Numbers · chapter 20 · verse 10
Numbers 20:10 in Kannada
ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು.
Mosheyoo aaronanoo sabheyannu bandeya munde koodisi avarige--tirugibiddavare, keliri; naavu nimagoskara ee bandeyolaginda neerannu horadisabeko endu helidaru.
Numbers 20:10 in English
- King James Version (KJV)
- And Moses and Aaron gathered the congregation together before the rock, and he said unto them, Hear now, ye rebels; must we fetch you water out of this rock?
- World English Bible (WEB)
- Moses and Aaron gathered the assembly together before the rock, and he said to them, “Hear now, you rebels! Shall we bring water out of this rock for you?”
- American Standard Version (ASV)
- And Moses and Aaron gathered the assembly together before the rock, and he said unto them, Hear now, ye rebels; shall we bring you forth water out of this rock?
- Bible in Basic English (BBE)
- Then Moses and Aaron made the people come together in front of the rock, and he said to them, Give ear now, you people whose hearts are turned from the Lord; are we to get water for you out of the rock?
- Darby Translation (DBY)
- And Moses and Aaron gathered the congregation together before the rock, and he said to them, Hear now, ye rebels: shall we bring forth to you water out of this rock?
- Webster's Bible (WBS)
- And Moses and Aaron assembled the congregation before the rock, and he said to them, Hear now, ye rebels; must we fetch you water out of this rock?
- Young's Literal Translation (YLT)
- and Moses and Aaron assemble the assembly unto the front of the rock, and he saith to them, 'Hear, I pray you, O rebels, from this rock do we bring out to you water?'
Read in context
- 8ಕೋಲನ್ನು ತಕ್ಕೊಂಡು ನೀನು ನಿನ್ನ ಸಹೋದರನಾದ ಆರೋನನು ಸಭೆಯನ್ನು ಕೂಡಿಸಿ ಕೊಂಡು ಅವರ ಕಣ್ಣುಗಳ ಮುಂದೆ ಬಂಡೆಯ ಸಂಗಡ ಮಾತನಾಡಿರಿ; ಅದು ತನ್ನ ನೀರನ್ನು ಕೊಡುವದು; ನೀನು ಅವರಿಗೋಸ್ಕರ ಬಂಡೆಯೊಳಗಿಂದ ನೀರನ್ನು ಹೊರಗೆ ತರುವಿ; ಸಭೆಗೂ ಅವರ ಪಶುಗಳಿಗೂ ನೀನು ಕುಡಿಯಲು ಕೊಡುವಿ ಎಂದು ಹೇಳಿದನು.
- 9ಆಗ ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯು ಆತನ ಸನ್ನಿಧಿಯಿಂದ ಕೋಲನ್ನು ತಕ್ಕೊಂಡನು.
- 10ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು.
- 11ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
- 12ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.
Cross references
- Psalm 106:32–33 ಕೀರ್ತನೆಗಳು 106:32–33ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
- Ephesians 4:26 ಎಫೆಸದವರಿಗೆ 4:26ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ;
- Acts 3:12–16 ಅಪೊಸ್ತಲರ ಕೃತ್ಯಗಳು 3:12–16ಪೇತ್ರನು ಇದನ್ನು ನೋಡಿ ಜನರಿಗೆ--ಇಸ್ರಾ ಯೇಲ್ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯ ಪಡುತ್ತೀರಿ? ಇಲ್ಲವೆ ನಮ್ಮ ಸ್ವಂತ ಶಕ್ತಿಯಿಂದಾಗಲಿ ಪರಿಶುದ್ಧತೆಯಿಂದಾಗಲಿ ಈ ಮನುಷ್ಯನನ್ನು ನಡೆಯು ವಂತೆ ಮಾಡಿದೆವೋ ಎಂಬಂತೆ ನಮ್ಮ ಮೇಲೆ ಯಾಕೆ ನೀವು ದೃಷ್ಟಿ ಇಟ್ಟು ನೋಡುತ್ತೀರಿ? ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ. ಹೀಗೆ ಪರಿಶುದ್ಧನೂ ನೀತಿವಂತನೂ ಆಗಿರುವಾತ ನನ್ನು ನೀವು ಬೇಡವೆಂದು ಹೇಳಿ ಒಬ್ಬ ಕೊಲೆಗಾರನನ್ನು ನಿಮಗಾಗಿ ಬಿಟ್ಟುಕೊಡುವಂತೆ ಅಪೇಕ್ಷಿಸಿ ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ. ನೀವು ನೋಡಿ ತಿಳಿದಂಥ ಈ ಮನುಷ್ಯನು ಆತನ ಹೆಸರಿನಲ್ಲಿ ನಂಬಿಕೆ ಇಟ್ಟದ್ದರಿಂದ ಆ ಹೆಸರೇ ಇವನನ್ನು ಬಲಪಡಿಸಿತು; ಹೌದು, ಆತನಿಂದಾದ ನಂಬಿಕೆಯು ನಿಮ್ಮೆಲ್ಲರ ಮುಂದೆ ಇವನಿಗೆ ಇಂಥ ಪೂರ್ಣ ಸ್ವಸ್ಥತೆಯನ್ನು ಕೊಟ್ಟಿತು.
- Daniel 2:28–30 ದಾನಿಯೇಲನು 2:28–30ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ, ಓ ಅರಸನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಇನ್ನು ಮುಂದೆ ಏನು ಸಂಭವಿ ಸುವದೋ ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ! ಆ ರಹಸ್ಯಗಳನ್ನು ವ್ಯಕ್ತಪಡಿಸುವಾತನು ಮುಂದೆ ಸಂಭ ವಿಸುವದು ಏನೆಂಬದನ್ನು ನಿನಗೆ ಗೋಚರಪಡಿಸುತ್ತಾನೆ. ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ದಿಯುಳ್ಳ ವನೆಂದಲ್ಲ, ಕನಸಿನ ಅರ್ಥವು ಅರಸನಿಗೆ ಗೋಚರ ವಾಗಿ ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದು ಬರಲೆಂದು ನನಗೆ ಪ್ರಕಟಮಾಡಲ್ಪಟ್ಟಿದೆ.
- Romans 15:17–19 ರೋಮಾಪುರದವರಿಗೆ 15:17–19ಆದದರಿಂದ ದೇವರಿಗೆ ಸಂಬಂಧಪಟ್ಟವುಗಳಲ್ಲಿ ಯೇಸು ಕ್ರಿಸ್ತನ ಮೂಲಕ ನಾನು ಹೆಚ್ಚಳಪಡುತ್ತೇನೆ. ಮಾತಿ ನಿಂದಲೂ ಕ್ರಿಯೆಯಿಂದಲೂ ಬಲವಾದ ಸೂಚಕ ಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ದೇವರಾತ್ಮನ ಬಲದಿಂದಲೂ ಅನ್ಯಜನಗಳವರು ವಿಧೇಯರಾಗುವಂತೆ ಕ್ರಿಸ್ತನು ನನ್ನ ಮೂಲಕ ಮಾಡ ದಿರುವವುಗಳನ್ನು ಮಾತನಾಡಲು ನಾನು ಧೈರ್ಯ ಪಡುವದಿಲ್ಲ. ಹೀಗೆ ಯೆರೂಸಲೇಮ್ ಮೊದಲು ಗೊಂಡು ಇಲ್ಲುರಿಕದ ಸುತ್ತಲೂ ನಾನು ಕ್ರಿಸ್ತನ ಸುವಾರ್ತೆಯನ್ನು ಪೂರ್ಣವಾಗಿ ಸಾರಿದ್ದೇನೆ.
- Genesis 40:8 ಆದಿಕಾಂಡ 40:8ಅವರು ಯೋಸೇಫನಿಗೆ--ನಾವು ಕನಸನ್ನು ಕಂಡಿದ್ದೇವೆ; ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ ಅಂದರು. ಯೋಸೇಫನು ಅವರಿಗೆ ಅರ್ಥ ಹೇಳುವದು ದೇವರದಲ್ಲವೋ ಎಂದು ಹೇಳಿ ಅವುಗಳನ್ನು ನನಗೆ ಹೇಳಿರಿ ಅಂದನು.
- Acts 14:9–15 ಅಪೊಸ್ತಲರ ಕೃತ್ಯಗಳು 14:9–15ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು;ಪೌಲನು ಅವನನ್ನು ಸ್ಥಿರವಾಗಿ ನೋಡಿ ವಾಸಿಯಾಗು ವದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು-- ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ ಎಂದು ಮಹಾಧ್ವನಿಯಿಂದ ಹೇಳಿದನು. ಆ ಮನುಷ್ಯನು ಹಾರಿ ನಡೆದಾಡಿದನು. ಪೌಲನು ಮಾಡಿದ್ದನ್ನು ಜನರು ನೋಡಿ--ದೇವತೆಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದು ಬಂದರು ಎಂದು ಲುಕವೋನ್ಯ ಭಾಷೆಯಲ್ಲಿ ತಮ್ಮ ಸ್ವರವೆತ್ತಿ ಕೂಗಿದರು. ಅವರು ಬಾರ್ನಬನನ್ನು ೃಹಸ್ಪತಿ ಎಂದೂ ಪೌಲನು ಮುಖ್ಯ ಪ್ರಸಂಗಿಯಾಗಿದ್ದರಿಂದ ಬುಧನೆಂದೂ ಕರೆದರು; ಆಗ ಅವರ ಪಟ್ಟಣದ ಎದುರಿನಲ್ಲಿದ್ದ ೃಹಸ್ಪತಿಯ ಯಾಜಕನು ಎತ್ತುಗಳನ್ನೂ ಹೂವಿನಹಾರಗಳನ್ನೂ ದ್ವಾರಗಳ ಬಳಿಗೆ ತಂದು ಜನರೊಂದಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು. ಇದನ್ನು ಕೇಳಿ ಅಪೊಸ್ತಲ ರಾದ ಬಾರ್ನಬ ಪೌಲರು ತಮ್ಮ ವಸ್ತ್ರಗಳನ್ನು ಹರ ಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ-- ಅಯ್ಯಗಳಿರಾ, ನೀವು ಇವುಗಳನ್ನು ಯಾಕೆ ಮಾಡು ತ್ತೀರಿ? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವ ವುಳ್ಳವರು. ನೀವು ಈ ವ್ಯರ್ಥವಾದವುಗಳನ್ನು ಬಿಟ್ಟು ಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳ ಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿದ ಜೀವ ಸ್ವರೂಪನಾದ ದೇವರ ಕಡೆಗೆ ತಿ
- Numbers 11:22–23 ಅರಣ್ಯಕಾಂಡ 11:22–23ಅವರಿಗೆ ಸಾಕಾಗುವ ಹಾಗೆ ಕುರಿ ದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ವಿಾನುಗಳನ್ನೆಲ್ಲಾ ಕೂಡಿಸಿ ತರಬೇಕೋ ಅಂದನು. ಆಗ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಕರ್ತನ ಕೈ ಮೋಟು ಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನು ನೋಡುವಿ ಅಂದನು.
- Matthew 5:22 ಮತ್ತಾಯನು 5:22ನಾನು ನಿಮಗೆ ಹೇಳುವದೇನಂದರೆ-- ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು
- Genesis 41:16 ಆದಿಕಾಂಡ 41:16ಯೋಸೇಫನು ಫರೋಹನಿಗೆ ಪ್ರತ್ಯು ತ್ತರವಾಗಿ--ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು ಫರೋಹನಿಗೆ ಸಮಾಧಾನದ ಉತ್ತರವನ್ನು ಕೊಡುವನು ಅಂದನು.
- Luke 9:54–55 ಲೂಕನು 9:54–55ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು. ಆದರೆ ಆತನು ತಿರುಗಿಕೊಂಡು ಅವರನ್ನು ಗದರಿಸಿ--ನೀವು ಯಾವ ತರವಾದ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು.
- James 3:2 ಯಾಕೋಬನು 3:2ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.
Original words (Hebrew)
- Moses · H4872מֹשֶׁה Môsheh
- Aaron · H175אַהֲרוֹן ʼAhărôwn
- gathered · H6950קָהַל qâhal
- congregation · H6951קָהָל qâhâl
- before · H6440פָּנִים pânîym
- rock · H5553סֶלַע çelaʻ
- said · H559אָמַר ʼâmar
- Hear · H8085שָׁמַע shâmaʻ
- rebels · H4784מָרָה mârâh
- fetch · H3318יָצָא yâtsâʼ
- water · H4325מַיִם mayim
- rock · H5553סֶלַע çelaʻ