Numbers · chapter 33 · verse 54
Numbers 33:54 in Kannada
ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
Neevu deshavannu nimma gotragala prakaara cheetininda svaadheenamaadi hanchikollabeku; hechchaadavarige svaastyavannu hechchisi kadimeyaada varige svaastyavannu kadimemaadabeku; obbobba nige cheetu elli beeluvado ade avanigaaga beku; nimma pitrugala gotrada prakaara neevu svaadheenamaadikollabeku.
Numbers 33:54 in English
- King James Version (KJV)
- And ye shall divide the land by lot for an inheritance among your families: [and] to the more ye shall give the more inheritance, and to the fewer ye shall give the less inheritance: every man’s [inheritance] shall be in the place where his lot falleth; according to the tribes of your fathers ye shall inherit.
- World English Bible (WEB)
- You shall inherit the land by lot according to your families; to the larger groups you shall give a larger inheritance, and to the smaller you shall give a smaller inheritance. Wherever the lot falls to any man, that shall be his. You shall inherit according to the tribes of your fathers.
- American Standard Version (ASV)
- And ye shall inherit the land by lot according to your families; to the more ye shall give the more inheritance, and to the fewer thou shalt give the less inheritance: wheresoever the lot falleth to any man, that shall be his; according to the tribes of your fathers shall ye inherit.
- Bible in Basic English (BBE)
- And you will take up your heritage in the land by the decision of the Lord, to every family its part; the greater the family the greater its heritage, and the smaller the family the smaller will be its heritage; wherever the decision of the Lord gives to any man his part, that will be his; distribution will be made to you by your fathers' tribes.
- Darby Translation (DBY)
- And ye shall take for yourselves the land as an inheritance by lot according to your families: to the many ye shall increase their inheritance, and to the few thou shalt diminish their inheritance: where the lot falleth to him, there shall be each man's [inheritance]; according to the tribes of your fathers shall ye take for yourselves the inheritance.
- Webster's Bible (WBS)
- And ye shall divide the land by lot for an inheritance among your families: to the more ye shall give the more inheritance, and to the fewer ye shall give the less inheritance: every man's [inheritance] shall be in the place where his lot falleth; according to the tribes of your fathers ye shall inherit.
- Young's Literal Translation (YLT)
- 'And ye have inherited the land by lot, by your families; to the many ye increase their inheritance, and to the few ye diminish their inheritance; whither the lot goeth out to him, it is his; by the tribes of your fathers ye inherit.
Read in context
- 52ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು.
- 53ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
- 54ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
- 55ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.
- 56ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.
Cross references
- Numbers 26:53–56 ಅರಣ್ಯಕಾಂಡ 26:53–56ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
- Joshua 18:11–48 ಯೆಹೋಶುವ 18:11–48ಆಗ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬ ಗಳ ಪ್ರಕಾರ ಅವರ ಗೋತ್ರಕ್ಕೆ ಚೀಟು ಬಿದ್ದಿತು. ಅವರ ಮೇರೆಯು ಯಾವವಂದರೆ: ಯೂದನ ಮಕ್ಕ ಳಿಗೂ ಯೋಸೇಫನ ಮಕ್ಕಳಿಗೂ ನಡುವೆ ಇರುತ್ತದೆ. ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನಿ ನಿಂದ ಹೊರಟು ಯೆರಿಕೋವಿನ ಉತ್ತರದ ಕಡೆಯಿಂದ ಬೆಟ್ಟಗಳಲ್ಲಿ ಪಶ್ಚಿಮದ ಕಡೆಗೆ ಏರಿ ಬೇತಾವೆ ನಿನ ಅರಣ್ಯಕ್ಕೆ ಮುಗಿಯುವದು. ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು ಲೂಜಿಗೆ ದಕ್ಷಿಣ ಪಾರ್ಶ್ವದಕಡೆಗೆ ಹೋಗಿ ಅಟಾರೋತದ್ದಾರಿನ ಕೆಳಗಿನ ಬೇತ್ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವದು. ಇದಲ್ಲದೆ ಆ ಮೇರೆಯು ದಕ್ಷಿಣ ಮೂಲೆಗೆ ಎದುರಾಗಿರುವ ಬೇತ್ಹೋರೋನಿಗೆ ಎದುರಾದ ಬೆಟ್ಟವನ್ನು ಹಿಡಿದು ದಕ್ಷಿಣವಾಗಿ ಸಮುದ್ರದ ಮೂಲೆಯನ್ನು ಸುತ್ತಿಕೊಂಡು ಕಿರ್ಯತ್ಯಾರೀಮ್ ಎಂಬ ಯೂದನ ಮಕ್ಕಳ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವದು. ಇದು ಪಶ್ಚಿಮ ಮೂಲೆಯಾಗಿತ್ತು. ಆ ಮೇರೆಯಾದ ದಕ್ಷಿಣ ಮೂಲೆಯು ಕಿರ್ಯತ್ಯಾರೀಮ್ ತುದಿಯಿಂದ ಹೊರಟು ಪಶ್ಚಿಮಕ್ಕೆ ಹೋಗಿ ನೆಫ್ತೋಹದ ಜಲಬುಗ್ಗೆಯ ಪರಿಯಂತರ ಹೊರಟು ಅಲ್ಲಿಂದ ಹಳ್ಳದ ತಗ್ಗಿನ ಉತ್ತರದಲ್ಲಿರುವ ಹಿನ್ನೋಮನ ಕುಮಾರನ ಹಳ್ಳದ ತಗ್ಗಿಗೆ ಎದುರಾದ ಬೆಟ್ಟದ ಕಡೇ ಭಾಗಕ್ಕೆ ಇಳಿದು ದಕ್ಷಿಣದಲ್ಲಿ ಯೆಬೂಸಿಯರ ಮೇರೆ ಯಾದ ಹಿನ್ನೋಮಿನ ಹಳ್ಳದ ತಗ್ಗಿಗೂ ಅಲ್ಲಿಂದ ಏನ್ರೋಗೆಲಿಗೂ ಏರಿ ಅಲ್ಲಿಂದ ಉತ್ತರಕ್ಕೆ ಹೋಗಿ ಏನ್ಷೆಮೆಸ್ಗೂ ಅಲ್ಲಿಂದ ಅದುವಿಾಮ್ ಎಂಬ ಕೊಳ್ಳಿಗೆ ಎದುರಾದ ಗೆಲೀಲೋತಿಗೂ ಅಲ್ಲಿಂದ ರೂಬೇನನ ಕುಮಾರನಾದ ಬೋಹನನ ಬಂಡೆಗಲ್ಲು ಏರಿ ಹೋಗಿ ಅಲ್ಲಿಂದ ಅರಾಬಾಕ್ಕೆ ಎದುರಾಗಿ ಉತ್ತರ ಭಾಗಕ್ಕೆಹೊರಟು ಅರಾಬಾಕ್ಕೆ ಇಳಿದು ಬಂದು ಅಲ್ಲಿಂದ ಆ ಮೇರೆ ಬೇತ್ಹೋಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು ಯೊರ್ದನಿನ ಮುಖದ್ವಾರಕ್ಕೆ ಉತ್ತರವಾದ ಉಪ್ಪು ಸಮುದ್ರದ ಉತ್ತರ ಮೂಲೆ ಯಲ್ಲಿ ಮುಗಿಯಿತು. ಅದು ದಕ್ಷಿಣ ಭಾಗದ ಮೇರೆ. ಮೂಡಣ ಭಾಗದಲ್ಲಿ ಯೊರ್ದನ್ ಅದರ ಮೇರೆ ಯಾಗಿತ್ತು. ಇದು ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಒಳಗಿರುವ ಬಾಧ್ಯತೆಯಾಗಿತ್ತು. ಬೆನ್ಯಾವಿಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಇರುವ ಪಟ್ಟಣಗಳು ಯಾವವಂದರೆ: ಯೆರಿಕೋ, ಬೇತ್ಹೋಗ್ಲಾ, ಕೆಚ್ಚೀಚ್ ತಗ್ಗು ಬೇತ್ಅರಾಬಾ, ಚೆಮಾರಯಿಮ್, ಬೇತೇಲ್, ಅವ್ವೀಮ್, ಪಾರಾ, ಒಫ್ರಾ, ಅಮ್ಮೋನ್ಯ, ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳು ಅವುಗಳ ಗ್ರಾಮಗಳೂ ಗಿಬ್ಯೋನ್, ರಾಮಾ; ಬೇರೋತ್, ಮಿಚ್ಪೆ, ಕೆಫೀರಾ, ಮೋಚಾ, ರೆಕೆಮ್, ಇರ್ಪೇಲ್, ತರಲಾ,ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು. ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು.
- Joshua 16:1–4 ಯೆಹೋಶುವ 16:1–4ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಕೊಟ್ಟ ಸ್ವಾಸ್ಥ್ಯದ ಭೂಮಿಯು ಯೆರಿಕೋವಿನ ಬಳಿಯಲ್ಲಿರುವ ಯೊರ್ದನಿನಿಂದ ಮೂಡಲಲ್ಲಿರುವ ಯೆರಿಕೋವಿನ ಜಲದ ವರೆಗೂ ಮತ್ತು ಬೇತೇಲಿನ ಬೆಟ್ಟಗಳ ವರೆಗೂ ಇರುವ ಅರಣ್ಯದ ಮಾರ್ಗವಾಗಿ ಹೋಗಿ ಬೇತೇಲಿನಿಂದ ಲೂಜಿಗೂ ಅಲ್ಲಿಂದ ಅರ್ಕೀಯ ಮೇರೆಗಳಾದ ಅಟಾರೋತನ್ನು ದಾಟಿ ಪಶ್ಚಿಮಕ್ಕೆ ಯಪ್ಲೇಟ್ಯರ ಮೇರೆಗೂ ಕೆಳಗಡೆ ಯಾದ ಬೇತ್ಹೋರೋನ್ ಮೇರೆಯ ವರೆಗೂ ಅಲ್ಲಿಂದ ಗೆಜೆರಿನ ವರೆಗೂ ಹೋಗಿ ಸಮುದ್ರಕ್ಕೆ ಮುಗಿಯುವದು. ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯಾಮರು ತಮಗೆ ಬಾಧ್ಯ ವಾಗಿ ತೆಗೆದುಕೊಂಡರು.
- Joshua 17:1–13 ಯೆಹೋಶುವ 17:1–13ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು; ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು. ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು. ಇವರು ಯಾಜಕನಾದ ಎಲ್ಲಾಜಾರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆನಮ್ಮ ಸಹೋದರರಲ್ಲಿ ನಮಗೆ ಬಾಧ್ಯತೆಯನ್ನು ಕೊಡು ವಂತೆ ಕರ್ತನು ಮೋಶೆಗೆ ಆಜ್ಞಾಪಿಸಿದನು ಅಂದರು. ಆದದರಿಂದ ಅವರ ತಂದೆಗಳ ಸಹೋದರರ ಮಧ್ಯ ದಲ್ಲಿ ಅವರಿಗೆ ಕರ್ತನ ವಾಕ್ಯದ ಹಾಗೆಯೇ ಬಾಧ್ಯತೆ ಯನ್ನು ಕೊಟ್ಟನು. ಯೊರ್ದನಿಗೆ ಆಚೆಯಲ್ಲಿರುವ ಗಿಲ್ಯಾದೂ ಬಾಷಾನೂ ಎಂಬ ದೇಶಗಳ ಹೊರತು ಮನಸ್ಸೆಗೆ ಚೀಟಿನಲ್ಲಿ ಬಿದ್ದ ದೇಶ ಹತ್ತು ಪಾಲು ಸಿಕ್ಕಿದವು. ಇದಲ್ಲದೆ ಮನಸ್ಸೆಯ ಕುಮಾರ್ತೆಯರು ಅವನ ಕುಮಾರರಲ್ಲಿ ಬಾಧ್ಯತೆಯನ್ನು ಹೊಂದಿದರು. ಆದರೆ ಉಳಿದ ಮನಸ್ಸೆಯ ಕುಮಾರರಿಗೆ ಗಿಲ್ಯಾದ್ ದೇಶ ದೊರೆಯಿತು. ಮನಸ್ಸೆಯ ಮೇರೆ ಯಾವದಂದರೆ; ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿಗೂ ಅಲ್ಲಿಂದ ಬಲ ಪಾರ್ಶ್ವವಾಗಿ ತಪ್ಪೂಹದ ನಿವಾಸಗಳಿಗೆ ಹೋಗುವದು. ತಪ್ಪೂಹ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯಾ ಮನ ಮಕ್ಕಳದ್ದಾಗಿತ್ತು. ಆ ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದು ಹೋಗುವದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯಾಮನವಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಸಮುದ್ರದ ವರೆಗೂ ಹೋಗಿ ರುವದು. ನದಿಯ ದಕ್ಷಿಣ ಸೀಮೆ ಎಫ್ರಾಯಾಮ ನದು; ಉತ್ತರ ಸೀಮೆಯು ಮನಸ್ಸೆಯದು, ಸಮುದ್ರವು ಅದರ ಮೇರೆಯಾಗಿರುವದು. ಉತ್ತರಕ್ಕೆ ಇರುವ ಆಶೇರಿನಿಂದ ಪೂರ್ವಕ್ಕೆ ಇರುವ ಇಸ್ಸಾಕಾರನ ವರೆಗೆ ಒಟ್ಟಿಗೆ ಕೂಡಿಕೊಳ್ಳುವದು. ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದ ಲ್ಲಿಯೂ ಇರುವ ಮೂರು ಸೀಮೆಗಳಾದ ಬೇತ್ಷೆ ಯಾನ್ ಇಬ್ಲೆಯಾಮ್ ದೋರ್ ಎಂದೋರ್ ತಾನಕ್ ಮೆಗಿದ್ದೋನ್ ಅವುಗಳ ಗ್ರಾಮಗಳೂ ಇವು ಮನಸ್ಸೆ ಯವು. ಆದರೆ ಮನಸ್ಸೆಯ ಮಕ್ಕಳು ಆ ಪಟ್ಟಣಗಳ ನಿವಾಸಿಗಳನ್ನು ಹೊರಡಿಸುವದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ಇಷ್ಟ ಪಟ್ಟರು. ಆದರೆ ಇಸ್ರಾಯೇಲ್ ಮಕ್ಕಳು ಬಲಗೊಂಡಾಗ ಕಾನಾನ್ಯರನ್ನು ಹೊರಡಿಸದೆ ಅವರನ್ನು ಕಪ್ಪ ಕೊಡುವವರಾಗುವಂತೆ ಮಾಡಿಕೊಂಡರು.
- Joshua 15:1–12 ಯೆಹೋಶುವ 15:1–12ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್ ಅರಣ್ಯದ ದಕ್ಷಿಣ ಭಾಗವಾಗಿದೆ. ಉಪ್ಪು ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ ದಕ್ಷಿಣ ಪಾರ್ಶ್ವದ ಲ್ಲಿರುವ ಮಾಲೆಅಕ್ರಬ್ಬೀಮೆಂಬ ಕೊಲ್ಲಿಗಳಿಗೂ ಅಲ್ಲಿಂದ ಜೀನಿಗೂ ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಬ್ರೋನ್ ಮಾರ್ಗವಾಗಿ ಕರ್ಕವನ್ನು ಸುತ್ತಿ ಅಚ್ಮೊನಿಗೂ ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ. ಅದರ ಮೂಡಣ ಮೇರೆ ಯಾವದಂದರೆ: ಯೊರ್ದನಿನ ಕೊನೇಗಿರುವ ಉಪ್ಪು ಸಮುದ್ರವು. ಉತ್ತರ ಕಡೆಗೆ ಯೊರ್ದನಿನ ಹತ್ತಿರದಲ್ಲಿದ್ದ ಸಮುದ್ರದ ಕೊನೆಯ ವರೆಗೆ ಇತ್ತು; ಅಲ್ಲಿಂದ ಬೇತ್ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಯ ದಕ್ಷಿಣ ಪಾರ್ಶ್ವವಾದ ಅದುವಿಾಮಿನ ಹೊಳೆಗೆ ಎದುರಾಗಿರುವ ಗಿಲ್ಗಾಲಿಗೂ ಅಲ್ಲಿಂದ ಏನ್ಷೆಮೆಷಿನ ನೀರಿಗೂ ಅಲ್ಲಿಂದ ಏನ್ರೋಗೆಲಿಗೂ ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್ ಆದ ಬಾಲಾಕ್ಕೂ ಬಾಲಾದಿಂದ ಪಶ್ಚಿಮಕ್ಕಿರುವ ಸೇಯಾರ್ ಬೆಟ್ಟ ವನ್ನು ಸುತ್ತಿ ಅಲ್ಲಿಂದ ಉತ್ತರಕ್ಕಿರುವ ಕೆಸಾಲೋನಿನ ಯಾರೀಮ್ ಬೆಟ್ಟದ ಪಾರ್ಶ್ವಕ್ಕೂ ಅಲ್ಲಿಂದ ಬೇತ್ಷೆ ಮೆಷಿಗೆ ಇಳಿದು ತಿಮ್ನಾಗೆ ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಪಾರ್ಶ್ವವನ್ನು ಹಿಡಿದು ಶಿಕ್ಕೆರೋನಿಗೂ ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯೆಬ್ನೇಲಿಗೆ ಹೊರಟು ಸಮುದ್ರಕ್ಕೆ ಕಡೆಯಾಗುವದು. ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
Original words (Hebrew)
- divide · H5157נָחַל nâchal
- land · H776אֶרֶץ ʼerets
- lot · H1486גּוֹרָל gôwrâl
- inheritance · H5157נָחַל nâchal
- families · H4940מִשְׁפָּחָה mishpâchâh
- more · H7227רַב rab
- more · H7235רָבָה râbâh
- inheritance · H5159נַחֲלָה nachălâh
- fewer · H4592מְעַט mᵉʻaṭ
- less · H4591מָעַט mâʻaṭ
- inheritance · H5159נַחֲלָה nachălâh
- lot · H1486גּוֹרָל gôwrâl
- falleth · H3318יָצָא yâtsâʼ
- tribes · H4294מַטֶּה maṭṭeh
- fathers · H1אָב ʼâb
- inherit · H5157נָחַל nâchal