Philippians · chapter 3 · verse 16
Philippians 3:16 in Kannada
ಆದಾಗ್ಯೂ ಈಗಾ ಗಲೇ ನಾವು ಯಾವದನ್ನು ಹೊಂದಿಕೊಂಡಿದ್ದೇವೋ ಅದೇ ಸೂತ್ರವನ್ನು ಅನುಸರಿಸಿ ನಡೆದುಕೊಳ್ಳುತ್ತಾ ಒಂದೇ ಮನಸ್ಸುಳ್ಳವರಾಗಿರೋಣ.
Aadaagyoo eegaa gale naavu yaavadannu hondikondiddevo ade sootravannu anusarisi nadedukolluttaa onde manassullavaraagirona.
Philippians 3:16 in English
- King James Version (KJV)
- Nevertheless, whereto we have already attained, let us walk by the same rule, let us mind the same thing.
- World English Bible (WEB)
- Nevertheless, to the extent that we have already attained, let’s walk by the same rule. Let’s be of the same mind.
- American Standard Version (ASV)
- only, whereunto we have attained, by that same [rule] let us walk.
- Bible in Basic English (BBE)
- Only, as far as we have got, let us be guided by the same rule.
- Darby Translation (DBY)
- But whereto we have attained, [let us] walk in the same steps.
- Webster's Bible (WBS)
- Nevertheless, to what we have already attained, let us walk by the same rule, let us mind the same thing.
- Young's Literal Translation (YLT)
- but to what we have come — by the same rule walk, the same thing think;
Read in context
- 14ಕ್ರಿಸ್ತ ಯೇಸುವಿನಲ್ಲಿ ದೇವರ ಉನ್ನತವಾದ ಕರೆಯುವಿಕೆಯ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
- 15ಆದದರಿಂದ ನಮ್ಮಲ್ಲಿ ಪರಿ ಪೂರ್ಣರಾದವರು ಇದೇ ಅಭಿಪ್ರಾಯವುಳ್ಳವರಾಗಿ ರೋಣ; ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.
- 16ಆದಾಗ್ಯೂ ಈಗಾ ಗಲೇ ನಾವು ಯಾವದನ್ನು ಹೊಂದಿಕೊಂಡಿದ್ದೇವೋ ಅದೇ ಸೂತ್ರವನ್ನು ಅನುಸರಿಸಿ ನಡೆದುಕೊಳ್ಳುತ್ತಾ ಒಂದೇ ಮನಸ್ಸುಳ್ಳವರಾಗಿರೋಣ.
- 17ಸಹೋದರರೇ, ನೀವೆಲ್ಲರೂ ನನ್ನನ್ನು ಅನುಸರಿ ಸುವವರಾಗಿರ್ರಿ; ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಗುರುತಿ ಸಿರಿ.
- 18(ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಾನು ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.
Cross references
- Colossians 2:6 ಕೊಲೊಸ್ಸೆಯವರಿಗೆ 2:6ಆದದರಿಂದ ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದು ಕೊಳ್ಳಿರಿ.
- Revelation 3:3 ಪ್ರಕಟನೆ 3:3ಆದದರಿಂದ ನೀನು ಹೊಂದಿದ್ದನ್ನೂ ಕೇಳಿದ್ದನ್ನೂ ನೆನಪಿಗೆ ತಂದುಕೊಂಡು ಅದನ್ನು ಬಿಗಿಯಾಗಿ ಹಿಡಿದುಕೋ, ಮಾನಸಾಂತರ ಪಡು. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ನಾನು ನಿನ್ನ ಮೇಲೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯದು.
- Revelation 2:4–5 ಪ್ರಕಟನೆ 2:4–5ಆದಾಗ್ಯೂ ನಿನ್ನಲ್ಲಿ ನನಗೆ ವಿರೋಧವಾದದ್ದು ಇದೆ. ಯಾಕಂದರೆ ನೀನು ನಿನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ. ಆದದ ರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ಮಾನಸಾಂತರಪಡು. ನೀನು ಮೊದಲು ಮಾಡುತ್ತಿದ್ದ ಕ್ರಿಯೆಗಳನ್ನು ಮಾಡು. ನೀನು ಮಾನಸಾಂತರಪಡದೆ ಹೋದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನಿನ್ನ ದೀಪ ಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು
- Hebrews 10:38–39 ಇಬ್ರಿಯರಿಗೆ 10:38–39ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ. ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- Romans 15:5 ರೋಮಾಪುರದವರಿಗೆ 15:5ನೀವು ಕ್ರಿಸ್ತ ಯೇಸು ವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ತಾಳ್ಮೆಯೂ ಆದರಣೆಯೂ ಉಳ್ಳ ದೇವರು ನಿಮಗೆ ಅನುಗ್ರಹಿಸಲಿ.
- Philippians 1:27 ಫಿಲಿಪ್ಪಿಯವರಿಗೆ 1:27ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿ ದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ಒಂದೇ ಆತ್ಮದಲ್ಲಿ ದೃಢ ವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೊಸ್ಕರ ಐಕ್ಯಮತ್ಯದಿಂದಲೂ ಒಂದೇ ಮನಸ್ಸಿನಿಂದಲೂ ಹೆ
- Galatians 6:16 ಗಲಾತ್ಯದವರಿಗೆ 6:16ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರ ಮೇಲೆ ಅಂದರೆ ದೇವರ ಇಸ್ರಾ ಯೇಲಿನ ಮೇಲೆ ಶಾಂತಿಯೂ ಕರುಣೆಯೂ ಇರಲಿ.
- Philippians 2:2 ಫಿಲಿಪ್ಪಿಯವರಿಗೆ 2:2ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ.
- Philippians 4:2 ಫಿಲಿಪ್ಪಿಯವರಿಗೆ 4:2ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.
- Ephesians 5:2–8 ಎಫೆಸದವರಿಗೆ 5:2–8ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ. ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು. ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ. ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ. ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ. ಆದದರಿಂದ ನೀವು ಅವರೊಂದಿಗೆ ಪಾಲುಗಾರ ರಾಗಿರಬೇಡಿರಿ. ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿರುವದರಿಂದ ಬೆಳಕಿನ ಮಕ್ಕಳಂತೆ ನಡೆದುಕೊಳ್ಳಿರಿ.
- Romans 12:16 ರೋಮಾಪುರದವರಿಗೆ 12:16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- 2 Peter 2:10–20 2 ಪೇತ್ರನು 2:10–20ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ. ದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಗೌರವವುಳ್ಳವರಿಗೆ ವಿರೋಧವಾಗಿ ನಿಂದೆಯನ್ನೂ ದೂಷಣೆಯನ್ನೂ ತರು ವದಿಲ್ಲ. ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು. ಇವರು ನೀರಿಲ್ಲದ ಭಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿ ಹೋಗುವ ಮೇಘಗಳೂ ಆಗಿದ್ದಾರೆ. ಇಂಥವರ ಪಾಲಿಗೆ ನಿರಂತರವಾದ ಕಾರ್ಗತ್ತಲು ಇಟ್ಟಿರುವದು. ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ. ಇಂಥವರು ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನ ಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವ ದೊಳಗಿದ್ದಾರೆ. ಯಾಕಂದರೆ ಒಬ್ಬನು ಯಾವದಕ್ಕೆ ಸೋತು ಹೋಗಿರುವನೊ? ಅವನು ಅದರ ದಾಸತ್ವ ದೊಳಗಿರುವನಷ್ಟೆ. ರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವ ಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿ ಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ.