Numbers · chapter 1 · verse 19
Numbers 1:19 in Kannada
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು.
Kartanu moshege aajnyaapisida haageye avanu seenaayi aranyadalli avarannu lekkamaadidanu.
Numbers 1:19 in English
- King James Version (KJV)
- As the LORD commanded Moses, so he numbered them in the wilderness of Sinai.
- World English Bible (WEB)
- As the LORD commanded Moses, so he counted them in the wilderness of Sinai.
- American Standard Version (ASV)
- As Jehovah commanded Moses, so he numbered them in the wilderness of Sinai.
- Bible in Basic English (BBE)
- As the Lord had given orders to Moses, so they were numbered by him in the waste place of Sinai.
- Darby Translation (DBY)
- As Jehovah had commanded Moses, so he numbered them in the wilderness of Sinai.
- Webster's Bible (WBS)
- As the LORD commanded Moses, so he numbered them in the wilderness of Sinai.
- Young's Literal Translation (YLT)
- as Jehovah hath commanded Moses; and he numbereth them in the wilderness of Sinai.
Read in context
- 17ಹೆಸರುಗಳು ಹೇಳಲ್ಪಟ್ಟ ಈ ಮನುಷ್ಯರನ್ನು ಮೋಶೆ ಆರೋನರು ತಕ್ಕೊಂಡರು.
- 18ಸಮಸ್ತ ಸಭೆಯನ್ನು ಎರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಕೂಡಿಸಿದರು; ಅವರು ತಮ್ಮ ಗೋತ್ರಗಳಿಗನುಸಾರ ವಾಗಿ ತಂದೆಗಳ ಮನೆಯ ಪ್ರಕಾರ ಹೆಸರುಗಳ ಲೆಕ್ಕವಿರುವ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ತಲೆ ತಲೆಯಾಗಿ ಜನ್ಮಪತ್ರಿಕೆ ಬರೆಸಿಕೊಂಡರು.
- 19ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು.
- 20ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು
- 21ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು.
Cross references
- Numbers 1:2 ಅರಣ್ಯಕಾಂಡ 1:2ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಗಳ ಪ್ರಕಾರ ವಾಗಿಯೂ ಗಂಡಸರೆಲ್ಲರ ಹೆಸರುಗಳ ಎಣಿಕೆಯೊಂದಿಗೆ ತಲೆ ತಲೆಗೂ ನೀವು ತಕ್ಕೊಳ್ಳಿರಿ.
- 2 Samuel 24:1–10 2 ಸಮುವೇಲನು 24:1–10ಕರ್ತನ ಕೋಪವು ತಿರಿಗಿ ಇಸ್ರಾಯೇಲಿಗೆ ವಿರೋಧವಾಗಿ ಉರಿಯಿತು; ಆಗ ಇಸ್ರಾ ಯೇಲನ್ನೂ ಯೆಹೂದವನ್ನೂ ಲೆಕ್ಕಿಸಲು ಹೋಗೆಂದು ಆತನು ದಾವೀದನನ್ನು ಪ್ರೇರೇಪಿಸಿದನು. ಅರಸನು ಸೈನ್ಯಾಧಿಪತಿಯಾದ ಯೋವಾಬನಿಗೆ--ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ ನೀನು ದಾನ್ನಿಂದ ಬೇರ್ಷೆಬದ ವರೆಗೂ ಇರುವ ಇಸ್ರಾಯೇಲ್ ಎಲ್ಲಾ ಗೋತ್ರಗಳಲ್ಲಿ ಹೋಗಿ, ಜನರನ್ನು ಲೆಕ್ಕಿಸು, ಅಂದನು. ಆಗ ಯೋವಾಬನು ಅರಸನಿಗೆ-- ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ನೋಡುವ ಹಾಗೆ ನಿನ್ನ ದೇವರಾದ ಕರ್ತನು ಈಗ ಇರುವದಕ್ಕಿಂತ ಜ ರನ್ನು ನೂರರಷ್ಟಾಗಿ ಹೆಚ್ಚು ಮಾಡಲಿ; ಆದರೆ ಅರಸ ನಾದ ನನ್ನ ಒಡೆಯನು ಈ ಕಾರ್ಯವನ್ನು ಆಶಿಸುವ ದೇನು ಅಂದನು. ಆದಾಗ್ಯೂ ಅರಸನ ಮಾತು ಯೋವಾಬನಿಗೂ ಸೈನ್ಯಾಧಿಪತಿಗಳಿಗೂ ವಿರೋಧವಾಗಿ ಪ್ರೇರೇಪಿಸಿತು. ಆಗ ಯೋವಾಬನೂ ಸೈನ್ಯಾಧಿಪತಿಗಳೂ ಇಸ್ರಾ ಯೇಲ್ ಜನರನ್ನು ಲೆಕ್ಕಿಸಲು ಅರಸನ ಸಮ್ಮುಖದಿಂದ ಹೊರಟು ಹೋದರು. ಅವರು ಯೊರ್ದನನ್ನು ದಾಟಿ ಗಾದ್ ನದಿಯ ಮಧ್ಯದಲ್ಲಿರುವ ಪಟ್ಟಣಕ್ಕೆ ಬಲ ಪಾರ್ಶ್ವವಾದ ಅರೋಯೇರಿನಲ್ಲಿಯೂ ಯಗ್ಜೇರಿ ನಲ್ಲಿಯೂ ಇಳಿದು ಅಲ್ಲಿಂದ ಗಿಲ್ಯಾದಿಗೂ ತಖ್ತೀಮ್ ಹೊಜೀಯ ದೇಶಕ್ಕೂ ಅಲ್ಲಿಂದ ದಾನ್ನಿಗೂ ಅಲ್ಲಿಂದ ಸುತ್ತಿಕೊಂಡು ಚೀದೋನಿಗೂ ಬಂದರು. ಅವರು ತೂರಿನ ಭದ್ರ ಸ್ಥಳಕ್ಕೂ ಹಿವ್ವಿಯರ ಕಾನಾ ನ್ಯರ ಎಲ್ಲಾ ಪಟ್ಟಣಗಳಿಗೂ ಅಲ್ಲಿಂದ ಯೆಹೂದದ ದಕ್ಷಿಣಕ್ಕೂ ಬೇರ್ಷೆಬಕ್ಕೂ ಬಂದರು. ಹೀಗೆಯೇ ಅವರು ಎಲ್ಲಾ ದೇಶಕ್ಕೆ ಹೋಗಿ ಒಂಭತ್ತು ತಿಂಗಳು ಇಪ್ಪತ್ತು ದಿವಸವಾದ ತರುವಾಯ ಯೆರೂಸಲೇಮಿಗೆ ಬಂದರು. ಯೋವಾಬನು ಅರಸನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನಂದರೆ, ಇಸ್ರಾಯೇಲ್ಯರಲ್ಲಿ ಕತ್ತಿ ಹಿಡಿಯತಕ್ಕ ಪರಾಕ್ರಮವುಳ್ಳ ಎಂಟು ಲಕ್ಷ ಮಂದಿ ಇದ್ದರು. ಯೆಹೂದದ ಜನರು ಐದು ಲಕ್ಷ ಮಂದಿಯಾಗಿದ್ದರು. ಆದರೆ ದಾವೀದನು ಜನರನ್ನು ಲೆಕ್ಕಿಸಿದ ತರು ವಾಯ ಅವನು ತನ್ನ ಹೃದಯದಲ್ಲಿ ತಿವಿಯಲ್ಪಟ್ಟನು. ಆದದರಿಂದ ದಾವೀದನು ಕರ್ತನಿಗೆ--ನಾನು ಮಾಡಿ ದ್ದರಲ್ಲಿ ಮಹಾ ಪಾಪಮಾಡಿದೆನು. ಕರ್ತನೇ, ದಯ ಮಾಡಿ ನಿನ್ನ ಸೇವಕನ ಅಕ್ರಮವನ್ನು ಪರಿಹರಿಸು; ನಾನು ಬಹಳ ಹುಚ್ಚುತನ ಮಾಡಿದೆನು ಅಂದನು.
- Numbers 26:1–2 ಅರಣ್ಯಕಾಂಡ 26:1–2ಆದರೆ ವ್ಯಾಧಿಯ ತರುವಾಯ ಕರ್ತನು ಮೋಶೆಯ ಸಂಗಡಲೂ ಆರೋನನ ಮಗನೂ ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡಲೂ ಮಾತನಾಡಿ-- ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗುವದಕ್ಕೆ ಶಕ್ತರಾದವರೆಲ್ಲರ ಲೆಕ್ಕವನ್ನು ಅವರ ತಂದೆಯ ಮನೆಗಳ ಪ್ರಕಾರ ತಕ್ಕೊಳ್ಳಿರಿ ಅಂದನು.