Numbers · chapter 16 · verse 6
Numbers 16:6 in Kannada
ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು
Korahanoo avana samoohavellavoo dhoopa suduva paatregalannu tegedukondu
Numbers 16:6 in English
- King James Version (KJV)
- This do; Take you censers, Korah, and all his company;
- World English Bible (WEB)
- Do this: have Korah and all his company take censers,
- American Standard Version (ASV)
- This do: take you censers, Korah, and all his company;
- Bible in Basic English (BBE)
- So do this: let Korah and all his band take vessels for burning perfumes;
- Darby Translation (DBY)
- This do: take you censers, Korah, and all his band,
- Webster's Bible (WBS)
- This do; Take you censers, Korah, and all his company;
- Young's Literal Translation (YLT)
- This do: take to yourselves censers, Korah, and all his company,
Read in context
- 4ಮೋಶೆಯು ಇದನ್ನು ಕೇಳಿ ಬೋರಲು ಬಿದ್ದು
- 5ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ:
- 6ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು
- 7ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ ಅವುಗಳ ಮೇಲೆ ಧೂಪವನ್ನು ಕರ್ತನ ಮುಂದೆ ಹಾಕಿರಿ; ಆಗ ಕರ್ತನು ಯಾವನನ್ನು ಆದುಕೊಳ್ಳುವನೋ ಅವನೇ ಪರಿ ಶುದ್ಧನಾಗಿರುವನು; ಲೇವಿಯ ಮಕ್ಕಳೇ, ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ ಎಂದು ಹೇಳಿದನು.
- 8ಮೋಶೆಯು ಕೋರಹನಿಗೆ--ಲೇವಿಯ ಕುಮಾ ರರೇ, ಈಗ ಕೇಳಿರಿ.
Cross references
- Leviticus 10:1 ಯಾಜಕಕಾಂಡ 10:1ಇದಲ್ಲದೆ ಆರೋನನ ಕುಮಾರರಾದ ನಾದಾಬ್ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು.
- 1 Kings 18:21–23 1 ಅರಸುಗಳು 18:21–23ಆಗ ಎಲೀಯನು ಸಕಲ ಜನರ ಬಳಿಗೆ ಬಂದು--ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ. ಕರ್ತನು ದೇವರಾಗಿದ್ದರೆ ಆತನನ್ನು ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿರಿ ಅಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ. ಆಗ ಎಲೀಯನು ಜನರಿಗೆ--ಕರ್ತನ ಪ್ರವಾದಿ ಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಆದರೆ ಬಾಳನ ಪ್ರವಾದಿಗಳು ನಾನೂರಐವತ್ತು ಮಂದಿ ಇದ್ದಾರೆ. ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ; ಒಂದು ಹೋರಿಯನ್ನು ಅವರು ಆದು ಕೊಂಡು ಅದನ್ನು ತುಂಡು ತುಂಡಾಗಿ ಕಡಿದು ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆಯೇ ಮಾಡಿ ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು.
- Leviticus 16:12–13 ಯಾಜಕಕಾಂಡ 16:12–13ಅವನು ಕರ್ತನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಧೂಪ ಸುಡುವ ಪಾತ್ರೆಯ ತುಂಬ ಬೆಂಕಿಯಿಂದ ಉರಿಯುವ ಕೆಂಡ ಗಳನ್ನು ಮತ್ತು ತನ್ನ ಕೈಗಳ ತುಂಬ ಸಣ್ಣದಾಗುವಂತೆ ಕಟ್ಟಿದ ಧೂಪವನ್ನು ತೆಗೆದುಕೊಂಡು ಅದನ್ನು ತೆರೆಯ ಒಳಗಡೆ ತರಬೇಕು. ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕೃಪಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಕರ್ತನ ಎದುರಿನಲ್ಲಿ ಉರಿಯುವ ಕೆಂಡಗಳ ಮೇಲೆ ಹಾಕಬೇಕು.
- Numbers 16:35–40 ಅರಣ್ಯಕಾಂಡ 16:35–40ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು. ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ ಯಾಜಕನಾದ ಆರೋನನ ಮಗನಾದ ಎಲಿಯಾ ಜರನಿಗೆ--ಧೂಪದ ಪಾತ್ರೆಗಳು ಪರಿಶುದ್ಧವಾಗಿರು ವದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಅವುಗಳನ್ನು ಎತ್ತಬೇಕೆಂದು ಮತ್ತು ನೀನು ಆ ಬೆಂಕಿಯನ್ನು ದೂರಕ್ಕೆ ಚೆಲ್ಲು. ತಮ್ಮ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡಿದ ಮನುಷ್ಯರ ಧೂಪದ ಪಾತ್ರೆಗಳನ್ನು ಬಲಿ ಪೀಠದ ಮುಚ್ಚಳಕ್ಕಾಗಿ ಅಗಲವಾದ ತಗಡುಗಳನ್ನಾಗಿ ಮಾಡಬೇಕು. ಅವುಗಳನ್ನು ಕರ್ತನ ಸಮ್ಮುಖದಲ್ಲಿ ಅರ್ಪಿಸಿದ ಕಾರಣ ಅವು ಪರಿಶುದ್ಧವಾದವುಗಳು. ಇಸ್ರಾಯೇಲ್ ಮಕ್ಕಳಿಗೆ ಅವು ಗುರುತುಗಳಾಗಿರಬೇಕು. ಆಗ ಸುಟ್ಟು ಹೋದವರು ಅರ್ಪಿಸಿದ ಹಿತ್ತಾಳೆಯ ಧೂಪದಪಾತ್ರೆಗಳನ್ನು ಯಾಜಕನಾದ ಎಲಿಯಾಜರನು ತಕ್ಕೊಂಡು ಬಲಿಪೀಠವನ್ನು ಮುಚ್ಚುವದಕ್ಕಾಗಿ ಅಗಲ ವಾದ ತಗಡುಗಳನ್ನಾಗಿ ಮಾಡಿದನು. ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
- Numbers 16:46–48 ಅರಣ್ಯಕಾಂಡ 16:46–48ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು. ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು. ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು.