Numbers · chapter 14 · verse 9
Numbers 14:9 in Kannada
ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು.
Neevaa daro kartanige virodhavaagi beelabediri, aa deshada janarige bhayapadabediri, avaru namage rottiyaaguvaru; avarigidda aashrayavu avara baliyinda hoyitu; kartanu namma sangada iddaane; avarige bhayapadabediri andanu.
Numbers 14:9 in English
- King James Version (KJV)
- Only rebel not ye against the LORD, neither fear ye the people of the land; for they [are] bread for us: their defence is departed from them, and the LORD [is] with us: fear them not.
- World English Bible (WEB)
- Only don’t rebel against the LORD, neither fear the people of the land; for they are bread for us. Their defense is removed from over them, and the LORD is with us. Don’t fear them.”
- American Standard Version (ASV)
- Only rebel not against Jehovah, neither fear ye the people of the land; for they are bread for us: their defence is removed from over them, and Jehovah is with us: fear them not.
- Bible in Basic English (BBE)
- Only, do not go against the Lord or go in fear of the people of the land, for they will be our food; their strength has been taken from them and the Lord is with us: have no fear of them.
- Darby Translation (DBY)
- only rebel not against Jehovah; and fear not the people of the land; for they shall be our food. Their defence is departed from them, and Jehovah is with us: fear them not.
- Webster's Bible (WBS)
- Only rebel not ye against the LORD, neither fear ye the people of the land; for they [are] bread for us: their defense has departed from them, and the LORD [is] with us: fear them not.
- Young's Literal Translation (YLT)
- only, against Jehovah rebel not ye: and ye, fear not ye the people of the land, for our bread they [are]; their defence hath turned aside from off them, and Jehovah [is] with us; fear them not.'
Read in context
- 7ಇಸ್ರಾ ಯೇಲ್ ಮಕ್ಕಳ ಸಮಸ್ತ ಸಭೆಯ ಕೂಟಕ್ಕೆ--ಪಾಳತಿ ನೋಡುವದಕ್ಕೆ ನಾವು ದಾಟಿಹೋದ ದೇಶವು ಅತ್ಯು ತ್ತಮವಾದ ದೇಶವೇ.
- 8ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು.
- 9ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು.
- 10ಸಭೆಯವರೆಲ್ಲರೂ ಅವರನ್ನು ಕಲ್ಲೆಸೆಯಬೇಕೆಂದಿ ದ್ದರು. ಆಗ ಕರ್ತನ ಮಹಿಮೆಯು ಸಭೆಯ ಗುಡಾರ ದಲ್ಲಿ ಇಸ್ರಾಯೇಲ್ ಮಕ್ಕಳಿಗೆಲ್ಲಾ ಪ್ರತ್ಯಕ್ಷವಾಯಿತು.
- 11ಆಗ ಕರ್ತನು ಮೋಶೆಗೆ--ಎಷ್ಟರ ವರೆಗೆ ಈ ಜನರು ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ನಡಿಸಿದ ಸಕಲ ಸೂಚಕಕಾರ್ಯಗಳ ದೆಸೆ ಯಿಂದ ನನ್ನನ್ನು ಎಷ್ಟು ಮಾತ್ರಕ್ಕೂ ನಂಬದೆ ಇರುವ ರಲ್ಲಾ?
Cross references
- Deuteronomy 7:18 ಧರ್ಮೋಪದೇಶಕಾಂಡ 7:18ನೀನು ಅವರಿಗೆ ಭಯಪಡಬೇಡ; ನಿನ್ನ ದೇವರಾದ ಕರ್ತನು ಫರೋಹನಿಗೂ ಎಲ್ಲಾ ಐಗುಪ್ತಕ್ಕೂ ಮಾಡಿದ್ದನು
- Deuteronomy 31:6 ಧರ್ಮೋಪದೇಶಕಾಂಡ 31:6ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.
- Romans 8:31 ರೋಮಾಪುರದವರಿಗೆ 8:31ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
- Numbers 24:8 ಅರಣ್ಯಕಾಂಡ 24:8ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು.
- Deuteronomy 31:8 ಧರ್ಮೋಪದೇಶಕಾಂಡ 31:8ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ ಎಂದು ಹೇಳಿದನು.
- Psalm 74:14 ಕೀರ್ತನೆಗಳು 74:14ನೀನು ಲಿವ್ಯಾತಾನದ ತಲೆ ಗಳನ್ನು ಒಡೆದು ತುಂಡು ತುಂಡುಮಾಡಿದಿ. ಅದನ್ನು ಅರಣ್ಯದ ಜನರಿಗೆ ಆಹಾರವಾಗಿ ಕೊಟ್ಟಿ.
- 2 Chronicles 20:17 2 ಪೂರ್ವಕಾಲವೃತ್ತಾಂತ 20:17ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು.
- 2 Chronicles 32:8 2 ಪೂರ್ವಕಾಲವೃತ್ತಾಂತ 32:8ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು.
- Deuteronomy 20:1–4 ಧರ್ಮೋಪದೇಶಕಾಂಡ 20:1–4ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ. ನೀವು ಯುದ್ಧಕ್ಕೆ ಸವಿಾಪ ಬಂದಾಗ ಯಾಜಕನು ಹತ್ತಿರ ಬಂದು ಜನರ ಸಂಗಡ ಮಾತನಾಡಿ ಅವ ರಿಗೆ-- ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ; ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.
- Joshua 1:5 ಯೆಹೋಶುವ 1:5ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
- Deuteronomy 9:7 ಧರ್ಮೋಪದೇಶಕಾಂಡ 9:7ನೀನು ಅರಣ್ಯದಲ್ಲಿ ನಿನ್ನ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡು, ಮರೆಯಬೇಡ; ನೀನು ಐಗುಪ್ತದೇಶದಿಂದ ಹೊರಟ ದಿವಸ ಮೊದಲು ಗೊಂಡು ಈ ಸ್ಥಳಕ್ಕೆ ಬರುವ ವರೆಗೆ ಕರ್ತನಿಗೆ ವಿರೋಧ ವಾಗಿ ತಿರುಗಿಬೀಳುತ್ತಿದ್ದಿರಿ.
- Deuteronomy 9:23–24 ಧರ್ಮೋಪದೇಶಕಾಂಡ 9:23–24ಇದಲ್ಲದೆ ಕರ್ತನು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ--ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿ ಕೊಳ್ಳಿರಿ ಎಂದು ಹೇಳಿದಾಗ ನೀವು ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಆತನನ್ನು ನಂಬಲಿಲ್ಲ, ಆತನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಕರ್ತನಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದಿರಿ.