Psalms · chapter 105 · verse 3
Psalm 105:3 in Kannada
ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
Aatana parishuddha naamadalli hogalikolliri; kartanannu hudukuvavara hrudayavu santoshisali.
Psalm 105:3 in English
- King James Version (KJV)
- Glory ye in his holy name: let the heart of them rejoice that seek the LORD.
- World English Bible (WEB)
- Glory in his holy name. Let the heart of those who seek the LORD rejoice.
- American Standard Version (ASV)
- Glory ye in his holy name: Let the heart of them rejoice that seek Jehovah.
- Bible in Basic English (BBE)
- Have glory in his holy name; let the hearts of those who are searching after the Lord be glad.
- Darby Translation (DBY)
- Glory ye in his holy name: let the heart of them rejoice that seek Jehovah.
- Webster's Bible (WBS)
- Glory ye in his holy name: let the heart of them rejoice that seek the LORD.
- Young's Literal Translation (YLT)
- Boast yourselves in His Holy Name, The heart of those seeking Jehovah rejoiceth.
Read in context
- 1ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನ ಹೆಸರನ್ನು ಕರೆಯಿರಿ; ಜನ ಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯಮಾಡಿರಿ.
- 2ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
- 3ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
- 4ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- 5ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
Cross references
- Lamentations 3:25 ಪ್ರಲಾಪಗಳು 3:25ಕರ್ತನು ತನಗಾಗಿ ಕಾಯುವವನಿಗೂ ಹುಡುಕುವ ಪ್ರಾಣಕ್ಕೂ ಒಳ್ಳೆಯವನಾಗಿದ್ದಾನೆ.
- Galatians 6:14 ಗಲಾತ್ಯದವರಿಗೆ 6:14ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ. ಆತನ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.
- 1 Corinthians 1:29 1 ಕೊರಿಂಥದವರಿಗೆ 1:29ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- Proverbs 8:17 ಜ್ಞಾನೋಕ್ತಿಗಳು 8:17ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
- 1 Corinthians 1:31 1 ಕೊರಿಂಥದವರಿಗೆ 1:31ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- Isaiah 45:25 ಯೆಶಾಯ 45:25ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
- Luke 11:9–10 ಲೂಕನು 11:9–10ನಾನು ನಿಮಗೆ ಹೇಳುವದೇನಂ ದರೆ--ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು. ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು.
- Psalm 34:2 ಕೀರ್ತನೆಗಳು 34:2ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.
- Jeremiah 9:23–24 ಯೆರೆಮೀಯ 9:23–24ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ. ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Isaiah 45:19 ಯೆಶಾಯ 45:19ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ; ವ್ಯರ್ಥವಾಗಿ ನನ್ನನ್ನು ಹುಡುಕಿರಿ ಎಂದು ಯಾಕೋಬನ ವಂಶ ದವರಿಗೆ ನಾನು ಹೇಳಲಿಲ್ಲ, ಕರ್ತನಾದ ನಾನೇ ನೀತಿ ಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
- Psalm 9:10 ಕೀರ್ತನೆಗಳು 9:10ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.