯಾರಂದರೆ--
- Nehemiah 12:24 ನೆಹೆಮೀಯ 12:24ಲೇವಿಯರ ಮುಖ್ಯಸ್ಥರಾದ ಹಷ ಬ್ಯನೂ ಶೇರೇಬ್ಯನೂ ಕದ್ಮೀಯೇಲನ ಮಗನಾದ ಯೇಷೂವನೂ ಅವರಿಗೆದುರಾಗಿ ನಿಂತ ಅವರ ಸಹೋದರರೂ ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಹೊಗಳುವದಕ್ಕೂ ಸ್ತೋತ್ರಮಾಡು ವದಕ್ಕೂ ವರ್ಗ ವರ್ಗಗಳಾಗಿದ್ದರು.
- Nehemiah 10:39 ನೆಹೆಮೀಯ 10:39ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.
- Nehemiah 3:1–32 ನೆಹೆಮೀಯ 3:1–32ಆಗ ಪ್ರಧಾನ ಯಾಜಕನಾದ ಎಲ್ಯಾಷೀಬನೂ ಅವನ ಸಹೋದರರಾದ ಯಾಜಕರೂ ಎದ್ದು ಕುರಿ ಬಾಗಲನ್ನು ಕಟ್ಟಿದರು. ಇವರು ಅದನ್ನು ಪರಿಶುದ್ಧ ಮಾಡಿ ಅದರ ಬಾಗಲುಗಳನ್ನು ನಿಲ್ಲಿಸಿದರು. ಹಮ್ಮೆಯದ ಗೋಪುರದ ಮಟ್ಟಿಗೂ ಹನನೇಲನ ಗೋಪುರದ ವರೆಗೂ ಅದನ್ನು ಪರಿಶುದ್ಧ ಮಾಡಿದರು. ಇವರ ತರುವಾಯ ಯೆರಿಕೋವಿನ ಮನುಷ್ಯರು ಕಟ್ಟಿದರು. ಇವರ ತರುವಾಯ ಇಮ್ರಿಯ ಮಗನಾದ ಜಕ್ಕೂರನು ಕಟ್ಟಿದನು. ಆದರೆ ವಿಾನಿನ ಬಾಗಲನ್ನು ಹಸ್ಸೆನಾಹನ ಮಕ್ಕಳು ಕಟ್ಟಿದರು; ಇವರು ಅದರ ತೊಲೆಗಳನ್ನು ಹೊಂದಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿದರು. ಇವರ ತರುವಾಯ ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಹಳೇದನ್ನು ಭದ್ರಪಡಿಸಿದನು. ಇವರ ತರುವಾಯ ಮೆಷೇಜಬೇಲನ ಮಗನಾದ ಬೆರೆಕ್ಯನ ಮಗನಾದ ಮೆಷುಲ್ಲಾಮನು ಹಳೇದನ್ನು ಭದ್ರಪಡಿಸಿದನು; ಇವರ ತರುವಾಯ ಬಾಣನ ಮಗನಾದ ಚಾದೋಕನು ಭದ್ರ ಪಡಿಸಿದನು. ಇವನ ತರುವಾಯ ತೆಕೋವಿಯರು ಭದ್ರಪಡಿಸಿದರು. ಆದರೆ ಇವರ ಶ್ರೇಷ್ಠರು ಕರ್ತನ ಕೆಲಸಕ್ಕೆ ತಮ್ಮ ಕುತ್ತಿಗೆಗಳನ್ನು ಬೊಗ್ಗಿಸಲಿಲ್ಲ. ಇದಲ್ಲದೆ ಪಾಸೇಹನ ಮಗನಾದ ಯೋಯಾ ದನೂ ಬೆಸೋದ್ಯನ ಮಗನಾದ ಮೆಷುಲ್ಲಾಮನೂ ಹಳೇ ಬಾಗಲನ್ನು ಭದ್ರಪಡಿಸಿದರು; ಅವರು ಅದರ ತೊಲೆಗಳನ್ನು ಹೊಂದಿಸಿ ಕದಗಳನ್ನೂ ಜೋಡಣೆ ಗಳನ್ನೂ ಅದರ ಅಗುಳಿಗಳನ್ನೂ ನಿಲ್ಲಿಸಿದರು. ಇವರ ತರುವಾಯ ಗಿಬ್ಯೋನು ಮಿಚ್ಛೆ ಎಂಬ ಊರುಗಳ ಮನುಷ್ಯರಾದ ಗಿಬ್ಯೋನಿಯನಾದ ಮೆಲೆಟ್ಯನೂ ಮೇರೋನೋತಿನವನಾದ ಯಾದೋನನೂ ನದಿಯ ಈಚೆಯಲ್ಲಿರುವ ಅಧಿಪತಿಯ ಪೀಠದ ವರೆಗೂ ಭದ್ರ ಪಡಿಸಿದರು. ಇವರ ತರುವಾಯ ಅಕ್ಕಸಾಲೆಯರಲ್ಲಿ ಒಬ್ಬನಾದಂಥ ಹರ್ಹಯನ ಮಗನಾದ ಉಜ್ಜಿಯೇಲನು ಭದ್ರಪಡಿಸಿದನು. ಇವನ ತರುವಾಯ ತೈಲಗಾರರಲ್ಲಿ ಒಬ್ಬನ ಮಗನಾದ ಹನನ್ಯನು ಭದ್ರಪಡಿಸಿದನು. ಇವರು ಅಗಲವಾದ ಗೋಡೆಯ ತನಕ ಯೆರೂಸಲೇ ಮನ್ನು ಬಲಪಡಿಸಿದರು. ಇವರ ತರುವಾಯ ಯೆರೂ ಸಲೇಮಿನ ಅರ್ಧಕ್ಕೆ ಅಧಿಪತಿಯಾದ ಹೂರನ ಮಗ ನಾದ ರೆಫಾಯನು ಭದ್ರಪಡಿಸಿದನು. ಇವನ ತರು ವಾಯ ಹರುಮಫನ ಮಗನಾದ ಯೆದಾಯನು ತನ್ನ ಮನೆಗೆ ಎದುರಾಗಿದ್ದದ್ದನ್ನು ಭದ್ರಪಡಿಸಿದನು. ಇವನ ತರುವಾಯ ಹಷಬ್ನೆಯನ ಮಗನಾದ ಹಟ್ಟೂಷನು ಭದ್ರಪಡಿಸಿದನು. ಹಾರೀಮನ ಮಗನಾದ ಮಲ್ಕೀ ಯನೂ ಪಹತ್ಮೋವಾಬನ ಮಗನಾದ ಹಷ್ಷೂ ಬನೂ ಇನ್ನೊಂದು ಭಾಗವನ್ನೂ ಒಲೆ ಬುರುಜನ್ನೂ ದುರಸ್ತು ಮಾಡಿದರು. ಇವರ ತರುವಾಯ ಯೆರೂಸ ಲೇಮಿನ ಅರ್ಧಕ್ಕೆ ಅಧಿಪತಿಯಾದ ಹಲ್ಲೊಹೇಷನ ಮಗನಾದ ಶಲ್ಲೂಮನೂ ಅವನ ಕುಮಾರ್ತೆಯರೂ ಭದ್ರಪಡಿಸಿದರು. ತಗ್ಗಿನ ಬಾಗಲನ್ನು ಹಾನೂನನೂ ಜಾನೋಹನ ನಿವಾಸಿಗಳೂ ಭದ್ರಪಡಿಸಿದರು. ಇವರು ಅದನ್ನು ಕಟ್ಟಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿ ಗಳನ್ನೂ ನಿಲ್ಲಿಸಿ ತಿಪ್ಪೆ ಬಾಗಿಲ ವರೆಗೆ ಸಾವಿರ ಮೊಳ ಗೋಡೆಯನ್ನು ಕಟ್ಟಿದರು. ಆದರೆ ಬೆತ್ಹಕ್ಕೆರೆಮಿನ ಅರ್ಧಪಾಲಿಗೆ ಅಧಿಪತಿ ಯಾಗಿರುವ ರೆಕಾಬನ ಮಗನಾದ ಮಲ್ಕೀಯನು ತಿಪ್ಪೆ ಬಾಗಲನ್ನು ಭದ್ರಪಡಿಸಿದನು; ಇವನು ಅದನ್ನು ಕಟ್ಟಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿದನು. ಆದರೆ ಮಿಚ್ಚದ ಅರ್ಧಪಾಲಿಗೆ ಅಧಿಪತಿಯಾದ ಕೊಲ್ಹೋಜೆಯ ಮಗನಾದ ಶಲ್ಲೂನನು ಬುಗ್ಗೆಯ ಬಾಗಲನ್ನು ಭದ್ರಪಡಿಸಿ ಮಾಳಿಗೆಯನ್ನು ಹಾಕಿಸಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿಗಳನ್ನೂ ನಿಲ್ಲಿಸಿ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಎಂಬ ಕೊಳದ ಗೋಡೆಯನ್ನು ದಾವೀದನ ಪಟ್ಟಣದಿಂದ ಇಳಿಯುವ ಮೆಟ್ಟಲುಗಳ ಮಟ್ಟಿಗೂ ಕಟ್ಟಿಸಿದನು. ಇವನ ತರುವಾಯ ಬೇತ್ಚೂರಿನ ಅರ್ಧಪಾಲಿಗೆ ಅಧಿಪತಿಯಾದ ಅಜ್ಬೂಕನ ಮಗನಾದ ನೆಹೆವಿಾ ಯನು ದಾವೀದನ ಸಮಾಧಿಗಳಿಗೆ ಎದುರಾಗಿರುವ ಸ್ಥಳದ ಮಟ್ಟಿಗೂ ಅಗೆಯಲ್ಪಟ್ಟ ಕುಂಟೆಯ ಮಟ್ಟಿಗೂ ಪರಾಕ್ರಮಿಗಳ ಮನೆಯ ಮಟ್ಟಿಗೂ ಇರುವದನ್ನು ಭದ್ರಪಡಿಸಿದನು. ಇವನ ತರುವಾಯ ಲೇವಿಯರಲ್ಲಿರುವ ಬಾನಿಯ ಮಗನಾದ ರೆಹೂಮನು ಭದ್ರಪಡಿಸಿದನು. ಇವನ ತರುವಾಯ ಕೆಯಾಲದಲ್ಲಿ ಅರ್ಧಪಾಲಿಗೆ ಅಧಿಪತಿ ಯಾದ ಹಷಬ್ಯನು ಭದ್ರಪಡಿಸಿದನು. ಇವನ ತರುವಾಯ ಇವನ ಸಹೋದರರೊಳಗೆ ಕೆಯಾಲದ ಅರ್ಧಪಾಲಿಗೆ ಅಧಿಪತಿಯಾದ ಹೇನಾದಾದನ ಮಗ ನಾದ ಬವ್ವೈನು ಭದ್ರಪಡಿಸಿದನು. ಇವನ ತರು ವಾಯ ಮಿಚ್ಪದ ಅಧಿಪತಿಯಾದ ಯೇಷೂವನ ಮಗ ನಾದ ಏಜ್ರನು ಮೂಲೆಯಲ್ಲಿ ಆಯುಧ ಶಾಲೆಗೆ ಹೋಗುವ ಸ್ಥಳಕ್ಕೆ ಎದುರಾಗಿ ಮತ್ತೊಂದು ಪಾಲನ್ನು ಭದ್ರಪಡಿಸಿದನು. ಇವನ ತರುವಾಯ ಜಕ್ಕೈಯನ ಮಗನಾದ ಬಾರೂಕನು ಆ ಮೂಲೆಯಿಂದ ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆಯ ಬಾಗಲ ವರೆಗೂ ಶ್ರದ್ಧೆಯಿಂದ ಮತ್ತೊಂದು ಪಾಲನ್ನು ಭದ್ರ ಪಡಿಸಿದನು. ಇವನ ತರುವಾಯ ಹಕೋಚನ ಮಗನಾದ ಊರೀಯನ ಮೆರೇಮೋತನು ಎಲ್ಯಾಷೀ ಬನ ಮನೆಯ ಬಾಗಲಿಂದ ಎಲ್ಯಾಷೀಬನ ಮನೆಯ ಕೊನೆಯ ವರೆಗೆ ಇರುವ ಮತ್ತೊಂದು ಪಾಲನ್ನು ಭದ್ರಪಡಿಸಿದನು. ಇವನ ತರುವಾಯ ಬೈಲಿನ ಮನುಷ್ಯರಾದ ಯಾಜಕರು ಭದ್ರಪಡಿಸಿದರು. ಇವರ ತರುವಾಯ ಬೆನ್ಯಾವಿಾನನೂ ಹಷ್ಷೂಬನೂ ತಮ್ಮ ಮನೆಗೆ ಎದು ರಾಗಿರುವದನ್ನು ಭದ್ರಪಡಿಸಿದರು. ಇವರ ತರುವಾಯ ಅನನ್ಯನ ಮಗನಾದ ಮಾಸೇಯನ ಮಗನಾದ ಅಜ ರ್ಯನು ತನ್ನ ಮನೆಯ ಬಳಿಯಲ್ಲಿರುವದನ್ನು ಭದ್ರ ಪಡಿಸಿದನು. ಇವನ ತರುವಾಯ ಹೆನದಾದನ ಮಗನಾದ ಬಿನ್ನೂಯನು ಅಜರ್ಯನ ಮನೆ ಅಂಗಳದ ತಿರುಗುವಿಕೆಯ ಕೊನೆಯ ವರೆಗೆ ಮತ್ತೊಂದು ಪಾಲನ್ನು ಭದ್ರಪಡಿಸಿದನು. ಊಜೈಯ ಮಗನಾದ ಪಾಲಾ ಲನು ಆ ಕೊನೆಗೆ ಎದುರಾಗಿದ್ದದ್ದನ್ನೂ ಸೆರೆಮನೆಯ ಬಳಿಯಲ್ಲಿರುವ ಅರಮನೆಗೆ ಹೊರ ಪಾರ್ಶ್ವವಾದ ಗೋಪುರವನ್ನೂ ಕಟ್ಟಿಸಿದನು. ಇವನ ತರುವಾಯ ಪರೋಷನ ಮಗನಾದ ಪೆದಾಯನು ಭದ್ರಪಡಿಸಿದನು. ಓಫೇಲಿನಲ್ಲಿ ವಾಸವಾಗಿರುವ ನೆತಿನಿಯರು ಮೂಡಣ ಪಾರ್ಶ್ವವಾಗಿರುವ ನೀರು ಬಾಗಲಿಗೆದುರಾದ ಹೊರಪಾರ್ಶ್ವದಲ್ಲಿರುವ ಗೋಪುರದ ವರೆಗೂ ಭದ್ರ ಪಡಿಸಿದರು. ಇವರ ತರುವಾಯ ತೆಕೋವಿಯರು ಹೊರಪಾರ್ಶ್ವದಲ್ಲಿರುವ ದೊಡ್ಡ ಗೋಪುರಕ್ಕೆದುರಾದ ಮತ್ತೊಂದು ಪಾಲನ್ನು ಓಫೇಲಿನ ಗೋಡೆಯ ವರೆಗೂ ಭದ್ರಪಡಿಸಿದರು. ಯಾಜಕರು ಕುದುರೆ ಬಾಗಲು ಮೊದಲ್ಗೊಂಡು ತಮ್ಮ ತಮ್ಮ ಮನೆಗೆದುರಾಗಿರುವದನ್ನು ಭದ್ರಪಡಿ ಸಿದರು. ಇವರ ತರುವಾಯ ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಗೆ ಎದುರಾಗಿರುವದನ್ನು ಭದ್ರ ಪಡಿಸಿದನು. ಇವನ ತರುವಾಯ ಮೂಡಣ ಬಾಗಲನ್ನು ಕಾಯುವ ಶೆಕನ್ಯನ ಮಗನಾದ ಶೆಮಾಯನು ಭದ್ರ ಪಡಿಸಿದನು. ಇವನ ತರುವಾಯ ಶೆಲೆಮ್ಯನ ಮಗ ನಾದ ಹನನ್ಯನೂ ಚಾಲಾಫನ ಆರನೇ ಮಗನಾದ ಹನೂನನೂ ಮತ್ತೊಂದು ಪಾಲನ್ನು ಭದ್ರಪಡಿಸಿದರು. ಇವರ ತರುವಾಯ ಬೆರೆಕ್ಯನ ಮಗನಾದ ಮೆಷುಲ್ಲಾ ಮನು ತನ್ನ ಕೊಠಡಿಗೆ ಎದುರಾಗಿರುವದನ್ನು ಭದ್ರ ಪಡಿಸಿದನು. ಇವನ ತರುವಾಯ ಅಕ್ಕಸಾಲೆಯವನ ಮಗನಾದ ಮಲ್ಕೀಯನು ಮಿಫ್ಕಾದೆಂಬ ಬಾಗಲಿಗೆದುರಾದ ನೆತಿನಿ ಯರ ಸ್ಥಳವೂ ವರ್ತಕರ ಸ್ಥಳವೂ ಮೊದಲ್ಗೊಂಡು ಮೂಲೆಯ ಮಟ್ಟಿಗೂ ಭದ್ರಪಡಿಸಿದನು.ಮೂಲೆ ಮೊದಲ್ಗೊಂಡು ಕುರಿಬಾಗಲ ಮಟ್ಟಿಗೂ ಇರುವದನ್ನು ಅಕ್ಕಸಾಲೆಯರೂ ವರ್ತಕರೂ ಭದ್ರಪಡಿಸಿದರು. ಮೂಲೆ ಮೊದಲ್ಗೊಂಡು ಕುರಿಬಾಗಲ ಮಟ್ಟಿಗೂ ಇರುವದನ್ನು ಅಕ್ಕಸಾಲೆಯರೂ ವರ್ತಕರೂ ಭದ್ರಪಡಿಸಿದರು.
- Ezra 3:8 ಎಜ್ರನು 3:8ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೇ ವರುಷದ ಎರ ಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾ ಬೆಲನೂ ಯೋಚಾದಾಕನ ಮಗನಾದ ಯೇಷೂ ವನೂ ಉಳಿದ ಅವರ ಸಹೋದರರಾದ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ ಪ್ರಾರಂಭಿಸಿ ಇಪ್ಪತ್ತು ವರುಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಕರ್ತನ ಆಲಯದ ಕೆಲಸ ನಡಿಸುವದಕ್ಕೆ ಇಟ್ಟರು.
- 1 Chronicles 23:1–32 1 ಪೂರ್ವಕಾಲವೃತ್ತಾಂತ 23:1–32ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು. ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು. ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು. ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು. ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು. ಗೇರ್ಷೋನನು ಕೆಹಾತನು ಮೆರಾರೀಯು ಎಂಬ ಲೇವಿಯ ಮಕ್ಕಳಲ್ಲಿ ಅವರನ್ನು ವರ್ಗಗಳಾಗಿ ದಾವೀ ದನು ವಿಭಾಗಿಸಿದನು. ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು -- ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು. ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು. ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು. ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು. ಕೆಹಾತನ ಕುಮಾರರು--ಅಮ್ರಾಮನು, ಇಚ್ಹಾ ರನು, ಹೆಬ್ರೋನನು, ಉಜ್ಜಿಯೇಲನು ಎಂಬ ಈ ನಾಲ್ಕು ಮಂದಿಯು. ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು. ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು. ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು. ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು. ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು. ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು. ಹೆಬ್ರೋನನ ಕುಮಾರರಲ್ಲಿ ಯೆರೀಯ ಮೊದಲನೆಯವನು, ಅಮರ್ಯನು ಎರ ಡನೆಯವನು, ಯಹಜೀಯೇಲನು ಮೂರನೆಯ ವನು, ಯೆಕಮ್ಮಾಮನು ನಾಲ್ಕನೆಯವನು. ಉಜ್ಜೀ ಯೇಲನ ಕುಮಾರರಲ್ಲಿ ವಿಾಕನು ಮೊದಲನೆಯವನು, ಇಷ್ಷೀಯನು ಎರಡನೆಯವನು. ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು; ಎಲ್ಲಾಜಾರ್ ಸತ್ತನು. ಅವನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಮಾತ್ರ ಇದ್ದರು; ಅವರ ಸಹೋದರರಾದ ಕೀಷನ ಕುಮಾರರು ಅವರನ್ನು ತೆಗೆದುಕೊಂಡರು. ಮೂಷೀಯ ಕುಮಾರರು-- ಮಹ್ಲೀಯು ಏದೆರ್ ಯೆರೇಮೋತ್ ಈ ಮೂರು ಮಂದಿ. ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು. ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು. ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು. ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು. ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು. ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
- 1 Chronicles 25:1–26 1 ಪೂರ್ವಕಾಲವೃತ್ತಾಂತ 25:1–26ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು. ಅವರು ಯಾರಂದರೆ, ಆಸಾಫನ ಕುಮಾರ ರಲ್ಲಿ ಜಕ್ಕೂರನು ಯೋಸೇಫನು ನೆತನ್ಯನು ಅಶರೇ ಲನು; ಇವರು ಆಸಾಫನ ಕುಮಾರರು; ಅರಸ ಆಜ್ಞೆಯ ಪ್ರಕಾರ ಆಸಾಫನ ಕೈಕೆಳಗೆ ಪ್ರವಾದಿಸಿದವರು. ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು. ಹೆಮಾನನ ಕುಮಾರರಲ್ಲಿ ಬುಕ್ಕೀಯನು, ಮತ್ತನ್ಯನು, ಉಜ್ಜಿಯೇ ಲನು, ಶೆಬೂವೇಲನು, ಯೆರೀಮೋತನು, ಹನನ್ಯನು, ಹನಾನೀಯು, ಎಲೀಯಾತನು, ಗಿದ್ದಲ್ತಿಯು, ರೋಮ ಮ್ತಿಯೆಜರನು, ಯೊಷ್ಬೆಕಾಷನು, ಮಲ್ಲೋತೀಯು, ಹೋತೀರನು, ಮಹಜೀಯೋತನು. ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು. ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು. ಹೀಗೆಯೇ ಅವರ ಲೆಕ್ಕವೂ ಕರ್ತನ ಹಾಡುಗಳಲ್ಲಿ ಬೋಧಿಸಲ್ಪಟ್ಟ ಸಮಸ್ತ ಪ್ರವೀಣರ ಲೆಕ್ಕವೂ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಭತ್ತೆಂಟು ಮಂದಿಯಾಗಿದ್ದರು. ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು. ಆಸಾಫನಿ ಗೋಸ್ಕರ ಮೊದಲನೇ ಚೀಟು ಯೋಸೆಫನಿಗೆ ಬಂತು; ಎರಡನೆಯದು ಗೆದಲ್ಯನಿಗೆ, ಅವನೂ ಅವನ ಸಹೋ ದರರೂ ಅವನ ಕುಮಾರರೂ ಹನ್ನೆರಡು ಮಂದಿ; ಮೂರನೆಯದು ಜಕ್ಕೂರನಿಗೆ; ಅವನೂ ಅವನ ಕುಮಾರರೂ ಸಹೋದರರೂ ಹನ್ನೆರಡು ಮಂದಿ, ನಾಲ್ಕನೆಯದು ಇಚ್ರೀಗೆ, ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಐದನೆ ಯದು ನೆತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ. ಆರನೆ ಯದು ಬುಕ್ಕಿಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಏಳನೆ ಯದು ಯೆಸರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಎಂಟನೆ ಯದು ಯೆಶಾಯನಿಗೆ ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಒಂಭ ತ್ತನೆಯದು ಮತ್ತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತನೆಯದು ಶಿವ್ಮೆಾಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೊಂದನೆಯದು ಅಜರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೆರಡನೆಯದು ಹಷಬ್ಯನಿಗೆ; ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿಮೂರನೆಯದು ಶೂಬಾಯೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನಾಲ್ಕನೆಯದು ಮತ್ತಿತ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೈದನೆಯದು ಯೆರೆಮೋತ ನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ; ಹದಿನಾರನೆಯದು ಹನನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೇಳನೆ ಯದು ಯೊಷ್ಬೆಕಾಷನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿ ನೆಂಟನೆಯದು ಹನಾನೀಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತೊಂಭತ್ತನೆಯದು ಮಲ್ಲೋತಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆ ರಡು ಮಂದಿ;