Proverbs · chapter 25 · verse 2
Proverbs 25:2 in Kannada
ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು.
Vishayavannu rahasya maaduvadu devara mahime; arasara ghanateyu vishayavannu shodhisuvadu.
Proverbs 25:2 in English
- King James Version (KJV)
- [It is] the glory of God to conceal a thing: but the honour of kings [is] to search out a matter.
- World English Bible (WEB)
- It is the glory of God to conceal a thing, but the glory of kings is to search out a matter.
- American Standard Version (ASV)
- It is the glory of God to conceal a thing; But the glory of kings is to search out a matter.
- Bible in Basic English (BBE)
- It is the glory of God to keep a thing secret: but the glory of kings is to have it searched out.
- Darby Translation (DBY)
- It is the glory of God to conceal a thing; but the glory of kings is to search out a thing.
- Webster's Bible (WBS)
- [It is] the glory of God to conceal a thing: but the honor of kings [is] to search out a matter.
- Young's Literal Translation (YLT)
- The honour of God [is] to hide a thing, And the honour of kings to search out a matter.
Read in context
- 1ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಸಾಮತಿಗಳೇ.
- 2ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು.
- 3ಆಕಾ ಶವು, ಉನ್ನತ ಭೂಮಿಯು ಅಗಾಧ ಮತ್ತು ಅರಸರ ಹೃದಯವು ಅಗೋಚರ.
- 4ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ಬರುವದು.
Cross references
- Deuteronomy 29:29 ಧರ್ಮೋಪದೇಶಕಾಂಡ 29:29ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.
- Romans 11:33–34 ರೋಮಾಪುರದವರಿಗೆ 11:33–34ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ! ಕರ್ತನ ಮನಸ್ಸನ್ನು ತಿಳಿದುಕೊಂಡವನು ಯಾರು? ಇಲ್ಲವೆ ಆತನಿಗೆ ಆಲೋಚನೆ ಹೇಳಿದವನು ಯಾರು?
- Job 11:7–8 ಯೋಬನು 11:7–8ದೇವರನ್ನು ಶೋಧಿಸಿ ಕಂಡುಕೊಳ್ಳುವಿಯೋ? ಸರ್ವಶಕ್ತನ ಸಂಪೂರ್ಣತ್ವವನ್ನು ನಿನ್ನಿಂದ ಕಂಡು ಹಿಡಿಯ ಲಾದೀತೆ? ಅದು ಆಕಾಶಕ್ಕಿಂತಲೂ ಎತ್ತರವಾಗಿದೇ; ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳ ವಾಗಿದೆ; ನೀನೇನು ತಿಳಿದುಕೊಳ್ಳುವಿ?
- Job 38:4–30 ಯೋಬನು 38:4–30ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು. ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು? ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು? ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು. ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು. ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ? ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ? ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ. ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು. ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ? ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ? ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು. ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ? ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ? ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ. ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು.
- Job 42:3 ಯೋಬನು 42:3ಆಲೋಚನೆಯನ್ನು ತಿಳುವಳಿಕೆ ಇಲ್ಲದೆ ಮರೆಮಾಡುವವನಾರು? ಆದದರಿಂದ ನಾನು ಗ್ರಹಿ ಸದೆ ಇದ್ದವುಗಳನ್ನು ನಾನು ತಿಳಿಯದಂಥ, ನನಗೆ ಆಶ್ಚರ್ಯವಾದವುಗಳನ್ನು ಉಚ್ಚರಿಸಿದೆನು.
- 1 Kings 4:29–34 1 ಅರಸುಗಳು 4:29–34ಇದಲ್ಲದೆ ದೇವರು ಸೊಲೊ ಮೋನನಿಗೆ ಸಮುದ್ರ ತೀರದಲ್ಲಿರುವ ಮರಳಿನ ಹಾಗೆ ಅತ್ಯಧಿಕವಾಗಿ ಜ್ಞಾನ ವಿವೇಕಗಳನ್ನೂ ಮನೋವಿಶಾಲ ತೆಯನ್ನೂ ಕೊಟ್ಟನು. ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು. ಎಜ್ರಾಹಿಯಾದ ಎತಾನನು, ಮಹೋಲನನ ಮಕ್ಕಳಾದ ಹೆಮಾನನು, ಕಲ್ಕೋಲನು, ದರ್ದಾವನು ಮೊದಲಾದ ಎಲ್ಲಾ ಜನ ರಿಗಿಂತ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ಜನಾಂಗಗಳಲ್ಲಿ ಅವನ ಕೀರ್ತಿ ಇತ್ತು. ಅವನು ಮೂರು ಸಾವಿರ ಸಾಮತಿಗಳನ್ನು ಹೇಳಿದನು; ಅವನ ಹಾಡುಗಳು ಸಾವಿರದ ಐದು. ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನ ವರೆಗೂ ಹೇಳಿದನು. ಇದಲ್ಲದೆ ಮೃಗ ಪಕ್ಷಿ ಕ್ರಿಮಿ ಮತ್ತು ವಿಾನುಗಳನ್ನು ಕುರಿತೂ ಹೇಳಿದನು.ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು. ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
- Job 29:16 ಯೋಬನು 29:16ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು.
- 1 Kings 3:9–28 1 ಅರಸುಗಳು 3:9–28ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು. ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು. ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ. ನೀನು ಕೇಳದ ಐಶ್ವ ರ್ಯವನ್ನೂ ಘನವನ್ನೂ ಕೊಟ್ಟಿದ್ದೇನೆ. ಆದದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸು ಗಳಲ್ಲಿ ಒಬ್ಬನೂ ಇರುವದಿಲ್ಲ. ನೀನು ನಿನ್ನ ತಂದೆಯಾದ ದಾವೀದನು ನಡೆದ ಪ್ರಕಾರ ನನ್ನ ಮಾರ್ಗಗಳಲ್ಲಿ ನಡೆದು ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡರೆ ನಿನ್ನ ದಿವಸಗಳನ್ನು ಹೆಚ್ಚಿಸುವೆನು ಅಂದನು. ಆಗ ಸೊಲೊಮೋನನು ಎಚ್ಚತ್ತಾಗ ಇಗೋ, ಅದು ಸ್ವಪ್ನವಾಗಿತ್ತು, ಅವನು ಯೆರೂ ಸಲೇಮಿಗೆ ಬಂದು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತನ್ನ ಸೇವಕರಿಗೆ ಔತಣ ಮಾಡಿಸಿದನು. ತರುವಾಯ ಇಬ್ಬರು ವೇಶ್ಯಾಸ್ತ್ರೀಯರು ಅರಸನ ಬಳಿಗೆ ಬಂದು ಅವನ ಮುಂದೆ ನಿಂತರು. ಅವರಲ್ಲಿ ಒಬ್ಬಳು--ಓ ನನ್ನ ಒಡೆಯನೇ, ನಾನೂ ಈ ಹೆಂಗಸೂ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಅವಳ ಸಂಗಡ ಮನೆಯಲ್ಲಿರುವಾಗ ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ ಈ ಹೆಂಗಸು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತಾರೂ ಇಲ್ಲ. ಆದರೆ ಅವಳು ಅದರ ಮೇಲೆ ಹೊರಳಿದ್ದರಿಂದ ರಾತ್ರಿಯಲ್ಲಿ ಈ ಹೆಂಗಸಿನ ಮಗುವು ಸತ್ತು ಹೋಯಿತು. ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು. ಉದಯದಲ್ಲಿ ನನ್ನ ಕೂಸಿಗೆ ಮೊಲೆ ಕೊಡಲು ಎದ್ದಾಗ ಇಗೋ, ಅದು ಸತ್ತಿತ್ತು. ಉದಯದಲ್ಲಿ ಅದನ್ನು ಯೋಚಿಸಿದಾಗ ಇಗೋ, ಅದು ನಾನು ಹೆತ್ತ ಮಗುವಾಗಿದ್ದಿಲ್ಲ ಅಂದಳು. ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು. ಆಗ ಅರಸನುಇವಳು--ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅನ್ನುತ್ತಾಳೆ. ಅವಳು--ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅನ್ನುತ್ತಾಳೆ ಎಂದು ಹೇಳಿ ಅರಸನು--ಕತ್ತಿಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದನು. ಅವರು ಕತ್ತಿಯನ್ನು ಅರಸನ ಬಳಿಗೆ ತಂದರು. ಆಗ ಅರಸನುಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು ಇವಳಿಗೆ ಅರ್ಧಪಾಲನ್ನು ಅವಳಿಗೆ ಅರ್ಧ ಪಾಲನ್ನು ಕೊಡಿರಿ ಅಂದನು. ಆಗ ಬದುಕಿರುವ ಕೂಸಿನ ತಾಯಿಯಾದವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ--ಓ ನನ್ನ ಒಡೆ ಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು; ಕೊಲ್ಲಲ್ಲೇ ಬೇಡ ಅಂದಳು. ಆದರೆ ಮತ್ತೊಬ್ಬಳು--ಅದು ನನ್ನದಾಗಲಿ ನಿನ್ನದಾಗಲಿ ಆಗಿರಬಾರದು; ಕಡಿ ಯಿರಿ ಅಂದಳು. ಆಗ ಅರಸನು ಪ್ರತ್ಯುತ್ತರವಾಗಿಬದುಕಿರುವ ಕೂಸನ್ನು ಇವಳಿಗೆ ಕೊಡಿರಿ; ಕೊಲ್ಲ ಬೇಡಿರಿ; ಇವಳೇ ಅದರ ತಾಯಿ ಅಂದನು.ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು. ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು.
- Ezra 4:15 ಎಜ್ರನು 4:15ನಿನ್ನ ತಂದೆಗಳ ವೃತಾಂತಗಳ ಪುಸ್ತಕದಲ್ಲಿ ವಿಚಾರಿಸಿದರೆ ಈ ಪಟ್ಟಣವು ತಿರಿಗಿ ಬೀಳುವುದೆಂದೂ ಅರಸುಗಳಿಗೂ ದೇಶಗಳಿಗೂ ನಷ್ಟಮಾಡುವಂಥ ದೆಂದೂ ಪೂರ್ವ ಕಾಲದಲ್ಲಿ ಅದರೊಳಗಿದ್ದವರು ತಿರಿಗಿ ಬಿದ್ದಿದ್ದಾರೆಂದೂ ಅದರ ನಿಮಿತ್ತ ಈ ಪಟ್ಟಣವು ನಾಶವಾಯಿತೆಂದೂ ನೀನು ವೃತಾಂತಗಳ ಪುಸ್ತಕದಲ್ಲಿ ಕಂಡು ತಿಳಿಯುವಿ.
- Ezra 4:19 ಎಜ್ರನು 4:19ಆಗ ನಾನು ಆಜ್ಞಾಪಿಸಿದ್ದರಿಂದ ಶೋಧಿಸಿ ನೋಡು ವಾಗ ಆ ಪಟ್ಟಣವು ಪೂರ್ವ ಕಾಲದಿಂದ ಅರಸುಗಳಿಗೆ ವಿರೋಧವಾಗಿ ತಿರುಗಿ ಬಿದ್ದಿತ್ತು; ಅದರಲ್ಲಿ ಕಲಹವೂ ದುರಾಲೋಚನೆಯೂ ಮಾಡಲ್ಪಟ್ಟಿತು;
- Job 40:2 ಯೋಬನು 40:2ಸರ್ವಶಕ್ತನ ಸಂಗಡ ವಾದಿಸುವವನು ಆತನಿಗೆ ಶಿಕ್ಷಣ ಕೊಡುವನೋ? ದೇವರನ್ನು ಗದರಿಸು ವವನು ಅದಕ್ಕೆ ಉತ್ತರಕೊಡಲಿ ಎಂದು ಹೇಳಿದನು.