Proverbs · chapter 31 · verse 13
Proverbs 31:13 in Kannada
ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ.
Aakeyu unneyannoo sanabannoo huduku vavalaagi tanna kaigalinda manahpoorvakavaagi kelasa maaduttaale.
Proverbs 31:13 in English
- King James Version (KJV)
- She seeketh wool, and flax, and worketh willingly with her hands.
- World English Bible (WEB)
- She seeks wool and flax, and works eagerly with her hands.
- American Standard Version (ASV)
- She seeketh wool and flax, And worketh willingly with her hands.
- Bible in Basic English (BBE)
- She gets wool and linen, working at the business of her hands.
- Darby Translation (DBY)
- She seeketh wool and flax, and worketh willingly with her hands.
- Webster's Bible (WBS)
- She seeketh wool, and flax, and worketh willingly with her hands.
- Young's Literal Translation (YLT)
- She hath sought wool and flax, And with delight she worketh [with] her hands.
Read in context
- 11ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ.
- 12ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು.
- 13ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ.
- 14ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ.
- 15ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ.
Cross references
- Titus 2:5 ತೀತನಿಗೆ 2:5ವಿವೇಕವುಳ್ಳವರೂ ಪತಿವ್ರತೆಯರೂ ಮನೆಯನ್ನು ನೋಡಿಕೊಳ್ಳುವವರೂ ಒಳ್ಳೆಯವರೂ ತಮ್ಮ ಗಂಡಂದಿ ರಿಗೆ ವಿಧೇಯರೂ ಆಗಿರಬೇಕೆಂದು ಅವರಿಗೆ ಹೇಳು.
- 1 Timothy 5:10 1 ತಿಮೊಥೆಯನಿಗೆ 5:10ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ
- 2 Thessalonians 3:10–12 2 ಥೆಸಲೊನೀಕದವರಿಗೆ 3:10–12ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ ಕೆಲಸ ಮಾಡಲೊ ಲ್ಲದವನು ಊಟ ಮಾಡಬಾರದೆಂದು ನಿಮಗೆ ಆಜ್ಞಾಪಿಸಿದೆವಷ್ಟೆ. ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಕ್ರಮವಾಗಿ ನಡೆಯುತ್ತಾರೆಂದು ಕೇಳಿದ್ದೇವೆ. ಅಂಥವರು ಮೌನವಾಗಿ ತಮ್ಮ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ಆಹಾರವನ್ನೇ ಊಟಮಾಡ ಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.
- Acts 9:39–40 ಅಪೊಸ್ತಲರ ಕೃತ್ಯಗಳು 9:39–40ಪೇತ್ರನು ಎದು ಅವರ ಜೊತೆಯಲ್ಲಿ ಹೋದನು. ಅವನು ಬಂದಾಗ ಅವರು ಅವನನ್ನು ಮೇಲಂತಸ್ತಿನ ಕೊಠಡಿಗೆ ಕರೆದು ಕೊಂಡುಹೋದರು. ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಮೇಲಂಗಿಗಳನ್ನೂ ಒಳಂಗಿಗಳನ್ನೂ ತೋರಿಸಿ ಪೇತ್ರನು ಅವರೆ ಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆ ಮಾಡಿ ಶವದ ಕಡೆಗೆ ತಿರುಗಿಕೊಂಡು--ತಬಿಥಾ, ಏಳು ಅಂದನು; ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು.
- Isaiah 3:16–24 ಯೆಶಾಯ 3:16–24ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ, ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು. ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು;
- Genesis 24:18–20 ಆದಿಕಾಂಡ 24:18–20ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು. ಅವನಿಗೆ ಕುಡಿಯು ವದಕ್ಕೆ ಕೊಟ್ಟನಂತರ ಆಕೆಯು--ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ತರುತ್ತೇನೆ ಎಂದು ಹೇಳಿದಳು. ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ದೋಣಿಯಲ್ಲಿ ಹೊಯ್ದು ತಿರಿಗಿ ತರುವದಕ್ಕೆ ಬಾವಿಯ ಬಳಿಗೆ ಓಡಿ ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ತಂದುಕೊಟ್ಟಳು.
- Genesis 29:9–10 ಆದಿಕಾಂಡ 29:9–10ಯಾಕೋಬನು ಇನ್ನೂ ಅವರ ಸಂಗಡ ಮಾತನಾಡು ತ್ತಿದ್ದಾಗ ಕುರಿಗಳನ್ನು ಮೇಯಿಸುವವಳಾಗಿದ್ದ ರಾಹೇ ಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು. ಯಾಕೋಬನು ತನ್ನ ತಾಯಿಯ ಸಹೋದರನಾದ ಲಾಬಾನನ ಮಗಳಾದ ರಾಹೇಲಳನ್ನೂ ಅವನ ಕುರಿಗಳನ್ನೂ ನೋಡಿದಾಗ ಯಾಕೋಬನು ಹತ್ತಿರ ಬಂದು ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು.
- Ruth 2:23 ರೂತಳು 2:23ಹೀಗೆ ಅವಳು ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದು ಹಾಗೆಯೇ ಜವೆಗೋಧಿಯ ಸುಗ್ಗಿಯು ತೀರುವ ವರೆಗೆ ಹಕ್ಕಲಾದುಕೊಳ್ಳುವದ ಕ್ಕೋಸ್ಕರ ಬೋವಜನ ದಾಸಿಗಳ ಸಂಗಡ ಕೂಡಿ ಕೊಂಡು ಹೋಗುತ್ತಿದ್ದಳು.
- Ruth 2:2–3 ರೂತಳು 2:2–3ಮೋವಾಬ್ಯಳಾದ ರೂತಳು ನೊವೊಮಿಗೆ ನಾನು ಹೊಲಕ್ಕೆ ಹೋಗಿ ಯಾವನ ಕೃಪೆಯು ನನಗೆ ಆಗುವದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿಕೊಳ್ಳುವೆನು ಅಂದಳು. ಅದಕ್ಕೆ ಇವಳು ನನ್ನ ಮಗಳೇ, ಹೋಗು ಅಂದಳು. ಅವಳು ಹೋಗಿ ಹೊಲದಲ್ಲಿ ಕೊಯ್ಯುವವರ ಹಿಂದೆ ಹಕ್ಕಲಾದು ಕೊಂಡಳು. ಅವಳಿಗೆ ಪ್ರಾಪ್ತಿಸಿದ ಆ ಹೊಲದ ಭಾಗ ಎಲೀಮೆಲೆಕನ ಸಂಬಂಧಿಕನಾದ ಬೋವಜನದಾಗಿತ್ತು.
- Genesis 24:13–14 ಆದಿಕಾಂಡ 24:13–14ಇಗೋ, ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ; ಊರಿನ ಜನರ ಕುಮಾರ್ತೆಯರು ನೀರು ಸೇದುವದಕ್ಕೆ ಬರುತ್ತಾರೆ. ನಾನು ಯಾವ ಹುಡುಗಿಗೆ--(ನೀರು) ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು ಎಂದು ಕೇಳಿ ಕೊಂಡಾಗ --ನೀನು ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವದಕ್ಕೆ ಕೊಡುತ್ತೇನೆ ಎಂದು ಹೇಳುವಳೋ ಆಕೆಯನ್ನೇ ನೀನು ನಿನ್ನ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದಾಗಿರಲಿ. ಇದರಿಂದ ನೀನು ನನ್ನ ಯಜಮಾನನಿಗೆ ದಯೆ ತೋರಿಸಿದ್ದೀ ಎಂದು ನಾನು ತಿಳುಕೊಳ್ಳುವೆನು ಎಂದು ಬೇಡಿಕೊಂಡನು.
- Isaiah 32:9–11 ಯೆಶಾಯ 32:9–11ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ. ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು. ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
- Genesis 18:6–8 ಆದಿಕಾಂಡ 18:6–8ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ--ತ್ವರೆಪಟ್ಟು ಮೂರು ಸೇರು ನಯವಾದ ಹಿಟ್ಟು ನಾದಿ ಒಲೆಯ ಮೇಲೆ ರೊಟ್ಟಿಗಳನ್ನು ಮಾಡು ಅಂದನು. ಅಬ್ರಹಾ ಮನು ದನದ ಮಂದೆಯ ಬಳಿಗೆ ಓಡಿಹೋಗಿ ಎಳೇದಾದ ಒಳ್ಳೇ ಕರುವನ್ನು ತೆಗೆದುಕೊಂಡು ಒಬ್ಬ ಯೌವನಸ್ಥನಿಗೆ ಕೊಟ್ಟಾಗ ಅವನು ಅದನ್ನು ಸಿದ್ಧಮಾಡುವದಕ್ಕೆ ತ್ವರೆಪಟ್ಟನು. ತರುವಾಯ ಬೆಣ್ಣೆಯನ್ನೂ ಹಾಲನ್ನೂ ಪಕ್ವಮಾಡಿದ ಕರುವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು; ಅವನು ಮರದ ಕೆಳಗೆ ಅವರ ಬಳಿಯಲ್ಲಿ ನಿಂತುಕೊಂಡನು; ಅವರು ಊಟಮಾಡಿದರು.