Numbers · chapter 14 · verse 42
Numbers 14:42 in Kannada
ನಿಮ್ಮ ಶತ್ರುಗಳು ನಿಮ್ಮನ್ನು ಹೊಡೆಯದ ಹಾಗೆ ಏರಿ ಹೋಗಬೇಡಿರಿ. ಯಾಕಂದರೆ ಕರ್ತನು ನಿಮ್ಮ ಸಂಗಡ ಇರುವದಿಲ್ಲ.
Nimma shatrugalu nimmannu hodeyada haage eri hogabediri. Yaakandare kartanu nimma sangada iruvadilla.
Numbers 14:42 in English
- King James Version (KJV)
- Go not up, for the LORD [is] not among you; that ye be not smitten before your enemies.
- World English Bible (WEB)
- Don’t go up, for the LORD isn’t among you; that way you won’t be struck down before your enemies.
- American Standard Version (ASV)
- Go not up, for Jehovah is not among you; that ye be not smitten down before your enemies.
- Bible in Basic English (BBE)
- Go not up, for the Lord is not with you, and you will be overcome by those who are fighting against you.
- Darby Translation (DBY)
- Go not up, for Jehovah is not among you; that ye be not smitten before your enemies;
- Webster's Bible (WBS)
- Go not up, for the LORD is not among you; that ye be not smitten before your enemies.
- Young's Literal Translation (YLT)
- go not up, for Jehovah is not in your midst, and ye are not smitten before your enemies;
Read in context
- 40ಮರುದಿವಸ ಬೆಳಿಗ್ಗೆ ಅವರು ಎದ್ದು ಬೆಟ್ಟದ ತುದಿಯ ಮೇಲಕ್ಕೆ ಏರಿ--ಇಗೋ, ಕರ್ತನು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವದಕ್ಕೆ ಇದ್ದೇವೆ; ಯಾಕಂದರೆ ನಾವು ಪಾಪಮಾಡಿದ್ದೇವೆ ಅಂದರು.
- 41ಆಗ ಮೋಶೆಯು--ನೀವು ಈ ಪ್ರಕಾರ ಯಾಕೆ ಕರ್ತನ ಆಜ್ಞೆಯನ್ನು ವಿಾರುತ್ತೀರಿ? ಅದು ಸಫಲವಾಗು ವದಿಲ್ಲ.
- 42ನಿಮ್ಮ ಶತ್ರುಗಳು ನಿಮ್ಮನ್ನು ಹೊಡೆಯದ ಹಾಗೆ ಏರಿ ಹೋಗಬೇಡಿರಿ. ಯಾಕಂದರೆ ಕರ್ತನು ನಿಮ್ಮ ಸಂಗಡ ಇರುವದಿಲ್ಲ.
- 43ಅಮಾಲೇಕ್ಯರೂ ಕಾನಾನ್ಯರೂ ನಿಮ್ಮ ಎದುರಿನಲ್ಲಿರುವದರಿಂದ ನೀವು ಅವರ ಕತ್ತಿಯಿಂದ ಬೀಳುವಿರಿ. ನೀವು ಕರ್ತನ ಕಡೆ ಯಿಂದ ತಿರುಗಿದ ಕಾರಣ ಆತನು ನಿಮ್ಮ ಸಂಗಡ ಇರುವದಿಲ್ಲ ಎಂದು ಹೇಳಿದನು.
- 44ಆದರೆ ಅವರು ಹಟಮಾಡಿ ಬೆಟ್ಟದ ತುದಿಯಮೇಲೆ ಏರಿಹೋದರು. ಆದಾಗ್ಯೂ ಕರ್ತನ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾ ನ್ಯರೂ ಇಳಿದು ಅವರನ್ನು ಹೊಡೆದು ಹೊರ್ಮಾದ ವರೆಗೆ ಅಟ್ಟಿಬಿಟ್ಟರು.
Cross references
- Deuteronomy 1:42 ಧರ್ಮೋಪದೇಶಕಾಂಡ 1:42ಆದರೆ ಕರ್ತನು ನನಗೆ--ಹೋಗಬೇಡಿರಿ; ಯುದ್ಧಮಾಡ ಬೇಡಿರಿ; ಯಾಕಂದರೆ ನಾನು ನಿಮ್ಮ ಮಧ್ಯದಲ್ಲಿ ಇರುವದಿಲ್ಲ; ನೀವು ನಿಮ್ಮ ಶತ್ರುಗಳಿಂದ ಹೊಡೆಯ ಲ್ಪಡುವಿರಿ ಎಂದು ಅವರಿಗೆ ಹೇಳು ಅಂದನು.
- Joshua 7:12 ಯೆಹೋಶುವ 7:12ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ.
- Joshua 7:8 ಯೆಹೋಶುವ 7:8ಓ ಕರ್ತನೇ, ಈಗ ನಾನೇನು ಹೇಳಲಿ? ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದ್ದಾರಲ್ಲಾ.
- Psalm 44:1–11 ಕೀರ್ತನೆಗಳು 44:1–11ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ. ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ. ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ. ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು. ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು. ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ. ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ. ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ. ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ. ವೈರಿಯ ಮುಂದೆ ನಾವು ಹಿಂದಿರುಗ ಮಾಡುತ್ತೀ; ನಮ್ಮ ಹಗೆಯವರು ತಮಗೋಸ್ಕರ ಕೊಳ್ಳೆ ಇಡುತ್ತಾರೆ. ತಿನ್ನತಕ್ಕ ಕುರಿಗಳ ಹಾಗೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀ; ಅನ್ಯಜನಾಂಗ ಗಳಲ್ಲಿ ನಮ್ಮನ್ನು ಚದರಿಸಿದ್ದೀ.