Numbers · chapter 27 · verse 12
Numbers 27:12 in Kannada
ಆಗ ಕರ್ತನು ಮೋಶೆಗೆ--ನೀನು ಈ ಅಬಾ ರೀಮ್ ಪರ್ವತದ ಮೇಲೆ ಏರಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶವನ್ನು ನೋಡು.
Aaga kartanu moshege--neenu ee abaa reem parvatada mele eri naanu israayel makkalige kotta deshavannu nodu.
Numbers 27:12 in English
- King James Version (KJV)
- And the LORD said unto Moses, Get thee up into this mount Abarim, and see the land which I have given unto the children of Israel.
- World English Bible (WEB)
- The LORD said to Moses, “Go up into this mountain of Abarim, and see the land which I have given to the children of Israel.
- American Standard Version (ASV)
- And Jehovah said unto Moses, Get thee up into this mountain of Abarim, and behold the land which I have given unto the children of Israel.
- Bible in Basic English (BBE)
- And the Lord said to Moses, Go up into this mountain of Abarim so that you may see the land which I have given to the children of Israel.
- Darby Translation (DBY)
- And Jehovah said to Moses, Get thee up into this mount Abarim, and see the land that I have given unto the children of Israel.
- Webster's Bible (WBS)
- And the LORD said to Moses, Ascend this mount Abarim, and see the land which I have given to the children of Israel.
- Young's Literal Translation (YLT)
- And Jehovah saith unto Moses, 'Go up unto this mount Abarim, and see the land which I have given to the sons of Israel;
Read in context
- 10ಆದರೆ ಅವನ ತಂದೆಗೆ ಸಹೋದರರು ಇಲ್ಲದಿದ್ದರೆ ಅವನ ಕುಟುಂಬ ಗಳಲ್ಲಿ ಅವನಿಗೆ ಸವಿಾಪವಾದ ಬಂಧುವಿಗೆ ಅವನ ಸ್ವಾಸ್ತ್ಯವನ್ನು ಕೊಡಬೇಕು; ಅವನೇ ಅದನ್ನು ಸ್ವತಂತ್ರಿಸಿಕೊಳ್ಳಲಿ.
- 11ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಇದು ಇಸ್ರಾಯೇಲ್ ಮಕ್ಕಳಿಗೆ ನ್ಯಾಯದ ಕಟ್ಟಳೆಯಾಗಿರಬೇಕು ಎಂದು ಹೇಳಿದನು.
- 12ಆಗ ಕರ್ತನು ಮೋಶೆಗೆ--ನೀನು ಈ ಅಬಾ ರೀಮ್ ಪರ್ವತದ ಮೇಲೆ ಏರಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶವನ್ನು ನೋಡು.
- 13ಅದನ್ನು ನೋಡಿದ ಮೇಲೆ ನೀನು ಸಹ ನಿನ್ನ ಸಹೋದರನಾದ ಆರೋನನ ಪ್ರಕಾರ ನಿನ್ನ ಜನರ ಸಂಗಡ ಕೂಡಿಸ ಲ್ಪಡುವಿ.
- 14ನೀವು ಜಿನ್ ಎಂಬ ಮರುಭೂಮಿಯ ಲ್ಲಿಯೂ ಸಭೆಯ ವಾಗ್ವಾದದಲ್ಲಿಯೂ ಅವರಿಗೆದು ರಾಗಿ ನೀರಿನ ಬಳಿಯಲ್ಲಿ ನನ್ನನ್ನು ಪರಿಶುದ್ಧ ಮಾಡದೆ ನನ್ನ ಆಜ್ಞೆಯನ್ನು ವಿಾರಿದಿರಿ. ಆ ನೀರು ಅಂದರೆ ಜಿನ್ ಎಂಬ ಅರಣ್ಯದ ಕಾದೇಶಿನಲ್ಲಿರುವ ಮೆರೀಬಾದ ನೀರು ಅಂದನು.
Cross references
- Numbers 33:47–48 ಅರಣ್ಯಕಾಂಡ 33:47–48ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್ ಗುಡ್ಡಗಳಲ್ಲಿ ಇಳಿದುಕೊಂಡರು. ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು.
- Deuteronomy 34:1–4 ಧರ್ಮೋಪದೇಶಕಾಂಡ 34:1–4ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯಾಮನ, ಮನಸ್ಸೆಯ ದೇಶವನ್ನೂ ಸಮುದ್ರದ ಕಟ್ಟಕಡೆಯ ವರೆಗಿರುವ ಸಮಸ್ತ ಯೆಹೂದ ದೇಶವನ್ನೂ ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು. ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.
- Deuteronomy 3:23–27 ಧರ್ಮೋಪದೇಶಕಾಂಡ 3:23–27ಆ ಕಾಲದಲ್ಲಿ ನಾನು ಕರ್ತನಿಗೆ ಮಾಡಿದ ಬಿನ್ನಹ ವೇನಂದರೆ-- ನನ್ನ ದೇವರಾದ ಕರ್ತನೇ, ನೀನು ನಿನ್ನ ಸೇವಕನಿಗೆ ನಿನ್ನ ಮಹಿಮೆಯನ್ನೂ ನಿನ್ನ ಕೈಯ ಶಕ್ತಿಯನ್ನೂ ತೋರಿಸುವದಕ್ಕೆ ಆರಂಭಮಾಡಿದಿ; ನಿನ್ನ ಕೃತ್ಯಗಳ ಹಾಗೆಯೂ ನಿನ್ನ ಪರಾಕ್ರಮದ ಹಾಗೆಯೂ ಮಾಡಲು ಶಕ್ತನಾದ ದೇವರು ಪರಲೋಕದಲ್ಲಾಗಲಿ ಭೂಮಿಯಲ್ಲಾಗಲಿ ಯಾರಿದ್ದಾರೆ? ನಾನು ದಾಟಿ ಹೋಗಿ ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ. ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ. ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.
- Deuteronomy 32:48–52 ಧರ್ಮೋಪದೇಶಕಾಂಡ 32:48–52ಅದೇ ದಿವಸದಲ್ಲಿ ಕರ್ತನು ಮೋಶೆಗೆ-- ಈ ಅಬಾರೀಮ್ ಪರ್ವತದ ಮೇಲೆ ಮೋವಾಬ್ ದೇಶದ ಲ್ಲಿಯೂ ಯೆರಿಕೋವಿಗೆ ಎದುರಾಗಿಯೂ ಇರುವ ನೆಬೋ ಬೆಟ್ಟದ ಮೇಲೆ ಏರಿಹೋಗು; ನಾನು ಇಸ್ರಾ ಯೇಲ್ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವ ಕಾನಾನ್ ದೇಶವನ್ನು ನೋಡು, ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು ತನ್ನ ಜನರ ಬಳಿಗೆ ಕೂಡಿಸಲ್ಪಟ್ಟ ಹಾಗೆ ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು ನಿನ್ನ ಜನರ ಬಳಿಗೆ ಕೂಡಿಸಲ್ಪಡಬೇಕು. ಕಾರಣವೇನಂದರೆ, ನೀವು ಜಿನ್ ಅರಣ್ಯದಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲ್ ಮಕ್ಕಳಲ್ಲಿ ಪರಿಶುದ್ಧ ಮಾಡದೆ ನನಗೆ ವಿರೋಧವಾಗಿ ಆಜ್ಞೆ ವಿಾರಿದಿರಿ.ನೀನು ಆ ದೇಶವನ್ನು ಕಣ್ಣಾರೆ ನೋಡುವಿ; ಆದರೆ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವದಿಲ್ಲ ಎಂದು ಹೇಳಿದನು. ನೀನು ಆ ದೇಶವನ್ನು ಕಣ್ಣಾರೆ ನೋಡುವಿ; ಆದರೆ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವದಿಲ್ಲ ಎಂದು ಹೇಳಿದನು.