Psalms · chapter 105 · verse 39
Psalm 105:39 in Kannada
ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು.
Aatanu neraligaagi megha vannoo raatriyalli belakigoskara benkiyannoo vistarisidanu.
Psalm 105:39 in English
- King James Version (KJV)
- He spread a cloud for a covering; and fire to give light in the night.
- World English Bible (WEB)
- He spread a cloud for a covering, fire to give light in the night.
- American Standard Version (ASV)
- He spread a cloud for a covering, And fire to give light in the night.
- Bible in Basic English (BBE)
- A cloud was stretched over them for a cover; and he sent fire to give light in the night.
- Darby Translation (DBY)
- He spread a cloud for a covering, and fire to give light in the night.
- Webster's Bible (WBS)
- He spread a cloud for a covering; and fire to give light in the night.
- Young's Literal Translation (YLT)
- He hath spread a cloud for a covering, And fire to enlighten the night.
Read in context
- 37ಆತನು ಬೆಳ್ಳಿ ಬಂಗಾರಗಳ ಸಂಗಡ ಅವರನ್ನು ಹೊರಗೆ ಬರಮಾಡಿ ದನು; ಅವರ ಗೋತ್ರಗಳಲ್ಲಿ ಬಲಹೀನನು ಒಬ್ಬನೂ ಇರಲಿಲ್ಲ.
- 38ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆ ಯುಳ್ಳವರಾದ್ದರಿಂದ ಅವರು ಹೊರಟು ಹೋದದಕ್ಕೆ ಸಂತೋಷಿಸಿದರು.
- 39ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು.
- 40ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.
- 41ಆತನು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಒಣಗಿದ ಸ್ಥಳಗಳಲ್ಲಿ ನದಿಯಾಗಿ ಹರಿಯಿತು.
Cross references
- Nehemiah 9:12 ನೆಹೆಮೀಯ 9:12ಇದಲ್ಲದೆ ಹಗಲಿನಲ್ಲಿ ಮೇಘ ಸ್ತಂಭ ದಿಂದಲೂ ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭ ದಿಂದಲೂ ಅವರನ್ನು ನಡಿಸಿದಿ.
- Isaiah 4:5 ಯೆಶಾಯ 4:5ಕರ್ತನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು.
- Psalm 78:14 ಕೀರ್ತನೆಗಳು 78:14ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು.
- Exodus 14:24 ವಿಮೋಚನಕಾಂಡ 14:24ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ
- Exodus 13:21–22 ವಿಮೋಚನಕಾಂಡ 13:21–22ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ. ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.
- Nehemiah 9:19 ನೆಹೆಮೀಯ 9:19ನೀನು ನಿನ್ನ ಹೇರಳವಾದ ಕರುಣೆಯಿಂದ ಅರಣ್ಯದಲ್ಲಿ ಅವರನ್ನು ಕೈಬಿಡದೆ ಇದ್ದಿ. ಹಗಲಿನಲ್ಲಿ ಅವರಿಗೆ ದಾರಿ ತೋರಿಸತಕ್ಕ ಮೇಘಸ್ತಂಭವಾದರೂ ರಾತ್ರಿಯಲ್ಲಿ ಅವರಿಗೆ ಬೆಳಕನ್ನು, ಅವರು ನಡೆಯತಕ್ಕ ಮಾರ್ಗವನ್ನು ತೋರಿಸುವ ಅಗ್ನಿಸ್ತಂಭವಾದರೂ ಅವರನ್ನು ಬಿಟ್ಟು ಹೋಗಲಿಲ್ಲ.
- Numbers 9:15–22 ಅರಣ್ಯಕಾಂಡ 9:15–22ಗುಡಾರವನ್ನು ಎತ್ತಿದ ದಿವಸದಲ್ಲಿ ಮೇಘವು ನಿವಾಸದ ಕಡೆಗೆ ಅಂದರೆ, ಸಾಕ್ಷೀ ಗುಡಾರವನ್ನು ಮುಚ್ಚಿತು. ಸಾಯಂಕಾಲದಿಂದ ಉದಯದ ವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು. ಈ ಪ್ರಕಾರ ಯಾವಾಗಲೂ ಅದು ಇತ್ತು; ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು. ಆ ಮೇಘವು ಗುಡಾರದ ಮೇಲಿನಿಂದ ತೆಗಯಲ್ಪಟ್ಟಾಗ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡುತ್ತಿದ್ದರು; ಮೇಘವು ನೆಲೆಸಿದ ಸ್ಥಳದಲ್ಲಿ ಇಸ್ರಾಯೇಲ್ ಮಕ್ಕಳು ತಮ್ಮ ಗುಡಾರಗಳನ್ನು ಹಾಕಿದರು. ಕರ್ತನ ಆಜ್ಞೆಯ ಪ್ರಕಾರ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡಿ ದರು. ಕರ್ತನ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲೆಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು. ಮೇಘವು ಗುಡಾರದ ಮೇಲೆ ಅನೇಕ ದಿವಸಗಳು ತಡಮಾಡಿದಾಗ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡದೆ ಕರ್ತನ ಅಪ್ಪಣೆಯನ್ನು ಕೈಕೊಳ್ಳುತ್ತಿದ್ದರು. ಇದಲ್ಲದೆ ಮೇಘವು ಗುಡಾರದ ಮೇಲೆ ಸ್ವಲ್ಪ ದಿವಸಗಳು ಇರುವಾಗ ಅವರು ಕರ್ತನ ಆಜ್ಞೆಯ ಪ್ರಕಾರ ಇಳುಕೊಂಡು ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಿದ್ದರು. ಮೇಘವು ಸಾಯಂಕಾಲ ದಿಂದ ಉದಯದ ವರೆಗೆ ಇದ್ದು ಬೆಳಿಗ್ಗೆ ಮೇಲಕ್ಕೆ ತೆಗೆಯಲ್ಪಟ್ಟರೆ ಆಗ ಅವರು ಪ್ರಯಾಣ ಮಾಡುತ್ತಿದ್ದರು; ಇಲ್ಲವೆ ಹಗಲು ರಾತ್ರಿ ಇದ್ದು ಮೇಘವು ಮೇಲಕ್ಕೆ ಎತ್ತಲ್ಪಟ್ಟರೆ ಅವರು ಪ್ರಯಾಣ ಮಾಡುತ್ತಿದ್ದರು. ಇಲ್ಲವೆ ಆ ಮೇಘವು ಎರಡು ದಿವಸಗಳಾದರೂ ಒಂದು ತಿಂಗಳಾದರೂ ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾ ಯೇಲ್ ಮಕ್ಕಳು ಪ್ರಯಾಣಮಾಡದೆ ಇಳುಕೊಂಡಿ ದ್ದರು. ಅದು ಮೇಲಕ್ಕೆತ್ತಲ್ಪಟ್ಟಾಗಲೇ ಅವರು ಪ್ರಯಾಣ ಮಾಡುತ್ತಿದ್ದರು.ಕರ್ತನ ಆಜ್ಞೆಯ ಪ್ರಕಾರ ಅವರು ಇಳುಕೊಳ್ಳುತ್ತಾ ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಕರ್ತನು ಆಜ್ಞಾಪಿಸಿ ದಂತೆ ಕರ್ತನ ಅಪ್ಪಣೆಯನ್ನು ಕಾಪಾಡುತ್ತಿದ್ದರು.
- 1 Corinthians 10:1–2 1 ಕೊರಿಂಥದವರಿಗೆ 10:1–2ಇದಲ್ಲದೆ ಸಹೋದರರೇ, ನೀವು ಈ ವಿಷಯಗಳನ್ನು ಅರಿಯದವರಾಗಿರ ಬಾರದೆಂದು ನನ್ನ ಅಪೇಕ್ಷೆಯಲ್ಲ; ಅದೇನಂದರೆ--ನಮ್ಮ ಪಿತೃಗಳೆಲ್ಲರೂ ಮೇಘದ ಕೆಳಗೆ ಇದ್ದು ಸಮುದ್ರವನ್ನು ದಾಟಿದರು; ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು;