Proverbs · chapter 30 · verse 14
Proverbs 30:14 in Kannada
ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.
Bhoomiyolaginda badavarannoo manushya rolaginda dikkilladavarannoo nunguvante tamma hallugalu khadgagalanteyoo tamma davadeya hallu galu kattigalanteyoo iruva ondu vanshaavaliyu ide.
Proverbs 30:14 in English
- King James Version (KJV)
- [There is] a generation, whose teeth [are as] swords, and their jaw teeth [as] knives, to devour the poor from off the earth, and the needy from [among] men.
- World English Bible (WEB)
- There is a generation whose teeth are like swords, and their jaws like knives, to devour the poor from the earth, and the needy from among men.
- American Standard Version (ASV)
- There is a generation whose teeth are [as] swords, and their jaw teeth [as] knives, To devour the poor from off the earth, and the needy from among men.
- Bible in Basic English (BBE)
- There is a generation whose teeth are like swords, their strong teeth like knives, for the destruction of the poor from the earth, and of those who are in need from among men.
- Darby Translation (DBY)
- — a generation whose teeth are swords, and their jaw-teeth knives, to devour the afflicted from off the earth, and the needy from [among] men.
- Webster's Bible (WBS)
- [There is] a generation, whose teeth [are as] swords, and their jaw-teeth [as] knives, to devour the poor from off the earth, and the needy from [among] men.
- Young's Literal Translation (YLT)
- A generation — swords [are] their teeth, And knives — their jaw-teeth, To consume the poor from earth, And the needy from [among] men.
Read in context
- 12ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ.
- 13ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ.
- 14ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.
- 15ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ.
- 16ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ.
Cross references
- Psalm 57:4 ಕೀರ್ತನೆಗಳು 57:4ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
- Psalm 3:7 ಕೀರ್ತನೆಗಳು 3:7ಓ ಕರ್ತನೇ, ಏಳು; ಓ ನನ್ನ ದೇವರೇ, ನನ್ನನ್ನು ರಕ್ಷಿಸು. ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.
- Psalm 14:4 ಕೀರ್ತನೆಗಳು 14:4ಕರ್ತನನ್ನು ಪ್ರಾರ್ಥಿಸದೆ ರೊಟ್ಟಿಯನ್ನೋ ಎಂಬಂತೆ ನನ್ನ ಜನರನ್ನು ತಿಂದು ಅಪರಾಧಮಾಡಿದವರಿಗೆ ತಿಳುವಳಿಕೆಯಿಲ್ಲವೋ?
- Job 29:17 ಯೋಬನು 29:17ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು.
- Ecclesiastes 4:1 ಪ್ರಸಂಗಿ 4:1ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.
- Amos 8:4 ಆಮೋಸ 8:4ಬಡವರನ್ನು ನುಂಗುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ.
- Revelation 9:8 ಪ್ರಕಟನೆ 9:8ಸ್ತ್ರೀಯರ ಕೂದಲಿ ನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು.
- Psalm 58:6 ಕೀರ್ತನೆಗಳು 58:6ಓ ದೇವರೇ, ಅವರ ಬಾಯಿ ಯಲ್ಲಿರುವ ಹಲ್ಲುಗಳನ್ನು ಮುರಿದುಬಿಡು; ಓ ಕರ್ತನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಒಡೆದು ಬಿಡು;
- Psalm 12:5 ಕೀರ್ತನೆಗಳು 12:5ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- Psalm 10:8–9 ಕೀರ್ತನೆಗಳು 10:8–9ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ; ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ.
- Micah 2:1–2 ಮೀಕ 2:1–2ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
- James 5:1–4 ಯಾಕೋಬನು 5:1–4ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ ನಿಮ್ಮ ಐಶ್ವರ್ಯವು ನಾಶವಾಗಿದೆ, ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದವೆ; ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದು ಬಿಡುವದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿ ದ್ದೀರಿ. ಇಗೋ, ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿ ದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ; ಕೊಯಿದವರ ಕೂಗು ಸೈನ್ಯಗಳ ಕರ್ತನ ಕಿವಿಗಳಲ್ಲಿ ಬಿದ್ದಿದೆ.