Skip to content
ThuthiThuthiThuthi
Psalms · chapter 108 of 150 · 13 verses

Psalm 108 in Kannada

ಕೀರ್ತನೆಗಳು 108

  1. ಓ ದೇವರೇ, ನನ್ನ ಹೃದಯವು ಸಿದ್ಧವಾಗಿದೆ; ನಾನು ನನ್ನ ಹೆಚ್ಚಳ ದೊಂದಿಗೆ ಹಾಡಿ ಕೀರ್ತಿಸುವೆನು.

    A Song [or] Psalm of David. O God, my heart is fixed; I will sing and give praise, even with my glory.

  2. ವೀಣೆಯೇ, ಕಿನ್ನರಿಯೇ, ಎಚ್ಚರವಾಗು; ನಾನು ಉದಯದಲ್ಲಿ ಎಚ್ಚರಗೊಳ್ಳುವೆನು.

    Awake, psaltery and harp: I [myself] will awake early.

  3. ಕರ್ತನೇ, ಜನರಲ್ಲಿ ನಿನ್ನನ್ನು ಕೊಂಡಾಡುವೆನು; ಜನಾಂಗಗಳಲ್ಲಿ ನಿನ್ನನ್ನು ಕೀರ್ತಿಸು ವೆನು.

    I will praise thee, O LORD, among the people: and I will sing praises unto thee among the nations.

  4. ಆಕಾಶಕ್ಕಿಂತ ನಿನ್ನ ಕರುಣೆಯೂ ಮೇಘಗಳನ್ನು ನಿಲುಕುವಂಥ ನಿನ್ನ ಸತ್ಯವೂ ದೊಡ್ಡದು.

    For thy mercy [is] great above the heavens: and thy truth [reacheth] unto the clouds.

  5. ದೇವರೇ, ಆಕಾಶಗಳ ಮೇಲೆ ನೀನು ಘನಹೊಂದು; ಭೂಮಿಯ ಮೇಲೆ ನಿನ್ನ ಮಹಿಮೆಯು ಇರಲಿ.

    Be thou exalted, O God, above the heavens: and thy glory above all the earth;

  6. ನಿನ್ನ ಪ್ರಿಯರು ಬಿಡುಗಡೆಯಾಗುವ ಹಾಗೆ ನಿನ್ನ ಬಲಗೈಯಿಂದ ರಕ್ಷಿಸಿ ನನಗೆ ಉತ್ತರ ಕೊಡು.

    That thy beloved may be delivered: save [with] thy right hand, and answer me.

  7. ದೇವರು ತನ್ನ ಪರಿಶುದ್ಧತ್ವದಲ್ಲಿ ನುಡಿದಿದ್ದಾನೆ; ನಾನು ಉತ್ಸಾಹ ಪಡುವೆನು. ಶೆಕೆಮನ್ನು ಹಂಚುವೆನು, ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.

    God hath spoken in his holiness; I will rejoice, I will divide Shechem, and mete out the valley of Succoth.

  8. ಗಿಲ್ಯಾದ್‌ ನನ್ನದು; ಮನಸ್ಸೆ ನನ್ನದು; ಎಫ್ರಾಯಾಮ್‌ ನನ್ನ ತಲೆಯ ಬಲಸ್ಥಾನವು; ಯೆಹೂದವು ನನ್ನ ರಾಜ ದಂಡವಾಗಿದೆ

    Gilead [is] mine; Manasseh [is] mine; Ephraim also [is] the strength of mine head; Judah [is] my lawgiver;

  9. ಮೋವಾಬ್‌ ನನ್ನನ್ನು ತೊಳೆಯುವ ಪಾತ್ರೆಯು; ಏದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯದ ಮೇಲೆ ಜಯಧ್ವನಿಗೈಯುವೆನು.

    Moab [is] my washpot; over Edom will I cast out my shoe; over Philistia will I triumph.

  10. ಬಲ ವುಳ್ಳ ಪಟ್ಟಣಕ್ಕೆ ನನ್ನನ್ನು ಕರೆತರುವವನಾರು? ಏದೋಮಿನ ವರೆಗೆ ನನ್ನನ್ನು ನಡಿಸುವವನಾರು?

    Who will bring me into the strong city? who will lead me into Edom?

  11. ದೇವರೇ, ನಮ್ಮನ್ನು ತೊರೆದು ಬಿಟ್ಟವನು ನೀನೇ ಅಲ್ಲವೋ? ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನಲ್ಲವೋ?

    [Wilt] not [thou], O God, [who] hast cast us off? and wilt not thou, O God, go forth with our hosts?

  12. ಇಕ್ಕಟ್ಟಿ ನಲ್ಲಿರುವ ನಮಗೆ ಸಹಾಯಕೊಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.

    Give us help from trouble: for vain [is] the help of man.

  13. ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.

    Through God we shall do valiantly: for he [it is that] shall tread down our enemies.

All chapters of Psalms · Kannada Bible · Psalm 108 in Tamil

Kannada Bible: Kannada Old Version, public domain.

King James Version: public domain.