Proverbs · chapter 16 · verse 14
Proverbs 16:14 in Kannada
ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.
Arasana kopavu mrutyuvina dootarante iruttade; jnyaaniyu adannu shamanapadisuvanu.
Proverbs 16:14 in English
- King James Version (KJV)
- The wrath of a king [is as] messengers of death: but a wise man will pacify it.
- World English Bible (WEB)
- The king’s wrath is a messenger of death, but a wise man will pacify it.
- American Standard Version (ASV)
- The wrath of a king is [as] messengers of death; But a wise man will pacify it.
- Bible in Basic English (BBE)
- The wrath of the king is like those who give news of death, but a wise man will put peace in place of it.
- Darby Translation (DBY)
- The fury of a king is [as] messengers of death; but a wise man will pacify it.
- Webster's Bible (WBS)
- The wrath of a king [is as] messengers of death: but a wise man will pacify it.
- Young's Literal Translation (YLT)
- The fury of a king [is] messengers of death, And a wise man pacifieth it.
Read in context
- 12ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು; ನೀತಿಯಿಂದ ಸಿಂಹಾಸನವು ಸ್ಥಾಪಿಸಲ್ಪಡು ತ್ತದೆ.
- 13ನೀತಿಯ ತುಟಿಗಳು ಅರಸರ ಆನಂದ. ನ್ಯಾಯ ವಾದದ್ದನ್ನು ಮಾತನಾಡುವವನನ್ನು ಅವರು ಪ್ರೀತಿಸು ತ್ತಾರೆ.
- 14ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.
- 15ಅರಸನ ಮುಖದ ಬೆಳಕಿನಲ್ಲಿ ಜೀವ; ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
- 16ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.
Cross references
- Proverbs 20:2 ಜ್ಞಾನೋಕ್ತಿಗಳು 20:2ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
- Proverbs 19:12 ಜ್ಞಾನೋಕ್ತಿಗಳು 19:12ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
- Ecclesiastes 10:4 ಪ್ರಸಂಗಿ 10:4ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- 2 Kings 6:31–33 2 ಅರಸುಗಳು 6:31–33ಆಗ ಅವನು -- ಶಾಫಾಟನ ಮಗನಾದ ಎಲೀಷನ ತಲೆಯು ಈ ದಿನ ಅವನ ಮೇಲೆ ಇದ್ದರೆ ದೇವರು ನನಗೆ ಇದರಂತೆಯೂ ಇನ್ನು ಹೆಚ್ಚಾಗಿಯೂ ಮಾಡಲಿ ಅಂದನು. ಎಲೀಷನು ಹಿರಿಯರ ಜೊತೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು; ಆಗ ಅರಸನು ತನ್ನ ಬಳಿಯಿಂದ ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಸೇವಕನು ಎಲೀಷನ ಬಳಿಗೆ ಬರುವದಕ್ಕಿಂತ ಮುಂಚೆ ಅವನು ಹಿರಿಯರಿಗೆ--ಈ ಕೊಲೆಪಾತಕನ ಮಗನು ನನ್ನ ತಲೆ ಯನ್ನು ತೆಗೆಯುವದಕ್ಕೆ ಕಳುಹಿಸಿದ್ದನ್ನು ನೋಡಿದಿರೋ? ನೋಡಿರಿ; ಆ ಸೇವಕನು ಬಂದ ಕೂಡಲೆ ಬಾಗಲು ಮುಚ್ಚಿ ಬಾಗಲ ಬಳಿಯಲ್ಲಿ ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಅವನ ಯಜಮಾನನ ಪಾದಗಳ ಶಬ್ದವು ಅವನ ಹಿಂದೆ ಇಲ್ಲವೋ ಅಂದನು.ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು. ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.
- Mark 6:27 ಮಾರ್ಕನು 6:27ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
- Luke 12:4–5 ಲೂಕನು 12:4–5ನನ್ನ ಸ್ನೇಹಿತರಾದ ನಿಮಗೆ ನಾನು ಹೇಳುವದೇನಂದರೆ--ದೇಹವನ್ನು ಕೊಂದು ಅದಕ್ಕಿಂತ ಹೆಚ್ಚೇನೂ ಮಾಡಲಾರ ದವರಿಗೆ ಹೆದರಬೇಡಿರಿ. ಆದರೆ ಯಾರಿಗೆ ನೀವು ಭಯಪಡಬೇಕೆಂದು ಮುಂದಾಗಿ ನಾನು ನಿಮ್ಮನ್ನು ಎಚ್ಚರಿಸುತ್ತೇನೆ; ಕೊಂದಮೇಲೆ ನರಕದಲ್ಲಿ ಹಾಕುವದಕ್ಕೆ ಅಧಿಕಾರವಿರುವಾತನಿಗೇ ಭಯಪಡಿರಿ; ಹೌದು, ಆತನಿಗೆ ಭಯಪಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- Proverbs 17:11 ಜ್ಞಾನೋಕ್ತಿಗಳು 17:11ಕೆಟ್ಟವನು ದಂಗೆಯನ್ನೇ ಹುಡುಕುತ್ತಾನೆ; ಆದ ಕಾರಣ ಕ್ರೂರ ಸೇವಕನು ಅವನಿಗೆ ವಿರೋಧವಾಗಿ ಕಳುಹಿಸಲ್ಪಡುವನು.
- Daniel 3:13–25 ದಾನಿಯೇಲನು 3:13–25ಆಗ ನೆಬೂಕದ್ನೆಚ್ಚರನು ಕೋಪವುಳ್ಳವನಾಗಿಯೂ ರೌದ್ರ ವುಳ್ಳವನಾಗಿಯೂ ಶದ್ರಕ್ ಮೇಷಕ್ ಅಬೇದ್ ನೆಗೋರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆ ತಂದರು. ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ--ಶದ್ರಕ್ ಮೇಷಕ್ ಅಬೇದೆನೆಗೋ ಎಂಬ ವರೇ ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾ ಧಿಸದೆ ಇರಬೇಕೆಂದಿರುವಿರೋ? ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು. ಆಗ ಶದ್ರಕ್ ಮೇಷಕ್ ಅಬೇದ್ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ--ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು. ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು. ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು. ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು. ಅವರು ತಮ್ಮ ಶಲ್ಯ, ಇಜಾರು, ಮುಂಡಾಸ ಮೊದಲಾದವುಗಳನ್ನು ಧರಿಸಿಕೊಂಡವರಾಗಿರುವಾಗ ಅವರು ಧಗಧಗನೆ ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಲ್ಪಟ್ಟರು. ಅರಸನ ಆಜ್ಞೆಯು ತೀಕ್ಷ್ಣವಾಗಿಯೂ ಆವಿಗೆಯು ಧಗಧಗನೆ ಉರಿದದ್ದರಿಂದಲೂ ಬೆಂಕಿಯ ಜ್ವಾಲೆಯು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು. ಶದ್ರಕ್ ಮೇಷಕ್ ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವ ರಾಗಿ ಧಗಧಗನೆ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಬಿದ್ದರು. ಆಗ ಅರಸನಾದ ನೆಬೂಕದ್ನೆ ಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು ತನ್ನ ಆಲೋಚನಾಗಾರರ ಸಂಗಡ ಮಾತನಾಡಿ--ನಾವು ಮೂವರು ಮನುಷ್ಯರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿದೆ ವಲ್ಲವೇ? ಅಂದನು. ಆಗ ಅವರು ಅರಸನಿಗೆ--ಓ ಅರಸನೇ, ಹೌದು, ಸತ್ಯ ಎಂದು ಉತ್ತರಿಸಿದರು. ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ--ಇಗೋ, ಕಟ್ಟಲ್ಪಡದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿ ರುವದನ್ನು ನೋಡುತ್ತೇನೆ; ಅವರಿಗೆ ಯಾವ ಹಾನಿಯೂ ಇಲ್ಲ; ಅಲ್ಲದೆ ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು.
- 2 Corinthians 5:20 2 ಕೊರಿಂಥದವರಿಗೆ 5:20ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Acts 12:20 ಅಪೊಸ್ತಲರ ಕೃತ್ಯಗಳು 12:20ತೂರ್ ಸೀದೋನ್ ಪಟ್ಟಣಗಳವರು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿ ಕೊಂಡಿರುವದರಿಂದ ಅವರು ಒಮ್ಮನಸ್ಸಿನಿಂದ ಅವನ ಬಳಿಗೆ ಬಂದು ಅರಸನ ಮನೆಯ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ತಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡು ಅರಸನು ಸಮಾಧಾನವಾಗಬೇಕೆಂದು ಅಪೇಕ್ಷೆಪಟ್ಟರು. ಯಾ