Numbers · chapter 35 · verse 7
Numbers 35:7 in Kannada
ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.
Neevu leviyarige kodabekaada samasta pattanagalu avugala upa nagaragala sangada naalvattentu pattanagalaagirabeku.
Numbers 35:7 in English
- King James Version (KJV)
- [So] all the cities which ye shall give to the Levites [shall be] forty and eight cities: them [shall ye give] with their suburbs.
- World English Bible (WEB)
- All the cities which you shall give to the Levites shall be forty-eight cities together with their pasture lands.
- American Standard Version (ASV)
- All the cities which ye shall give to the Levites shall be forty and eight cities; them [shall ye give] with their suburbs.
- Bible in Basic English (BBE)
- Forty-eight towns are to be given to the Levites, all with land round them.
- Darby Translation (DBY)
- all the cities that ye shall give to the Levites shall be forty-eight cities, they and their suburbs.
- Webster's Bible (WBS)
- [So] all the cities which ye shall give to the Levites [shall be] forty and eight cities: them [shall ye give] with their suburbs.
- Young's Literal Translation (YLT)
- all the cities which ye give to the Levites [are] forty and eight cities, them and their suburbs.
Read in context
- 5ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
- 6ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು.
- 7ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.
- 8ನೀವು ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.
- 9ಕರ್ತನು ಮೋಶೆಯ ಸಂಗಡ ಮಾತನಾಡಿ--
Cross references
- 1 Chronicles 6:54–81 1 ಪೂರ್ವಕಾಲವೃತ್ತಾಂತ 6:54–81ತಮ್ಮ ಮೇರೆಗಳೊಳಗೆ ಇರುವ ತಮ್ಮ ಕೋಟೆ ಗಳಲ್ಲಿ ಆರೋನನ ಕುಮಾರರ ನಿವಾಸ ಸ್ಥಾನಗಳು ಯಾವವೆಂದರೆ--ಕೆಹಾತನ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ ಯೆಹೂದದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ ಅದರ ಸುತ್ತಲಿರುವ ಉಪನಗರಗಳೂ ಅವರಿಗೆ ಕೊಡಲ್ಪಟ್ಟವು. ಆದರೆ ಆ ಪಟ್ಟಣದ ಹೊಲಗಳನ್ನೂ ಅದರ ಗ್ರಾಮಗಳನ್ನೂ ಯೆಪುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು. ಯೆಹೂದದ ಕುಲಗಳಲ್ಲಿ ಆರೋನನ ಕುಮಾರರಿಗೆ ಕೊಟ್ಟ ಕುಲಗಳಲ್ಲಿ ಯಾವವಂದರೆ ಆಶ್ರಯವಾದ ಹೆಬ್ರೋನೂ ಲಿಬ್ನವೂ, ಅದರ ಉಪನಗರಗಳೂ, ಯತ್ತೀರೂ ಎಷ್ಟೆಮೋವವೂ ಅವುಗಳ ಉಪನಗರಗಳೂ, ಹೀಲೇನೂ ಅದರ ಉಪನಗರಗಳೂ ದೆಬೀರೂ ಅದರ ಉಪನಗರಗಳೂ, ಆಷಾನೂ ಅದರ ಉಪನಗರಗಳೂ, ಬೇತ್ಷೆಮೆಷೂ ಅದರ ಉಪನಗರಗಳೂ, ಬೆನ್ಯಾವಿಾನನ ಗೋತ್ರ ದಿಂದ ಕೊಟ್ಟವುಗಳು--ಗೆಬವೂ ಅದರ ಉಪನಗರ ಗಳೂ, ಆಲೆಮೆತೂ ಅದರ ಉಪನಗರಗಳೂ, ಅನಾ ತೋತೂ ಅದರ ಉಪನಗರಗಳೂ ಇವರ ಕುಟುಂಬ ಗಳಿಗೆ ಉಂಟಾದ ಎಲ್ಲಾ ಪಟ್ಟಣಗಳು ಹದಿಮೂರು. ಆ ಗೊತ್ರದ ಕುಟುಂಬಗಳಲ್ಲಿ ಉಳಿದ ಕೆಹಾತನ ಕುಮಾರರಿಗೂ ಚೀಟು ಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ಕೊಡಲ್ಪಟ್ಟಿದ್ದವು. ಗೇರ್ಷೋಮನ ಕುಮಾರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ, ಹದಿಮೂರು ಪಟ್ಟಣಗಳು ಕೊಡಲ್ಪಟ್ಟಿದ್ದವು. ಮೆರಾ ರೀಯ ಕುಮಾರರಿಗೂ ಅವರ ಕುಟುಂಬಗಳ ಪ್ರಕಾರ ಚೀಟು ಹಾಕಿ ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬೂಲೂನನ ಗೋತ್ರ ದಿಂದಲೂ, ಹನ್ನೆರಡು ಪಟ್ಟಣಗಳು ಕೊಡಲ್ಪಟ್ಟಿದ್ದವು. ಇಸ್ರಾಯೇಲಿನ ಮಕ್ಕಳು ಲೇವಿಯರಿಗೆ ಈ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು. ಅವರು ಯೆಹೂದನ ಮಕ್ಕಳ ಗೋತ್ರ ದಿಂದಲೂ, ಸಿಮೆಯೋನನ ಮಕ್ಕಳ ಗೋತ್ರ ದಿಂದಲೂ, ಬೆನ್ಯಾವಿಾನನ ಮಕ್ಕಳ ಗೋತ್ರ ದಿಂದಲೂ, ಹೆಸರಾಗಿ ಹೇಳಲ್ಪಟ್ಟ ಈ ಪಟ್ಟಣಗಳನ್ನು ಚೀಟುಗಳ ಪ್ರಕಾರ ಕೊಟ್ಟರು. ಕೆಹಾತನ ಕುಮಾರರ ಮಿಕ್ಕಾದ ಕುಟುಂಬಗಳಿಗೂ ಅವರ ಮೇರೆಗಳಲ್ಲಿ ಎಫ್ರಾಯಾಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು. ಇದಲ್ಲದೆ ಆಶ್ರಯ ಪಟ್ಟಣಗಳಾಗಿರುವ ಹಾಗೆ ಅವರಿಗೆ ಎಫ್ರಾಯಾಮ್ ಬೆಟ್ಟದಲ್ಲಿರುವ ಶೆಕೆಮನ್ನೂ ಅದರ ಉಪನಗರಗಳನ್ನೂ, ಗೆಜರನ್ನೂ ಅದರ ಉಪನಗರಗಳನ್ನೂ, ಯೊಕ್ಮೆಯಾ ಮನ್ನೂ ಅದರ ಉಪನಗರಗಳನ್ನೂ, ಬೇತ್ಹೋ ರೋನನ್ನೂ ಅದರ ಉಪನಗರಗಳನ್ನೂ, ಅಯ್ಯಾ ಲೋನನ್ನೂ ಅದರ ಉಪನಗರಗಳನ್ನೂ, ಗತ್ರಿಮ್ಮೋ ನನ್ನೂ ಅದರ ಉಪನಗರಗಳನ್ನೂ ಕೊಟ್ಟರು. ಇದ ಲ್ಲದೆ ಕೆಹಾತನ ಕುಮಾರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರ್ ಅದರ ಉಪನಗರಗಳನ್ನೂ, ಬಿಳ್ಳಾಮನ್ನೂ ಅದರ ಉಪನಗರ ಗಳನ್ನೂ ಕೊಟ್ಟರು. ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋ ಮನ ಕುಮಾರರಿಗೆ ಬಾಷಾನಿನಲ್ಲಿರುವ ಗೋಲಾನೂ ಅದರ ಉಪನಗರಗಳೂ, ಅಷ್ಟಾರೋಟ್ ಅದರ ಉಪನಗರಗಳೂ, ಇಸ್ಸಾಕಾರನ ಗೋತ್ರದಿಂದ ಕೆದೆಷೂ ಅದರ ಉಪನಗರಗಳೂ, ದಾಬೆರತೂ ಅದರ ಉಪನಗರಗಳೂ, ರಾಮೋತೂ ಅದರ ಉಪನಗರ ಗಳೂ, ಆನೇಮೂ ಅದರ ಉಪನಗರಗಳೂ, ಆಶೇರನ ಗೋತ್ರದಿಂದ ಮಾಷಾಲೂ ಅದರ ಉಪನಗರಗಳೂ, ಅಬ್ದೋನೂ ಅದರ ಉಪ ನಗರಗಳೂ, ಹೂಕೋಕೂ ಅದರ ಉಪನಗರಗಳೂ, ರೆಹೋಬೂ ಅದರ ಉಪನಗರಗಳೂ, ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷೂ ಅದರ ಉಪನಗರಗಳೂ, ಹಮ್ಮೋನೂ ಅದರ ಉಪನಗರಗಳೂ, ಕಿರ್ಯಾತಯಿಮೂ ಅದರ ಉಪನಗರಗಳೂ ಕೊಡಲ್ಪಟ್ಟಿದ್ದವು. ಮೆರಾರೀಯ ಉಳಿದ ಮಕ್ಕಳಿಗೂ ಜೆಬುಲೂನನ ಗೋತ್ರದಿಂದ ರಿಮ್ಮೋನೋ ಅದರ ಉಪನಗರಗಳೂ, ತಾಬೋರೂ ಅದರ ಉಪನಗರಗಳೂ, ಯೊರ್ದ ನಿನ ಆಚೇ ಕಡೆ ಯೆರಿಕೋವಿನ ಬಳಿಯಲ್ಲಿ ಯೊರ್ದ ನಿಂದ ಮೂಡಣದಿಕ್ಕಿನಲ್ಲಿ ರೂಬೇನನ ಗೋತ್ರದಿಂದ ಅರಣ್ಯದಲ್ಲಿರುವ ಬೆಚರೂ ಅದರ ಉಪನಗರಗಳೂ, ಯಹಚವೂ ಅದರ ಉಪನಗರಗಳೂ, ಕೆದೇ ಮೋತೂ ಅದರ ಉಪನಗರಗಳೂ, ಮೇಫಾತ್ಅದರ ಉಪನಗರಗಳೂ; ಗಾದನ ಗೋತ್ರದಿಂದ ಗಿಲ್ಯಾದಿನಲ್ಲಿರುವ ರಾಮೋತೂ ಅದರ ಉಪನಗರ ಗಳೂ, ಮಹನಯಿಮೂ ಅದರ ಉಪನಗರಗಳೂ,ಹೆಷ್ಬೋನೂ ಅದರ ಉಪನಗರಗಳೂ, ಯಗ್ಜೇರೂ ಅದರ ಉಪನಗರಗಳೂ ಕೊಡಲ್ಪಟ್ಟವು. ಹೆಷ್ಬೋನೂ ಅದರ ಉಪನಗರಗಳೂ, ಯಗ್ಜೇರೂ ಅದರ ಉಪನಗರಗಳೂ ಕೊಡಲ್ಪಟ್ಟವು.
- Joshua 21:3–42 ಯೆಹೋಶುವ 21:3–42ಹಾಗೆಯೇ ಇಸ್ರಾಯೇಲ್ ಮಕ್ಕಳು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಕರ್ತನ ಅಜ್ಞೆಯ ಪ್ರಕಾರ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೊಟ್ಟರು. ಅವು ಯಾವವೆಂದರೆ-- ಕೆಹಾತ್ಯರ ಗೋತ್ರಗಳಿಗೆ ಚೀಟು ಹಾಕಿದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರ ದಲ್ಲಿಯೂ ಬೆನ್ಯಾವಿಾನನ ಗೋತ್ರದಲ್ಲಿಯೂ ಹದಿ ಮೂರು ಪಟ್ಟಣಗಳು ದೊರಕಿದವು. ಕೆಹಾತನ ಉಳಿದ ಮಕ್ಕಳಿಗೆ ಎಫ್ರಾಯಾಮನ ಗೊತ್ರದಲ್ಲಿಯೂ ದಾನನ ಗೋತ್ರದಲ್ಲಿಯೂ ಮನಸ್ಸೆಯ ಅರ್ಧಗೋತ್ರದ ಲ್ಲಿಯೂ ಹತ್ತು ಪಟ್ಟಣಗಳೂ ದೊರಕಿದವು. ಗೆರ್ಷೋನ್ಯನ ಮಕ್ಕಳಿಗೆ ಚೀಟಿ ಹಾಕಿದಾಗ ಇಸ್ಸಾಕಾರನ ಗೋತ್ರಗಳ ಕುಟುಂಬಗಳಲ್ಲಿಯೂ ಆಶೇರನ ಗೋತ್ರದಲ್ಲಿಯೂ ನಫ್ತಾಲಿಯ ಗೋತ್ರ ದಲ್ಲಿಯೂ ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ದೊರ ಕಿದವು. ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು. ಈ ಪಟ್ಟಣಗಳನ್ನು ಅವುಗಳ ಉಪನಗರಗಳನ್ನು ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ ಲೇವಿಯರಿಗೆ ಚೀಟುಹಾಕಿ ಕೊಟ್ಟರು. ಆದರೆ ಲೇವಿಯ ಮಕ್ಕಳಲ್ಲಿ ಮೊದಲನೇ ಚೀಟು ಬಿದ್ದ ಕೆಹಾತ್ಯರ ಗೋತ್ರಗಳಲ್ಲಿ ಇರುವ ಆರೋನನ ಮಕ್ಕಳಿಗೆ ಯೂದನ ಮಕ್ಕಳ ಗೋತ್ರದಲ್ಲಿಯೂ ಸಿಮೆಯೋನನ ಮಕ್ಕಳ ಗೋತ್ರದಲ್ಲಿಯೂ ಕೊಡಲ್ಪಟ್ಟ ಪಟ್ಟಣಗಳ ಹೆಸರುಗಳು ಯಾವವಂದರೆ--ಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು. ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು. ಹೀಗೆಯೇ ಯಾಜಕನಾದ ಆರೋನನ ಮಕ್ಕಳಿಗೆ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಅದರ ಉಪನಗರಗಳನ್ನೂ ಲಿಬ್ನಾವನ್ನೂ ಅದರ ಉಪ ನಗರಗಳನ್ನೂ ಯತ್ತೀರನ್ನೂ ಅದರ ಉಪನಗರ ಗಳನ್ನೂ ಎಷ್ಟೆಮೋಹವನ್ನೂ ಅದರ ಉಪನಗರಗ ಳನ್ನೂ ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಇದಲ್ಲದೆ ಲೇವಿಯರಾದ ಕೆಹಾತನ ಮಕ್ಕಳ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯಾಮನ ಗೋತ್ರದಲ್ಲಿ ಚೀಟಿನಿಂದ ದೊರಕಿದ ಪಟ್ಟಣಗಳು, ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ ಕಿಬ್ಚೈಮನ್ನೂ ಅದರ ಉಪನಗರಗಳನ್ನೂ; ಬೇತ್ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ; ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಹಾಗೆಯೇ ಉಳಿದಂಥ ಕೆಹಾತನ ಮಕ್ಕಳ ಕುಟುಂಬಗಳಿಗೆ ದೊರೆತ ಪಟ್ಟಣಗಳೆಲ್ಲಾ ಹತ್ತು ಪಟ್ಟಣಗಳೂ ಅವುಗಳ ಉಪನಗರಗಳೂ. ಲೇವಿಯರ ಕುಟುಂಬಗಳಲ್ಲಿರುವ ಗೆರ್ಷೋನಿನ ಮಕ್ಕಳಿಗೆ ಮನಸ್ಸೆಯ ಅರ್ಧ ಗೋತ್ರದಲ್ಲಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿ ನಲ್ಲಿರುವ ಗೋಲಾನನ್ನೂ ಅದರ ಉಪನಗರಗಳನ್ನೂ ಬೆಯೆಷ್ಟೆರಾವನ್ನೂ ಅದರ ಉಪನಗರಗಳನ್ನೂ; ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಇಸ್ಸಾಕಾರನ ಗೋತ್ರದಲ್ಲಿ ಕಿಷ್ಯೋನನ್ನೂ ಅದರ ಉಪ ನಗರಗಳನ್ನೂ ದಾಬೆರತನ್ನೂ ಅದರ ಉಪನಗರ ಗಳನ್ನೂ ಯರ್ಮೂತನ್ನೂ ಅದರ ಉಪನಗರ ಗಳನ್ನೂ ಏಂಗನ್ನೀಮನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಆಶೇರನ ಗೋತ್ರದಲ್ಲಿ ಮಿಷಾಲನ್ನೂ ಅದರ ಉಪನಗರ ಗಳನ್ನೂ ಅಬ್ದೋನನ್ನೂ ಅದರ ಉಪನಗರಗಳನ್ನೂ ಹೆಲ್ಕಾತನ್ನೂ ಅದರ ಉಪನಗರಗಳನ್ನೂ ರೆಹೋ ಬನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ನಫ್ತಾಲಿಯ ಗೋತ್ರ ದಲ್ಲಿ ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಅದರ ಉಪನಗರ ಗಳನ್ನೂ ಹಮ್ಮೋತ್ದೋರನ್ನೂ ಅದರ ಉಪನಗರ ಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ; ಹೀಗೆ ಮೂರು ಪಟ್ಟಣಗಳನ್ನು ಕೊಟ್ಟರು. ಗೆರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ ದಿಮ್ನಾವನ್ನೂ ಅದರ ಉಪನಗರಗಳನ್ನೂ ನಹಲಾಲನ್ನೂ ಅದರ ಉಪ ನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಅದರ ಉಪನಗರಗಳನ್ನೂ ಯಹಚಾ ವನ್ನೂ ಅದರ ಉಪನಗರಗಳನ್ನೂ ಕೆದೇಮೋತನ್ನೂ ಅದರ ಉಪನಗರಗಳನ್ನೂ ಮೆಫಾಗತನ್ನೂ ಅದರ ಉಪ ನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಗಾದನ ಗೋತ್ರದಲ್ಲಿ ಕೊಲೆ ಮಾಡಿ ದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನಲ್ಲಿರುವ ರಾಮೋತನ್ನೂ ಅದರ ಉಪನಗರಗಳನ್ನೂ ಮಹನ ಯಿಮನ್ನೂ ಅದರ ಉಪನಗರಗಳನ್ನೂ ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು. ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ. ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು. ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು.