Psalms · chapter 106 · verse 30
Psalm 106:30 in Kannada
ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
Aaga pheenehaasanu nintu kondu nyaayateerisiddarinda vyaadhiyu nintu hoyitu.
Psalm 106:30 in English
- King James Version (KJV)
- Then stood up Phinehas, and executed judgment: and [so] the plague was stayed.
- World English Bible (WEB)
- Then Phinehas stood up and executed judgment, so the plague was stopped.
- American Standard Version (ASV)
- Then stood up Phinehas, and executed judgment; And so the plague was stayed.
- Bible in Basic English (BBE)
- Then Phinehas got up, and made prayer for them; and the disease went no farther.
- Darby Translation (DBY)
- Then stood up Phinehas and executed judgment, and the plague was stayed;
- Webster's Bible (WBS)
- Then stood up Phinehas, and executed judgment: and [so] the plague was stayed.
- Young's Literal Translation (YLT)
- And Phinehas standeth, and executeth judgment, And the plague is restrained,
Read in context
- 28ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು
- 29ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.
- 30ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
- 31ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.
- 32ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
Cross references
- Numbers 25:6–8 ಅರಣ್ಯಕಾಂಡ 25:6–8ಇಗೋ, ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನು ಬಂದು ಮೋಶೆಗೂ ಸಭೆಯ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೂ ಕಾಣುವ ಹಾಗೆ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತಂದನು. ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.
- Numbers 25:14–15 ಅರಣ್ಯಕಾಂಡ 25:14–15ಆದರೆ ಮಿದ್ಯಾನ್ ಸ್ತ್ರೀಯ ಸಂಗಡ ಕೊಲ್ಲಲ್ಪಟ್ಟ ಆ ಇಸ್ರಾಯೇಲಿನವನ ಹೆಸರು ಜಿವ್ರೆಾ; ಅವನು ಸಾಲೂವಿನ ಮಗನು; ಸಿಮೆಯೋನ್ಯರ ತಂದೆ ಮನೆಯ ಪ್ರಧಾನನು. ಕೊಲ್ಲಲ್ಪಟ್ಟ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ; ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಯ ಯಜಮಾನನೂ ಆಗಿರುವ ಚೂರನ ಮಗಳಾಗಿದ್ದಳು.
- Joshua 7:12 ಯೆಹೋಶುವ 7:12ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ.
- 1 Kings 18:40–41 1 ಅರಸುಗಳು 18:40–41ಆಗ ಎಲೀಯನು ಅವರಿಗೆ--ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಇರಲಿ ಅಂದನು. ಇವರು ಅವರನ್ನು ಹಿಡಿ ದರು; ಎಲೀಯನು ಅವರನ್ನು ಕೀಷೋನ್ಹಳ್ಳದ ಬಳಿಗೆ ತಕ್ಕೊಂಡುಹೋಗಿ ಅಲ್ಲಿ ಅವರನ್ನು ಕೊಂದು ಹಾಕಿದನು. ಎಲೀಯನು ಅಹಾಬನಿಗೆ--ನೀನು ಹೋಗಿ ತಿಂದು ಕುಡಿ; ಯಾಕಂದರೆ ಬಹು ಮಳೆಯ ಶಬ್ದವು ಆಯಿತು ಅಂದನು.
- Deuteronomy 13:9–11 ಧರ್ಮೋಪದೇಶಕಾಂಡ 13:9–11ಅವನನ್ನು ಖಂಡಿತವಾಗಿ ಕೊಲ್ಲಬೇಕು. ಅವನನ್ನು ಕೊಲ್ಲುವ ಹಾಗೆ ಮೊದಲು ನಿನ್ನ ಕೈ, ಆ ಮೇಲೆ ಎಲ್ಲಾ ಜನರ ಕೈ ಅವನ ಮೇಲೆ ಇರಬೇಕು. ಐಗುಪ್ತ ದೇಶದೊಳಗಿಂದಲೂ ದಾಸತ್ವದ ಮನೆಯೊ ಳಗಿಂದಲೂ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನ ಬಳಿಯಿಂದ ನಿನ್ನನ್ನು ದೂಡುವದಕ್ಕೆ ಅವನು ಪ್ರಯತ್ನಮಾಡಿದ್ದರಿಂದ ಅವನು ಸಾಯುವಹಾಗೆ ಕಲ್ಲೆಸೆಯಬೇಕು. ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ.
- Jonah 1:12–15 ಯೋನ 1:12–15ಅವನು ಅವ ರಿಗೆ--ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ನಿಮಗೆ ಶಾಂತವಾಗುವದು; ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ ನಿಮ್ಮ ಮೇಲೆ ಬಂತೆಂದು ಬಲ್ಲೆನು ಅಂದನು. ಆದರೂ ಆ ಮನುಷ್ಯರು ದಡಕ್ಕೆ ತಿರುಗಿಕೊಳ್ಳುವ ಹಾಗೆ ಬಲವಾಗಿ ಹುಟ್ಟು ಹಾಕಿದರು; ಆದರೆ ಅವರಿಂದಾಗದೆ ಹೋಯಿತು. ಸಮುದ್ರವು ಅವರಿಗೆ ಎದುರಾಗಿ ಹೆಚ್ಚೆಚ್ಚಾಗಿ ಉಬ್ಬುತ್ತಾ ಬಂತು. ಆದದರಿಂದ ಅವರು ಕರ್ತನಿಗೆ ಕೂಗಿ ಹೇಳಿದ್ದೇನಂದರೆ--ಓ ಕರ್ತನೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ; ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡ; ಓ ಕರ್ತನೇ, ನೀನು ನಿನ್ನ ಚಿತ್ತಕ್ಕೆ ಬಂದ ಹಾಗೆ ಮಾಡಿದ್ದೀ ಅಂದರು. ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿ ಬಿಟ್ಟಿತು.
- Deuteronomy 13:15–17 ಧರ್ಮೋಪದೇಶಕಾಂಡ 13:15–17ಆ ಪಟ್ಟಣದ ನಿವಾಸಿಗಳನ್ನು ಕತ್ತಿಯಿಂದ ಸಂಪೂರ್ಣ ವಾಗಿ ನಾಶಮಾಡಿ ಅದನ್ನೂ ಅದರಲ್ಲಿರುವ ಎಲ್ಲವನ್ನೂ ಸಮಸ್ತ ಪಶುಗಳನ್ನೂ ಸಹ ಕತ್ತಿಯಿಂದ ನಿರ್ಮೂಲ ಮಾಡಬೇಕು. ಇದಲ್ಲದೆ ಅದರ ಎಲ್ಲಾ ಕೊಳ್ಳೆಯನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ ಆ ಪಟ್ಟಣವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ಸಂಪೂರ್ಣವಾಗಿ ನಿನ್ನ ದೇವರಾದ ಕರ್ತನಿಗೆ ಬೆಂಕಿಯಿಂದ ಸುಟ್ಟುಬಿಡಬೇಕು; ಅದು ಎಂದೆಂದಿಗೂ ದಿಬ್ಬವಾಗಬೇಕು; ತರುವಾಯ ಅದನ್ನು ಕಟ್ಟಬಾರದು. ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಶಬ್ದವನ್ನು ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ನಿನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಸರಿ ಯಾದದ್ದನ್ನು ಮಾಡಲಾಗಿಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು.