Numbers · chapter 21 · verse 31
Numbers 21:31 in Kannada
ಹಾಗೆ ಇಸ್ರಾಯೇ ಲ್ಯರು ಅಮೋರಿಯ ದೇಶದಲ್ಲಿ ವಾಸಮಾಡಿದರು.
Haage israaye lyaru amoriya deshadalli vaasamaadidaru.
Numbers 21:31 in English
- King James Version (KJV)
- Thus Israel dwelt in the land of the Amorites.
- World English Bible (WEB)
- Thus Israel lived in the land of the Amorites.
- American Standard Version (ASV)
- Thus Israel dwelt in the land of the Amorites.
- Bible in Basic English (BBE)
- So Israel put up their tents in the land of the Amorites.
- Darby Translation (DBY)
- And Israel dwelt in the land of the Amorites.
- Webster's Bible (WBS)
- Thus Israel dwelt in the land of the Amorites.
- Young's Literal Translation (YLT)
- And Israel dwelleth in the land of the Amorite,
Read in context
- 29ಮೋವಾಬೇ, ನಿನಗೆ ಅಯ್ಯೋ! ಓ ಕೇಮೋಷಿನ ಜನವೇ, ನಿಮಗೆ ದುರ್ಗತಿ ಉಂಟಾಯಿತಲ್ಲಾ; ಅವನು ತಪ್ಪಿಸಿಕೊಂಡ ತನ್ನ ಕುಮಾರ ಕುಮಾರ್ತೆಯರನ್ನು ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಕೊಟ್ಟನು.
- 30ನಾವು ಅವರ ಮೇಲೆ ಬಾಣಗಳನ್ನು ಎಸೆದೆವು; ಹೆಷ್ಬೋನು ದೀಬೋನಿನ ವರೆಗೂ ನಾಶವಾಯಿತು; ನಾವು ಅವ ರನ್ನು ಮೇದೆಬಾಗೆ ಮುಟ್ಟುವ ನೋಫಹದ ಮಟ್ಟಿಗೂ ಹಾಳುಮಾಡಿದೆವು ಅಂದರು.
- 31ಹಾಗೆ ಇಸ್ರಾಯೇ ಲ್ಯರು ಅಮೋರಿಯ ದೇಶದಲ್ಲಿ ವಾಸಮಾಡಿದರು.
- 32ಇದಲ್ಲದೆ ಮೋಶೆಯು ಯಗ್ಜೇರನ್ನು ಪಾಳತಿ ನೋಡುವದಕ್ಕೆ ಕಳುಹಿಸಿದನು; ಅವರು ಅವರ ಗ್ರಾಮ ಗಳನ್ನು ವಶಪಡಿಸಿಕೊಂಡು ಅಲ್ಲಿರುವ ಅಮೋರಿಯ ರನ್ನು ಹೊರಡಿಸಿಬಿಟ್ಟರು.
- 33ಆಗ ಅವರು ತಿರುಗಿ ಬಾಷಾನಿನ ಹಾದಿಯಲ್ಲಿ ಏರಿದರು; ಆಗ ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
Cross references
- Numbers 32:33–42 ಅರಣ್ಯಕಾಂಡ 32:33–42ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು. ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು. ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು. ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
- Joshua 12:1–6 ಯೆಹೋಶುವ 12:1–6ಯೊರ್ದನಿಗೆ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೂ ಮೂಡಣ ಬೈಲಿನ ಎಲ್ಲಾದರಲ್ಲಿಯೂ ಇಸ್ರಾಯೇಲ್ ಮಕ್ಕಳು ಅವರನ್ನು ಹೊಡೆದು ಸ್ವಾಧೀನ ಪಡಿಸಿಕೊಂಡ ದೇಶಗಳ ಅರಸರು ಯಾರಂದರೆ: ಅರ್ನೋನ್ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್ ನದಿಯ ವರೆಗೆ ಬೈಲಿನಿಂದ ಮೂಡಣದಲ್ಲಿರುವ ಕಿನ್ನೆರೋತ್ ಸಮುದ್ರದ ಪರಿಯಂತರ ವರೆಗೂ ಬೇತ್ಯೊಷಿ ಮೋತಿನ ಮಾರ್ಗವಾಗಿ ಮೂಡಣದಲ್ಲಿರುವ ಬೈಲಿನ ಉಪ್ಪು ಸಮುದ್ರದ ವರೆಗೂ ಅಷ್ಡೋದ್ ಪಿಸ್ಗಾಕ್ಕೆ ಕೆಳಗಾದ ದಕ್ಷಿಣದಿಂದ ಇರುವ ದೇಶವನ್ನು ಆಳಿ ಕೊಂಡಿದ್ದ ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನೂ ಅಷ್ಟರೋತಿನಲ್ಲಿಯೂ ಎದ್ರೈಯಲ್ಲಿ ವಾಸಮಾಡಿ ಹೆರ್ಮೋನ್ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ. ಇವರನ್ನು ಕರ್ತನ ಸೇವಕನಾದ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಹೊಡೆದು ಬಿಟ್ಟು ಅವರ ದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವಾಸ್ತ್ಯವಾಗಿ ಕೊಟ್ಟನು.
- Joshua 13:8–12 ಯೆಹೋಶುವ 13:8–12ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ: ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸನಾದ ಸೀಹೋನನಿಗೆ ಅಮ್ಮೋನಿನ ಮಕ್ಕಳ ಮೇರೆಯ ವರೆಗೂ ಇದ್ದ ಸಕಲ ಪಟ್ಟಣಗಳೂ ಗಿಲ್ಯಾದೂ ಗೆಷೂರ್ಯರ ಮಾಕತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಅಷ್ಟರೋತಿನಲ್ಲಿಯೂ ಎದ್ರೈಯ ಲ್ಲಿಯೂ ಆಳಿದ ರಾಕ್ಷಸರಲ್ಲಿ ಮಿಕ್ಕಿದ್ದ ಬಾಷಾನಿನ ಅರಸನಾದ ಓಗನ ರಾಜ್ಯವೆಲ್ಲಾ ಸಮಸ್ತ ರಾಜ್ಯವಾದ ಬಾಷಾನೂ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ ಅವರನ್ನು ಹೊಡೆದು ಹೊರಡಿಸಿದ್ದನು.
- Deuteronomy 3:16–17 ಧರ್ಮೋಪದೇಶಕಾಂಡ 3:16–17ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು. ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.