Proverbs · chapter 30 · verse 2
Proverbs 30:2 in Kannada
ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ.
Khanditavaagiyoo pratiyobba manushyaniginta naanu pashupraayanu; manushyana vivekavu nanage illa.
Proverbs 30:2 in English
- King James Version (KJV)
- Surely I [am] more brutish than [any] man, and have not the understanding of a man.
- World English Bible (WEB)
- “Surely I am the most ignorant man, and don’t have a man’s understanding.
- American Standard Version (ASV)
- Surely I am more brutish than any man, And have not the understanding of a man;
- Bible in Basic English (BBE)
- For I am more like a beast than any man, I have no power of reasoning like a man:
- Darby Translation (DBY)
- Truly I am more stupid than any one; and I have not a man's intelligence.
- Webster's Bible (WBS)
- Surely I [am] more brutish than [any] man, and have not the understanding of a man.
- Young's Literal Translation (YLT)
- For I am more brutish than any one, And have not the understanding of a man.
Read in context
- 1ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು.
- 2ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ.
- 3ನಾನು ಜ್ಞಾನವನ್ನು ಪಡೆದುಕೊಂಡಿಲ್ಲ; ಅಲ್ಲದೆ ಪರಿಶುದ್ಧನ ವಿಷಯವಾದ ತಿಳುವಳಿಕೆಯು ನನಗಿಲ್ಲ.
- 4ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?
Cross references
- Psalm 73:22 ಕೀರ್ತನೆಗಳು 73:22ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿನ್ನ ಮುಂದೆ ಪಶು ವಿನಂತೆ ಇದ್ದೆನು.
- 1 Corinthians 3:18 1 ಕೊರಿಂಥದವರಿಗೆ 3:18ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.
- Proverbs 5:12 ಜ್ಞಾನೋಕ್ತಿಗಳು 5:12ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
- Isaiah 6:5 ಯೆಶಾಯ 6:5ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.
- 2 Peter 2:12–16 2 ಪೇತ್ರನು 2:12–16ಆದರೆ ಹಿಡಿಯಲ್ಪಟ್ಟು ನಾಶವಾಗುವದಕ್ಕೆ ಹುಟ್ಟಿರುವ ವಿವೇಕ ಶೂನ್ಯ ಮೃಗಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯ ವಾಗಿ ದೂಷಣೆ ಹೇಳುವವರಾಗಿದ್ದಾರೆ; ಇವರು ತಮ್ಮ ಕೆಟ್ಟತನದಿಂದ ಸಂಪೂರ್ಣ ನಾಶವಾಗುವವರಾಗಿ ತಮ್ಮ ದುರ್ನೀತಿಗೆ ಸರಿಯಾದ ದುಷ್ಪಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣ ಮಾಡುತ್ತಿರುವಾಗ ವಂಚಕ ರಾಗಿದ್ದು ಕಳಂಕಕ್ಕೂ ನಿಂದೆಗೂ ಕಾರಣರಾಗಿದ್ದಾರೆ. ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು. ಆದರೆ ಅವನ ದುಷ್ಟತ್ವಕ್ಕೆ ಖಂಡನೆಯಾಯಿತು; ಮೂಕ ಕತ್ತೆಯು ಮನುಷ್ಯ ಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.
- Romans 11:25 ರೋಮಾಪುರದವರಿಗೆ 11:25ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
- 1 Corinthians 8:2 1 ಕೊರಿಂಥದವರಿಗೆ 8:2ಒಬ್ಬನು ತಾನು ಏನಾದರೂ ತಿಳಿದುಕೊಂಡಿ ದ್ದೇನೆಂದು ನೆನಸುವದಾದರೆ ಅವನು ತಿಳಿದುಕೊಳ್ಳ ಬೇಕಾಗಿರುವದನ್ನು ಇನ್ನೂ ತಿಳಿಯದವನಾಗಿದ್ದಾನೆ.
- Job 42:3–6 ಯೋಬನು 42:3–6ಆಲೋಚನೆಯನ್ನು ತಿಳುವಳಿಕೆ ಇಲ್ಲದೆ ಮರೆಮಾಡುವವನಾರು? ಆದದರಿಂದ ನಾನು ಗ್ರಹಿ ಸದೆ ಇದ್ದವುಗಳನ್ನು ನಾನು ತಿಳಿಯದಂಥ, ನನಗೆ ಆಶ್ಚರ್ಯವಾದವುಗಳನ್ನು ಉಚ್ಚರಿಸಿದೆನು. ದಯ ಮಾಡಿ ಕೇಳು, ನಾನು ಮಾತಾಡುವೆನು; ನಾನು ಕೇಳು ತ್ತೇನೆ, ನೀನು ನನಗೆ ತಿಳಿಸು. ಕಿವಿಯಿಂದ ನಿನ್ನನ್ನು ಕುರಿತು ಕೇಳಿದ್ದೆನು; ಈಗ ನನ್ನ ಕಣ್ಣು ನಿನ್ನನ್ನು ನೋಡಿತು. ಆದದರಿಂದ ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು.
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- Psalm 49:10 ಕೀರ್ತನೆಗಳು 49:10ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ.
- Psalm 92:6 ಕೀರ್ತನೆಗಳು 92:6ಇದನ್ನು ಪಶುಪ್ರಾಯದವನಾದ ಮೂರ್ಖನು ಅರಿಯನು. ಇಲ್ಲವೆ ಹುಚ್ಚನು ತಿಳಿಯನು.
- Jeremiah 10:14 ಯೆರೆಮೀಯ 10:14ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ.