Nehemiah · chapter 7 · verse 6
Nehemiah 7:6 in Kannada
ಅದರಲ್ಲಿ ಬರೆದ ದ್ದೇನಂದರೆ--ಬಾಬೆಲಿನ ಅರಸನಾದ ನೆಬೂಕದ್ನೆಚರನು ಸೆರೆಯಾಗಿ ತಕ್ಕೊಂಡು ಹೋದವರು ಸೆರೆಯಾಗಿ ಒಯ್ಯಲ್ಪಟ್ಟು ಸೆರೆಯಿಂದ ಹೊರಟು ಯೆರೂಸಲೇ ಮಿಗೂ ಯೆಹೂದಕ್ಕೂ
Adaralli bareda ddenandare--baabelina arasanaada nebookadnecharanu sereyaagi takkondu hodavaru sereyaagi oyyalpattu sereyinda horatu yeroosale migoo yehoodakkoo
Nehemiah 7:6 in English
- King James Version (KJV)
- These [are] the children of the province, that went up out of the captivity, of those that had been carried away, whom Nebuchadnezzar the king of Babylon had carried away, and came again to Jerusalem and to Judah, every one unto his city;
- World English Bible (WEB)
- These are the children of the province who went up out of the captivity of those who had been carried away, whom Nebuchadnezzar the king of Babylon had carried away, and who returned to Jerusalem and to Judah, everyone to his city,
- American Standard Version (ASV)
- These are the children of the province, that went up out of the captivity of those that had been carried away, whom Nebuchadnezzar the king of Babylon had carried away, and that returned unto Jerusalem and to Judah, every one unto his city;
- Bible in Basic English (BBE)
- These are the people of the divisions of the kingdom, among those who had been made prisoners by Nebuchadnezzar, the king of Babylon, and taken away by him, who went back to Jerusalem and Judah, every one to his town;
- Darby Translation (DBY)
- These are the children of the province that went up out of the captivity of those that had been carried away, whom Nebuchadnezzar the king of Babylon had carried away, and who came again to Jerusalem and to Judah, every one to his city;
- Webster's Bible (WBS)
- These [are] the children of the province, that went up out of the captivity, of those that had been carried away, whom Nebuchadnezzar the king of Babylon had carried away, and came again to Jerusalem and to Judah, every one to his city;
- Young's Literal Translation (YLT)
- These [are] sons of the province, those coming up of the captives of the removal that Nebuchadnezzar king of Babylon removed — and they turn back to Jerusalem and to Judah, each to his city —
Read in context
- 4ಆಗ ಪಟ್ಟಣವು ವಿಸ್ತಾರವಾಗಿಯೂ ದೊಡ್ಡದಾ ಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚ ವಾಗಿದ್ದರು; ಮನೆಗಳು ಕಟ್ಟಲ್ಪಡಲಿಲ್ಲ.
- 5ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸಲ್ಪಡುವ ಹಾಗೆ ಪ್ರಮುಖರನ್ನೂ ಅಧಿಕಾರಸ್ಥರನ್ನೂ ಜನರನ್ನೂ ಕೂಡಿಸಿ ಕೊಳ್ಳಲು ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿ ಸಿದನು. ಆಗ ನಾನು ಮೊದಲಿನಲ್ಲಿ ಬಂದವರ ವಂಶಾ ವಳಿಯ ಪತ್ರಿಕೆಯನ್ನು ಕಂಡೆನು.
- 6ಅದರಲ್ಲಿ ಬರೆದ ದ್ದೇನಂದರೆ--ಬಾಬೆಲಿನ ಅರಸನಾದ ನೆಬೂಕದ್ನೆಚರನು ಸೆರೆಯಾಗಿ ತಕ್ಕೊಂಡು ಹೋದವರು ಸೆರೆಯಾಗಿ ಒಯ್ಯಲ್ಪಟ್ಟು ಸೆರೆಯಿಂದ ಹೊರಟು ಯೆರೂಸಲೇ ಮಿಗೂ ಯೆಹೂದಕ್ಕೂ
- 7ತಮ್ಮ ತಮ್ಮ ಪಟ್ಟಣಕ್ಕೂ ಜೆರುಬ್ಬಾಬೆಲಿನ ಸಂಗಡ ಬಂದ ದೇಶದ ಮಕ್ಕಳು ಯಾರಂದರೆ ಯೇಷೂವನು, ನೆಹೆವಿಾಯನು, ಅಜ ರ್ಯನು, ರಗಮ್ಯನು, ನಹಮಾನೀಯನು, ಮೊರ್ದೆಕೈ ಯನು, ಬಿಲ್ಷಾನನು, ಮಿಸ್ಪೆರೆತನು, ಬಿಗ್ವೈಯು, ನೆಹೂಮನು, ಬಾಣನು, ಇಸ್ರಾಯೇಲ್ ಜನರ ಲೆಕ್ಕವು:
- 8ಪರೋಷನ ಮಕ್ಕಳು ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
Cross references
- Ezra 5:8 ಎಜ್ರನು 5:8ಅರಸನಾದ ದಾರ್ಯಾವೆಷನಿಗೆ ಸಮಸ್ತ ಸಮಾ ಧಾನವು. ಅರಸನಿಗೆ ತಿಳಿಯಬೇಕಾದದ್ದೇನಂದರೆ--ನಾವು ಯೆಹೂದ್ಯರ ದೇಶದಲ್ಲಿರುವ ಮಹಾದೇವರ ಆಲಯಕ್ಕೆ ಹೋದೆವು; ಅದು ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿದೆ; ಗೋಡೆಗಳ ಮೇಲೆ ತೊಲೆಗಳು ಹೊದಿಸ ಲ್ಪಟ್ಟಿವೆ; ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಲ್ಲಿ ವೃದ್ಧಿಯಾಗುತ್ತದೆ.
- Ezra 2:1–70 ಎಜ್ರನು 2:1–70ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಾಬೆಲಿಗೆ ಸೆರೆಯಾಗಿ ಹಿಡುಕೊಂಡು ಹೋದಂಥ ಯೆರೂಸಲೇಮಿಗೂ ಯೆಹೂದದಲ್ಲಿರುವ ತಮ್ಮ ತಮ್ಮ ಪಟ್ಟಣಗಳಿಗೂ ಸೆರೆಯಿಂದ ತಿರುಗಿದಂಥ ಜೆರುಬ್ಬಾಬೆಲನ ಸಂಗಡ ಬಂದ ಸೀಮೆಗಳ ಮಕ್ಕಳು ಯಾರಂದರೆ -- ಯೆಷೂವನು, ನೆಹೆವಿಾಯನು, ಸೆರಾಯನು, ರೆಲಾಯನು ಮೊರ್ದೆಕಾಯನು, ಬಿಲ್ಷಾ ನನು, ಮಿಸ್ಪಾರನು, ಬಿಗ್ವಾಯನು, ರೆಹೂಮನು, ಬಾಣನು, ಇಸ್ರಾಯೇಲ್ ಜನರಾದ ಮನುಷ್ಯರ ಲೆಕ್ಕವೇನಂದರೆ-- ಪರೋಷನ ಮಕ್ಕಳು--ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು. ಶೆಫಟ್ಯನ ಮಕ್ಕಳು--ಮುನ್ನೂರ ಎಪ್ಪತ್ತೆರಡು ಮಂದಿಯು. ಆರಹನ ಮಕ್ಕಳು -- ಏಳನೂರ ಎಪ್ಪತ್ತೈದು ಮಂದಿಯು. ಯೇಷೂವನ ಯೋವಾಬನ ಮಕ್ಕಳಿಗೆ ಇದ್ದ ಪಹತ್ ಮೋವಾಬನ ಮಕ್ಕಳು--ಎರಡು ಸಾವಿರದ ಎಂಟು ನೂರ ಹನ್ನೆರಡು ಮಂದಿಯು. ಎಲಾಮನ ಮಕ್ಕಳುಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು. ಜತ್ತೂವಿನ ಮಕ್ಕಳು--ಒಂಭೈನೂರ ನಾಲ್ವತ್ತೈದು ಮಂದಿಯು. ಜಕ್ಕೈನ ಮಕ್ಕಳು--ಏಳುನೂರಾ ಅರು ವತ್ತು ಮಂದಿಯು. ಬಾನೀಯ ಮಕ್ಕಳು--ಆರು ನೂರ ನಾಲ್ವತ್ತೆರಡು ಮಂದಿಯು. ಬೇಬೈಯ ಮಕ್ಕಳು--ಆರುನೂರ ಇಪ್ಪತ್ತು ಮೂರು ಮಂದಿಯು. ಅಜ್ಗಾದನ ಮಕ್ಕಳು--ಸಾವಿರದ ಇನ್ನೂರ ಇಪ್ಪತ್ತೆರಡು ಮಂದಿಯು. ಅದೋನೀಕಾಮನ ಮಕ್ಕಳು--ಆರು ನೂರ ಅರುವತ್ತಾರು ಮಂದಿಯು. ಬಿಗ್ವೈಯನ ಮಕ್ಕಳು--ಎರಡು ಸಾವಿರದ ಐವತ್ತಾರು ಮಂದಿಯು. ಆದೀನನ ಮಕ್ಕಳು--ನಾನೂರ ಐವತ್ತು ನಾಲ್ಕು ಮಂದಿಯು. ಹಿಜ್ಕೀಯನ ಸಂತತಿಯಾದ ಅಟೇರನ ಮಕ್ಕಳು--ತೊಂಭತ್ತೆಂಟು ಮಂದಿಯು. ಬೇಚೈಯನ ಮಕ್ಕಳು--ಮುನ್ನೂರ ಇಪ್ಪತ್ತು ಮೂರು ಮಂದಿ. ಯೋರನ ಮಕ್ಕಳುನೂರ ಹನ್ನೆರಡು ಮಂದಿಯು. ಹಾಷುಮನ ಮಕ್ಕಳು--ಇನ್ನೂರ ಇಪ್ಪತ್ತು ಮೂರು ಮಂದಿಯು. ಗಿಬ್ಬಾರನ ಮಕ್ಕಳು--ತೊಂಭತ್ತೈದು ಮಂದಿಯು, ಬೇತ್ಲೆಹೇಮನ ಮಕ್ಕಳು--ನೂರ ಇಪ್ಪತ್ತು ಮೂರು ಮಂದಿಯು. ನೆಟೋಫದ ಮನು ಷ್ಯರು--ಐವತ್ತಾರು ಮಂದಿಯು. ಅನಾತೋತದ ಮನುಷ್ಯರು -- ನೂರ ಇಪ್ಪತ್ತೆಂಟು ಮಂದಿಯು. ಅಜ್ಮಾವೆತನ ಮಕ್ಕಳು--ನಾಲ್ವತ್ತೆರಡು ಮಂದಿಯು. ಕಿರ್ಯತ್ಯಾರೀಮ್ ಕೆಫೀರ್ ಬೇರೋತಿನ ಮಕ್ಕಳುಏಳುನೂರ ನಾಲ್ವತ್ತು ಮೂರು ಮಂದಿಯು. ರಾಮಾ, ಗೆಬದ ಮಕ್ಕಳು -- ಆರು ನೂರ ಇಪ್ಪತ್ತೊಂದು ಮಂದಿಯು. ಮಿಕ್ಮಾಸದ ಮನುಷ್ಯರು -- ನೂರ ಇಪ್ಪತ್ತೆರಡು ಮಂದಿಯು. ಬೇತೇಲಿನ ಆಯಿಯ ಮನುಷ್ಯರು--ಇನ್ನೂರ ಇಪ್ಪತ್ತು ಮೂರು ಮಂದಿಯು. ನೆಬೋವಿನ ಮಕ್ಕಳು -- ಐವತ್ತೆರಡು ಮಂದಿಯು ಮಗ್ಬೀಷನ ಮಕ್ಕಳು -- ನೂರ ಐವತ್ತಾರು ಮಂದಿಯು. ಬೇರೆ ಏಲಾಮನ ಮಕ್ಕಳು--ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು. ಹಾರಿಮನ ಮಕ್ಕಳು -- ಮುನ್ನೂರ ಇಪ್ಪತ್ತು ಮಂದಿಯು. ಲೋದು ಹಾದೀದು ಓನೋನಿನ ಮಕ್ಕಳು--ಏಳು ನೂರ ಇಪ್ಪತ್ತೈದು ಮಂದಿಯು. ಯೆರಿಕೋವಿನ ಮಕ್ಕಳು -- ಮುನ್ನೂರ ನಾಲ್ವತ್ತೈದು ಮಂದಿಯು. ಸೆನಾಹದ ಮಕ್ಕಳು--ಮೂರುಸಾವಿರದ ಆರುನೂರ ಮೂವತ್ತು ಮಂದಿಯು. ಯಾಜಕರ ಲೆಕ್ಕವೇ ನಂದರೆ-- ಯೇಷೂವನ ಮನೆಯವರಾದ ಯೆದಾ ಯನ ಮಕ್ಕಳು -- ಒಂಭೈನೂರ ಎಪ್ಪತ್ತು ಮೂರು ಮಂದಿಯು. ಇಮ್ಮೇರನ ಮಕ್ಕಳು -- ಸಾವಿರದ ಐವತ್ತೆರಡು ಮಂದಿಯು. ಪಷ್ಹೂರನ ಮಕ್ಕಳುಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು. ಹಾರಿ ಮನ ಮಕ್ಕಳು--ಸಾವಿರದ ಹದಿನೇಳು ಮಂದಿಯು. ಲೇವಿಯರ ಲೆಕ್ಕವೇನಂದರೆ--ಹೋದವ್ಯನ ಸಂತತಿ ಯಾದ ಯೇಷೂವನ, ಕದ್ಮೀಯೇಲನ ಮಕ್ಕಳು--ಎಪ್ಪತ್ತು ನಾಲ್ಕು ಮಂದಿಯು. ಹಾಡುಗಾರರಾದ ಅಸಾಫನ ಮಕ್ಕಳು--ನೂರಾ ಇಪ್ಪತ್ತೆಂಟು ಮಂದಿಯು. ಬಾಗಲು ಕಾಯುವವರಾದ ಶಲ್ಲೂಮನ ಮಕ್ಕಳೂ ಆಟೇರನ ಮಕ್ಕಳೂ ಟಲ್ಮೋನನ ಮಕ್ಕಳು, ಅಕ್ಕೂಬನ ಮಕ್ಕಳು, ಹಟೀಟನ ಮಕ್ಕಳೂ ಶೋಬೈಯ ಮಕ್ಕಳೂಇವರೆಲ್ಲರೂ ನೂರ ಮೂವತ್ತೊಂಭತ್ತು ಮಂದಿಯು. ನೆತಿನಿಯರಾದ ಜೀಹನ ಮಕ್ಕಳೂ ಹಸೂಫನ ಮಕ್ಕಳೂ ಟಬ್ಬಾವೋತನ ಮಕ್ಕಳೂ ಕೇರೋಸನ ಮಕ್ಕಳೂ ಸೀಯಹಾನ ಮಕ್ಕಳೂ ಪಾದೋನನ ಮಕ್ಕಳೂ ಲೆಬಾನನ ಮಕ್ಕಳೂ ಹಗಾಬನ ಮಕ್ಕಳೂ ಅಕ್ಕೂಬನ ಮಕ್ಕಳೂ ಹಾಗಾದ್ನ ಮಕ್ಕಳೂ ಶಮ್ಲೈ ಮಕ್ಕಳೂ ಹಾನಾನನ ಮಕ್ಕಳೂ ಗಿದ್ದೇಲನ ಮಕ್ಕಳೂ ಗಹರನ ಮಕ್ಕಳೂ ರೆವಾಯ ಮಕ್ಕಳೂ ರೆಚೀನನ ಮಕ್ಕಳೂ ನೆಕೋದನ ಮಕ್ಕಳೂ ಗಜ್ಜಾಮನ ಮಕ್ಕಳೂ ಉಜ್ಜನ ಮಕ್ಕಳೂ ಪಾಸೇಹನ ಮಕ್ಕಳೂ ಬೇಸೈಯ ಮಕ್ಕಳೂ ಅಸ್ನನ ಮಕ್ಕಳೂ ಮೆಗೂನೀಮ್ ಮಕ್ಕಳೂ ನೆಫೀಸೀಮನ ಮಕ್ಕಳೂ ಬಕ್ಬೂಕನ ಮಕ್ಕಳೂ ಹಕ್ಕೂಫನ ಮಕ್ಕಳು ಹರ್ಹೂರನ ಮಕ್ಕಳು ಬಚ್ಲೂತನ ಮಕ್ಕಳೂ ಮೆಹೀದನ ಮಕ್ಕಳೂ ಹರ್ಷನ ಮಕ್ಕಳೂ ಬರ್ಕೋಸನ ಮಕ್ಕಳೂ ಸೀಸೆರನ ಮಕ್ಕಳೂ ತೆಮಹನ ಮಕ್ಕಳೂ ನೆಚೀಹನ ಮಕ್ಕಳೂ ಹಟೀಫನ ಮಕ್ಕಳೂ. ಸೊಲೊಮೋನನ ಸೇವಕರ ಮಕ್ಕಳಾದ ಸೋಟೈ ಯ ಮಕ್ಕಳೂ ಹಸ್ಸೋಫೆರತಳ ಮಕ್ಕಳೂ ಪೆರೂ ಧನ ಮಕ್ಕಳೂ ಯಾಲನ ಮಕ್ಕಳೂ ದರ್ಕೋನನ ಮಕ್ಕಳೂ ಗಿದ್ದೇಲನ ಮಕ್ಕಳೂ ಶೆಫಟ್ಯನ ಮಕ್ಕಳೂ ಹಟ್ಟೀಲನ ಮಕ್ಕಳೂ ಹಚ್ಚೆಬಾಯಾಮನು ಊರಿನ ಮಕ್ಕಳೂ ಪೋಕೆರತನ ಆವಿಾಯ ಮಕ್ಕಳು. ನೆತನಿಮಿನವರೂ ಸೊಲೊಮೋನನ ಸೇವಕ ಮಕ್ಕಳೂ--ಮುನ್ನೂರ ತೊಂಭತ್ತೆರಡು ಮಂದಿಯು. ತೇಲ್ಮೆಲಹ ತೇಲ್ಹರ್ಷ ಕೆರೂಬದ್ದಾನ್ ಇಮ್ಮೇರ್ ಎಂಬುವ ಸ್ಥಳಗಳನ್ನು ಬಿಟ್ಟು ಬಂದವರಾರಂದರೆ, ದೆಲಾ ಯನ ಮಕ್ಕಳೂ ಟೋಬೀಯನ ಮಕ್ಕಳೂ ನೆಕೋದನ ಮಕ್ಕಳೂ--ಆರುನೂರ ಐವತ್ತೆರಡು ಮಂದಿಯು. ಆದರೆ ಇವರು ಇಸ್ರಾಯೇಲ್ಯರು ಹೌದೋ, ಅಲ್ಲವೋ ಎಂದು ತಮ್ಮ ತಂದೆಯ ಮನೆಯನ್ನೂ ತಮ್ಮ ಸಂತಾನವನ್ನೂ ತಿಳಿಸಲಾರದೆ ಇದ್ದರು. ಇದ ಲ್ಲದೆ ಯಾಜಕರ ಮಕ್ಕಳಲ್ಲಿ ಹಬಯ್ಯನ ಮಕ್ಕಳೂ ಹಕ್ಕೋಜ್ನ ಮಕ್ಕಳೂ ಗಿಲ್ಯಾದ್ಯನಾದ ಬರ್ಜಿಲ್ಲೈಯ ಕುಮಾರ್ತೆಯಲ್ಲಿ ಒಬ್ಬಳನ್ನು ಹೆಂಡತಿಯಾಗಿ ತಕ್ಕೊಂಡು ಅವಳ ಹೆಸರಿನಿಂದ ಕರೆಯಲ್ಪಟ್ಟ ಬರ್ಜಿಲ್ಲೈಯ ಮಕ್ಕಳೂ. ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು. ಊರೀಮ್ ತುವ್ಮೆಾಮ್ ಇರುವ ಯಾಜಕನು ಏಳುವ ವರೆಗೂ ಮಹಾಪರಿಶುದ್ಧವಾದವುಗಳನ್ನು ತಿನ್ನ ಬಾರದೆಂದು ತರ್ಷಾತನು ಅವರಿಗೆ ಹೇಳಿದನು. ಈ ಸಭೆಯಲ್ಲಾ ಒಟ್ಟಾಗಿ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿತ್ತು. ಅವರ ಹೊರತು ಅವರ ದಾಸರೂ ದಾಸಿಗಳೂ ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ ಇದ್ದರು. ಮತ್ತು ಅವರಿಗೆ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರು ಮಂದಿ ಇದ್ದರು. ಅವರ ಕುದುರೆಗಳು ಏಳುನೂರ ಮೂವತ್ತಾರು; ಅವರ ಹೇಸರಕತ್ತೆಗಳು ಇನ್ನೂರನಾಲ್ವತ್ತೈದು. ಅವರ ಒಂಟೆಗಳು ನಾನೂರ ಮೂವತ್ತೈದು; ಅವರ ಕತ್ತೆಗಳು ಆರು ಸಾವಿರದ ಏಳುನೂರ ಇಪ್ಪತ್ತು. ಪಿತೃಗಳಲ್ಲಿ ಮುಖ್ಯರಾದ ಕೆಲವರು ಯೆರೂಸ ಲೇಮಿನಲ್ಲಿರುವ ಕರ್ತನ ಆಲಯಕ್ಕೆ ಬಂದ ತರುವಾಯ ದೇವರ ಆಲಯವನ್ನು ಅದರ ಸ್ಥಾನದಲ್ಲಿ ನಿಲ್ಲಿಸುವದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸದ ಬೊಕ್ಕಸಕ್ಕೆ ಅರವ ತ್ತೊಂದು ಸಾವಿರ ಬಂಗಾರದ ಪವನಗಳನ್ನು ಐದು ಸಾವಿರ ವಿಾನಾ ತೂಕ ಬೆಳ್ಳಿಯನ್ನೂ ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು. ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
- Jeremiah 52:1–34 ಯೆರೆಮೀಯ 52:1–34ಚಿದ್ಕೀಯನು ಆಳುವದಕ್ಕೆ ಆರಂಭಿಸಿದಾಗ ಇಪ್ಪತ್ತೊಂದು ವರುಷದವನಾಗಿದ್ದನು; ಅವನು ಹನ್ನೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು; ಅವನ ತಾಯಿಯ ಹೆಸರು ಲಿಬ್ನದವನಾದ ಯೆರೆವಿಾಯನ ಮಗಳಾದ ಹಮೂಟಲ್. ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಕರ್ತನು ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವ ವರೆಗೆ ಮಾಡಿದ ಕೋಪದಿಂದ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. ಅವನ ಆಳಿಕೆಯ ಒಂಭತ್ತನೇ ವರುಷದಲ್ಲಿ, ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ತನ್ನ ಸಮಸ್ತ ಸೈನ್ಯದ ಸಂಗಡ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದಕ್ಕೆ ವಿರೋಧವಾಗಿ ದಂಡಿಳಿದು ಅದಕ್ಕೆ ವಿರೋಧವಾಗಿ ಸುತ್ತಲೂ ಕೋಟೆಗಳನ್ನು ಕಟ್ಟಿದನು. ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೇ ವರುಷದ ವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ನಾಲ್ಕನೇ ತಿಂಗಳಲ್ಲಿ, ತಿಂಗಳಿನ ಒಂಭತ್ತನೇ ದಿವಸದಲ್ಲಿ ದೇಶಸ್ಥರಿ ಗೋಸ್ಕರ ರೊಟ್ಟಿ ಇಲ್ಲದೆ ಪಟ್ಟಣದಲ್ಲಿ ಕ್ಷಾಮವು ಕಠಿಣವಾಗಿತ್ತು. ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು. ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು. ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು. ಬಾಬೇಲಿನ ಅರಸನು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣುಗಳ ಮುಂದೆ ಕೊಂದು ಹಾಕಿಸಿದನು. ಯೆಹೂದದ ಪ್ರಧಾನರೆಲ್ಲ ರನ್ನೂ ಸಹ ರಿಬ್ಲದಲ್ಲಿ ಕೊಂದು ಹಾಕಿಸಿದನು. ಇದಲ್ಲದೆ ಬಾಬೆಲಿನ ಅಸನು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿಸಿ, ಅವನನ್ನು ಹಿತ್ತಾಳೆಯ ಸಂಕೋಲೆಗಳಿಂದ ಕಟ್ಟಿಸಿ, ಬಾಬೆಲಿಗೆ ಒಯ್ದು ಅವನು ಸಾಯುವ ದಿನದ ವರೆಗೆ ಸೆರೆಮನೆಯಲ್ಲಿ ಇಟ್ಟನು. ಬಾಬೆಲಿನ ಅರಸನಾದ ನೆಬೂಕದೇಚ್ಚರನ ಹತ್ತೊಂಭತ್ತನೇ ವರುಷದ, ಐದನೇ ತಿಂಗಳಿನ, ಹತ್ತನೇ ದಿವಸದಲ್ಲಿ, ಬಾಬೆಲಿನ ಅರಸನ ಸೇವಕನೂ ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂ ಸಲೇಮಿಗೆ ಬಂದು, ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು; ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು. ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು. ಆದರೆ ಕಾವಲಿನವರ ಅಧಿಪತಿಯಾದ ನೆಬೂಜರದಾನನು ದೇಶದ ಬಡವರಲ್ಲಿ ಕೆಲವರನ್ನು ದ್ರಾಕ್ಷೇತೋಟ ಕಾಯು ವವರಾಗಿಯೂ ಬೇಸಾಯ ಮಾಡುವವರಾಗಿಯೂ ಬಿಟ್ಟನು. ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು. ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು. ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು. ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು. ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು. ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು; ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು. ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು. ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು. ಇವರನ್ನು ಕಾವಲಿನ ಅಧಿಪತಿಯಾದ ನೆಬೂಜರ ದಾನನು ತಕ್ಕೊಂಡು ಬಾಬೆಲಿನ ಅರಸನ ಬಳಿಗೆ ರಿಬ್ಲಕ್ಕೆ ಒಯ್ದನು. ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು. ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ--ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು. ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು. ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು. ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೇ ವರುಷದಲ್ಲಿ, ಹನ್ನೆರಡನೇ ತಿಂಗಳಿನ ಇಪ್ಪತ್ತೈದನೇ ದಿವಸದಲ್ಲಿ ಆದದ್ದೇನಂ ದರೆ--ಬಾಬೆಲಿನ ಅರಸನಾದ ಎವೀಲ್ಮೆರೋದಕನು ತನ್ನ ಆಳಿಕೆಯ ಮೊದಲನೇ ವರುಷದಲ್ಲಿ ಯೆಹೂದದ ಅರಸನಾದ ಯೆಹೋಯಾಖೀನನ ತಲೆಯನ್ನು ಎತ್ತಿ ಅವನನ್ನು ಸೆರೆಮನೆಯೊಳಗಿಂದ ಹೊರಗೆ ತರಿಸಿ ಅವನ ಸಂಗಡ ಕರುಣೆಯಿಂದ ಮಾತನಾಡಿ ಅವನ ಸಿಂಹಾ ಸನವನ್ನು ತನ್ನ ಸಂಗಡ ಬಾಬೆಲಿನಲ್ಲಿದ್ದ ಅರಸರ ಸಿಂಹಾಸನಗಳ ಮೇಲೆ ಇರಿಸಿ ಅವನ ಸೆರೆಮನೆಯ ವಸ್ತ್ರಗಳನ್ನು ಬದಲಾಯಿಸಿದನು. ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು. ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.
- Jeremiah 39:1–18 ಯೆರೆಮೀಯ 39:1–18ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು. ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು. ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್ಸ ರೇಚರನೂ ಸಮ್ಗರ್ನೆಬೋವನೂ ಸರ್ಸೆಕೀಮನೂ ನೇರ್ಗೆಲ್ಸರೆಚರನೂ ರಬ್ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು. ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು; ಅವನು ಬೈಲುಸೀಮೆಯ ಮಾರ್ಗ ವಾಗಿ ಹೊರಟನು. ಆದರೆ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಅವರು ಅವನನ್ನು ಹಿಡಿದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು. ಅಲ್ಲಿ ಅವನು ಅವನಿಗೆ ನ್ಯಾಯತೀರಿಸಿದನು. ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು. ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು. ಅರಸನ ಮನೆಯನ್ನೂ ಜನರ ಮನೆಗಳನ್ನೂ ಕಸ್ದೀಯರು ಬೆಂಕಿಯಿಂದ ಸುಟ್ಟರು; ಮತ್ತು ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು. ಆಗ ಪಟ್ಟಣದೊಳಗೆ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಅವನ ಕಡೆಗೆ ಒಳಬಿದ್ದು ಮೊರೆ ಹೊಕ್ಕವರನ್ನೂ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಕಾವಲಿನವರ ಅಧಿಪತಿ ಯಾದ ನೆಬೂಜರದಾನನು ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋದನು. ಆದರೆ ಜನರೊಳಗೆ ಏನೂ ಇಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶ ದಲ್ಲಿ ಬಿಟ್ಟು ಅವರಿಗೆ ಆಗಲೇ ದ್ರಾಕ್ಷೇ ತೋಟಗಳನ್ನೂ ಹೊಲಗಳನ್ನೂ ಕೊಟ್ಟನು. ಇದಲ್ಲದೆ ಯೆರೆವಿಾಯನ ವಿಷಯವಾಗಿ ಬಾಬೆ ಲಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇ ನಂದರೆ-- ಅವನನ್ನು ತಕ್ಕೋ; ಅವನನ್ನು ಚೆನ್ನಾಗಿ ನೋಡಿಕೋ, ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಏನು ಹೇಳುವನೋ ಹಾಗೆಯೇ ಅವನಿಗೆ ಮಾಡು. ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್ಶೇರಿಸ್ನನ್ನೂ ನೇರ್ಗಲ್ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು. ಅವರು ಕಳುಹಿಸಿ ಯೆರೆವಿಾಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ ಶಾಫಾನನ ಮಗ ನಾದ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ ಮನೆಗೆ ಕರಕೊಂಡು ಹೋಗಬೇಕೆಂದು ಅಪ್ಪಣೆ ಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು. ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಹಾಕ ಲ್ಪಟ್ಟಿರುವಾಗ ಕರ್ತನ ವಾಕ್ಯವು ಅವನಿಗೆ ಉಂಟಾಗಿ ಹೇಳಿದ್ದೇನಂದರೆ-- ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ ಹೇಳತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಒಳ್ಳೇದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ; ಅವು ಆ ದಿವಸದಲ್ಲಿ ನಿನ್ನ ಮುಂದೆಯೇ ಉಂಟಾಗುವವು. ಆದರೆ ಆ ದಿನದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಕರ್ತನು ಅನ್ನುತ್ತಾನೆ; ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲ.ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು; ನೀನು ಕತ್ತಿಯಿಂದ ಬೀಳುವದಿಲ್ಲ; ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವದೆಂದು ಕರ್ತನು ಅನ್ನುತ್ತಾನೆ. ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು; ನೀನು ಕತ್ತಿಯಿಂದ ಬೀಳುವದಿಲ್ಲ; ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವದೆಂದು ಕರ್ತನು ಅನ್ನುತ್ತಾನೆ.
- 2 Kings 25:11 2 ಅರಸುಗಳು 25:11ಪಟ್ಟಣದಲ್ಲಿ ಉಳಿದ ಜನ ರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಗುಂಪಿ ನಲ್ಲಿ ಮಿಕ್ಕ ಜನರನ್ನೂ ಕಾವಲಿನ ಅಧಿಪತಿಯಾದ ನೆಬೂಜರದಾನನು ಸೆರೆಯಾಗಿ ಒಯ್ದನು.
- 2 Kings 24:14–16 2 ಅರಸುಗಳು 24:14–16ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು. ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.
- 2 Chronicles 36:1–23 2 ಪೂರ್ವಕಾಲವೃತ್ತಾಂತ 36:1–23ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು. ಯೆಹೋ ವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತಮೂರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು. ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು. ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು. ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು. ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು. ಚಿದ್ಕೀಯನು ಆಳಲು ಆರಂಭಿಸಿದಾಗ ಅವನು ಇಪ್ಪತ್ತೊಂದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹನ್ನೊಂದು ವರುಷ ಆಳಿದನು. ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು. ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು. ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು. ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು. ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು. ಆದರೆ ಪಾರಸಿಯ ಅರಸನಾದ ಕೊರೇಷನ ಮೊದಲನೇ ವರುಷದಲ್ಲಿ ಕರ್ತನು ಯೆರೆವಿಾಯನ ಮೂಲಕವಾಗಿ ಹೇಳಿದ ವಾಕ್ಯವು ಈಡೇರುವ ಹಾಗೆ ಕರ್ತನು ಪಾರಸಿಯ ಅರಸನಾದ ಕೊರೇಷನ ಆತ್ಮ ವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇ ನಂದರೆ --ಪಾರಸಿಯ ಅರಸನಾದ ಕೊರೇಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾದ ಕರ್ತನು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದೇಶದೊಳಗೆ ಯೆರೂಸಲೇಮಿನಲ್ಲಿ ತನಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮಲ್ಲಿ ಹೋಗುವವರು ಯಾರು? ಅವನು ಹೋಗಲಿ, ಅವನ ದೇವರಾದ ಕರ್ತನು ಅವನ ಸಂಗಡ ಇರಲಿ ಅಂದನು. ಪಾರಸಿಯ ಅರಸನಾದ ಕೊರೇಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾದ ಕರ್ತನು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದೇಶದೊಳಗೆ ಯೆರೂಸಲೇಮಿನಲ್ಲಿ ತನಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮಲ್ಲಿ ಹೋಗುವವರು ಯಾರು? ಅವನು ಹೋಗಲಿ, ಅವನ ದೇವರಾದ ಕರ್ತನು ಅವನ ಸಂಗಡ ಇರಲಿ ಅಂದನು.
- Ezra 6:2 ಎಜ್ರನು 6:2ಮೇದ್ಯರ ದೇಶದಲ್ಲಿರುವ ಅಹ್ಮೆತಾ ಪಟ್ಟಣದಲ್ಲಿ ಬರೆ ಯಲ್ಪಟ್ಟ ಜ್ಞಾಪಕಾರ್ಥದ ಒಂದು ಸುರಳಿಯು ಅದರಲ್ಲಿ ಸಿಕ್ಕಿತು.
Original words (Hebrew)
- children · H1121בֵּן bên
- province · H4082מְדִינָה mᵉdîynâh
- up · H5927עָלָה ʻâlâh
- captivity · H7628שְׁבִי shᵉbîy
- away · H1473גּוֹלָה gôwlâh
- Nebuchadnezzar · H5019נְבוּכַדְנֶאצַּר Nᵉbûwkadneʼtstsar
- king · H4428מֶלֶךְ melek
- Babylon · H894בָּבֶל Bâbel
- away · H1540גָּלָה gâlâh
- again · H7725שׁוּב shûwb
- Jerusalem · H3389יְרוּשָׁלַ͏ִם Yᵉrûwshâlaim
- Judah · H3063יְהוּדָה Yᵉhûwdâh
- one · H376אִישׁ ʼîysh
- city · H5892עִיר ʻîyr