Proverbs · chapter 18 · verse 7
Proverbs 18:7 in Kannada
ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ.
Buddhiheenana baayiyu avana naashana mattu avana tutigalu praanakke paasha.
Proverbs 18:7 in English
- King James Version (KJV)
- A fool’s mouth [is] his destruction, and his lips [are] the snare of his soul.
- World English Bible (WEB)
- A fool’s mouth is his destruction, and his lips are a snare to his soul.
- American Standard Version (ASV)
- A fool’s mouth is his destruction, And his lips are the snare of his soul.
- Bible in Basic English (BBE)
- The mouth of a foolish man is his destruction, and his lips are a net for his soul.
- Darby Translation (DBY)
- A fool's mouth is destruction to him, and his lips are a snare to his soul.
- Webster's Bible (WBS)
- A fool's mouth [is] his destruction, and his lips [are] the snare of his soul.
- Young's Literal Translation (YLT)
- The mouth of a fool [is] ruin to him, And his lips [are] the snare of his soul.
Read in context
- 5ನನ್ನ ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ ದುಷ್ಟ ರನ್ನು ಸ್ವೀಕರಿಸುವದು ಯುಕ್ತವಲ್ಲ.
- 6ಅವಿವೇಕಿಯ ತುಟಿಗಳು ಕಲಹದಲ್ಲಿ ಸೇರುವದರಿಂದ ಏಟುಗಳನ್ನು ತಿನ್ನುವದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.
- 7ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ.
- 8ಚಾಡಿಕೋರನ ಮಾತುಗಳು ಗಾಯಗಳಂತೆ ಇದ್ದು ಹೊಟ್ಟೆಯೊಳಗೆ ಇಳಿದುಹೋಗುವವು.
- 9ಸೋಮಾರಿಯು ತನ್ನ ಕೆಲಸ ದಲ್ಲಿ ಬಹಳವಾಗಿ ಹಾಳುಮಾಡುವವನಿಗೆ ಸಹೋದ ರನು ಆಗಿದ್ದಾನೆ.
Cross references
- Proverbs 13:3 ಜ್ಞಾನೋಕ್ತಿಗಳು 13:3ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು.
- Proverbs 10:14 ಜ್ಞಾನೋಕ್ತಿಗಳು 10:14ಜ್ಞಾನಿ ಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ನಾಶನಕ್ಕೆ ಸವಿಾಪವಾಗಿದೆ.
- Proverbs 12:13 ಜ್ಞಾನೋಕ್ತಿಗಳು 12:13ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು.
- Psalm 64:8 ಕೀರ್ತನೆಗಳು 64:8ಹೀಗೆ ತಮ್ಮ ನಾಲಿಗೆಯು ತಮ್ಮ ಮೇಲೆ ಬೀಳುವಂತೆ ಮಾಡಿ ಕೊಳ್ಳುತ್ತಾರೆ. ಅವರನ್ನು ನೋಡುವವರೆಲ್ಲರೂ ಓಡಿ ಹೋಗುವರು.
- Psalm 140:9 ಕೀರ್ತನೆಗಳು 140:9ನನ್ನ ಸುತ್ತಲಿರುವವರ ವಿಷವೂ ಅವರ ತುಟಿಗಳ ಕಾಟವೂ ಅವರನ್ನು ಮುಚ್ಚಲಿ.
- Ecclesiastes 10:11–14 ಪ್ರಸಂಗಿ 10:11–14ನಿಶ್ಚಯ ವಾಗಿ ಮಂತ್ರವಿಲ್ಲದೆ ಹಾವು ಕಚ್ಚುವದು. ಹಾಗೆಯೇ ಹರಟೆಯವನಲ್ಲಿ ಪ್ರಯೋಜನವಿಲ್ಲ. ಜ್ಞಾನಿಯ ಬಾಯಿಮಾತುಗಳು ಆನಂದಕರವಾಗಿವೆ; ಮೂರ್ಖನ ತುಟಿಗಳು ಅವನನ್ನೇ ನುಂಗಿಬಿಡುತ್ತವೆ. ಅವನ ಬಾಯಿಯು ಮಾತುಗಳು ಆರಂಭದಲ್ಲಿ ಮೂಢತನ ದವುಗಳಾಗಿವೆ; ಅವನ ಮಾತಿನ ಅಂತ್ಯವು ಕೆಟ್ಟ ಮೂರ್ಖತನವಾಗಿದೆ. ಮೂಢನು ಸಹ ಮಾತು ಗಳನ್ನು ಹೆಚ್ಚಿಸುತ್ತಾನೆ; ಆದರೂ ಅವನು ಏನೆಂದು ಹೇಳಲು ಸಾಧ್ಯವಿಲ್ಲ. ಅವನ ತರುವಾಯ ಆಗುವದನ್ನು ಅವನಿಗೆ ತಿಳಿಸುವವರು ಯಾರು?
- Acts 23:14–22 ಅಪೊಸ್ತಲರ ಕೃತ್ಯಗಳು 23:14–22ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ. ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು. ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು. ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು. ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.
- Proverbs 6:2 ಜ್ಞಾನೋಕ್ತಿಗಳು 6:2ನಿನ್ನ ಬಾಯಿ ಮಾತುಗಳಿಂದ ನೀನು ಸಿಕ್ಕಿಕೊಂಡಿದ್ದೀ. ನಿನ್ನ ಬಾಯಿ ಮಾತುಗಳಿಂದಲೇ ನೀನು ಹಿಡಿಯಲ್ಪಟ್ಟಿದ್ದೀ.
- Proverbs 10:8 ಜ್ಞಾನೋಕ್ತಿಗಳು 10:8ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು. ಹರಟೆಯ ಮೂರ್ಖನು ಬೀಳುವನು.
- Mark 6:23–28 ಮಾರ್ಕನು 6:23–28ಅವನು--ನೀನು ನನ್ನಿಂದ ಯಾವದನ್ನು ಕೇಳಿಕೊಂಡರೂ ಅಂದರೆ ಅದು ನನ್ನ ರಾಜ್ಯದಲ್ಲಿ ಅರ್ಧವಾಗಿದ್ದರೂ ನಾನು ನಿನಗೆ ಕೊಡುತ್ತೇನೆ ಎಂದು ಅವಳಿಗೆ ಆಣೆಯಿಟ್ಟು ಹೇಳಿದನು. ಆಗ ಅವಳು ಹೊರಟುಹೋಗಿ ತನ್ನ ತಾಯಿಗೆ--ನಾನು ಏನು ಕೇಳಿಕೊಳ್ಳಲಿ ಎಂದು ಕೇಳಲು ಅವಳು --ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಕೇಳಿಕೋ ಅಂದಳು. ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು-- ಬಾಪ್ತಿಸ್ಮಮಾಡಿಸುವ ಯೊಹಾನನ ತಲೆಯನ್ನು ನೀನು ಕೂಡಲೆ ಪರಾತಿನಲ್ಲಿ ನನಗೆ ಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಅಂದಳು. ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು. ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
- Judges 11:35 ನ್ಯಾಯಸ್ಥಾಪಕರು 11:35ಅವನು ಅವಳನ್ನು ನೋಡಿ ದಾಗ ತನ್ನ ವಸ್ತ್ರಗಳನ್ನು ಹರಕೊಂಡು--ಅಯ್ಯೋ, ನನ್ನ ಕುಮಾರ್ತೆಯೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದಿ. ನನ್ನನ್ನು ತೊಂದರೆಪಡಿಸುವವರಲ್ಲಿ ನೀನು ಒಬ್ಬಳಾದಿ. ಯಾಕಂದರೆ ನಾನು ಕರ್ತನಿಗೆ ನನ್ನ ಬಾಯಿ ತೆರೆದು ಪ್ರಮಾಣಮಾಡಿದೆನು; ಹಿಂದೆಗೆಯಲಾರೆನು ಅಂದನು.
- 1 Samuel 14:24–46 1 ಸಮುವೇಲನು 14:24–46ಆದರೆ ಇಸ್ರಾಯೇಲ್ಯರು ಆ ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು--ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು. ದೇಶದ ಜನರೆಲ್ಲರು ಅಡವಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲೆ ಜೇನು ತುಪ್ಪ ಇತ್ತು. ಜನರು ಆ ಅಡವಿಯಲ್ಲಿ ಹೋಗುವಾಗ ಇಗೋ, ಜೇನು ತುಪ್ಪ ಸುರಿಯುತ್ತಿತ್ತು; ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದ ರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ. ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು. ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು. ಅದಕ್ಕೆ ಯೋನಾ ತಾನನು--ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ. ಇಗೋ, ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು. ಈ ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು. ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು. ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು. ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು. ಸೌಲನು ಅವರಿಗೆ--ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು. ಸೌಲನು ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಅವನು ಕಟ್ಟಿಸಿದ ಮೊದಲನೇ ಬಲಿಪೀಠವು. ಸೌಲನು ಜನರಿಗೆ--ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು. ಸೌಲನು--ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ಆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು. ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ. ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ. ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ--ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ--ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು. ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು. ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು. ಆಗ ಸೌಲನು ಯೋನಾತಾನನಿಗೆ--ನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು. ಅದಕ್ಕೆ ಯೋನಾ ತಾನನು--ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು; ಇಗೋ, ನಾನು ಸಾಯಬೇಕು ಅಂದನು. ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು. ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು. ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.