Proverbs · chapter 30 · verse 11
Proverbs 30:11 in Kannada
ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.
Tamma tandeyannu shapisi tamma taayige shubhavannu korade iruva vanshaavali ide.
Proverbs 30:11 in English
- King James Version (KJV)
- [There is] a generation [that] curseth their father, and doth not bless their mother.
- World English Bible (WEB)
- There is a generation that curses their father, and doesn’t bless their mother.
- American Standard Version (ASV)
- There is a generation that curse their father, And bless not their mother.
- Bible in Basic English (BBE)
- There is a generation who put a curse on their father, and do not give a blessing to their mother.
- Darby Translation (DBY)
- There is a generation that curseth their father, and doth not bless their mother;
- Webster's Bible (WBS)
- [There is] a generation [that] curseth their father, and doth not bless their mother.
- Young's Literal Translation (YLT)
- A generation [is], that lightly esteemeth their father, And their mother doth not bless.
Read in context
- 9ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
- 10ಅವನ ಯಜಮಾನನಿಗೆ ಸೇವಕನ ವಿಷಯವಾಗಿ ದೂರು ಹೇಳಬೇಡ; ಇದ ರಿಂದ ಅವನು ಶಪಿಸಾನು; ಆಗ ನೀನು ದೋಷಿ ಯಾಗುವಿ.
- 11ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.
- 12ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ.
- 13ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ.
Cross references
- Proverbs 20:20 ಜ್ಞಾನೋಕ್ತಿಗಳು 20:20ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.
- Proverbs 30:17 ಜ್ಞಾನೋಕ್ತಿಗಳು 30:17ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.
- Deuteronomy 27:16 ಧರ್ಮೋಪದೇಶಕಾಂಡ 27:16ತನ್ನ ತಂದೆ ತಾಯಿಗಳನ್ನು ತಾತ್ಸಾರಮಾಡುವ ವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.
- Proverbs 30:12–14 ಜ್ಞಾನೋಕ್ತಿಗಳು 30:12–14ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ. ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ. ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.
- Exodus 21:17 ವಿಮೋಚನಕಾಂಡ 21:17ತಂದೆಗಾದರೂ ತಾಯಿಗಾದರೂ ಶಾಪಕೊಟ್ಟ ವನು ಖಂಡಿತವಾಗಿ ಸಾಯಬೇಕು.
- Leviticus 20:9 ಯಾಜಕಕಾಂಡ 20:9ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು.
- Deuteronomy 21:20–21 ಧರ್ಮೋಪದೇಶಕಾಂಡ 21:20–21ಪಟ್ಟಣದ ಹಿರಿಯರಿಗೆ--ಈ ನಮ್ಮ ಮಗನು ಮೊಂಡನೂ ತಿರುಗಿ ಬೀಳುವವನೂ ನಮ್ಮ ಮಾತು ಕೇಳದವನೂ ಹೊಟ್ಟೇ ಬಾಕನೂ ಕುಡಿಯುವವನೂ ಆಗಿದ್ದಾನೆ ಎಂದು ಹೇಳಬೇಕು. ಆಗ ಅವನ ಪಟ್ಟಣದ ಜನರೆಲ್ಲರು ಅವನು ಸಾಯುವಹಾಗೆ ಅವನನ್ನು ಕಲ್ಲೆಸೆಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕ ಬೇಕು; ಇಸ್ರಾಯೇಲ್ಯರಲ್ಲಿ ಇದನ್ನು ಕೇಳಿ ಭಯ ಪಡುವರು.
- Matthew 15:4–6 ಮತ್ತಾಯನು 15:4–6ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ. ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ.
- 1 Timothy 5:8 1 ತಿಮೊಥೆಯನಿಗೆ 5:8ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ.
- 1 Timothy 5:4 1 ತಿಮೊಥೆಯನಿಗೆ 5:4ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾ ಗಲಿ, ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದೂ ಮೆಚ್ಚಿಕೆಯಾದದ್ದೂ ಆಗಿದೆ.
- Mark 7:10–13 ಮಾರ್ಕನು 7:10–13ಯಾಕಂದರೆ ಮೋಶೆಯು--ನಿನ್ನ ತಂದೆಯನ್ನು ನಿನ್ನ ತಾಯಿಯನ್ನು ಸನ್ಮಾನಿಸಬೇಕೆಂತಲೂ ಮತ್ತು--ತಂದೆಯನ್ನಾಗಲೀ ತಾಯಿಯನ್ನಾಗಲೀ ಶಪಿಸುವವನು ಸಾಯಲೇ ಬೇಕೆಂತಲೂ ಹೇಳಿದ್ದಾನೆ. ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ; ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು.
- Matthew 3:7 ಮತ್ತಾಯನು 3:7ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು?