Proverbs · chapter 20 · verse 18
Proverbs 20:18 in Kannada
ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು.
Pratiyondu uddeshavu aalochaneyinda saphalavaaguvadu; hitavaada salaheyinda yuddhamaadu.
Proverbs 20:18 in English
- King James Version (KJV)
- [Every] purpose is established by counsel: and with good advice make war.
- World English Bible (WEB)
- Plans are established by advice; by wise guidance you wage war!
- American Standard Version (ASV)
- Every purpose is established by counsel; And by wise guidance make thou war.
- Bible in Basic English (BBE)
- Every purpose is put into effect by wise help: and by wise guiding make war.
- Darby Translation (DBY)
- Plans are established by counsel; and with good advice make war.
- Webster's Bible (WBS)
- [Every] purpose is established by counsel: and with good advice make war.
- Young's Literal Translation (YLT)
- Purposes by counsel thou dost establish, And with plans make thou war.
Read in context
- 16ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ.
- 17ಮೋಸದಿಂದ ಸಿಕ್ಕಿದ ರೊಟ್ಟಿಯು ಮನು ಷ್ಯನಿಗೆ ರುಚಿ; ಆಮೇಲೆ ಅವನ ಬಾಯಿಯು ಮರಳಿ ನಿಂದ ತುಂಬುವದು.
- 18ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು.
- 19ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.
- 20ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.
Cross references
- Proverbs 24:6 ಜ್ಞಾನೋಕ್ತಿಗಳು 24:6ಜ್ಞಾನಯುಕ್ತ ವಾದ ಆಲೋಚನೆಯಿಂದ ನಿನ್ನ ಯುದ್ಧವನ್ನು ನಡಿ ಸುತ್ತೀ; ಬಹುಮಂದಿ ಸಲಹೆಗಾರರು ಇರುವಲ್ಲಿ ಸುರ ಕ್ಷಣೆ ಇರುತ್ತದೆ.
- Proverbs 15:22 ಜ್ಞಾನೋಕ್ತಿಗಳು 15:22ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ.
- Luke 14:31 ಲೂಕನು 14:31ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ?
- Judges 1:1–2 ನ್ಯಾಯಸ್ಥಾಪಕರು 1:1–2ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು. ಅದಕ್ಕೆ ಕರ್ತನು--ಯೂದನು ಹೋಗಲಿ; ಇಗೋ, ನಾನು ಆ ದೇಶವನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟಿ ದ್ದೇನೆ ಅಂದನು.
- Proverbs 11:14 ಜ್ಞಾನೋಕ್ತಿಗಳು 11:14ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
- Judges 20:18 ನ್ಯಾಯಸ್ಥಾಪಕರು 20:18ಆಗ ಇಸ್ರಾಯೇಲಿನ ಮಕ್ಕಳು ಎದ್ದು ದೇವರ ಮನೆಗೆ ಹೋಗಿ ತಮ್ಮಲ್ಲಿ ಮೊದಲು ಬೆನ್ಯಾವಿಾನನ ಮಕ್ಕಳ ಸಂಗಡ ಯುದ್ಧಮಾಡುವದಕ್ಕೆ ಹೋಗ ಬೇಕಾ ದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಕರ್ತನು -- ಯೊಹೂದ ಕುಲದವರು ಮೊದಲು ಹೋಗಬೇಕು ಅಂದನು.
- 2 Samuel 2:26–27 2 ಸಮುವೇಲನು 2:26–27ಆಗ ಅಬ್ನೇರನು ಯೋವಾಬನಿಗೆ--ಕತ್ತಿಯು ಯಾವಾಗಲೂ ನುಂಗಿಬಿಡುವದೋ? ಅಂತ್ಯ ದಲ್ಲಿ ಅದು ಕಹಿಯಾಗಿರುವದೆಂದು ನಿನಗೆ ಗೊತ್ತಾಗು ವದಿಲ್ಲವೋ? ತಮ್ಮ ಸಹೋದರರನ್ನು ಹಿಂಬಾಲಿಸು ವದನ್ನು ಬಿಟ್ಟು ಹಿಂದಕ್ಕೆ ತಿರುಗುವ ಹಾಗೆ ಜನರಿಗೆ ಎಷ್ಟು ಕಾಲ ಹೇಳದೆ ಇರುವಿ ಎಂದು ಕೂಗಿ ಹೇಳಿದನು. ಅದಕ್ಕೆ ಯೋವಾಬನು--ದೇವರ ಜೀವದಾಣೆ, ಉದಯದಲ್ಲಿ ನೀನು ಮಾತನಾಡದೆ ಹೋದರೆ ನಿಶ್ಚಯ ವಾಗಿ ಜನರಲ್ಲಿ ಪ್ರತಿ ಮನುಷ್ಯನು ತನ್ನ ಸಹೋ ದರನ ಹಿಂದಿನಿಂದ ತಿರುಗಿ ಹೋಗುತ್ತಿದ್ದನು ಅಂದನು.
- Judges 20:7 ನ್ಯಾಯಸ್ಥಾಪಕರು 20:7ಇಗೋ, ನೀವೆಲ್ಲರು ಇಸ್ರಾಯೇಲ್ ಮಕ್ಕಳಾಗಿದ್ದೀರಿ; ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿ ಕೊಡಿರಿ ಅಂದನು.
- Proverbs 25:8 ಜ್ಞಾನೋಕ್ತಿಗಳು 25:8ನಿನ್ನ ನೆರೆಯವನು ನಿನ್ನನ್ನು ಅವಮಾನಕ್ಕೆ ಗುರಿಮಾಡಿದಾಗ ಕಡೆಯಲ್ಲಿ ಏನು ಮಾಡಬೇಕೆಂಬದು ನೀನು ತಿಳಿಯ ದಂತೆ ದುಡುಕಿನಿಂದ ಕಲಹಮಾಡುವದಕ್ಕಾಗಿ ಹೋಗ ಬೇಡ.
- Judges 9:29 ನ್ಯಾಯಸ್ಥಾಪಕರು 9:29ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುವೆನು. ಅವನು ಅಬೀಮೆಲೆಕನಿಗೆ--ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ ಅಂದನು.
- 2 Chronicles 25:17–23 2 ಪೂರ್ವಕಾಲವೃತ್ತಾಂತ 25:17–23ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಇಸ್ರಾಯೇಲಿನ ಅರಸನಾದ ಯೇಹುವಿನ ಮಗನಾದ ಯೆಹೋವಾಹಾಜನ ಮಗ ನಾದ ಯೋವಾಷನಿಗೆ--ನಾವು ಒಬ್ಬರ ಮುಖ ವನ್ನು ಒಬ್ಬರು ನೋಡೋಣ ಬಾ ಎಂದು ಹೇಳಿ ಕಳುಹಿಸಿದನು. ಆದರೆ ಇಸ್ರಾಯೇಲಿನ ಅರಸ ನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ--ಲೆಬನೋನಿನಲ್ಲಿದ್ದ ಒಂದು ಮುಳ್ಳು ಗಿಡವು ಲೆಬನೋನಿನಲ್ಲಿರುವ ದೇವದಾರಿಗೆ--ನೀನು ನನ್ನ ಮಗನಿಗೆ ಹೆಂಡತಿಯಾಗಿರಲು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋ ನಿನಲ್ಲಿದ್ದ ಅಡವಿಯ ಮೃಗವು ಹಾದುಹೋಗುತ್ತಿರು ವಾಗ ಆ ಮುಳ್ಳು ಗಿಡವನ್ನು ತುಳಿಯಿತು. ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು. ಆದರೆ ಅಮ ಚ್ಯನು ಕೇಳದೆಹೋದನು. ಯಾಕಂದರೆ ಅವರು ಎದೋ ಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ ಅವರನ್ನು ಶತ್ರುಗಳ ಕೈಯಲ್ಲಿ ಒಪ್ಪಿಸುವ ಹಾಗೆ ಇದು ದೇವರಿಂದ ಆಯಿತು. ಹಾಗೆಯೇ ಇಸ್ರಾಯೇಲಿನ ಅರಸನಾದ ಯೋವಾಷನು ಹೊರಟು ಹೋದನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ಷೆಮೆಷಿನ ಬಳಿಯಲ್ಲಿ ಅವರು ಒಬ್ಬನ ಮುಖವನ್ನು ಒಬ್ಬನು ನೋಡಿದನು. ಯೆಹೂದದ ವರು ಇಸ್ರಾಯೇಲಿನವರ ಮುಂದೆ ಸೋತು ತಮ್ಮತಮ್ಮ ಗುಡಾರಕ್ಕೆ ಓಡಿಹೋದರು. ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೋವಾಹಾಜನ ಮಗನಾದ ಯೋವಾಷನ ಮಗನಾದ ಯೆಹೂದದ ಅರಸನಾಗಿರುವ ಅಮಚ್ಯನನ್ನು ಬೇತ್ಷೆಮೆಷಿನ ಬಳಿ ಯಲ್ಲಿ ಹಿಡಿದುಕೊಂಡು ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದು ಯೆರೂಸಲೇಮಿನ ಗೋಡೆಯನ್ನು ಎಫ್ರಾಯಾಮನ ಬಾಗಲು ಮೊದಲುಗೊಂಡು ಮೂಲೆಯ ಬಾಗಲ ಮಟ್ಟಿಗೂ ನಾನೂರು ಮೊಳ ಉದ್ದ ಕೆಡವಿಬಿಟ್ಟು
- Judges 20:26–28 ನ್ಯಾಯಸ್ಥಾಪಕರು 20:26–28ಆಗ ಇಸ್ರಾಯೇಲ್ ಮಕ್ಕಳೆಲ್ಲರೂ ಸಮಸ್ತ ಜನರೂ ಹೊರಟು ದೇವರ ಮನೆಗೆ ಬಂದು ಅತ್ತು ಅಲ್ಲಿ ಕರ್ತನ ಮುಂದೆ ಕುಳಿತುಕೊಂಡು ಆ ಸಾಯಂಕಾಲದ ವರೆಗೆ ಉಪವಾಸವಾಗಿದ್ದು ಕರ್ತ ನಿಗೆ ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಕರ್ತನ ಮುಂದೆ ಅರ್ಪಿಸಿದರು. ಯಾಕಂದರೆ ಆ ದಿವಸಗಳಲ್ಲಿ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದರಿಂದಲೂ, ಇಸ್ರಾಯೇಲ್ ಮಕ್ಕಳು ನಮ್ಮ ಸಹೋದರನಾದ ಬೆನ್ಯಾವಿಾನನ ಮಕ್ಕಳಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವದಕ್ಕೆ ಹೋಗ ಬೇಕೋ ಬೇಡವೋ ಎಂದು ದೇವರನ್ನು ಕೇಳಿ ಕೊಂಡರು. ಕರ್ತನು--ಹೋಗಿರಿ; ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು ಅಂದನು.